ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?

ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?

ಕರಿಮೆಣಸಿನ ಬೆಳೆಗೆ ಈಗ ಬರುವ ರೋಗ ಮಾರಣಾಂತಿಕವಾಗಿದ್ದು, ಇದನ್ನು ಸಹ ಗುಣಪಡಿಸಲು ಸಾಧ್ಯವಿದೆ. ರೋಗ ಪ್ರಾರಂಭವಾಗುವ ಹಂತದಲ್ಲಿ ಇದನ್ನು ಗುರುತಿಸಿ, ಉಪಚಾರಮಾಡುವುದು ಪ್ರಾಮುಖ್ಯ. ಮಳೆ ಬರುತ್ತಿದೆ ಎಂದು ಮನೆಯಲ್ಲೇ ಕುಳಿತರೆ  ಅಥವಾ ತೋಟಕ್ಕೆ ಹೋದಾಗ ಬಳ್ಳಿಯ ಸ್ಥಿತಿಗತಿಯನ್ನು ಕೂಲಂಕುಶವಾಗಿ ಗಮನಿಸದೇ ಇದ್ದರೆ  ರೋಗ ಸೋಂಕು ತಗಲಿ ಅದು ಬಹಳ ತ್ವರಿತವಾಗಿ ಉಲ್ಬಣಿಸಿ ಬಳ್ಳಿ ಸಾಯುತ್ತದೆ.  ಈಗಕರಿಮೆಣಸು ಬೆಳೆಗಾರರಿಗೆ ಇರುವ ಪ್ರಾಮುಖ್ಯ ಕೆಲಸ ತೋಟಕ್ಕೆ ಹೋದಾಗ ಬಳ್ಳಿಯ ಆರೋಗ್ಯವನ್ನು ಗಮನಿಸುತ್ತಾ ಇರುವುದು. ಕರಿಮೆಣಸು ಬೆಳೆಗೆ ಮಳೆಗಾಲ ಕಷ್ಟದ ಕಾಲ….

Read more
ಕರಿಮೆಣಸು ಬಳ್ಳಿ ಸಾಯುತ್ತಿದೆಯೇ? ಈ ಕೀಟ ಇರಬಹುದು ಗಮನಿಸಿ.

ಕರಿಮೆಣಸು ಬಳ್ಳಿ ಸಾಯುತ್ತಿದೆಯೇ? ಈ  ಕೀಟ ಇರಬಹುದು ಗಮನಿಸಿ.

ಕರಿಮೆಣಸಿನ ಬಳ್ಳಿಗೆ ರೋಗ ಬರುತ್ತದೆ. ಇದರಿಂದಾಗಿ ಬಳ್ಳಿ ಸಾಯುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ರೋಗ ಬಂದು ಬಳ್ಳಿ ಸಾಯುವುದಲ್ಲದೆ ಕೀಟದ ಕಾರಣದಿಂದಲೂ ಬಳ್ಳಿ ಸಾಯುತ್ತದೆ. ಇದು ಹರಡುವ ಕೀಟವಾಗಿದ್ದು, ರೋಗದಿಂದ ಬಳ್ಳಿ ಒಣಗಿದಂತೆ ಇದರಿಂದಲೂ ಒಣಗುತ್ತದೆ. ಕರೆಗಳೂ ಉದುರುತ್ತದೆ. ಎಲೆಗಳೂ ಉದುರುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ. ಗದ್ದೆ ಬೇಸಾಯ ಮಾಡುವವರಿಗೆ ಬೇಸಾಯ ಕೈ ಹಿಡಿಯಬೇಕಿದ್ದರೆ ದಿನಾ ಗದ್ದೆಗೆ ಸುತ್ತು ಬರಬೇಕಂತೆ. ಅದಕ್ಕಾಗಿಯೇ ಗದ್ದೆಗೆ ಹುಣಿಯೂ ಇರುತ್ತದೆ. ಉತ್ತಮ ಬೇಸಾಯಗಾರರು ಬೆಳಗ್ಗಿನ ಹೊತ್ತು ಗದ್ದೆಗೆ…

Read more
ಅಡಿಕೆ ಧಾರಣೆ ಸ್ವಲ್ಪ ಅಸ್ಥಿರವಾಗಿದೆ- ಬೆಳೆಗಾರರು ದೊಡ್ಡ ನಿರೀಕ್ಷೆ ಹೊಂದಬೇಕಾಗಿಲ್ಲ.

