ಹೊಲಕ್ಕೆ ಈ ಸೊಪ್ಪುಗಳನ್ನು ಹಾಕಿದರೆ ಗೊಬ್ಬರ ಉಳಿಸಬಹುದು.

method of green leaf mulching

ಮೆದು ಸ್ವರೂಪದ ಹಸುರು ಸೊಪ್ಪು ಅಧಿಕ ಸಾರಗಳನ್ನು ಒಳಗೊಂಡಿರುತ್ತದೆ. ಹೆಚ್ಚಾಗಿ ದ್ವಿದಳ ಜಾತಿಯವು ಉತ್ಕೃಷ್ಟ. ಇಂತಹ ಸಸ್ಯಗಳಲ್ಲಿ ಕೆಲವು ಅಲ್ಪಾವಧಿಯ ಸಸ್ಯಗಳು  ಮತ್ತು ಕೆಲವು ಧೀರ್ಗಾವಧಿಯ ಮರಮಟ್ಟುಗಳು. ಇದನ್ನು ನಾವು ಗುರುತಿಸಿ ಬೆಳೆಸಿ ಬಳಸಬೇಕು. ಇವು ಮಣ್ಣಿಗೆ ಹೊಸ ಜೀವ ಚೈತನ್ಯವನ್ನು ಕೊಡುತ್ತವೆ. ಬೆಳೆ ಉತ್ತಮವಾಗುತ್ತದೆ.

Caster plant in fence

  • ಬಹಳ ಜನ ತಮ್ಮ ಹೊಲಕ್ಕೆ ಬೇರೆ ಬೇರೆ ಸಾವಯವ ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ.
  • ಕೆಲವರು ಒಣ ತರೆಗೆಲೆ ಹಾಗೂ ಒಣ ತ್ಯಾಜ್ಯಗಳನ್ನು ಬಳಕೆ ಮಾಡುತ್ತಾರೆ.
  • ಇದರಲ್ಲಿ ಹಾನಿ ಏನೂ ಇಲ್ಲವಾದರೂ ಕೆಲವು ಸಾವಯವ ವಸ್ತುಗಳಲ್ಲಿ ಲಿಗ್ನಿನ್ ಎಂಬ ಅಂಶ ಇರುವ ಕಾರಣ ಇದರ ಕರಗುವಿಕೆ ನಿಧಾನವಾಗುತ್ತದೆ.
  • ಇದು ಕರಗಿದರೂ ಹೆಚ್ಚು ಸಾರಾಂಶಗಳನ್ನು ಒಳಗೊಂಡಿರುವುದಿಲ್ಲ.
  • ಅದಕ್ಕಾಗಿ ಕೆಲವು ಆಯ್ದ ಸಾವಯವ ವಸ್ತುಗಳನ್ನು ಮಾತ್ರ ಬಳಕೆ ಮಾಡಬೇಕು.

ಸಾರ ಸಂಮೃದ್ಧ ಹಸುರೆಲೆ ಸೊಪ್ಪು:

  • ಒಣ ಸಾವಯವ ವಸ್ತುಗಳನ್ನು ಬಳಕೆ ಮಾಡುವುದರ ಬದಲು ಹಸಿ ಸಾವಯವ ವಸ್ತುಗಳನ್ನು ಬಳಕೆ  ಮಾಡಿದರೆ ಅದರಲ್ಲಿ ಹೆಚ್ಚು ಸಾರಾಂಶಗಳು ಇರುತ್ತವೆ.
  • ಒಣ ಸಾವಯವ ವಸ್ತುಗಳಲ್ಲಿ  ಅಧಿಕ ಲಿಗ್ನಿನ್ ಅಂಶ ಇರುವ ಕಾರಣ ಅದು ಬೇಗ ಕರಗದೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
  • ಆದರೆ ಹಸುರು ಸೊಪ್ಪು ಹಾಗಲ್ಲ. ಅದು ಮೆದುವಾಗಿರುವ ಕಾರಣ ಬೇಗ  ಕರಗಿ ಬೇಗ ಪೋಷಕವಾಗಿ ಮಾರ್ಪಾಡು ಹೊಂದುತ್ತದೆ.
  • ಇದರಲ್ಲಿ ಲಿಗ್ನಿನ್ ಅಂಶ ಆತ್ಯಲ್ಪ.
  • ಕೆಲವು ಸಸ್ಯಗಳಲ್ಲಿ ಮಾತ್ರ ಲಿಗ್ನಿನ್ ಅಂಶ ( ಉದಾ, ಸರ್ವೇ ಮರದ ಸೊಪ್ಪು,,ಅಕೆಶಿಯಾ, ಕಿರಾಲ್ ಬೋಗಿ ಇತ್ಯಾದಿ ಸೊಪ್ಪುಗಳು) ಹೆಚ್ಚು ಇರುತ್ತದೆ.
  • ಸಾಮಾನ್ಯವಾಗಿ ಹಸುರು ಸೊಪ್ಪುಗಳು ಒಂದು ತಿಂಗಳ ಒಳಗೆ ಕಳಿಯುತ್ತವೆ. ( ಮೃದು ಜಾತಿಯವು).
  • ಅದರ 50-60 % ಆ ಹಂಗಾಮಿನ ಬೆಳೆಗೇ ಲಭ್ಯವಾಗುತ್ತದೆ.
  • ಉಳಿದವು ಮುಂದಿನ ಬೆಳೆಗೆ. ಲಿಗ್ನಿನ್ ಅಧಿಕ ಇರುವ ಸೊಪ್ಪುಗಳಲ್ಲಿ ಸ್ವಲ್ಪ ಹೆಚ್ಚು ಸಮಯ ಹಿಡಿದು, ಅದು ನಿಧಾನ ಕರಗುತ್ತದೆ.

