ಕಳೆ ಗಿಡಗಳನ್ನು ಬೇರು ಸಮೇತ ತೆಗೆಯಬಹುದಾದ ಸಾಧನ.

root puller

    ಕೃಷಿ ಹೊಲದಲ್ಲಿ ಯಾವಾಗಲೂ ಕಳೆ ಸಸ್ಯಗಳು ಸಹಜವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬೆಳೆದಂತೆ ಅದನ್ನು ಬೇರು ಸಹಿತ ತೆಗೆಯಲು ಸಾಧ್ಯವಾಗುವುದಿಲ್ಲ. ಅಂಥಹ ಕಳೆ ಸಸ್ಯಗಳನ್ನು ಬೇರು ಸಹಿತ ಯಾವ ಶ್ರಮದ ಅಗತ್ಯವೂ ಇಲ್ಲದೆ ತೆಗೆಯಬಹುದಾದ ಸಾಧನವನ್ನು  ಸಾಗರದ ಹೆಗಡೆ ಡೈನಾಮಿಕ್ಸ್ ಪ್ರೈ ಲಿಮಿಟೆಡ್ ಇವರು ಅಭಿವೃದ್ಧಿಪಡಿಸಿದ್ದಾರೆ.

uprooted plant

  • ಕೆಲವು ಸಾಧಾರಣ ಗಾತ್ರದ ಗಿಡಗಳನ್ನು ಕೀಳಲು ಹಾರೆ, ಗುದ್ದಲಿ ಮುಂತಾದ ಸಾಧನಗಳು ಬೇಕಾಗಿಲ್ಲ.
  • ಇವುಗಳಿಂದ ಕೀಳಿಸುವ ಶ್ರಮಕ್ಕಿಂತ ತುಂಬಾ ಕಡಿಮೆ ಶ್ರಮದಲ್ಲಿ ಯುಕ್ತಿ ಆಧಾರಿತ ಸಾಧನದಲ್ಲಿ ಅದನ್ನ್ನು ತೆಗೆಯಬಹುದು.
  • ಮುಖ್ಯವಾಗಿ ಬಸವನ ಪಾದ , ರಥ ಪುಷ್ಪ ಮುಂತಾದ ಸಸ್ಯಗಳು ಯಾವ ಪ್ರಯೋಜನಕ್ಕೂ ಇಲ್ಲದೆ ಬೆಳೆಗಳಿಗೆ ತೊಂದರೆ ಮಾಡುತ್ತವೆ.
  • ಇದನ್ನು ಬೇರು ಸಹಿತ ತೆಗೆಯದಿದ್ದರೆ ನಿರ್ನಾಮ ಮಾಡಲಿಕ್ಕೆ ಆಗುವುದಿಲ್ಲ.
  • ಬುಡ ದಪ್ಪವಾಗುತ್ತಾ ಬರುತ್ತದೆ. ಸಾಂಪ್ರದಾಯಿಕ ವಿಧಾನದಲ್ಲಿ ತೆಗೆದರೆ ನೆಲ ಅಗೆಯಬೇಕಾಗುತ್ತದೆ.
  • ಕಳೆ ನಾಶಕ ಬಳಸಿದರೆ ಬೇರೆ ಮೆಣಸು ಇತ್ಯಾದೆ ಅಗತ್ಯ ಬೆಳೆಗಳಿಗೆ ಹಾನಿಯಾಗುತ್ತದೆ.
  • ಇಲ್ಲಿ ಅದು ಯಾವುದೂ ಸಮಸ್ಯೆ ಇಲ್ಲ. ಕಳೆ ಮತ್ತು ಅದರ ಬೇರುಗಳಿಗೆ ಮಾತ್ರ ಇದರ ಪ್ರಯೋಗ ಆಗುತ್ತದೆ.
  • ಯುಕ್ತಿಯಲ್ಲಿ ಕೆಲಸಮಾಡುವ ಸಾಧನ ಆದುದರಿಂದ ಶ್ರಮ ಇಲ್ಲದೆ ಕಿತ್ತು ಬರುತ್ತದೆ.

Major weed plant
ಇತ್ತೀಚಿನ ವರ್ಷಗಳಲ್ಲಿ  ಬಂದ ಅಕೇಶಿಯಾ, ಮಾಂಜಿಯಂ ಹಾಗೆಯೇ ಇನ್ನು ಕೆಲವು ಸಸ್ಯಗಳು ಗಾಳಿಯ ಮೂಲಕ ಬೀಜ ಬಿದ್ದು, ಹುಟ್ಟಿಕೊಳ್ಳುತ್ತವೆ. ಕಾಣು ಕಾಣುತ್ತಿದ್ದಂತೆ ಅವುಗಳ ಕಾಂಡ ದಪ್ಪವಾಗುತ್ತದೆ. ಮತ್ತೆ ಮಾನವ ಶ್ರಮದಲ್ಲಿ ಎಳೆದರೆ ಕಿತ್ತು ಬರುವುದೇ ಇಲ್ಲ. ಇವು ಹೊಲದಲ್ಲಿ ಇದ್ದರೆ ವೇಗವಾಗಿ ಬೆಳೆದು ತೊಂದರೆ ಉಂಟು ಮಾಡುತ್ತದೆ. ಇದನ್ನು ಬೇರು ಸಹಿತ ತೆಗೆಯಲೇ ಬೇಕು.