ಅಡಿಕೆ ಧಾರಣೆ ಸ್ವಲ್ಪ ಅಸ್ಥಿರವಾಗಿದೆ- ಬೆಳೆಗಾರರು ದೊಡ್ಡ ನಿರೀಕ್ಷೆ ಹೊಂದಬೇಕಾಗಿಲ್ಲ.

ಜುಲೈ ತಿಂಗಳ ಪ್ರಾರಂಭದಲ್ಲಿ ಕೆಂಪಡಿಕೆ ಧಾರಣೆ ಏರಿಕೆ ಪ್ರಾರಂಭವಾಗಿ ಬೆಳೆಗಾರರು  ಹೆಚ್ಚಿನ ನಿರೀಕ್ಷೆ ಹೊಂದುವಂತಾಯಿತು. ಇನ್ನೂ ಏರಬಹುದು ಸ್ವಲ್ಪ ಕಾಯೋಣ ಎಂದು ಮಾರಾಟಕ್ಕೆ ಹಿಂದೇಟು ಹಾಕುವ ಸ್ಥಿತಿ. ಸಹಜವಾಗಿ ಎಲ್ಲರೂ ಹೀಗೇ ಮಾಡುವುದು. ಆದರೆ ದರ ಏರುತ್ತಾ  ಏರುತ್ತಾ ಮುಂದೆ ಹೋಗುವುದಿಲ್ಲ. ಕೆಲ ಸಮಯದ ನಂತರ ಇಳಿಕೆ ಆಗಿಯೇ ಆಗುತ್ತದೆ. ಈಗ ಸ್ವಲ್ಪ ಇಳಿಕೆ ಸಾಧ್ಯತೆ ಕಾಣಿಸುತ್ತಿದೆ. ದರ ಏರಿಕೆಯಾಗುವಾಗ ಮಾಲು ಕೊಡಲು ಯಾವ ರೈತನಿಗೂ  ಮನಸ್ಸು ಬರುವುದಿಲ್ಲ. ಕೊನೆಗೆ ಇಳಿಕೆಯಾಗುವಾಗ ಮಾರಾಟ ಮಾಡುವುದು ಅನಿವಾರ್ಯವಾಗುತ್ತದೆ. ಇದುವೇ…

Read more
ಬೆಳೆಗಾರರು ತಪ್ಪದೆ ಗಮನಿಸಿ – ಈ ಸಸಿಗಳು ಚೆನ್ನಾಗಿ ಬೆಳೆಯುತ್ತವೆ?.

ಬೆಳೆಗಾರರು ತಪ್ಪದೆ ಗಮನಿಸಿ – ಈ ಸಸಿಗಳು ಚೆನ್ನಾಗಿ ಬೆಳೆಯುತ್ತವೆ?.