Senabu plant

ಹಸುರು ಸೊಪ್ಪುಗಳು ಕರಗಲು ಅದರಲ್ಲಿರುವ ಸೆಲ್ಯೂಲೋಸ್, ಹೆಮಿ ಸೆಲ್ಯುಲೋಸ್, ಶರ್ಕರ ಪಿಷ್ಟಗಳು ಮತ್ತು ಲಿಗ್ನಿನ್ ಗಳು ಆಮ್ಲಜನಕ,  ಮಣ್ಣಿನ ಆರ್ಧ್ರತೆ,  ಮಣ್ಣಿನ ಗುಣ ಧರ್ಮದ ಮೇಲೆ ಕಳಿಯುವ ವೇಗ ಹೆಚ್ಚಾಗಿರುತ್ತದೆ. ಅಂತಹ ಕೆಲವು ಸಸ್ಯಗಳು ಬೇಳೇ ಕಾಳು ವರ್ಗಕ್ಕೆ  ಸೇರಿದ ಸಸ್ಯಗಳು. ಇದು ದ್ವಿದಳ ಸಸ್ಯಗಳಾಗಿದ್ದು, ಬೇಗ ಕರಗುತ್ತದೆ. ಗಣನೀಯ ಪೊಷಕಗಳನ್ನೂ ಕೊಡುತ್ತವೆ.

ಯಾವ ಸಸ್ಯಗಳು ಉತ್ತಮ:

  • ಹಸುರೆಲೆಯಾಗಿ ಬಳಕೆ ಮಾಡಲು ಸೂಕ್ತವಾದ ಉತ್ತಮ ಸಸ್ಯಗಳೆಂದರೆ ಅವು ಮುಖ್ಯ ಪೊಷಕಾಂಶಗಳು ಮತ್ತು ಇನ್ನಿತರ ಪೋಷಕಾಂಶಗಳನ್ನು ಹೊಂದಿರಬೇಕು. ಅಂತಹ ಕೆಲವು ಸಸ್ಯಗಳು ಇವು.

ಸಸ್ಬೇನಿಯಾ (sesbania aculeate):

  • ಸೆಣಬು ಸಸ್ಯ ಎಂದು ಕರೆಯುತ್ತಾರೆ. ಇದನ್ನು 2.5 ಟನ್ ನಷ್ಟು ಮಣ್ಣಿಗೆ ಹಾಕಿದರೆ ಅದರಿಂದ 14.5 ಕಿಲೋ ಸಾರಜನಕ ಲಭ್ಯವಾಗುತ್ತದೆ.
  • ಇದರ 100ಗ್ರಾಂ ಒಣ ತೂಕದಲ್ಲಿ  ಕಿಲೋ ಒಣ ತೂಕದಲಿ 3.3 ಗ್ರಾಂ ಸಾರಜನಕ, 0.7 ಗ್ರಾಂ  ರಂಜಕ ಮತ್ತು  1.3 ಗ್ರಾಂ ಪೊಟಾಶ್  ಇರುತ್ತದೆ.
  • ಇದನ್ನು ಬೀಜ ಬಿತ್ತು ಹೊಲದಲ್ಲಿ ಬೆಳೆಸಿ ಹೂ ಬರುವ ಹಂತದಲ್ಲಿ ಕಿತ್ತು ಮಣ್ಣಿಗೆ ಹಾಕಬೇಕು. ಆಗ ನೆಲದಲ್ಲಿ ಬೇರೆ ಕಳೆ ಬರಲಾರದು.

