ರಬ್ಬರ್ ಮರದಲ್ಲಿ ಚಿಗುರುವ ಸಮಯದಲ್ಲಿ ಎಲೆ ಭಾಗದಲ್ಲಿ ಒಂದು ರಸ ಸ್ರವಿಸುತ್ತದೆ. ಇದು ಮಾರ್ಚ್ ತನಕವೂ ಮುಂದುವರಿಯುತ್ತದೆ. ಈಗ ಹಿಂದಿನಂತೆ ಕಾಡು ಜೇನು ಕಡಿಮೆ. ಇರುವುದು ಬಹುತೇಕ ರಬ್ಬರ್ ಮರದ ಜೇನು.
- ಜೇನು ಎಂದರೆ ಅದು ನಿಸರ್ಗದ ವೈವಿಧ್ಯಮಯ ಹೂವುಗಳ ಮಧುವನ್ನು ಜೇನು ನೊಣ ಎಂಬ ಜೀವಿ ತನ್ನ ಶರೀರದ ಒಳಗೆ ಹೀರಿಕೊಂಡು ಸಂಗ್ರಹಿಸಿದ ದ್ರವ.
- ನೊಣಗಳು ಅದನ್ನು ತಮ್ಮ ಗೂಡಿಗೆ ತರುತ್ತವೆ. ಅಲ್ಲಿ ಸ್ವಲ್ಪ ಕಾಲ ತಮ್ಮ ದೇಹದಲ್ಲಿ ಇಟ್ಟುಕೊಂಡು ನಂತರ ಅದನ್ನು ತಾವೇ ನಿರ್ಮಿಸಿದ ಜೇನು ಸಂಗ್ರಹಣಾ ಪಾತ್ರೆ ‘ಎರಿ’ ಗೆ ತುಂಬಿಸುತ್ತವೆ.
- ಸ್ವಲ್ಪ ಸ್ವಲ್ಪವೇ ಒಂದೊಂದೇ ಕೋಣೆಗೆ ತುಂಬಿಸುತ್ತಾ ಪೂರ್ತಿ ಎರಿಯ ಕೋಣೆಯೊಳಗೆ ಜೇನನ್ನು ಭರ್ತಿ ಮಾಡುತ್ತವೆ.
ಆರೋಗ್ಯಕರ ಜೇನು ಯಾವುದು?
- ಜೇನು ಎಂದರೆ ವೈವಿಧಯಮಯ ಪುಷ್ಪಗಳ ಸಿಹಿ ಅಂಶ.
- ನಿಸರ್ಗದಲ್ಲಿರುವ ಬೇರೆ ಬೇರೆ ಪುಷ್ಪಗಳ ಎಸಳುಗಳ ಸಮೀಪ ಈ ಸಿಹಿ ಪದಾರ್ಥ ಮಿಲಿ ಗ್ರಾಂ ಲೆಕ್ಕದಲ್ಲಿ ಇರುತ್ತದೆ.
- ಇದನ್ನು ಜೇನು ನೊಣ ಮತ್ತು ಇನ್ನಿತರ ಸಣ್ಣ ಶರೀರದ ನೊಣಗಳು ಮಾತ್ರ ಹುಡುಕಿ ಹೀರಲು ಸಾಧ್ಯವೇ ಹೊರತು ಉನ್ನತ ಜೀವಿಗಳಿಗೆ ಸಾಧ್ಯವಿಲ್ಲ.ಇದು ಪ್ರಾಕೃತಿಕ ಕ್ರಿಯೆ.