ಅಡಿಕೆ ತೆಂಗು ಹಾಗೆಯೇ ಇನ್ನೂ ಕೆಲವು ಬೆಳೆ ಬೆಳೆಯುವ ಬೆಳೆಗಾರರು ತಮ್ಮ ತೋಟದ ಒಳಗೆ ಒಮ್ಮೆ ಎಲ್ಲಾ ಮರ, ಸಸಿಗಳನ್ನು ಗಮನಿಸುತ್ತಾ ತಿರುಗಾಡಿ. ಅಲ್ಲಿ ನಮ್ಮ ಗಮನಕ್ಕೆ ಬರುವುದು ಬಿದ್ದ ಬೀಜ ನಮ್ಮ ಕಣ್ಣು ತಪ್ಪಿಸಿ ಅಲ್ಲೇ ಉಳಿದು ಮೊಳೆತು ಸಸಿಯಾಗಿರುವ “ಉರಲು ಹುಟ್ಟಿದ ಸಸಿ” ಎಷ್ಟೊಂದು ಚೆನ್ನಾಗಿ ಬೆಳೆಯುತ್ತದೆ, ಮತ್ತು ಅದರಲ್ಲಿ ಎಷ್ಟು ಚೆನ್ನಾಗಿ ಫಲ ಬರುತ್ತದೆ ಎಂಬ ಅಂಶ. ಇದು ಪ್ರತೀಯೊಬ್ಬ ಬೆಳೆಗಾರನ ತೋಟದಲ್ಲೂ ಕಾಣಲು ಸಿಗುತ್ತದೆ. ಮನಸ್ಸು ಹೇಳುತ್ತದೆ, ಊರಲು ಹುಟ್ಟಿದ ಸಸಿ…

Read more
ದಿನಾಂಕ:13-12-2022 ಚಾಲಿ, ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ

ದಿನಾಂಕ:13-12-2022 ಚಾಲಿ,ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ ಧಾರಣೆ.

ಚಾಲಿ ದರ ಭಾರೀ ಕುಸಿತ ಆಗಲಿಲ್ಲ.ಏರಿಕೆಯ ಸೂಚನೆಯೂ ಇಲ್ಲ.ಕೆಂಪುಅಡಿಕೆ ಧಾರಣೆ ಮಾತ್ರ ಯಾವ ಬೆಳೆಗಾರನೂ ಕಲ್ಪಿಸಿರದ ಮಟ್ಟಕ್ಕೆ ಬಂದಿದೆ.ಯಾಕೆ ಎಂಬ ಕಾರಣ ಯಾರಿಗೂ ಗೊತ್ತಿಲ್ಲ. ಗುಟ್ಕಾ ತಿನ್ನುವುದು ಕಡಿಮೆಯಾಗಿಲ್ಲ.ಗುಟ್ಕಾ ತಯಾರಿಕೆ ನಿಂತಿಲ್ಲ. ಆದರೆ ಅಡಿಕೆಗೆ ಬೆಲೆ ಇಲ್ಲ. ಕರಿಮೆಣಸು ಒಮ್ಮೆ ಚೇರಿಸಿಕೊಂಡರೂ  ಮತ್ತೆ ಮುಗ್ಗರಿಸಿದೆ. ರಬ್ಬರ್ ಬೆಲೆ ಏರಿಕೆ ಸಾಧ್ಯತೆ ಇಲ್ಲ.ಕೊಬ್ಬರಿಯೂ ಸಹ ನೆಲಕಚ್ಚಿದ ಸ್ಥಿತಿಯಲ್ಲಿದೆ. ಒಟ್ಟಿನಲ್ಲಿ ಕೃಷಿ ಉತ್ಪನ್ನಗಳ ಬೆಲೆ ಭಾರೀ ಅಸ್ತಿರವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಳೆದ ವಾರದಿಂದ ಅಧಿಕ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿದೆ. ಸಾಗರ,…

Read more
Disease Resistant Black Pepper variety –Sigandhini

Disease Resistant Black Pepper variety –Sigandhini

Pepper is highly susceptible to some diseases. Every farmer is in search of a disease-free pepper variety. There are a lot of varieties, but till today there was no such resistant variety was noticed. But recently one mutant variety called Sigandhini has been identified as a disease-resistant variety by the Indian Institute of spice research…

Read more
ಕರಿಮೆಣಸು ಹೀಗೆ ಬೆಳೆಸಬಹುದು

ಬುಷ್ ಪೆಪ್ಪರ್- ಕೊಯಿಲು ಬೆಳೆಸುವುದು ಹೇಗೆ- ಅನುಕೂಲ ಏನು?

