ಅಂಡರ್ ಗ್ರೌಂಡ್ ಡ್ರೈನೇಜ್ ವ್ಯವಸ್ಥೆ -Underground Drainage system

ಅಂಡರ್ ಗ್ರೌಂಡ್ ಡ್ರೈನೇಜ್ – ನೀರು ಬಸಿಯಲು ಸುಲಭ- ಶಾಶ್ವತ ವ್ಯವಸ್ಥೆ.

ಅಡಿಕೆ ತೋಟ, ತೆಂಗಿನ ತೋಟ ಅಥವಾ ಇನ್ಯಾವುದೇ ಬೇಸಾಯದ ಹೊಲದಲ್ಲಿ ನೆಲದಿಂದ ಒಸರುವ (ಒರತೆ) ನೀರನ್ನು ಅಡಿಕೆಯಲ್ಲೇ ಬಂಧಿಸಿ ಅದನ್ನು ವಿಲೇವಾರಿ ಮಾಡಲು ಇರುವ ಅತ್ಯುತ್ತಮ ವ್ಯವಸ್ಥೆಯೊಂದಿದ್ದರೆ ಅದು ಅಂಡರ್ ಗ್ರೌಂಡ್ ಡೈನೇಜ್. ಈ ವ್ಯವಸ್ಥೆ ಮಾಡಿಕೊಂಡರೆ ಜೌಗು ಜಾಗವನ್ನೂ ಒಣ ಜಾಗವನ್ನಾಗಿ ಪರಿವರ್ತಿಸಬಹುದು. ತೋಟದಲ್ಲಿ ಓಡಾಡುವಾಗ ಯಾವುದೇ ಬಸಿಗಾಲುವೆ ಕಾಣುವುದಿಲ್ಲ. ನೆಲದಲ್ಲಿ ಒರತೆ ರೂಪದಲ್ಲಿ ಹೊರ ಉಕ್ಕುವ ನೀರನ್ನು ಅಲ್ಲೇ ಟ್ಯಾಪ್ ಮಾಡಿ, ಮೇಲೆ ಬಾರದಂತೆ ತಡೆಯುವ ವ್ಯವಸ್ಥೆಗೆ  ಅಂಡರ್ ಗ್ರೌಂಡ್ ಡ್ರೈನೇಜ್ ಎಂದು ಹೆಸರು….

Read more
soil solarization for weed control

Soil Solarization– GOOD SOLUTION FOR weed CONTROL

Soil solarisation is the novel technique in safe and effective weeds control , soil born disease and pests management. It is harmless. The impact of pesticide use on the environment is now well documented and a more wide spread adoption of integrated weed management strategies and tactics recommended in sustainable agriculture systems. This hydrothermal process…

Read more
glerisidia plant

ಕೊಟ್ಟಿಗೆ ಗೊಬ್ಬರಕ್ಕೆ ಪರ್ಯಾಯ ಈ ಸೊಪ್ಪುಗಳು.

ಇಂದಿನ  ಸಾರ್ವಕಾಲಿಕ ಸಮಸ್ಯೆಯಾದ  ಕೆಲಸದವರ ಕೊರತೆ. ಈ ಕೊರತೆಯಿಂದಾಗಿಯೇ ನಾವು ರಾಸಾಯನಿಕ ಗೊಬ್ಬರ, ಕಳೆ ನಾಶಕ ಹೆಚ್ಚಾಗಿ ಬಳಕೆ ಮಾಡುತ್ತಿರುವುದು. ಅದನ್ನು ಕಡಿಮೆ ಮಾಡಲು ಹಸುರೆಲೆ ಗೊಬ್ಬರ ಗಿಡಗಳೂ ಸಹಕಾರಿ ಹೇಗೆ ಗೊತ್ತೇ? ಕೊಟ್ಟಿಗೆ ಗೊಬ್ಬರ ಬೇಕಾದರೆ ಹಸು ಸಾಕಬೇಕು. ಹಸು ಸಾಕಿದರೆ ಅದಕ್ಕೆ ಮೇವು ಬೆಳೆಸಬೇಕು. ಸಾಕಷ್ಟು ಪಶು ಆಹಾರ ಕೊಡಬೇಕು. ಅದೇ ರೀತಿ ದೈನಂದಿನ ಸಮಯದ ಅವಧಿಯಲ್ಲಿ ಅರ್ಧ ಪಾಲು ಸಮಯವನ್ನು ಅದಕ್ಕೇ ಮೀಸಲಿಡಬೇಕು. ಈ ಕಸುಬು ಕೆಲವರಿಗೆ ಮಾತ್ರ ಲಾಭವಾಗುತ್ತದೆ. ಈ ಕಾರಣಕ್ಕಾಗಿಯೇ…

