ಕಾಡುಪ್ರಾಣಿಗಳಿಂದ ಬೆಳೆಹಾನಿ- ಪರಿಹಾರಕ್ಕೆ ಸರ್ಕಾರದ ವಿಮೆ.

ಬೆಳೆಗಳಿಗೆ ಹಾನಿ ಮಾಡುವ ಮಂಗ

ಈ ವರ್ಷದಿಂದ  ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ರೈತರಿಗೆ ಕಾಡು ಪ್ರಾಣಿಗಳಿಂದಾಗುವ ನಷ್ಟಕ್ಕೆ ಪರಿಹಾರ ಕೊಡುವ ಬಗ್ಗೆ ವಿಮೆ ಮಾಡುವ  ವ್ಯವಸ್ಥೆ ಬರಲಿದೆ.
ಮಾನ್ಯ ಸಭಾಪತಿಗಳು  ಮೊನ್ನೆ ಕೃಷಿಕರ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ ಇದಕ್ಕೆ ಪರಿಹಾರವಾದರೂ ಕೊಡಿ ಎಂದು ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದು ಕಾರ್ಯಗತವಾಗಲು ರೈತರೂ ತಮ್ಮ ಕೆಲಸ ಮಾಡಬೇಕು.
Monkeys are planning for get their food
ಕಾಡುಪ್ರಾಣಿ ಯಾವುದೇ ಇದ್ದರೂ ಅದನ್ನು ಕೊಲ್ಲುವುದು ಅಪರಾಧ. ಕೊಲ್ಲಲು ಅದು ಎದೆಯೊಡ್ಡಿ ಬರುವುದೂ ಇಲ್ಲ. ಮಂಗಗಳು ತೆಂಗಿನಕಾಯಿ , ಹಣ್ಣು ಹಂಪಲುಗಳನ್ನು ಹಾಳು ಮಾಡುತ್ತವೆ. ನವಿಲುಗಳು ತರಕಾರಿ, ಭತ್ತ ಹಾಳು ಮಾಡುತ್ತಿವೆ. ಮುಳ್ಳು ಹಂದಿಗಳು, ಕಾಡು ಬೆಕ್ಕುಗಳು, ಕಾಡು ಕೋಣ, ಆನೆ, ಕೆಂಚಳಿಲು ಒಂದೋ ಎರಡೋ ಎಲ್ಲವೂ ಈಗ ವಾಸ್ತವ್ಯ ರೈತರ ಹೊಲದಲ್ಲಿ. ಇವರೆಲ್ಲರೂ ತಮ್ಮ ಪಾಲು ಪಡೆದ ನಂತರ ಉಳಿದದ್ದು ರೈತರಿಗೆ.

ಇದಕ್ಕೆ ಮುಕ್ತಿ ಎಂದು?