ತೋಟದಲ್ಲಿ ಮರಕ್ಕೆ ಅಥವಾ ಯಾವುದಾದರು ಅಧಾರಕ್ಕೆ  ಹಬ್ಬಿಸಿ ಬೆಳೆಸಿದ ಕರಿಮೆಣಸನ್ನು  ಬೆಳೆಸುವುದು ನಮಗೆಲ್ಲಾ ಗೊತ್ತಿರುವ ಬೆಳೆ ಕ್ರಮ. ಇದನ್ನು ಮರಕ್ಕೆ ಹಬ್ಬಿಸು  ಬೆಳೆಸುವುದಲ್ಲದೆ ನೆಲದಲ್ಲಿಯೆ ಬೆಳೆಸಿ ಮೆಣಸು ಪಡೆಯಬಹುದು. ಈ ರೀತಿ ಮೆಣಸು ಬೆಳೆಸುವುದಕ್ಕೆ ಬುಷ್ ಪೆಪ್ಪರ್ ,ಪೊದೆಮೆಣಸು (bush pepper) ಎನ್ನುತ್ತಾರೆ. ಇದನ್ನು ಕೊಯ್ಯುವುದು ಸುಲಭ. ವರ್ಷದಲ್ಲಿ ಎರಡು ಮೂರು ಬಾರಿ ಇಳುವರಿಯು ಕೊಡುತ್ತದೆ. ಕೆಲವು ಇತಿಮಿತಿಗಳಲ್ಲಿ  ಇದನ್ನು ಬೆಳೆಸಬಹುದು. ಅಸಾಂಪ್ರದಾಯಿಕ ಪ್ರದೇಶಗಲ್ಲಿ ತಾಜಾ ಮೆಣಸು ಬಯಸುವವರಿಗೆ ಇದು ಉತ್ತಮ.  ಕಾಳು ಮೆಣಸು ಬೆಳೆಸಬೇಕೆಂಬ  ಆಸಕ್ತಿ…

Read more
ಬೊರ್ಡೋ ಪೇಸ್ಟ್- Bordeaux paint

ತೋಟಗಾರಿಕಾ ಬೆಳೆಗಾರರ ರಕ್ಷಕ ಈ ಶಿಲೀಂದ್ರ ನಾಶಕ.

ನಾವೆಲ್ಲಾ ಕೆಲವು ಸಂಶೋಧನಾ ಸಂಸ್ಥೆಗಳು, ಬೆಳೆ ಪ್ರಾತ್ಯಕ್ಷಿಕಾ ತಾಕುಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ತೋಟದ ಬೆಳೆಗಳ ಮರ, ಬಳ್ಳಿಯ ಕಾಂಡಕ್ಕೆ ನೀಲಿ ಮಿಶ್ರ ಬಿಳಿ ಬಣ್ಣದ ಲೇಪನ ಮಾಡಿರುವುದನ್ನು ಕಂಡಿರಬಹುದು.  ಅದು ಏನು ಗೊತ್ತೇ? ಇದು ನೋಡಲು ಚೆಂದವಾಗಿ ಇರಲಿ ಎಂದು ಲೇಪನ ಮಾಡಿದ್ದು ಅಲ್ಲ. ಅದು ಒಂದು ಸಸ್ಯ ಸಂರಕ್ಷಣಾ ಔಷಧಿಯ ಲೇಪನ. ಬಹುತೇಕ ತೋಟಗಾರಿಕಾ ಬೆಳೆಗಳಿಗೆ ಕಾಂಡದ ಮೂಲಕ ಕೆಲವು ರೋಗ – ಕೀಟಗಳು ಪ್ರವೇಶವಾಗುತ್ತವೆ. ಅದನ್ನು ಪ್ರತಿಬಂಧಿಸುವಲ್ಲಿ ಈ ಬಣ್ಣದ ಪೇಸ್ಟ್ ಲೇಪನ…

Read more
ಸಾಂಬಾರ ಬೆಳೆಗಳ ಸಂಶೊಧನಾ ಸಂಸ್ಥೆ ಅಪ್ಪಂಗಳ ಮಡಿಕೇರಿ

ನೀವು ಸಾಂಬಾರ ಬೆಳೆಗಾರರೇ? ಇಲ್ಲಿಗೆ ಒಮ್ಮೆ ಭೇಟಿ ಕೊಡಬಹುದು.

