ಬೋರ್ಡೋ ದ್ರಾವಣ ಸಿಂಪರಣೆ

ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಕೆಲವು ಸೂಕ್ಷ್ಮಗಳು.

ಅಡಿಕೆಯ ಕೊಳೆ ರೋಗ ನಿಯಂತ್ರಿಸುವ ಉಪಚಾರವಾಗಿ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುತ್ತದೆ. ವಿವಿಧ ನಮೂನೆಯ ತುತ್ತೆ, ಸುಣ್ಣ, ಗಮ್ ಗಳು ಇರುವಾಗ ರೈತರಿಗೆ ದ್ವಂದ್ವ ಉಂಟಾಗುವುದು ಸಹಜ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ವಿಚಾರಗಳೊಳಗೊಂಡ ಮಾಹಿತಿ ಇಲ್ಲಿದೆ. ಬೊರ್ಡೋ ದ್ರಾವಣವನ್ನು ಪ್ರಪ್ರಥಮವಾಗಿ,  ಪ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರಾಂತದಲ್ಲಿ ದ್ರಾಕ್ಷಿ ಬೆಳೆಗೆ ಶಿಲೀಂದ್ರಗಳಿಂದ ಉಂಟಾಗುವ ರೋಗ ನಿಯಂತ್ರಣಕ್ಕೆ ಬಳಸುತ್ತಿದ್ದರಂತೆ. ಅದನ್ನು ಬ್ರಿಟೀಷರ ಕಾಲದಲ್ಲಿ ಆಗಿನ ಮೈಸೂರು ಸರಕಾರದ ಕೃಷಿ ಅಧಿಕಾರಿಯಾಗಿದ್ದ ಲೆಸ್ಲಿ ಸಿ ಕೋಲ್ಮನ್ ಇವರು  ನಮ್ಮ…

Read more
ಕಾಯಿ ಒಡೆಯುವ ತೊಂದರೆ

ಅಡಿಕೆ ಕಾಯಿ ಒಡೆಯುವುದಕ್ಕೆ ಕಾರಣ ಮತ್ತು ಪರಿಹಾರ .

ಹೆಚ್ಚಿನವರ ಅಡಿಕೆ ತೋಟದಲ್ಲಿ ಎಳೆಯ ಕಾಯಿ ಒಡೆದು ಬೀಳುವ ಸಮಸ್ಯೆ ಇದೆ. ಎಲ್ಲರೂ ಸೂಕ್ತ ಪರಿಹಾರಕ್ಕಾಗಿ ಸಿಕ್ಕ ಸಿಕ್ಕವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಯಾವ ಪರಿಹಾರ ಕೈಗೊಂಡರೂ  ಕಾಯಿ ಒಡೆಯುವಿಕೆ ಅಥವಾ ಅಂಡೋಡಕ ಮಾತ್ರ ಕಡಿಮೆ ಆಗುವುದೇ ಇಲ್ಲ. ಕೆಲವರ ಅಡಿಕೆ ತೋಟಗಳಲ್ಲಿ 10-15 % ಫಸಲು ಅಂಡೋಡಕದಿಂದ ಹಾಳಾಗುತ್ತದೆ. ಕಾಯಿ ಬಲಿತಂತೆ ಬುಡದಲ್ಲಿ ಉದುರಿಬಿದ್ದ ರಾಶಿ ರಾಶಿ ಹಾಳಾದ ಅಡಿಕೆ ಕಾಣಸಿಗುತ್ತದೆ. ಕೆಲವರು ಬೋರಾನ್ ಕೊರತೆಯಿಂದ ಹೀಗಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಸತುವಿನ ಕೊರತೆಯಿಂದ ಹೀಗೆ ಆಗುತ್ತದೆ…

Read more
ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ

ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ?

ಮಳೆಗಾಲದಲ್ಲಿ ಕೊಳೆ ನಿವಾರಣೆಗೆ ಸಿಂಪಡಿಸುವ ಬೋರ್ಡೋ ದ್ರಾವಣವನ್ನು ಈಗ ಸಿಂಪಡಿಸುವುದರಿಂದ ಅನುಕೂಲ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಕೊಳೆ ರೋಗಕ್ಕೆ ಸಿಂಪಡಿಸುವ ಮೈಲುತುತ್ತೆ ಮತ್ತು ಸುಣ್ಣ ಇವುಗಳ ಸಮತೋಲಿತ ಮಿಶ್ರಣಕ್ಕೆ ಬೋರ್ಡೋ ದ್ರಾವಣ Bordeaux mixture ಎನ್ನುತ್ತಾರೆ. ಈ ದ್ರಾವಣವು ಶೇ. 1  ರ ಪ್ರಮಾಣದಲ್ಲಿ ಸಿಂಪಡಿಸಬೇಕು ಎಂಬುದು ಶಿಫಾರಸು. ಇದು ತಟಸ್ಥ ಮಿಶ್ರಣವಾಗಿರಬೇಕು. ಇದರಿಂದ ಫಲ ಹೆಚ್ಚು. ಇದನ್ನು ಮಳೆ ಬಂದ ನಂತರವೇ ಸಿಂಪಡಿಸಬೇಕಾಗಿಲ್ಲ. ಮಳೆ ಬರುವ ಮುಂಚೆಯೂ ಇದನ್ನು ಸಿಂಪರಣೆ ಮಾಡಬಹುದು. ಈಗಾಗಲೇ ಅಡಿಕೆ…