  • ಸರಕಾರ ಮನಸ್ಸು  ಮಾಡಿದರೆ  ರೈತರಿಗೆ ಇದರಿಂದ ಮುಕ್ತಿ ಕೊಡಬಹುದು.
  • ಆದರೆ ಸರಕಾರ ಅಥವಾ ಸಂಬಂಧಿಸಿದ ಇಲಾಖೆಗಳು ಈ ತನಕವೂ ಇದನ್ನು ಗಂಭೀರ ವಿಷಯವಾಗಿ ಪರಿಗಣಿಸಿಯೇ ಇಲ್ಲ.
  • ಇನ್ನೂ ಪರಿಗಣಿಸುವುದಿಲ್ಲ. ಸಮಸ್ಯೆ ಇನ್ನೂ ಬಿಗಡಾಯಿಸುತ್ತಾ ಇರುತ್ತದೆ.
  • ಇದರಿಂದ ಮುಕ್ತಿ ಹೊದಲು ಇರುವ ಏಕೈಕ ಉಪಾಯ ಸಾಮೂಹಿಕವಾಗಿ ದೂರು ನೀಡುವುದು ಒಂದೇ.
  • ಯಾರಿಗೆ ದೂರು ನೀಡಬೇಕು:ಕಾಡು ಪ್ರಾಣಿಗಳ ವಿಷಯದಲ್ಲಿ ರೈತರು ದೂರು ನೀಡಬೇಕಾದುದು,
  • ಸಮೀಪದ ಅರಣ್ಯ ಇಲಾಖೆಗೆ ಸ್ಥಳೀಯ ಗ್ರಾಮ ಪಂಚಾಯತು  ಮತ್ತು ಸ್ಥಳೀಯ ತಾಲೂಕು ದಂಡಾಧಿಕಾರಿಗಳಿಗೆ.
  • ಇದರ ಪ್ರತಿಗಳನ್ನು ಸ್ಥಳೀಯ ಶಾಸಕರಿಗೂ ನೀಡಬಹುದು.
  • ಯಾವುದೇ ಅರ್ಜಿಯನ್ನು ಕೊಟ್ಟಾಗಲೂ ಅಂಚೆ ಸ್ವೀಕೃತಿ ಮೂಲಕವೇ ದೂರು ನೀಡಬೇಕು.
  • ಕೈಯಲ್ಲೇ ಕೊಡುವುದಾದರೆ ದ್ವಿ ಪ್ರತಿಯಲ್ಲಿ  ಒಂದು ಪ್ರತಿಗೆ ಮೊಹರು ಹಾಕಿಸಿ ಟಪ್ಪಾಲು ರಿಜಿಸ್ಟ್ರಿಯ ದಾಖಲೆಯ ನಂಬ್ರವನ್ನು ಬರೆಯಿಸಿ.
  • ಸಾಮಾನ್ಯವಾಗಿ ಅದನ್ನು ತಕ್ಷಣ ಟಪ್ಪಾಲು ರಿಜಿಸ್ತ್ರಿ ಗೆ ದಾಖಲಿಸುವುದಿಲ್ಲ.
  • ಆದ ಕಾರಣ ಎರಡು ದಿನ ಬಿಟ್ಟು ಮತ್ತೆ ಹೋಗಿ ಟಪ್ಪಾಲು ರಿಜಿಸ್ರಿ ನಂಬ್ರವನ್ನು  ನಿಮ್ಮ ಪ್ರತಿಯಲ್ಲಿ ನಮೂದಿಸಿರಿ.
  • ಇದನ್ನು ಕಾಡು ಪ್ರಾಣಿ ಸಂತ್ರಸ್ಥ ಪ್ರತೀಯೊಬ್ಬ ರೈತನೂ ಮಾಡಬೇಕು.
  • ತಮ್ಮ ಅರ್ಜಿಯಲ್ಲಿ ತಮಗಿರುವ ಹಿಡುವಳಿ, ಬೆಳೆ, ಆಗುವ ಹಾನಿ- ಅರ್ಥಿಕ ನಷ್ಟ ಹಾಗೂ ಶ್ರಮವನ್ನು ಕ್ಲೈಮ್ ಮಾಡಬೇಕು.

food sharing

ಕಾಡುಪ್ರಾಣಿಗಳ ಹಾನಿಗೆ ವಿಮೆ ಇದೆ:

  • ಇದನ್ನು ಈ ವರ್ಷ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಸೇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
  • ಸಂಬಂಧಿಸಿದ ರಾಜ್ಯ ಸರಕಾರಗಳು  ಇದನ್ನು PMFBY ಕವರೇಜ್ ಗೆ (add -on coverage) ಸೇರಿಸಬೇಕು.
  • ನೈಸಗಿಕ ವಿಕೋಪಗಳಂತೆ ಇದೂ ಸಹ ಆಗಿರುವ ಕಾರಣ ಇದಕ್ಕೆ  ರೈತರಿಗೆ ವಿಮಾ ಸೌಲಭ್ಯ ದೊರೆಯಬೇಕು.
  • ಬೆಳೆ ನಷ್ಟ  ಹಾಗೂ ಸಸ್ಯಾಸತ್ಯತೆಯನ್ನು ಸ್ಥಳೀಯ ಪಂಚಾಯತುಗಳು ವರದಿ ನೀಡಬೇಕು.
  • ಜನವರಿ 2021 ರ  5 ನೇ ತಾರೀಖಿನಂದು ನಡೆದ Human Wild life conflict ನ ತಜ್ಞರ ಸಮಿತಿ ಇದನ್ನು ಶಿಫಾರಸು ಮಾಡಿದೆ.