ಜೇನು ತುಂಬಿಸಿದಾಕ್ಷಣ ಅದು ಜೇನಾಗುವುದಿಲ್ಲ. ಅ ಜೇನಿನಲ್ಲೆ ಏನಾದರೂ ತೇವಾಂಶ ಇದ್ದರೆ ಅದೆಲ್ಲಾ ಅವಿಯಾಗುವ ತನಕ ಎರಿಯ ಮೇಲೆ ಜೇನು ನೊಣಗಳು ತಮ್ಮ ರೆಕ್ಕೆಯ ಮೂಲಕ ಗಾಳಿ ಬೀಸುವ ಮೂಲಕ ಅದರ ತೇವಾಂಶವನ್ನು 18 -20 % ಕ್ಕೆ ಇಳಿಸುತ್ತವೆ. ನಂತರ ಜೇನು ತುಂಬಿದ ಕೋಣೆಯನ್ನು ಮೇಣದ ಮೂಲಕ ಸೀಲ್ ಮಾಡುತ್ತವೆ. ಆ ಜೇನು ಪರಿಶುದ್ಧ ಜೇನಾಗಿರುತ್ತದೆ. ಇದನ್ನು ಪಕ್ವ ಜೇನು ಜೇನು ಎಂದು ಕರೆಯುತ್ತಾರೆ.
- ಈ ಪ್ರಕ್ರಿಯೆಯಲ್ಲಿ ಹಲವು ವಿಚಾರಗಳಿವೆ. ಅದೆಲ್ಲಾ ನಂತರ ತಿಳಿಯೋಣ.
- ಹೂವುಗಳು ಯಾವುದೇ ಸಸ್ಯಗಳದ್ದು ಆಗಬಹುದು.
- ಅದೆಲ್ಲವೂ ಒಟ್ಟು ಸೇರಿದಾಗ ಅದರ ಸತ್ವಾಂಶಗಳು ಜೇನಿನಲ್ಲಿ ಸೇರಿ ಅದು ಆರೋಗ್ಯಕರ ಜೇನು ಎನಿಸಿಕೊಳ್ಳುತ್ತದೆ.
- ಒಂದೇ ಬಗೆಯ ಹೂವಿನ ಜೇನಿನಲ್ಲಿ ಒಂದು ನಿರ್ದಿಷ್ಟ ಅಂಶ ಮಾತ್ರ ಇರುತ್ತದೆ.
- ಈಗ ನಮ್ಮಲ್ಲಿ ಮರಮಟ್ಟುಗಳು ಕಡಿಮೆಯಾಗಿವೆ.
- ವೈವಿಧ್ಯಮಯ ಕಾಡು ಮಾರಗಳ ಜೇನು ಉತ್ಪಾದನೆಗೆ ಅವಕಾಶವೇ ಇಲ್ಲದ ಸ್ಥಿತಿ ಉಂಟಾಗಿದೆ.
ಆದರೆ ಜೇನು ಎಂಬ ವ್ಯವಹಾರ ಮಾತ್ರ ಹಿಂದಿಗಿಂತ ಜಾಸ್ತಿಯಾಗಿದೆ!.
- ಈಗ ಲಭ್ಯವಾಗುವ ಜೇನಿನಲ್ಲಿ ನಾವು ಬೇರೆ ಬೇರೆ ಮರಗಳ ಹೂವಿನ ಸಿಹಿ ರಸವನ್ನು ಪಡೆಯುವುದು ಅಸಾಧ್ಯ. ಅಂಥಃ ಜೇನಿನ ಉತ್ಪಾದನೆಯೂ ಈಗ ಆಗುತ್ತಿಲ್ಲ.
- ಜೇನನ್ನು ಈಗ ಕೃತಕವಾಗಿ ತಯಾರು ಮಾಡುವ ದಂಧೆ ಅಲ್ಲಲ್ಲಿ ಇದೆ.
- ಜೇನು ನೊಣಗಳಿಗೆ ಸಕ್ಕರೆ ಅಥವಾ ಬೆಲ್ಲದ ದ್ರಾವಣವನ್ನು ಸದಾ ತಿನ್ನಿಸುತ್ತಾ ಅದರ ಮೂಲಕ ಜೇನನ್ನು ಉತ್ಪಾದನೆ ಮಾಡಲಾಗುತ್ತದೆ ಎಂದು ಕೇಳಿ ಬರುತ್ತಿದೆ.
