ಹತ್ತಿಯ ಎಲೆ ಕೆಂಪಗಾಗುವುದಕ್ಕೆ ಕಾರಣ ಮತ್ತು ಪರಿಹಾರ.

ಹತ್ತಿ ಕೋಡು- Cotton bulb

ಉತ್ತರ ಕರ್ನಾಟಕದ ಬಹುತೇಕ ಹತ್ತಿ ಬೆಳೆಯಲಾಗುವ ಪ್ರದೇಶಗಳಲ್ಲಿ ಎಲೆ ಕೆಂಪಾಗುವ ಸಮಸ್ಯೆ  ಹೆಚ್ಚುತಿದ್ದು, ರೈತರು ಇದು ರೋಗವೇ , ಯಾವ ರೋಗ ಎಂಬ ಆತಂಕದಲ್ಲಿ ಸ್ಥಳೀಯ ಬೀಜ, ಕೀಟನಾಶಕ ಮಾರಾಟಗಾರರ ಸಲಹೆ ಮೇರೆಗೆ ಅನವಶ್ಯಕ ಕೀಟ, ರೋಗನಾಶಕ ಬಳಸುತ್ತಿದ್ದಾರೆ. ವಾಸ್ತವವಾಗಿ ಇದು ರೋಗ , ಕೀಟ ಯಾವುದೂ ಅಲ್ಲ. ಬೇಸಾಯ ಕ್ರಮದಲ್ಲಿ ಇದನ್ನು ಸರಿ ಮಾಡಬಹುದು.

  • ನಿರಂತರವಾಗಿ ಬೆಳೆ ಬೆಳೆಯುತ್ತಾ ಇರುವ ಪ್ರದೇಶಗಳಲ್ಲಿ ಸಹಜವಾಗಿ ಕೆಲವು ಪೊಷಕಾಂಶಗಳ ಕೊರತೆ ಕಂಡು ಬರುತ್ತದೆ.
  • ಇದು ಆ ಬೆಳೆ ಈ ಬೆಳೆ ಎಂದು ಇಲ್ಲ. ಎಲ್ಲಾ ಬೆಳೆಗಳಲ್ಲೂ ಈ ಸಮಸ್ಯೆ ಉಂಟಾಗುತ್ತದೆ.
  • ಇದಕ್ಕೆ ಪರಿಹಾರ ಸಾಕಷ್ಟು ಸಾವಯವ ಗೊಬ್ಬರಗಳನ್ನು ಬಳಕೆ ಮಾಡುವುದು ಮತ್ತು ಆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಪೊಷಕಗಳನ್ನು ಹೆಚ್ಚುವರಿಯಾಗಿ ಒದಗಿಸುವುದು.
ಹತ್ತಿ ಎಲೆಯಲ್ಲಿ ಪೋಷಕಗಳ ಕೊರತೆ
ಹತ್ತಿ ಎಲೆಯಲ್ಲಿ ಪೋಷಕಗಳ ಕೊರತೆ

ಎಲೆ ಕೆಂಪಾಗುವಿಕೆಗೆ ಕಾರಣ:

  • ಪೊಷಕಾಂಶದ ಅಸಮತೋಲನ ಮತ್ತು ಸಾವಯವ ವಸ್ತುಗಳ ಕೊರತೆ, ಬೀಜದ ಉಪಚಾರ  ಮತ್ತು ಲಘು  ಪೋಷಕದ ಕೊರತೆಯಿಂದ ಎಲೆ ಕೆಂಪಾಗುವ ಸಮಸ್ಯೆ  ಉಂಟಾಗುತ್ತದೆ.
  • ಸಾಕಷ್ಟು ಸಾವಯವ ಗೊಬ್ಬರಗಳನ್ನು  ಕೊಡಬೇಕು.
  • ಬಿತ್ತನೆ ಮಾಡುವಾಗ  ಜೀವಾಣು ಗೊಬ್ಬರಗಳಾದ ಸಾರಜನಕ ಸ್ಥಿರೀಕರಿಸುವ ಅಜೋಸ್ಪರಿಲ್ಲಂ ಮತ್ತು  ರಂಜಕ ಕರಗಿಸುವ ಫೋಸ್ಪೋ  ಬ್ಯಾಕ್ಟೀರಿಯಾ ಗಳಿಂದ ಬೀಜವನ್ನು ಉಪಚರಿಸುವುದು ಉತ್ತಮ.
  • ಎರಡು ಹತ್ತಿ ಸಾಲುಗಳ ಮಧ್ಯದಲ್ಲಿ ಸೆಣಬು ಬೆಳೆದು ಅದನ್ನು 30 ದಿನಗಳ ನಂತರ  ಮಣ್ಣಿಗೆ ಸೇರಿಸುವುದರಿಂದ ಸಾವಯಕ ಗೊಬ್ಬರ ಹೇರಳವಾಗಿ ಲಭ್ಯವಾಗುತ್ತದೆ.

ಹತ್ತಿ ಎಲೆಯಲ್ಲಿ ಗಂಧಕ ಪೋಷಕಗಳ ಕೊರತೆ

ಬೀಜದ ಉಪಚಾರ:

  • ಸವಳು ಭೂಮಿಯಲ್ಲಿ ಬೀಜವನ್ನ್ನು ಬಿತ್ತುವ ಮುಂಚೆ ಬೀಜವನ್ನು ಕ್ಯಾಲ್ಸಿಯಂ ನೈಟ್ರೇಟ್ ದ್ರಾವಣ( 300 ಗ್ರಾಂ  10 ಲೀ. ನೀರು) ದಲ್ಲಿ 8  ಗಂಟೆಗಳಕಾಲ ನೆನೆಸಿ  ಬಿತ್ತಿದರೆ ಯಾವ ಸಮಸ್ಯೆಯೂ ಉಂಟಾಗದು.
  • ಹತ್ತಿ ಬೆಳೆಯುವ ರೈತರು ಸಮರ್ಪಕವಾಗಿ ಬೀಜವನ್ನು ಆಯ್ಕೆ ಮಾಡಬೇಕು.
  • ಕೆಲವು ಕಳಪೆ ಬೀಜಗಳು ಇಂತಹ ಸಮಸ್ಯೆಯನ್ನು ಉಂಟುಮಾಡುತ್ತವೆ.
  • ಬೀಜವನ್ನು 1 ಕಿಲೋ ವಾಣಿಜ್ಯ ದರ್ಜೆಯ ಗಂಧಕಾಮ್ಲದಲ್ಲಿ 2-3 ನಿಮಿಷಗಳ ಕಾಲ  ಮಿಶ್ರಣ ಮಾಡಿ ಇಡಬೇಕು.
  • ನಂತರ 200 ಗ್ರಾಂ ಸುಣ್ಣವನ್ನು 10 ಲೀ. ನೀರಿನಲ್ಲಿ ಕರಗಿಸಿ ಅದರ ತಿಳಿ ನೀರನ್ನು ಸಂಗ್ರಹಿಸಿ , ಅದರಲ್ಲಿ ಬೀಜವನ್ನು ತೊಳೆದು ನೆರಳಿನಲ್ಲಿ ಒಣಗಿಸಿ, ನಂತರ ಬಿತ್ತನೆ ಮಾಡಬೇಕು.
  • ಆಗ ಬೀಜ ಮೊಳಕೆ ಚೆನ್ನಾಗಿ ಬರುತ್ತದೆ. ಗಂಧಕವು ಸಸ್ಯಕ್ಕೆ ಶಕ್ತಿಯನ್ನು ಕೊಡುತ್ತದೆ.
  • ಈ ಉಪಚಾರ ಸ್ವಲ್ಪ ಮಟ್ಟಿಗೆ ಎಲೆ ಹಳದಿಯಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಹತ್ತಿ ಎಲೆಯಲ್ಲಿ ಪೋಷಕಗಳಿ ಮತ್ತು ರಸ ಹೀರುವ ಕೀಟಗಳ ಸಮಸ್ಯೆ.

