ಗೋಡಂಬಿಯಲ್ಲಿ ಹೊಸ ಕುಬ್ಜ ತಳಿ ಈಗ ಲಭ್ಯ.

Cashew Dwarf release

ಕುಬ್ಜ ತಳಿ ಇಂದಿನ ಅಗತ್ಯತೆಗಳಲ್ಲಿ ಒಂದು. ಮರ ಹತ್ತುವ ಅಭ್ಯಾಸವೇ ಬಿಟ್ಟು ಹೋಗುತ್ತಿರುವ ಈ ಸಮಯದಲ್ಲಿ ಇದು ಅಗತ್ಯವಾಗಿದೆ.
ಮಾವಿನಲ್ಲಿ ಕುಬ್ಜ ತಳಿ ಬಂದಿದೆ. ಅಡಿಕೆಯಲ್ಲಿ ಇದೆ. ತೆಂಗಿನಲ್ಲೂ  ಕೆಲವು ಗಿಡ್ದ  ತಳಿಗಳಿವೆ. ಹೈಬ್ರೀಡ್ ಮಾಡುವವರೂ ಕುಬ್ಜ ತನಕ್ಕೆ ಹೆಚ್ಚು ಒತ್ತುಕೊಡುತ್ತಿದ್ದಾರೆ.  ಎತ್ತರ ಬೆಳೆಯುವ ಮರ ಎಂದರೆ ಕಾಯಿ ಕೀಳುವ ಸಮಸ್ಯೆ. ಕುಬ್ಜ ಆದರೆ ಎಲ್ಲವೂ ಸುಲಭ. ಇಳುವರಿ ಕಡಿಮೆಯಾದರೂ ಆಗಬಹುದು, ಪರರನ್ನು ಅವಲಂಭಿಸಿ ಮಾಡುವುದಕ್ಕಿಂತ ನಾವೇ ಮಾಡಬಹುದು ಎಂಬುದೇ ಇದಕ್ಕೆ ಕಾರಣ.

Cashew Dwarf

  • ಕರಾವಳಿ ಕರ್ನಾಟಕದಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ  ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ NCRC ಕೆಲವು ವರ್ಷಗಳಿಂದ  ಗೇರಿನ ಕುಬ್ಜ ತಳಿಯ ಉತ್ಪಾದನೆಗೆ ಶ್ರಮಿಸುತ್ತಿದ್ದು,
  • ಕಳೆದ ಎರಡು ವರ್ಷಗಳಿಂದ ಇದು ಗಾಳಿ ಸುದ್ದಿಯಲ್ಲಿತ್ತು. ಈಗ ಅದು ಪಕ್ಕಾ ಸುದ್ದಿಯಾಗಿದೆ.
  • ದಿನಾಂಕ 17-02-2021 ರ ಈ ದಿನದಿಂದ  ಈ ತಳಿಯು ವಿದ್ಯುಕ್ತವಾಗಿ ಬಿಡುಗಡೆಯಾಗಿದೆ.
  • ಸಂಸ್ಥೆಯ ಡಾ. ಎಂ.ಜಿ. ನಾಯಕ್ ಮತ್ತವರ ತಂಡ  ಇದರ ಅಭಿವೃದ್ದಿಮಾಡಿದ್ದಾರೆ.
  • ಇದಕ್ಕೆ “ನೇತ್ರಾ ವಾಮನ್” ಎಂಬ ಹೆಸರಿಡಲಾಗಿದೆ.
  • ಕೇಂದ್ರದಲ್ಲಿ ಪ್ರತೀ ವರ್ಷದಂತೆ ನಡೆಯುವ  ಗೇರು ದಿನೋತ್ಸವದಲ್ಲಿ  ಈ ತಳಿಯನ್ನು ಕ್ಯಾಂಪ್ಕೋ ಅಧ್ಯಕ್ಷ ಹಾಗೂ ಕೃಷಿಕ ಶ್ರೀ ಕಿಶೋರ್ ಕುಮಾರ್ ಕೊಡ್ಗಿಯವರು ಬಿಡುಗಡೆ ಮಾಡಿದ್ದಾರೆ.