Read more
ploughing

“ಮಾಗಿ ಉಳುಮೆ” ಮಾಡುವುದರಿಂದ ಪ್ರಯೋಜನ

ಬೆಳೆ ಬೆಳೆಯುವ ಮಣ್ಣು ಪ್ರಾಕೃತಿಕವಾಗಿ ಸೂರ್ಯನ ಬೆಳಕಿನಿಂದ ವರ್ಷ ವರ್ಷವೂ ಪುನಶ್ಚೇತನ ಆಗಬೇಕು. ಅದಕ್ಕೆ ನೆರವಾಗುವ ಒಂದು ಬೇಸಾಯ ಕ್ರಮ ಮಾಗಿ ಉಳುಮೆ. ಕೃಷಿ ಮಾಡುವಾಗ ಮಣ್ಣಿನ ಉತ್ಪಾದಕತೆ ಎಂಬುದು ಅತೀ ಪ್ರಾಮುಖ್ಯ. ಹೊಲದ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣಗಳು ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು, ಅಗತ್ಯವಾದಷ್ಟು ಪೋಷಕಾಂಶಗಳನ್ನು ಒದಗಿಸುವುದು ಮಣ್ಣು. ಮಣ್ಣು ಪೋಷಕಾಂಶಗಳ ಆಗರ..ಮಣ್ಣು ಸವೆತದೊಂದಿಗೆ ಮಣ್ಣಲ್ಲಿನ ಉಪಯುಕ್ತವಾದ ಪ್ರಧಾನ ಮತು ಲಘು ಪೋಷಕಾಂಶಗಳು…

Read more
ಅಲಸಂಡೆ ಬೆಳೆ

ರೋಗ- ಕೀಟಗಳ ಹಾನಿ ಕಡಿಮೆ ಮಾಡಲು ತರಕಾರಿ ಬೆಳೆಗೆ ಮಲ್ಚಿಂಗ್ ಶೀಟು ಹಾಕಿ.

ಇಂದು ನಾವು ಹೇರಳವಾಗಿ ತರಕಾರಿಗಳನ್ನು ಬೆಳೆದು ಬಳಸುತ್ತಿದ್ದರೆ, ಆ ಯಶಸ್ಸಿನ ಹಿಂದೆ ಮಲ್ಚಿಂಗ್ ಶೀಟು ಎಂಬ ತಂತ್ರಜ್ಞಾನದ ಕೊಡುಗೆ ಬಹಳ ಇದೆ. ಇದು ಇಲ್ಲವಾಗಿದ್ದರೆ ಬಹುಶಃ 25-30% ಬೆಳೆ ಕಡಿಮೆಯಾಗಿ, ರೈತರಿಗೆ ಲಾಭವೂ ಕಡಿಮೆಯಾಗುತ್ತಿತ್ತು. ಪ್ರತೀ ವರ್ಷವೂ ತರಕಾರಿ ಬೆಳೆಯುವರಿಗೆ ಒಂದಿಲ್ಲೊಂದು ತೊಂದರೆ.  ಬಾರೀ ಪ್ರಮಾಣದಲ್ಲಿ  ಮಳೆ ಹೊಡೆತಕ್ಕೆ ಸಿಕ್ಕಿ ಬೆಳೆ ಹಾಳಾಗುತ್ತದೆ. ಬೇಸಿಗೆಯಲ್ಲಿ ನೀರೊತ್ತಾಯವಾಗುತ್ತದೆ. ಕಳೆ ಬರುತ್ತದೆ. ಹುಳ ಬರುತ್ತದೆ. ಇದಕ್ಕೆಲ್ಲಾ ಮಲ್ಚಿಂಗ್ ಶೀಟು ಹಾಕಿ ಬೆಳೆದರೆ ಅಷ್ಟೊಂದು ಹಾನಿಇಲ್ಲ. ಕಾರಣ ಇಷ್ಟೇ. ಅಧಿಕ ತೇವಾಂಶವಾಗುವುದನ್ನು…

Read more
Dry leaf waste mulching

ದರಗು ಹಾಸಿದರೆ ನೀರು ಕಡಿಮೆ ಸಾಕು. ಮಣ್ಣು ಫಲವತ್ತಾಗುತ್ತದೆ.

ಚಳಿಗಾಲ ಬಂದಿದೆ. ಎಲ್ಲಾ ಮರಮಟ್ಟುಗಳೂ ತಮ್ಮ ಎಲೆಗಳನ್ನು ಉದುರಿಸಿವೆ. ನೆಲದಲ್ಲಿ ಬಿದ್ದಿರುವ ಈ ದರಗನ್ನು ಯಾವುದೇ  ಕಾಣಕ್ಕೆ  ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟವಾಗಲು ಬಿಡಬೇಡಿ.ಹೊಲಕ್ಕೆ ಹಾಕಿ. ಮುಂದಿನ ವರ್ಷವೇ ಗಮನಾರ್ಹ ಬದಲಾವಣೆ ಗಮನಿಸಿ. ಫಲವತ್ತತೆ ನವೀಕರಣ:     ಜಪಾನ್ ದೇಶದ ಸಹಜ ಕೃಷಿಯ ಜನಕ ಎಂದೇ ಹೆಸರುವಾಸಿಯಾದ, ಫುಕುಫೋಕಾರವರು ತಾವು ಬೆಳೆಸಿ ಅಲ್ಲಿಂದ ತನಗೆ ಬೇಕಾದ ಫಸಲನ್ನು ಮಾತ್ರ ತೆಗೆದುಕೊಂಡು ಉಳಿದುದನ್ನು  ಅಲ್ಲೇ ಬಿಡುತ್ತಿದ್ದರಂತೆ. ಇದರಿಂದ ಕೃಷಿ ಮಾಡಿದ ಹೊಲದ ಫಲವತ್ತತೆ ವರ್ಷದಿಂದ ವರ್ಷ ಉತ್ತಮವಾಗುತ್ತಾ…

Read more
error: Content is protected !!