ಗೊಬ್ಬರ ಪೂರೈಕೆ:

  • ಬೆಳೆ  ಬೆಳೆಯುವ ಹೊಲಕ್ಕೆ ಭೂಮಿ ಸಿದ್ದತೆ ಮಾಡುವಾಗ ಎಕ್ರೆಗೆ ಸುಮಾರು 4 ಟನ್ ಕೊಟ್ಟಿಗೆ ಗೊಬ್ಬರವನ್ನು  ಕೊಟ್ಟು  ಉಳುಮೆ ಮಾಡಿ ಮಿಶ್ರ  ಮಾಡಬೇಕು.
  • ಕೋಳಿ ಗೊಬ್ಬರವನ್ನು ಬಳಸುವಾಗ ಎಕ್ರೆಗೆ 1 ಟನ್ ಪ್ರಮಾಣದಲ್ಲಿ ಮಾತ್ರ ಕೊಡಬೇಕು.
  • ಮಳೆಯಾಶ್ರಯದಲ್ಲಿ ಬೆಳೆಬೆಳೆಯುವಾಗ ಅಧಿಕ ಇಳುವರಿಯ BT ಹತ್ತಿ ತಳಿಗಳಿಗೆ  ಎಕರೆಗೆ 40 ಕಿಲೋ ಯೂರಿಯಾ, 1 ಕ್ವಿಂಟಾಲು ಸೂಫರ್ ಫೋಸ್ಫೇಟ್ ಮತ್ತು 60-70 ಕಿಲೋ ಪೊಟ್ಯಾಶ್ ಗೊಬ್ಬರವನ್ನು ಕೊಡಬೇಕು.
  • ರೈತರು ಹೆಚ್ಚಾಗಿ DAP  ಗೊಬ್ಬರವನ್ನು ಕೊಡುತ್ತಾರೆ.
  • ಇಲ್ಲವಾದರೆ ಕಾಂಪ್ಲೆಕ್ಸ್ ಗೊಬ್ಬರಗಳಾದ 15:15:15 ಅಥವಾ 17:17:17 ಗೊಬ್ಬರ ಕೊಡುತ್ತಾರೆ.
  • DAP ಕೊಟ್ಟಾಗ  ಸಾರಜಕನ ಸಾಕಾಗುವುದಿಲ್ಲ. ರಂಜಕ ಹೆಚ್ಚಾಗುತ್ತದೆ. ಪೊಟ್ಯಾಶ್ ದೊರೆಯುವುದೇ ಇಲ್ಲ.
  • ಕಾಂಪ್ಲೆಕ್ಸ್ ಗೊಬ್ಬರ ಕೊಟ್ಟಾಗ ಅಗತ್ಯ ಪೋಷಕಗಳ ಅಸಮತೋಲನ ಉಂಟಾಗಿ ಸಸ್ಯ ಬೆಳೆವಣಿಗೆಯಲ್ಲಿ ನ್ಯೂನತೆ ಉಂಟಾಗುತ್ತದೆ.
  • ಮಳೆಯಾಶ್ರಿತ ಬೆಳೆಯಲ್ಲಿ ಒಮ್ಮೆಲೇ ಗೊಬ್ಬರ ಕೊಡಬೇಕು.  ಅರೆಮಲೆನಾಡು ಪ್ರದೇಶಗಳಲ್ಲಿ ಎರಡು ಬಾರಿ ಕೊಡಬಹುದು.
  • ಬೇಸಿಗೆಯ ನೀರಾವರಿ ಬೆಳೆಗೆ  ಮೇಲಿನ ಪ್ರಮಾಣಕ್ಕೆ 25% ಹೆಚ್ಚು ಗೊಬ್ಬರಗಳನ್ನು ಕೊಡಬೇಕು.