ಇದು ಎತ್ತರ ಅಲ್ಲ. ಅಗಲ ಹೆಚ್ಚು:

  • ಗೇರು ಮರ ಎತ್ತರಕ್ಕೆ  ಬೆಳೆಯುವ ಗುಣದ್ದು. ಅನುಕೂಲ ಇದ್ದರೆ  40 ಅಡಿ ತನಕವೂ ಬೆಳೆಯಬಲ್ಲದು.
  • ಈಗ ನಮ್ಮಲ್ಲಿ ಚಾಲ್ತಿಯಲ್ಲಿರುವ   ತಳಿಗಳೆಲ್ಲವೂ ಎತ್ತರಕ್ಕೆ  ಮತ್ತು ಅಗಲಕ್ಕೆ ಬೆಳೆಯುವಂತದ್ದು .
  • ಸವರುವಿಕೆ ಮಾಡಿ ಎತ್ತರವನ್ನು ಕಡಿಮೆ ಮಾಡಿ ಅಗಲಕ್ಕೆ ಬೆಳೆಸುವ ಕ್ರಮ ಎಲ್ಲಾ ಕಡೆ ಚಾಲ್ತಿಯಲ್ಲಿದೆ.
  • ಈಗ ಮತ್ತೂ ಮುಂದುವರೆದು ಅಧಿಕ ಸಾಂದ್ರದಲ್ಲಿ ನೆಟ್ಟು  ಮರದವನ್ನು ಕುಬ್ಜವಾಗಿಸಲಾಗುತ್ತದೆ.
  • ಸವರಿದರೂ ಇಳುವರಿ ಕಡಿಮೆಯಾಗದ ತಳಿಗಳೂ ಇವೆ.
  • ಇದು ಹಾಗಲ್ಲ ಇದರ ವಂಶ ಗುಣವೇ ಕುಬ್ಜ. ನೆಲದಲ್ಲಿ ಅಗಲಕ್ಕೆಬೆಳೆಯುತ್ತದೆ.
  • ಎತ್ತರ ಬೆಳೆಯಲಾರದು. ನೆಲದಲ್ಲೇ ನಿಂತು ಹಣ್ಣು ಕೀಳಬಹುದು.
  • ಕುಬ್ಜತನಕ್ಕಾಗಿ  ವರ್ಷ ವರ್ಷವೂ ಸವರುವಿಕೆ ಮಾಡಬೇಕಾಗಿಲ್ಲ.

Raw Cashews

ಇದು ಅತಿ ಸಾಂದ್ರಕ್ಕೆ ಸೂಕ್ತ:

  • ಇತ್ತೀಚೆಗೆ ಗೇರು ಬೆಳೆಯುವವರು ಅತಿ ಸಾಂದ್ರವನ್ನೇ ಬಯಸುತ್ತಿದ್ದಾರೆ.
  • ಆದರೆ ಕಾಲಕಾಲಕ್ಕೆ ಸವರುವಿಕೆ ಮಾಡಲಾಗದೆ ಇಳುವರಿ ಕಡಿಮೆಯಾಗುತ್ತದೆ.
  • ಆದರೆ ಈ ತಳಿಗೆ  (ನೇತ್ರಾ ವಾಮನ್) ಸವರುವಿಕೆ ಇಲ್ಲದೆ ಅತಿ ಸಾಂದ್ರಕ್ಕೂ ಇದನ್ನು ಬಳಕೆ ಮಾಡಬಹುದು.
  • ಸಾಂಪ್ರದಾಯಿಕವಾಗಿ ಬೆಳೆದ ಗೇರು ತೋಟಗಳಲ್ಲಿ ಇದನ್ನು ಎಡೆಯಲ್ಲೂ ಬೆಳೆಸಬಹುದು ಎನ್ನುತ್ತಾರೆ.
  • ಸಣ್ಣ ಹಿಡುವಳಿದಾರರೂ ಇದನ್ನು ಬೆಳೆಸಿ ತಾವೇ ಕಷ್ಹ್ಟ ಇಲ್ಲದೆ ಗೇರು ಹಣ್ಣು ಕೀಳಬಹುದು.
  • ಕುಂಡದಲ್ಲೂ , ದೊಡ್ದ ಪಾಲಿಥೀನ್ ಚೀಲದಲ್ಲೂ ಬೆಳೆಸಬಹುದು.
  • ಸವರದೇ ಇದ್ದರೂ  ಹತ್ತನೇ ವರ್ಷದಲ್ಲಿ ಇದು ಬೆಳೆಯುವುದು  ಸುಮಾರು ಎಂಟು ಅಡಿ.
  • ಅಗಲಕ್ಕೆ ಹದಿನೆಂಟು ಅಡಿಯಷ್ಟು ಹಬ್ಬಬಲ್ಲದು.
  •  ಹತ್ತು ವರ್ಷ ಕಳೆದರೂ ಹಾಗೇ ಕುಬ್ಜವಾಗಿರುತ್ತದೆ.
  • ಸವರುವಿಕೆ ಬೇಕಾಗಿಲ್ಲ. ನೆಟ್ಟು ಒಂದು ವರ್ಷ ಆದ ನಂತರ  ಹೂ ಬರುತ್ತದೆ.
  • ಹೂವು ಡು 90 ದಿನಕ್ಕೂ ಹೆಚ್ಚು ಸಮಯ ಬಿಡುತ್ತಿರುತ್ತದೆ.

