ಝಿಂಕ್ ಬಳಸಿದರೆ ಸಸ್ಯ ಆರೋಗ್ಯ ಮತ್ತು ಫಸಲು ಹೆಚ್ಚುತ್ತದೆ.

Zink deficiency in plant

ಬೆಳೆಗಳು ಆರೋಗ್ಯವಾಗಿದ್ದು, ಫಲಧಾರಣಾ ಶಕ್ತಿ ಉತ್ತಮವಾಗಿ, ಪೌಷ್ಟಿಕ ಫಲ ಕೊಡಲು ಸತು ಎಂಬ ಸೂಕ್ಷ್ಮ ಪೊಷಕಾಂಶ ಅಗತ್ಯವಾಗಿ ಬೇಕು ಎನ್ನುತ್ತಾರೆ ಬೆಳೆ ತಜ್ಞರು.
ಇತ್ತೀಚೆಗೆ ಬೆಳೆ ತಜ್ಞರುಗಳು ಸತುವಿನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕೆಲವು ಗೊಬ್ಬರ ತಯಾರಕರು ತಮ್ಮ ಕೆಲವು ಗೊಬ್ಬರಗಳನ್ನು (ವಿಶೇಷವಾಗಿ ಡಿಎಪಿ) ಸತುವಿನ ಮೂಲಕ ಬ್ಲೆಂಡ್ ಮಾಡಿ ಕೊಡುತ್ತಾರೆ. ಕರ್ನಾಟಕ ಸರಕಾರದ  ಕೃಷಿ ನಿಯಮಾವಳಿ ಪ್ರಕಾರ ಇಲ್ಲಿನ ಮಣ್ಣಿಗೆ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ಗರಿಷ್ಟ ಪ್ರಮಾಣ (3%) ದಲ್ಲಿ ಸತು ಸೇರಿಸಿರಬೇಕು. ಕರ್ನಾಟಕದ ಮಣ್ಣಿಗೆ, ಇಲ್ಲಿನ ಬೆಳೆಗಳಿಗೆ ಸತುವಿನ ಅವಷ್ಯಕತೆ ಇದ್ದು,  ರೈತರು ಸಸ್ಯಾರೋಗ್ಯದ ಜೊತೆಗೆ  ಗುಣಮಟ್ಟದ ಫಸಲನ್ನು ಪಡೆಯಲು ಶಿಫಾರಿತ ಪ್ರಮಾಣದ ಸತುವನ್ನು ಬಳಕೆ ಮಾಡಬೇಕು.

Zink deficiency in Pepper
ಕರಿಮೆಣಸಿನಲ್ಲಿ ಸತುವಿನ ಕೊರತೆಯ ಲಕ್ಷಣ
  • ಸಸ್ಯಗಳ ಆರೋಗ್ಯಕರ ಬೆಳೆವಣಿಗೆಗೆ ಮುಖ್ಯ ಪೋಷಕವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಬೇಕಾದರೆ , ಅದರ ಜೊತೆಗೆ ಅವುಗಳ ಕ್ಷಮತೆ ಹೆಚ್ಚಲು ದ್ವಿತೀಯ ಪೋಷಕಗಳಾದ ಸುಣ್ಣ, ಗಂಧಕ ಮತ್ತು ಮೆಗ್ನೀಶಿಯಂ ಗಳು ಬೇಕು.
  • ಇವಿಷ್ಟೇ ಅಲ್ಲದೆ ಸೂಕ್ಷ್ಮ ಪೋಷಕಗಳಾದ ಬೋರಾನ್, ಮ್ಯಾಂಗನೀಸ್, ತಾಮ್ರ, ಸತು, ಕಬ್ಬಿಣ, ಮಾಲಿಬ್ದಿನಂ, ಮತ್ತು ಕ್ಲೋರಿನ್ ಗಳು ಸಹ ಬೇಕು.
  • ಇವು ಸಸ್ಯ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಲು ಸಹಕಾರಿಯಾಗುವ ಪೋಷಕಗಳು.
  • ಇವುಗಳಲ್ಲಿ ಯಾವುದಾದರೂ ಒಂದರ ಕೊರತೆ ಕಂಡು ಬಂದರೆ ಸಸ್ಯ ಬೆಳವಣಿಗೆ, ಫಸಲು, ರೋಗ ನಿರೋಧಕ ಶಕ್ತಿ, ಹವಾಮಾನ ವೆತ್ಯಾಸಗಳನ್ನು ತಡೆದುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.
  •   ಸತು ಎಂಬುದು ಒಂದು ಖನಿಜ( mineral) ಇದು ಮಣ್ಣಿನಲ್ಲಿ ಇರುತ್ತದೆ. ಆದರೆ ಅದು ಲಭ್ಯ ಸ್ಥಿತಿಯಲ್ಲಿ ಇರುವುದಿಲ್ಲ.