Read more
ಆರೋಗ್ಯವಂತ ಅಡಿಕೆ ಮರ

ಅಡಿಕೆ ಮರದ ಆರೋಗ್ಯ –ಅದರ ಬೇರು ವ್ಯವಸ್ಥೆ.

ಯಾವುದೇ ಸಸ್ಯವಿರಲಿ, ಬೇರು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಸಸ್ಯಕ್ಕೆ ಬೇರು ಮುಖ್ಯ ಆಧಾರ ಸ್ಥಂಭ.  ಇದು ಮಣ್ಣು, ನೀರು, ಕೀಟಗಳು ಮತ್ತು ಪೋಷಕಗಳ ಅಸಮತೋಲನದಿಂದ ತೊಂದರೆಗೆ ಒಳಗಾಗುತ್ತದೆ. ಇದನ್ನು ಪ್ರತೀಯೊಬ್ಬ ರೈತರೂ ಗಮನಿಸಿ ಅದನ್ನು ಸರಿಪಡಿಸಿದರೆ ಮರ ಆರೋಗ್ಯವಾಗಿರುತ್ತದೆ. ಅಡಿಕೆ ಮರ, ತೆಂಗಿನ ಮರ ಮುಂತಾದ ಎಲ್ಲಾ ಏಕದಳ ಸಸ್ಯಗಳ ಬೇರುಗಳು ತಳಕ್ಕೆ ಇಳಿಯದೇ ಮೇಲ್ಭಾಗದಲ್ಲೇ ಪೋಷಕಗಳನ್ನು ಹುಡುಕುತ್ತಾ ಪಸರಿಸುತ್ತಿರುತ್ತವೆ. ಇವು ಸಸ್ಯದ ಕಾಂಡದಿಂದ ಹುಟ್ಟಿಕೊಂಡು ಬೆಳವಣಿಗೆಯಾಗುತ್ತದೆ. ಸಸ್ಯದ ಸುತ್ತಲೂ ಇದು ಪಸರಿಸಿರುತ್ತದೆ.  Monocot roots are…

Read more

ಕೊಳೆ ರೋಗ ಓಡಿಸಿದ ಬಯೋ ಔಷಧಿಗಳ ಹಿಂದಿನ ರಹಸ್ಯ.

ಅಡಿಕೆ ಬೆಳೆಗಾರರಿಗೆ ಕೊಳೆ ರೋಗ ನಿಯಂತ್ರಣ ಆದರೆ ದೊಡ್ದ ಪರೀಕ್ಷೆ ಪಾಸ್. ಇದನ್ನು ಪಾಸ್ ಮಾಡಿಸಿದ ಔಷಧಿಯೇ  ಬಯೋ ಔಷಧಿಗಳು.  ಏನು ಹೆಸರೋ, ಒಳಗೆ ಏನು ಇರುವುದೋ ಯಾರಿಗೂ ಗೊತ್ತಿಲ್ಲ. ಸಾವಯವ, ಜೈವಿಕ, ಹರ್ಬಲ್ ಎಂಬ ಹೆಸರಿನಲ್ಲಿ ರೈತರ ಉದ್ದಾರಕ್ಕೆ ಅದೆಷ್ಟೋ ಜನ ಬಂದರು,  ಹೋದರು. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಬೆಳೆಗಾರರು ವ್ಯಯಿಸುವ ಮೊತ್ತ ಕೋಟ್ಯಾಂತರ ರೂಪಾಯಿಗಳು. ನಮ್ಮ ಅಡಿಕೆ ತೋಟಗಳಿಗೆ  ಏನಿಲ್ಲವೆಂದರೂ 10,000 ಟನ್ ಗೂ ಹೆಚ್ಚು ಮೈಲುತುತ್ತೆ ಬೇಕಾಗುತ್ತದೆ. ಇದನ್ನು ಮನಗಂಡ ಕೆಲವರು…

Read more

ಅಡಿಕೆ ಬೆಳೆಗಾರರೇ- ಮೈಲುತುತ್ತೆ ಪರೀಕ್ಷೆ ಹೀಗೆ ಮಾಡಿ.