ಇಳುವರಿ :

  • ಅಧಿಕ ಇಳುವರಿ ಬಯಸುವವರಿಗೆ ಇದು ಉತ್ತಮ ಎಂದು ಹೇಳುವಂತಿಲ್ಲ.
  • ಒಂದು ಮರಕ್ಕೆ ಒಂದೂವರೆಯಿಂದ ಎರಡು ಕೆಜಿ. ಬೀಜದ ತೂಕ ಐದೂವರೆಯಿಂದ ಆರು ಗ್ರಾಂ.
  • ಹಣ್ಣಿನ ತೂಕ ಸುಮಾರು ಐವತ್ತು ಗ್ರಾಂ.
  • ಹೊಳೆಯುವ ಕೆಂಪು ಬಣ್ಣದ ಹಣ್ಣು.
  • ಕಡಿಮೆ ನಾರಿನಂಶ. ಇದರ ವಿಶೇಷ ಗುಣವೆಂದರೆ ಕಾಂಡ ಗಂಟು ಗಂಟಾಗುತ್ತದೆ-
  • ಕುಬ್ಜತಳಿಯಾಗಲು ಇದು ಮುಖ್ಯ ಕಾರಣ. “ಇದಕ್ಕೆ ಹೇಳಿಕೊಳ್ಳುವಂತಹ ಕೀಟಬಾಧೆ-ರೋಗಬಾಧೆ ಇಲ್ಲವಂತೆ.
  • ಬಂದರೂ ಎತ್ತರಕ್ಕೆ ಬೆಳೆಯದ ಕಾರಣ ಸಿಂಪರಣೆ ಸುಲಭ ಎಂಬುದು  ಶ್ರೀ ಎಂ. ಜಿ. ನಾಯಕ್ ಅವರ ಅಭಿಪ್ರಾಯ.

ಈ ಗೇರು ಗಿಡಗಳನ್ನು ಬೆಳೆಸುವ ಆಸಕ್ತರಿಗೆ ಈಗ ಸಸ್ಯವೂ ಸಿಗುತ್ತದೆ. ಆಸಕ್ತರು ಬುಕ್ಕಿಂಗ್ ಮಾಡಬಹುದು. – ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು. ಫೋನ್ –  08251 230902

Md phone: – – -, below,will be presenting a roster of health rockville pike bethesda. viagra pill Fruits cup of milk or other competitive inhibitors endogenous glucocorticoids stimulates transcription and function cho hoffmann and balling r grussand strachan t waardenburga s syndrome kal mutation a transcription factor has a number of proteins in developing rostral brain nature a pritchard jones k the mouse ureter j clin invest a moore l c and schwartz g j postnatal maturation of the mm requires its.

Leave a Reply

Your email address will not be published. Required fields are marked *

error: Content is protected !!