ಏಕ ಬೆಳೆಗಳ ಜೇನು:
- ಅಡಿಕೆ ತೋಟಗಳು ಮತ್ತು ರಬ್ಬರ್ ತೋಟಗಳು ಹೆಚ್ಚಿದೆ. ಈ ಬೆಳೆಗಳಲ್ಲೂ ಜೇನಿನ ಉತ್ಪಾದನೆ ಆಗುತ್ತದೆ.
- ಆದರೆ ಅದರ ಆರೋಗ್ಯ ಗುಣದ ಬಗ್ಗೆ ಹೇಳುವಂತಿಲ್ಲ.
- ರಬ್ಬರ್ ಮರದ ಹೂವಿನಲ್ಲಿ ಯಾವುದೇ ಮಧು ಇರುವುದಿಲ್ಲ.
- ಅದರ ಪತ್ರ ದಂಟಿನಲ್ಲಿ ಎಲೆ ಮೂಡುವ ಭಾಗದಲ್ಲಿ ಒಂದು ಸಿಹಿ ರಸ ಉತ್ಪಾದನೆಯಾಗುತ್ತದೆ.
- ಇದು ಒಂದು ಪುಷ್ಪದ ಜೇನಿಗಿಂತ 5 ಪಟ್ಟು ಹೆಚ್ಚು.
- ಇದನ್ನು ಜೇನು ನೊಣಗಳು ಸಂಗ್ರಹಿಸಿ ಜೇನು ಮಾಡುತ್ತವೆ.
ಈಗ ಲಭ್ಯವಿರುವ ಬಹುತೇಕ ಜೇನು ರಬ್ಬರ್ ಹಾಗೂ ಅಡಿಕೆ ಮರಗಳ ಜೇನಾಗಿರುತ್ತದೆ. ಅಡಿಕೆ ಮರಗಳ ಹೂವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೇನು ಇರುವುದಿಲ್ಲ.
- ಇಂತಹ ಕೆಲವು ಜೇನನ್ನು ಪರಿಶುದ್ಧ ಜೇನು ಎಂದು ಹೇಳುವಂತಿಲ್ಲ.
- ಕೆಲವರು ಸಂಗ್ರಹಿಸುವ ವಿಧಾನವೂ ತೀರಾ ವ್ಯಾವಹಾರಿಕವಾಗಿವೆ.
- ಸಮರ್ಪಕವಾಗಿ ಪಕ್ವವಾಗುವ ಮುನ್ನ ಜೇನನ್ನು ತೆಗೆಯಲಾಗುತ್ತದೆ.
- ಅವೈಜ್ಞಾನಿಕ ವಿಧಾನದಲ್ಲಿ ಸಂಗ್ರಹ ಮಾಡಲಾಗುತ್ತದೆ.
- ಆಹಾರ ಶ್ರೇಣಿಯಲ್ಲದ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡಲಾಗುತ್ತದೆ.
- ಈ ಜೇನು ಹುಳಿ ಬರುವುದು ಬೇಗ. ಹುಳಿ ಬಂದ ಜೇನು ಸೇವನೆಗೆ ಯೋಗ್ಯವಲ್ಲ.
ಪಕ್ವ ಜೇನು ಎಂದರೆ ಇಳಿಯುವಾಗ ಬಿದ್ದ ಭಾಗದಲ್ಲಿ ಕುಳಿ ಬೀಳದೆ ಮೇಲೆ ಎತ್ತರ ಬೀಳಬೇಕು. ಅಂಥಹ ಜೇನನ್ನು ನೀವು ಕಂಡಿದ್ದೀರಾ? ತಿಂದಿದ್ದೀರಾ. ಅದು ಈಗ ದೊರೆಯುವುದು ಕಷ್ಟ.