ಕಾಫೀ ಬೆಳೆಗೆ ಬಾಧಿಸಿಗೆ ಕಪ್ಪು ಕೊಳೆ ರೋಗ.
ಕಾಫೀ ಬೆಳೆಗೆ ಎರಡನೇ ಅತೀ ದೊಡ್ಡ ನಷ್ಟ ತಂದೊಡ್ಡುವ ರೋಗ ಕಪ್ಪು ಕೊಳೆ. ಇದನ್ನು Black rot disease ಎಂದು ಕರೆಯುತ್ತಾರೆ. ಮಳೆಗಾಗದಲ್ಲಿ ಯಾವಾಗಲೂ ಬರಬಹುದು. ಆದರೆ ಮುಂಗಾರು ಮಳೆ ಮಧ್ಯಭಾಗ ಮತ್ತು ಕೊನೆ ಭಾಗದಲ್ಲಿ ಇದರ ತೊಂದರೆ ಹೆಚ್ಚು. ಇದು ಅರೇಬಿಕಾ ಕಾಫಿಗೆ ಹೆಚ್ಚಾಗಿಯೂ ರೋಬಸ್ಟಾಕ್ಕೆ ಸ್ವಲ್ಪ ಕಡಿಮೆ. ಈ ರೋಗ ಬಂದರೆ 10-30% ಫಸಲು ಕಡಿಮೆಯಾಗುತ್ತದೆ. ಆಷಾಢ ಕಳೆದು ಶ್ರಾವಣ ಬಂತೆಂದರೆ ಒಮ್ಮೊಮ್ಮೆ ಮಳೆ ಮತ್ತು ಬಿಸಿಲು ಇರುತ್ತದೆ. ಆಗಲೇ ಹೆಚ್ಚಾಗಿ ವಾಯುಭಾರ ಕುಸಿತವೇ…