ಕ್ರೊಟೋಲೇರಿಯಾ : (Crotalaria juncea)

crotalaria

  • 2 ಟನ್ ಈ ಸೊಪ್ಪನ್ನು ಹೊಲಕ್ಕೆ ಹಾಕಿದರೆ 14.6 ಕಿಲೋ ಸಾರಜನಕ ಮಣ್ಣಿಗೆ ಸಿಗುತ್ತದೆ.
  • ಇದನ್ನು ಬೀಜ ಬಿತ್ತಿ ಬೆಳೆಸಬೇಕು. ಸಾಮಾನ್ಯವಾಗಿ ಮೆಕ್ಕಲು ಮಣ್ಣು ಇರುವ ಕಡೆ ಇದು ಇದು ಕಂಡು ಬರುತ್ತದೆ.
  • ಇದರ 100  ಗ್ರಾಂ ಒಣ ತೂಕದಲ್ಲಿ 2.6 ಗ್ರಾಂ ಸಾರಜನಕ, 06 ಗ್ರಾಂ ರಂಜಕ ಮತ್ತು  2.0  ಗ್ರಾಂ ಪೊಟಾಶ್ ಇರುತ್ತದೆ.
  • ಇದನ್ನುೂ ಹೂವು ಬರುವ ಸಮಯದಲ್ಲಿ ಕಿತ್ತು ಹೊಲಕ್ಕೆ ಹಾಕಬೇಕು.
  • ಕೆಲವು ಗಿಡಗಳನ್ನು ಹಾಗೇ ಬಿಟ್ಟರೆ ಮತ್ತೆ  ಬೀಜ ಬಿದ್ದು ಸಸಿಯಾಗಿ ತನ್ನಷ್ಟಕ್ಕೇ ಬೆಳೆಯುತ್ತದೆ.

ಸಸ್ಬೇನಿಯಾ ಸ್ಪೆಸಿಯೋಸಾ ( sesbania speciosa)

Sabena plant

  •   ಇದನ್ನು 1.8 ಟನ್ ಮಣ್ಣಿಗೆ ಸೇರಿಸಿದರೆ  11.3 ಕಿಲೋ ಸಾರಜನಕ ಲಭ್ಯವಾಗುತ್ತದೆ.
  • 100 ಗ್ರಾಂ ಒಣ ತೂಕದಲ್ಲಿ  2.7 ಗ್ರಾಂ ಸಾರಜನಕ  0.5 ಗ್ರಾಂ ರಂಜಕ ಮತ್ತು  2.2 ಗ್ರಾಂ ಪೊಟ್ಯಾಶ್ ಇರುತ್ತದೆ.
  • ಪೊಟ್ಯಾಶ್ ಮತ್ತು ಸಾರಜನಕ ಹೆಚ್ಚು ಇರುವ ಹಸುರೆಲೆ ಗಿಡ ಇದು.

ಟೆಪ್ರೋಸಿಯ ಪೆರ್ಪುರಾ  (tephrosia perpurea)

tephrosia perpurea

  •   ಇದು ಉತ್ತಮ ಸಾರವುಳ್ಳ ದ್ವಿದಳ ಸಸ್ಯವಾಗಿದೆ.
  • ಇದರಲ್ಲಿ  100  ಗ್ರಾಂ ಒಣ ತೂಕದಲ್ಲಿ 2.4  ಗ್ರಾಂ ಸಾರಜನಕ 0.3 ಗ್ರಾಂ ರಂಜಕ ಮತ್ತು 0.8 ಗ್ರಾಂ ಪೊಟ್ಯಾಶ್ ಇರುತ್ತದೆ.
  • ಇವೆಲ್ಲಾ ಅಲ್ಪವಾಧಿ ಸಸ್ಯಗಳಾಗಿದ್ದು, ಹೂ ಬಿಟ್ಟ ನಂತರ ಒಣಗುತ್ತದೆ.
  • ಮುಂದೆ ಬೀಜ ಬಿದ್ದು  ತನ್ನಷ್ಟಕ್ಕೆ ಹುಟ್ಟಿಕೊಳ್ಳುತ್ತವೆ.
  • ಮಣ್ಣು ಉತ್ತಮವಾಗಲು ನೆಲಕ್ಕೆ  ಉದ್ದು, ಹೆಸರು ಹುರುಳಿಗಳನ್ನೂ ಬಿತ್ತನೆ ಮಾಡಿ ಅದನ್ನು ಹೂವಾಗುವ ಸಮಯದಲ್ಲಿ ಮಣ್ಣಿಗೆ  ಸೇರಿಸಬಹುದು.
  • ಇವುಗಳಲ್ಲಿ 1 ಟನ್ ತೂಕಕ್ಕೆ 6 ಕಿಲೋ ಪ್ರಮಾಣದಲ್ಲಿ ಸಾರಜಕನ ಲಭ್ಯವಾಗುತ್ತದೆ.