ಹತ್ತಿ ಕೋಡಿನಲ್ಲಿ ಕೆಂಪು ಬಣ್ಣ.

ಸಿಂಪರಣೆ:

  • ಹತ್ತಿಗೆ 90-100 ದಿನಗಳಾಗುವಾಗ 100  ಗ್ರಾಂ ಮೆಗ್ನೀಶಿಯಂ ಸಲ್ಫೇಟ್ 10 ಲೀ. ನೀರಿನಲ್ಲಿ ಕರಗಿಸಿ  ಎಲೆಗಳಿಗೆ ಅಡಿ ಭಾಗಕ್ಕೆ ಬೀಳುವಂತೆ ಸಿಂಪಡಿಸಿ.
  • ಎಲೆ ಅಡಿ ಭಾಗದಲ್ಲಿ  ಮೈಟ್ ಗಳು ಇದ್ದಲ್ಲಿ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು  ಇದರ ಜೊತೆ ಮಿಶ್ರಣ  ಮಾಡಿದರೆ ಸಾಕಾಗುತ್ತದೆ.
  • ತಡವಾದರೆ ಡೈಕೋಪಾಲ್ ಬಳಸಿ.
  • ಬೆಳೆಯು ಹೂ ಬಿಡುವ ಸಮಯದಲ್ಲಿ ಪೂರ್ತಿ ಹೂವು ಅರಳಿದಾಗ 10 ಲೀ. ನೀರಿಗೆ 2.5  ಮಿಲಿ ಪ್ಲಾನೋಫಿಕ್ಸ್ ಮಿಶ್ರಣ ಮಾಡಿ ಎಲೆಗಳಿಗೆಲ್ಲ ಬೀಳುವಂತೆ ಸಿಂಪರಣೆ ಮಾಡುವುದು ಮೊಗ್ಗು, ಹೂವು, ಕಾಯಿ ಉದುರುವುದನ್ನು ಕಡಿಮೆ ಮಾಡುತ್ತದೆ. ( ಪ್ರಮಾಣವನ್ನು ಯಾವುದೇ ಕಾರಣಕ್ಕೂ ಹೆಚ್ಚು ಮಾಡಬಾರದು.)
  • ಖುಷ್ಕಿ ಬೆಳೆಯಲ್ಲಿ ಬಿತ್ತನೆ ಮಾಡಿ 65-70 ದಿನಗಳಾಗುವಾಗ ಮಿಥೆನಾಲ್ ಶೇ.೧೦ ರ ದ್ರಾವಣವನ್ನು ಸಿಂಪರಣೆ ಮಾಡಿದರೆ ಇಳುವರಿ ಹೆಚ್ಚಳವಾಗುತ್ತದೆ.

ಎಲೆ ಕೆಂಪಾಗುವುದು ಯಾವುದೇ  ಕೀಟ – ರೋಗ  ಬಾಧೆ ಅಲ್ಲ. ಇದನ್ನು ಬೇಸಾಯ ಕ್ರಮದಲ್ಲೇ ನಿಯಂತ್ರಣ ಮಾಡಬಹುದು. ಅಲ್ಪ ಸ್ವಲ್ಪ ಕಂಡು ಬಂದರೆ ಮೇಲಿನ ಮೆಗ್ನೀಶಿಯಂ ಸಲ್ಫೇಟ್ ದ್ರಾವಣ ( ಮೆಗ್ನೀಶಿಯಂ ಎಲೆ ಹಸುರು ಮಾಡುತ್ತದೆ- ಸಲ್ಫರ್ ಮೈಟ್ ಗಳನ್ನು ದೂರ ಮಾಡುತ್ತದೆ) ಸಾಕಾಗುತ್ತದೆ. 
end of the article:—————————————————–
search words: Cotton crop# cotton red leaf # red leaf symptom on cotton# Cotton manuring# cotton seed treatment # cotton cultivation practice# cotton mites#

Leave a Reply

Your email address will not be published. Required fields are marked *

error: Content is protected !!