ಬೋರ್ಡೋ ದ್ರಾವಣ ತಯಾರಿಕೆಗೆ ಬಳಸುವ ಮೈಲುತುತ್ತೆ ಸರಿ ಇಲ್ಲದ ಕಾರಣ ಅಡಿಕೆ ಕೊಳೆರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಎಂಬ ಸಂಶಯ ಇದೆ. ಅದಕ್ಕೆ ಪುಷ್ಟಿ ಕೊಡುವಂತೆ  ಹಿಂದೆ ಕೆಲವೇ ಕೆಲವು ತಯಾರಿಕೆಗಳು ಇದ್ದರೆ ಈಗ ಹಲವಾರು ತಯಾರಕರು, ಹಲವಾರು ಬ್ರಾಂಡುಗಳು ಬಂದು ರೈತರಿಗೆ ಸಂಪೂರ್ಣವಾಗಿ ದ್ವಂದ್ವ ಉಂಟಾಗಿದೆ. ಈ ದ್ವಂದ್ವ ಬೇಡ. ನೀವೇ ಇದನ್ನು ಪರೀಕ್ಷಿಸಿ ಬಳಸಿ.  ಕಾಪರ್ ಸಲ್ಫೇಟ್ ಸರಬರಾಜುದಾರರ ಬಗ್ಗೆ ಅಂತರ್ ಜಾಲದಲ್ಲಿ ಹುಡುಕಿ. ಹಲವಾರು ಜನ ಇದನ್ನು ಒದಗಿಸುವರು ಸಿಗುತ್ತಾರೆ.ದರ ಸಮರವೂ ಇರುತ್ತದೆ….

Read more

ಕೊಳೆ ರೋಗ ಬಾರದಿರುವಂತೆ ಮುನ್ನೆಚ್ಚರಿಕೆ.

ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ ನಮ್ಮ ವಾತಾವರಣದಲ್ಲಿ ಎಲ್ಲಾ  ಕಡೆ ಬೀಜಾಣು ರೂಪದಲ್ಲಿ ಇರುತ್ತದೆ, ಇದು ಅನುಕೂಲ ಪರಿಸ್ಥಿತಿ  ಕೂಡಿ ಬಂದಾಗ ಬೀಜಾಂಕುರವಾಗುತ್ತದೆ. ಸಂತಾನಾಭಿವೃದ್ದಿ ಹೊಂದಿ ಅಡಿಕೆಯ ಎಳೆ ಕಾಯಿಗಳಿಗೆ ಹಾನಿ ಮಾಡಿ ಬೆಳೆ ನಷ್ಟಕ್ಕೆ  ಕಾರಣವಾಗುತ್ತದೆ. ಪ್ರಾರಂಭದಲ್ಲೇ ಬೀಜಾಂಕುರವನ್ನು ತಡೆದರೆ  ಪರಿಣಾಮ ಹೆಚ್ಚು. ತಜ್ಞರು ಕೊಳೆ ಔಷಧಿಯನ್ನು ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ಅಡಿಕೆ ಗೊನೆಗಳಿಗೆ ಸಿಂಪರಣೆ ಮಾಡಬೇಕು ಎನ್ನುತ್ತಾರೆ. ನಾವು ಇನ್ನೂ ಅಡಿಕೆ  ಮಿಡಿಗಳು ಸಣ್ಣದಿವೆ. ಅದಕ್ಕೆ ಹೇಗಪ್ಪಾ ಔಷಧಿ ತಗಲುವುದು ಎಂದು ಸಾಧ್ಯವಾದಷ್ಟು…

Read more

ಅಡಿಕೆ ಮರಗಳು ಹೀಗೆ ಯಾಕೆ ಆಗುತ್ತವೆ?

ಸಹಜ ಸ್ಥಿತಿಯಲ್ಲಿ ಅಡಿಕೆ ಮರದ ಗಂಟುಗಳು  ಒಂದೇ ನೇರಕ್ಕೆ  ಸುತ್ತು ಬಂದಿರಬೇಕು.ಆದರೆ  ಕೆಲವು ತೊಟಗಳಲ್ಲಿ ಕೆಲವು ಮರಗಳಲ್ಲಿ ಅದರ ಗಂಟು ವಿಚಿತ್ರವಾಗಿ ಗರಗಸದ ತರಹ ಬೆಳೆಯುತ್ತವೆ. ಇದ್ದು ರೋಗವೋ ಎಂಬ ಸಂದೇಹ ರೈತರಲ್ಲಿದೆ. ಇದು ರೋಗವಲ್ಲ.  ಪೊಷಕಾಂಶದ ಅಸಮತೋಲನ. ಗರಗಸ ಗಂಟು ಹೇಗೆ ಆಗುತ್ತದೆ? ಅದು 2005 ನೇ ಇಸವಿ. ಬಂಟ್ವಾಳ ತಾಲೂಕು, ಕಾಅವಳ ಮುಡೂರು ಗ್ರಾಮದ ಕೆದ್ದಳಿಕೆ ಗಣೇಶ್ ಭಟ್ ಇವರ ತೋಟಕ್ಕೆ  ಹೋಗಿದ್ದೆ. ಆಗ ಅವರು ತಮ್ಮ ಅಡಿಕೆ ಮರಗಳಿಗೆ ಕೊಡುತ್ತಿದ್ದ ಗೊಬ್ಬರ ಹರಳಿನ ಹಿಂಡಿ. ಹನಿ…