  • ಇದಕ್ಕೆ ಕೃಷಿ ಮಂತ್ರಾಲಯವೂ ರಾಜ್ಯ ಸರಕಾರಗಳು ಇದನ್ನು ಸೇರಿಸಬೇಕು ಎಂದಿದೆ.
  • ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಟ 10 ಜನರ ದೂರುಗಳಿದ್ದಲ್ಲಿ  ಬೆಳೆ ನಷ್ಟಕ್ಕೆ ಇದು ಮಾನ್ಯವಾಗುತ್ತದೆ.
  • ಈ ತನಕ PMPBY ಗೆ  ನೊಂದಾವಣೆ ಆಗಿರುವ ಒಟ್ಟು 27 ರಾಜ್ಯಗಳು ಇದಕ್ಕೆ ಅರ್ಹವಾಗಿರುತ್ತವೆ.

ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು:

  • ಸಂಘಟನೆಯಲ್ಲಿ ಬಲವಿದೆ. ನಮ್ಮ ರಾಜ್ಯದಲ್ಲಿ ಈ ಬಗ್ಗೆ  ಸದನದಲ್ಲಿ ಪ್ರಸ್ತಾಪ ಆಗಿದೆ.
  • ಅದು ಎಲ್ಲಿಯ ತನಕ ಮುಂದುವರಿಯಬಹುದು ಎಂಬುದು ಹೇಳಲು ಸಾಧ್ಯವಿಲ್ಲ.
  • ಆದರೆ ರೈತರು ಅದರಲ್ಲೂ ಕಾಡು ದಂಶಕ ಪ್ರಾಣಿಗಳು ಮಾಡುವ ಹಾನಿಯನ್ನು ತಮ್ಮ ದೂರುಗಳ ಮೂಲಕ ಸರಕಾರಕ್ಕೆ ತಲುಪಿಸಬೇಕು.
  • ಇದಕ್ಕಾಗಿಯೇ  ಸಂತ್ರಸ್ಥ ರೈತರ ಸಂಘಟನೆಯನ್ನು ಮಾಡಿಕೊಳ್ಳಬೇಕು.
  • ಇದರಿಂದ ತಾತ್ಕಾಲಿಕ ಪರಿಹಾರ ಸರಕಾರ ಕೊಡಲು ಮುಂದಾಗಬಹುದು.
  • ಶಾಶ್ವತ ಪರಿಹಾರಕ್ಕೆ ಸರಕಾರ ಸಂಬಂಧಿಸಿದ ಇಲಾಖೆಗೆ ನಿರ್ಧೇಶನ  ನೀಡಬಹುದು.

ರೈತರ ಬಹುಕಾಲದ ಕಷ್ಟ ಈಗಲಾದರೂ ಸರಕಾರದ ಗಮನಕ್ಕೆ ಬಂದಿರುವುದು ನಮ್ಮೆಲ್ಲರ ಪುಣ್ಯ ಎಂದೇ ಹೇಳಬೇಕು. ಗ್ರಾಮೀಣ ಕೃಷಿಕರು ತಮ್ಮ ದೈನಂದಿನ ಕೆಲಸದ ಒತ್ತಡದಲ್ಲಿ ಅದೆಷ್ಟೋ ಸಮಯವನ್ನು ಈ ಕಾಡು ಪ್ರಾಣಿ ಓಡಿಸಲು ವ್ಯಯ ಮಾಡುತ್ತಿದ್ದು, ಇದು ಮಾನವ ಶ್ರಮ ದುರ್ವ್ಯಯ ಸಹ ಅಗಿರುತ್ತದೆ. ಇದೆಲ್ಲವನ್ನೂ ರೈತರು ಸಂಬಂಧಿಸಿದವರ ಗಮನಕ್ಕೆ ತರಬೇಕು.
Therefore, the incidence of allergic reactions has been shown as a cause of the vast majority of cases with this condition, although it has to be clarified that there are many other factors that influence the evolution and severity of atopic dermatitis. viagra new zeland Most cases are caused by acute outbreaks of irritation from some areas of the skin, and affected sites vary greatly depending on the age of the affected person.

Teeth can turn green from the inside out intrinsic staining or from the outside in extrinsic staining. viagra online malaysia See pictures and learn about all the….

Leave a Reply

Your email address will not be published. Required fields are marked *

error: Content is protected !!