ತೋಟಗಾರಿಕಾ ಬೆಳೆಗಳಲ್ಲಿ ಸತುವಿನ ಮಹತ್ವ:

Zink deficiency in arecanut
ಅಡಿಕೆ ಕಾಯಿಯಲ್ಲಿ ಸತುವಿನ ಕೊರತೆ ಲಕ್ಷಣ
  • ಸತು ಬರೇ ಸಸ್ಯಗಳಿಗೆ ಮಾತ್ರವಲ್ಲ. ಪಶು ಮಾನವ ಎಲ್ಲರಿಗೂ ದೇಹಾರೋಗ್ಯ ಸುಸ್ಥಿತಿಗೆ ಅಗತ್ಯವಾದ ಪೋಷಕ.
  • ಮಾನವರು ಕೆಲವು ತರಕಾರಿ ಹಣ್ಣು ಹಂಪಲುಗಳ ಮೂಲಕ  ಸತುವನ್ನು ಶರೀರಕ್ಕೆ ತೆಗೆದುಕೊಳ್ಳುತ್ತಾರೆ.
  • ಪಶುಗಳು ಹುಲ್ಲು , ಹಿಂಡಿ ಇತ್ಯಾದಿಗಳ ಮೂಲಕ ಪಡೆಯುತ್ತವೆ.
  • ಕೊರತೆಯಾದಾಗ ಅದನ್ನು ಮಾನವ ಮಾತ್ರೆಗಳ ಮೂಲಕ ಸೇವಿಸುತ್ತಾನೆ.
  • ಪಶುಗಳಿಗೆ  ಖನಿಜ ಮಿಶ್ರಣಗಳ ಮೂಲಕ ಒದಗಿಸಿಕೊಡಲಾಗುತ್ತದೆ.
  • ಒಟ್ಟಿನಲ್ಲಿ ನಿಖರವಾಗಿ (intensive farming) ಬೆಳೆ ತೆಗೆಯುವಾಗ ಈ ಪೋಷಕಗಳ ಬಳಕೆ ಬೇಕಾಗುತ್ತದೆ.
  • ಇದು ಇಲ್ಲದಿದ್ದರೂ ಬೆಳೆ ಇರುತ್ತದೆ.
  • ಆದರೆ ನಿರೀಕ್ಷಿತ ಉತ್ತಮ ಇಳುವರಿ ಇರುವುದಿಲ್ಲ ಅಷ್ಟೇ.
  • ಈ ಎಲ್ಲಾ ಪೋಷಕಗಳ ಹೆಸರೇ ಗೊತ್ತಿಲ್ಲದಿದ ಕಾಲದಲ್ಲಿ ನಾವು ಬೆಳೆಗಳಿಗೆ ಬಳಕೆ ಮಾಡುತ್ತಿದ್ದ ವಿಧ ವಿಧದ ಸೊಪ್ಪು ಸದೆಗಳನ್ನು ಸೇರಿಸಿದ ಕೊಟ್ಟಿಗೆ ಗೊಬ್ಬರ ಮತ್ತು ಸಾವಯವ ಸಮೃದ್ಧ ಮಣ್ಣಿನಿಂದಾಗಿ ಆವುಗಳ ಪೂರೈಕೆ ನೈಸರ್ಗಿಕವಾಗಿಯೇ ಆಗುತ್ತಿತ್ತು.
  • ಈಗ ಸಾವಯವ ಗೊಬ್ಬರ ಬಹಳ ದುಬಾರಿಯಾಗಿ, ಮಣ್ಣಿನ ಫಲವತ್ತತೆ ಪುನರುಜ್ಜೀವನ ಆಗದಿರುವ ಕಾರಣ ಅದನ್ನು ಕೃತಕವಾಗಿ ಕೊಡಲೇ ಬೇಕಾಗುತ್ತದೆ.
  • ಕೃಷಿ ಬೆಳೆಗಳು (field crops) ಗಳಿಗೆ ಸತುವಿನ ಅತಿಯಾದ ಅಗತ್ಯ ಇರುವುದಿಲ್ಲ.
  • ಹಾಗೆಂದು ಬೇಡ ಎಂದಲ್ಲ.
  • ತೋಟಗಾರಿಕಾ ಬೆಳೆಗಳಿಗೆ ಇದರ ಅವಶ್ಯಕತೆ ಅಧಿಕ ಎನ್ನಬಹುದು.
  • ಉತ್ತಮ ಸಸ್ಯ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಇದು ಅಗತ್ಯ ಪೊಷಕವಾಗಿರುತ್ತದೆ,
  • ಸಾಮಾನ್ಯವಾಗಿ ಬೆಳೆ ಬೆಳೆಯುವಾಗ ಮಣ್ಣಿನಿಂದ ಫಸಲು ಮತ್ತು  ತ್ಯಾಜ್ಯಗಳ ಮೂಲಕ ವಾರ್ಷಿಕ 75-2250 ಗ್ರಾಂ ನಷ್ಟು ಸತುವು ನಷ್ಟವಾಗುತ್ತದೆ.
  • ಕಳೆ ಸಸ್ಯಗಳು ಬೇಗ ಸತುವನ್ನು ಬಳಸಿಕೊಳ್ಳುತ್ತದೆ. ಅದರಲ್ಲೇ ಅಧಿಕ ಪ್ರಮಾಣದಲ್ಲಿ ಸತುವಿನ ಅಂಶ ಇರುತ್ತದೆ.