ಬಹುವಾರ್ಷಿಕ ಮರ ಗಿಡಗಳು:

Glerisidia god manure crop

  • ಬಹುವಾರ್ಷಿಕ ಸಸ್ಯಗಳಾದ ಹೊಂಗೆ ಮರದ ಸೊಪ್ಪಿನಲ್ಲಿ  100  ಗ್ರಾಂ ಒಣ ತೂಕಕ್ಕೆ 3.2 ಗ್ರಾಂ ಸಾರಜನಕ  0.3 ಗ್ರಾಂ ರಂಜಕ ಮತ್ತು  1.3 ಗ್ರಾಂ ಪೊಟ್ಯಾಶ್ ಇರುತ್ತದೆ.
  •   ಗ್ಲೆರಿಸೀಡಿಯಾ ಸೊಪ್ಪಿನಲ್ಲಿ  100  ಗ್ರಾಂ ಒಣ ತೂಕಕ್ಕೆ   2.9 ಗ್ರಾಂ N 0.5 ಗ್ರಾಂ P 2.8 ಗ್ರಾಂ K  ಹಾಗೂ  ಬೇವಿನ ಸೊಪ್ಪಿನಲ್ಲಿ  100  ಗ್ರಾಂ ಒಣ ತೂಕದಲ್ಲಿ  2.6 ಗ್ರಾಂ ಸಾರಜನಕ 0.3 ಗ್ರಾಂ ರಂಜಕ ಮತ್ತು  .4 ಗ್ರಾಂ ಪೊಟ್ಯಾಶ್ ಇರುತ್ತದೆ.
  • ಲಂಟಾನ ಸಸ್ಯದಲ್ಲಿ ಅತ್ಯಧಿಕ ಪೊಟ್ಯಾಶ್ ಅಂಶ ಇರುತ್ತದೆ.
  • ಕಾರಸರಕ ಸೊಪ್ಪಿನಲ್ಲಿ ಸತುವಿನ ಅಂಶ  ಇರುತ್ತದೆ.
  • ಎಕ್ಕದ ಗಿಡದಲ್ಲಿ  100  ಗ್ರಾಂ ಒಣ ತೂಕಕ್ಕೆ  2.1 ಗ್ರಾಂ ಸಾರಜನಕ 0.7 ಗ್ರಾಂ ರಂಜಕ ಮತ್ತು  3.6 ಗ್ರಾಂ ಪೊಟ್ಯಾಶ್ ಇರುತ್ತದೆ.
  • ಇದಲ್ಲದೆ ಕರಾವಳಿಯಲ್ಲಿ ಲಭ್ಯವಾಗುವ ದಡ್ದಾಲ ಸೊಪ್ಪು Careyaarborea Roxb., ಸಳ್ಳೆ ಸೊಪ್ಪು,ಮರುವ, Terminelia paniculata) ಮತ್ತಿ ಮರದ ಸೊಪ್ಪು ಸಹ ಉತ್ತಮ ಸೊಪ್ಪು.
  • ಇದಲ್ಲದೆ ಔಡಲ ಸಸ್ಯ ಬಹಳ ಉತ್ತಮ ಪೋಷಕಾಂಶಗಳುಳ್ಳ ಹಸುರೆಲೆ ಸಸ್ಯವಾಗಿದೆ.

ಈ ಸಸ್ಯಗಳನ್ನು ಬೇಲಿಗಳಲ್ಲಿ ಬೆಳೆಸಿ ಹೊಲ ಸಂರಕ್ಷಣೆ ಮತ್ತು ಹೊಲಕ್ಕೆ ಬೇಕಾಗುವ ಹಸುರೆಲೆ ಸೊಪ್ಪನ್ನು ಧಾರಾಳವಾಗಿ ಒಟ್ಟು ಸೇರಿಸಬಹುದು.
ಹಸುರೆಲೆ ಒದಗಿಸುವ ದ್ವಿದಳ ಸಸ್ಯಗಳನ್ನು ಹೊಲದಲ್ಲಿ ಮಳೆಗಾಲ ಪೂರ್ವದಲ್ಲಿ ಬಿತ್ತನೆ  ಮಾಡಿ ಮಳೆಗಾಲ ಮುಗಿಯುವ ಸಮಯದಲ್ಲಿ ಮಣ್ಣಿಗೆ  ಸೇರಿಸಿದರೆ ಅಲ್ಲಿರುವ ಬಹುತೇಕ ಕಳೆಗಳು ನಾಶವಾಗುತ್ತವೆ. ರಾಸಾಯನಿಕ ರಹಿತ ಕಳೆ ನಿಯಂತ್ರಣ ವಿಧಾನ ಇದು. ಇದು ಗೊಬ್ಬರ ತಿನ್ನುವುದಿಲ್ಲ. ವಾತಾವರಣದಿಂದ  ಗೊಬ್ಬರವನ್ನು ಸಸ್ಯಗಳಿಗೆ  ಲಭ್ಯವಾಗುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!