ಸಾಂಬಾರ ಬೆಳೆಗಳಾದ ಏಲಕ್ಕಿ, ಕರಿಮೆಣಸು ಅರಶಿನ, ಶುಂಠಿ ಮುಂತಾದ ಬೆಳೆ ಬೆಳೆಯುವ ರೈತರು ವೈಜ್ಞಾನಿಕ ಬೆಳೆ ಮಾಹಿತಿ, ತಳಿ ಮಾಹಿತಿ ಬಯಸುವುದೇ ಆದರೆ ಕರ್ನಾಟಕದ ಮಡಿಕೇರಿಯಲ್ಲಿರುವ ಪ್ರಾದೇಶಿಕ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಗೆ ಒಮ್ಮೆ ಭೇಟಿ ಕೊಡಿ. ಇಲ್ಲಿ ನಿಮಗೆ  ಬೇಕಾದ ಮಾಹಿತಿಗಳು ಲಭ್ಯವಿದೆ. ಮಡಿಕೇರಿಯ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರವನ್ನು 1961 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಯಿತು. ಕೇಂದ್ರದ ಆಡಳಿತಾತ್ಮಕ ನಿಯಂತ್ರಣವನ್ನು 1976 ರಲ್ಲಿ ಕಾಸರಗೋಡ್‍ನ ಕೇಂದ್ರ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಯಿತು….

Read more
ಸೂಕ್ತವಾದ ನಾಟಿ ವಿಧಾನ

ಕರಿಮೆಣಸು ಬಳ್ಳಿ/ಸಸಿ ಹೇಗೆ ನೆಡಬೇಕು?

ಕರಿಮೆಣಸು ಬೆಳೆಸಲು ಕೆಲವರು ಬಳ್ಳಿ ತುಂಡುಗಳನ್ನು ನಾಟಿ ಮಾಡುತ್ತಾರೆ. ಮತ್ತೆ ಕೆಲವರು ಪ್ಯಾಕೆಟ್  ಸಸಿ ನಾಟಿ ಮಾಡುತ್ತಾರೆ. ಎರಡೂ ಉತ್ತಮ. ಬಳ್ಳಿ ನಾಟಿ ಮಾಡುವವರಿಗೆ ಮುಂಗಾರು ಮಳೆ ಪ್ರಾರಂಭವಾಗುವ ಈ ಸಮಯ ಉತ್ತಮ. ಸಸಿ ನಾಟಿಯನ್ನು  ಯಾವಾಗಲೂ ಮಾಡಬಹುದು. ಬಳ್ಳಿ ತುಂಡುಗಳನ್ನು ನಾಟಿ ಮಾಡಿದರೆ ಅದು  ಮಣ್ಣಿನಲ್ಲಿ ಬೇರು ಬಿಡುವ ತನಕ ಒಣಗದೆ ಇರಬೇಕು. ಹಾಗಾಗಬೇಕಾದರೆ ಬಿಸಿಲು ಇರಬಾರದು. ಹೆಚ್ಚು ಮಳೆಯೂ ಇರಬಾರದು.  ಅದಕ್ಕೇ ಈ ಸಮಯ ಸೂಕ್ತ. ಈಗ ನೆಟ್ಟರೆ ಅನುಕೂಲ ಏನು? ಹಿತಮಿತವಾದ ಮಳೆ…

Read more
error: Content is protected !!