Zink deficiency in sugarcane

ಬೆಳೆಯಲ್ಲಿ ಸತುವಿನ ಪಾತ್ರ:

  • ಸಸ್ಯಗಳಿಗೆ ವಾತಾವರಣದ ಏರುಪೇರುಗಳಾದ ಅಧಿಕ ಉಷ್ಣತೆ ಮತ್ತು ಅತಿಯಾದ ಶೀತವನ್ನು ತಡೆದುಕೊಳ್ಳುವ ಶಕ್ತಿ ಕೊಡುತ್ತದೆ.
  • ಕೊರತೆಯಾದಾಗ ಸಸ್ಯಗಳಲ್ಲಿ ನಿರವಯವ ರಂಜಕ ಸಂಗ್ರಹವಾಗುತ್ತದೆ.
  • ರಂಜಕಕ್ಕೂ ಸತುವಿಗೂ ತುಂಬಾ ಹತ್ತಿರದ ಸಂಬಂಧ ಇದೆ.
  • ಹೆಚ್ಚು ರಂಜಕದ ಬಳಕೆ ಆದಷ್ಟೂ ಸತುವಿನ ಕೊರತೆ ಉಂಟಾಗುತ್ತದೆ.
  • ರಂಜಕದ ಬಳಕೆ ಕಡಿಮೆ ಮಾಡಿದಂತೆ ಸತುವಿನ ತೃಷೆ ಕಡಿಮೆಯಾಗುತ್ತದೆ.
  • ಇದು ಸಸ್ಯ ಅಂಗಾಂಶದ  ಒಂದು ಭಾಗವಾಗಿದೆ.
  • ಸಸ್ಯಗಳ ಬೆಳವಣಿಗೆಗೆ ಪ್ರೋತ್ಸಾಹ ಕೊಡುವ ಆಕ್ಸಿನ್ ಗಳ ರಚನೆಗೆ ಸತು ಸಹಾಯಕ ಮತ್ತು ಅಗತ್ಯ.
  • ಸತು ಅನೇಕ ಕಿಣ್ವಗಳ ಭಾಗವಾಗಿರುವುದರಿಂದ ಅವುಗಳ ಸಮರ್ಪಕ ಕಾರ್ಯ ಚಟುವಟಿಕೆಗೆ ಅಗತ್ಯ.

ಸತುವಿನ ಕೊರತೆ ಯ ಪರಿಣಾಮ:

Zink deficiency in sunflower

  • ಸತುವಿನ ಕೊರತೆಯಿಂದ ಸಸ್ಯಗಳಲ್ಲಿ ಅನೇಕಾಸಮಾನತೆಗಳು ವ್ಕೃತ ರೂಪಗಳೂ ಉಂಟಾಗುತ್ತವೆ.
  • ಸತುವಿನ ಕೊರತೆಯೊಡನೆ ಕೋಶಗಳು ಗಾತ್ರದಲ್ಲಿ ವರ್ಧಿಸುವುದರಿಂದ ಚಿಕ್ಕ ಚಿಕ್ಕ ಬೇರುಗಳು ಬಾತುಕೊಳ್ಳುತ್ತವೆ.
  • ಮಣ್ಣಿನ pH ಮೌಲ್ಯ 4.5-6.5 ಇದ್ದಾಗ ಸತು ಹೆಚ್ಚು ಲಭ್ಯವಾಗುತ್ತದೆ.
  • 7 ಇದ್ದಾಗ ಲಭ್ಯತೆ ಕಡಿಮೆ. ಎಲೆಗಳು ಸಹಜ ಬಣ್ನವನ್ನು ಕಳೆದು ಕೊಳ್ಳುವುದಕ್ಕೆ ಸತುವಿನ ಕೊರತೆ ಒಂದು ಕಾರಣ.
  • ಕ್ಲೋರೋಸಿಸ್  ಉಂಟಾಗುವುದಕ್ಕೂ ಸತು ಕೊರತೆ ಕಾರಣ.
  • ಎಲೆಗಳ ನರಗಳ ಮಧ್ಯೆ ಹಳದಿ ಗೆರೆಗಳು ಕಾಣಿಸುತ್ತವೆ.
  • ಎಲೆಗಳ ಮೇಲೆ ಚಿಕ್ಕ ಚಿಕ್ಕ ಬಿಳಿ ಕಲೆ ಉಂಟಾಗುತ್ತದೆ.
  • ಎಲೆ ಮುರುಟಿಕೊಳ್ಳುವುದು, ಕುಬ್ಜವಾಗುವುದು ಸಹ ಸತುವಿನ ಕೊರತೆ ಲಕ್ಷಣ.

Zink deficiency

ಸತು ಹೇಗೆ ಕೊಡಬೇಕು:

  • ಸತುವಿನ ಸಲ್ಫೇಟ್ Zinc sulphate monohydrate; Zn content-33 %  ಅಥವಾ Zinc sulphate heptahydrate; Zn content-21 % ಅನ್ನು ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಹೊಲದ ಪೂರ್ತಿ ನೆಲಕ್ಕೆ ಎಕ್ರೆಗೆ  25 ಕಿಲೊ ಪ್ರಮಾಣದಲ್ಲಿ ( ಹೆಕ್ಟೇರ್ -25-60 kg)
  • ಈಗ EDTA ರೂಪದಲ್ಲಿ Zinc –EDTA chelate ; Zn content -12 % ಸತುವು ಸಿಗುತ್ತದೆ.
  • ಇದನ್ನು ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಬೆಳೆ ಹೊಂದಿ 1 ನೀರಿಗೆ  1 ಗ್ರಾಂ ಪ್ರಮಾಣದಲ್ಲಿ ಎರಡು ಸಾರಿ ಪತ್ರ ಸಿಂಚನ ಮಾಡಬಹುದು foliar spray of 0.5 % solution .
  • ಬೇರಿನ ಮೂಲಕವೂ (ದ್ರವೀಕರಿಸಿ) ವರ್ಷಕ್ಕೆ ಎರಡು ಮೂರು ಬಾರಿ ಪ್ರತೀ ಸಸ್ಯಕ್ಕೆ ಒಮ್ಮೆಗೆ 1 ಗ್ರಾಂ ಪ್ರಮಾಣದಲ್ಲಿ ಕೊಡಬೇಕು.

ಸತುವನ್ನು ಲಭ್ಯವಾಗುವಂತೆ ಮಾಡುವ ಜೀವಾಣುಗಳು ಇದ್ದು, ಅರ್ಕಾ ಮೈಕ್ರೋಬಿಯಲ್ ಕನ್ಸೋರ್ಶಿಯಾ ಇದರಲ್ಲಿ ಬಯೋ N P ಜೊತೆಗೆ ಸತುವನ್ನು ಕರಗಿಸಿಕೊಡುವ ಬ್ಯಾಕ್ಟೀರಿಯಾ ಇದೆ.
ಸತು ಕೊಡಬೇಕಾದರೆ ತಜ್ಞರ ಬಳಿ ಈ ಬಗ್ಗೆ ಸ್ವಲ್ಪ ಕೇಳಿ ಬಳಕೆ ಮಾಡುವುದು ಉತ್ತಮ. ಅಧಿಕ ಪ್ರಮಾಣದಲ್ಲಿ ಬಳಕೆ ಮಾಡಬಾರದು. ಇದರ ಬಳಕೆಯಿಂದ ಫಸಲು ಹೆಚ್ಚುತ್ತದೆ. ಲಾಭವಾಗುತ್ತದೆ.

error: Content is protected !!