Read more

ಅಡಿಕೆಯ ಮಿಳ್ಳೆ ಉದುರುವುದಕ್ಕೆ ಇದು ಕಾರಣ.

ಬೇಸಿಗೆಯಲ್ಲಿ ಅಡಿಕೆ ಬೆಳೆಗಾರರ ನಿದ್ದೆಗೆಡಿಸುವ ಸಮಸ್ಯೆ ಇದು. ಬೆಳೆಗಾರರು ಇದನ್ನು ಉಳಿಸಲು ಯಾವ ಉಪಚಾರಕ್ಕೂ ಸಿದ್ದರು. ಇದಕ್ಕೆ ಈ ತನಕ ಯಾರೂ ನಿಖರ ಕಾರಣವನ್ನು ನೀಡಿದವರಿಲ್ಲ.  ಆದರೆ ಯಾರೂ ಪರಿಹಾರ ಇಲ್ಲ ಎಂದು ಹೇಳುವವರಿಲ್ಲ. ಇದರ ಬಗ್ಗೆ ಕೆಲವು ಯಾರೂ ಹೇಳದ ವಿಚಾರಗಳು ಇಲ್ಲಿವೆ. ಅಡಿಕೆಯ ಮರದ ಹೂ ಗೊಂಚಲಿನಲ್ಲಿ ಗಂಡು  ಹಾಗೂ ಹೆಣ್ಣು ಹೂವುಗಳು ಇರುತ್ತವೆ. ಗಂಡು ಹೂವು ಉದುರಲಿಕ್ಕೇ ಇರುವುದು. ಹೆಣ್ಣು ಹೂವು ಮಾತ್ರ ಉದುರಬಾರದು. ಆದೆಲ್ಲವೂ ಉಳಿದರೆ ಅಡಿಕೆ ಫಸಲು ಉತ್ತಮವಾಗಿರುತ್ತದೆ. ಆದರೆ…

Read more

ಮಹಾಳಿ ರೋಗಕ್ಕೆ ಮೊಳೆ ಮದ್ದು!

ಒಬ್ಬ ಮಿತ್ರರು ಸಲಹೆ ಕೇಳುತ್ತಾರೆ. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಮರದ ಬುಡಕ್ಕೆ ತುಕ್ಕು ಹಿಡಿದ ಮೊಳೆ ಹೊಡೆದರೆ ಆಗುತ್ತದಂತೆ. ಕೇರಳದಲ್ಲಿ ಇದು ಯಶಸ್ವಿಯಾಗಿದೆಯಂತೆ. ಈ ಬಗ್ಗೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಮನುಷ್ಯ ತನ್ನೆಲ್ಲಾ ಸಿಟ್ಟನ್ನು ಕೊನೆಗೆ ತೀರಿಸಿಕೊಳ್ಳುವುದು ತನ್ನ ಹೆಂಡತಿಯ ಮೇಲೆ ಎನ್ನುತ್ತಾರೆ ಹಿಂದಿನವರು. ಉಳಿದವರು ಅದಕ್ಕೆ  ಪ್ರತಿಕ್ರಿಯಿಸುತ್ತಾರೆ. ಆದರೆ ಹೆಂಡತಿಗೆ ಗಂಡನೇ ದೊಡ್ದದು. ಅದಕ್ಕೆ ಏನು ಮಾಡಿದರೂ ಮಾತಾಡುವುದಿಲ್ಲ. ಆ ಅವಕಾಶವನ್ನು  ಗಂಡಸು ಬಳಸಿಕೊಳ್ಳುತ್ತಾನೆ. ಇದರ ಉಲ್ಲೇಖ  ಇಲ್ಲಿ ಯಾಕೆಂದರೆ ಯಾವುದಕ್ಕೂ ಪ್ರತಿರೋಧ ಒಡ್ಡದೇ…

Read more
error: Content is protected !!