CLICK HERE TO CONTACT FOR SALES

Avertisement

ಏನಿದು ಸಾಧನ:

Root pulling mechanism

  • ಸಸ್ಯಗಳನ್ನು ಬೇರು ಸಹಿತ  ಕಿತ್ತು ಬರುವಂತೆ ಒಂದು  ಎಳೆಯುವ ವ್ಯವಸ್ಥೆ ಇದು.
  • ಸಸ್ಯದ ಬೇರಿನ ಬುಡಕ್ಕೆ ಈ ಸಾಧನದ ಹಲ್ಲುಗಳನ್ನು ತುರುಕಿ ಅದರ ಹಿಡಿಯನ್ನು ಸ್ವಲ್ಪ ಹಿಂದಕ್ಕೆ ಜಗ್ಗಿದಾಗ  ಬುಡಭಾಗವನ್ನು ಈ ಸಾಧನದ ಹಲ್ಲುಗಳು ಗಟ್ಟಿಯಾಗಿ ಹಿಡಿದುಕೊಳ್ಳುತ್ತವೆ.
  • ಇದು ಪೈಪ್ರಿಂಚ್ ನಲ್ಲಿ ಬಿಗಿದಂತೆ ಆಗುತ್ತದೆ. ಹಾಗೆಯೇ ಆ ಹಿಡಿಯನ್ನು ಮತ್ತೂ ಹಿಂದಕ್ಕೆ ಜಗ್ಗಿದಾಗ ಗಿಡ ಬೇರು ಸಹಿತ ಕಿತ್ತು ಬರುತ್ತದೆ.
  • ಹಿಮ್ಮುಖ ಜಗ್ಗುವಾಗ ಆದರಿಸಲು ಹಿಮ್ಮುಖ ಭಾಗದಲ್ಲಿ ಇದಕ್ಕೆ ಆಧರಿಸುವ ವ್ಯವಸ್ಥೆ ಇರುತ್ತದೆ.
  • ಜಗ್ಗಲು ಯಾವ  ಶ್ರಮದ ಅಗತ್ಯವೂ ಇಲ್ಲ. ಅತೀ ಕಡಿಮೆ ಶಕ್ತಿ ಬಳಸಿ ಜಗ್ಗಿದಾಗ ಕಿತ್ತು ಬರುತ್ತದೆ.
  • ಮಣ್ಣು ಸಡಿಲ ಇರಲಿ, ಗಟ್ಟಿ ಇರಲಿ ಯಾವ ಸಮಸ್ಯೆಯೂ ಇಲ್ಲ.

3 types of root pullers
ಮಳೆಗಾಲದ ಸಮಯದಲ್ಲಿ ಕಳೆಗಳನ್ನು ಬೇರು ಸಮೇತ ಕಿತ್ತು ತೆಗೆಯುವುದು ಸುಲಭದ ಕೆಲಸ.ಇದೇ ಸಮಯದಲ್ಲಿ ಕಳೆಗಳು ಬೆಳವಣಿಗೆ ಹೊಂದುವುದು. ಇದನ್ನು ಮನೆಯವರೇ ಮಾಡಬಹುದು.
ಸಾಗರದ ಹೆಗಡೆ ಡೈನಾಮಿಕ್ಸ್  ( Hegde  Dynamics Pvt Ltd) ಇವರು ಕೃಷಿಗೆ ಸಂಬಂಧಿಸಿದಂತೆ ಹಲವಾರು ಯಂತ್ರ ಸಾಧನಗಳನ್ನು ಪರಿಚಯಿದವರು. ಹೆಗಡೆ ಮೋಟೋ ಕಾರ್ಟ್ , ಪೊರ್ಟೇಬಲ್  ಅರ್ಥ್ ಆಗರ್,  ಹೆಗಡೆ ಮೈಕ್ರೂ ಸ್ಪ್ರೀಕ್ಲರ್. ಹಾಗೆಯೇ ಇನ್ನೂ ಅನೇಕ ಕೃಷಿ ಕೆಲಸ ಸರಳೀಕರಣ ಮಾಡಬಹುದಾದ ಸಾಧನಗಳನ್ನು ಪರಿಚಯಿದ್ದಾರೆ. ಇದರಲ್ಲಿ ಒಂದು ರೂಟ್ ಪುಲ್ಲರ್. ಮೂರು ಮಾದರಿಯ ಈ ಸಾಧನಗಳಿಗೆ ರೂ. 1500 ರಿಂದ  2400 ತನಕ ಬೆಲೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ :9900089212.
End of the article:—————————————-
Search words: root puller# weed plant remover# root remover# weed control# weed plant removing instrument#safe weed control# hedge dynamics# Sagara#
Farmer’s  media,Kannada agriculture news krushiabhivruddi , Krushi abhivruddi agriculture News Media ,Best agriculture News Media in kannada ,Agriculture is krushi abhivruddi

Leave a Reply

Your email address will not be published. Required fields are marked *

error: Content is protected !!