ಕರ್ನಾಟಕದಲ್ಲಿ ಸಾವಯವ ಕೃಷಿಗಾಗಿ ವಿಶ್ವ ವಿಧ್ಯಾನಿಲಯ!

Organic University

ಮಾನ್ಯ ಕೃಷಿ ಮಂತ್ರಿಗಳು ಸಾವಯವ ಕೃಷಿ ಸಂಶೋಧನೆಗಾಗಿ ಒಂದು ವಿಶ್ವ ವಿಧ್ಯಾನಿಲಯವನ್ನು ಸ್ಥಾಪಿಸಬೇಕು ಎಂಬ ಚಿಂತನೆ ನಡೆಸಿದ್ದಾರೆ.
ಸುಮಾರು 10 ವರ್ಷಕ್ಕೆ ಹಿಂದೆ ನಮ್ಮ ರಾಜ್ಯದಲ್ಲಿ ಎರಡು ಕೃಷಿ ವಿಶ್ವ ವಿಧ್ಯಾನಿಲಯಗಳಿದ್ದವು. ಮತ್ತೊಂದು ಕೃಷಿ ವಿಶ್ವ ವಿಧ್ಯಾನಿಲಯ ಸೇರ್ಪಡೆಯಾಯಿತು. ತೋಟಗಾರಿಕಾ ವಿಶ್ವ ವಿಧ್ಯಾನಿಲಯವಾಯಿತು. ಪಶು ಸಂಗೋಪನಾ ವಿಶ್ವ ವಿಧ್ಯಾನಿಲಯ, ತೋಟಗಾರಿಕೆ ಮತ್ತು  ಕೃಷಿ ಜಂಟಿ ವಿಶ್ವ ವಿಧ್ಯಾನಿಲಯಗಳಾಯಿತು. ಇನ್ನು  ಉಳಿದದ್ದು ಸಾವಯವ ಕೃಷಿ ಒಂದೇ ಏನೋ ಎಂಬುದು ಮಾನ್ಯ ಕೃಷಿ ಸಚಿವರ ಇಂಗಿತದಲ್ಲಿ ಕಾಣುತ್ತದೆ.

press statement of agri. minister

  • ಹಾಲೀ ಇರುವ ಕೃಷಿ, ತೋಟಗಾರಿಕಾ ವಿಶ್ವ ವಿಧ್ಯಾನಿಲಯಗಳು ಮಾಡುತ್ತಿರುವ ಕೆಲಸ ,
  • ಸಾರ್ವಜನಿಕರ ಕರದ ಹಣದಲ್ಲಿ  ಇವರನ್ನು ಸಾಕುತ್ತಿರುವುದು ನೋಡಿದರೆ ಮುಂದೆ ಹೊಸತರ ಸೇರ್ಪಡೆ ಅಗತ್ಯವಿದೆಯೇ ಎಂದು ಪ್ರಜ್ಞಾವಂತ ನಾಗರೀಕರು ಯೋಚಿಸುವುದು ಅಗತ್ಯ.
  • ಸಾವಯವ ಜೈವಿಕ , ನೈಸರ್ಗಿಕ ಮುಂತಾದ ಬೇರೆ ಬೇರೆ ಕೃಷಿ ಪದ್ದತಿಗಳಿಗೆ ವಿಶ್ವ ವಿಧ್ಯಾನಿಲಯ ಸ್ಥಾಪಿಸುತ್ತಾ ಬಂದರೆ ನಾವು ಇನ್ನು ಪೆಟ್ರೋಲ್- ಡೀಸೆಲ್ ನಂತಹ ಅಗತ್ಯ ಸಾಮಾಗ್ರಿಗಳಿಗೆ ಲೀ. ಗೆ 200 ರೂ. ಕೊಡಬೇಕಾಗಿ ಬಂದರೂ ಅಚ್ಚರಿ ಇಲ್ಲ.
  • ಇದು ಒಂದು  ಕಾಲಹರಣಕ್ಕೆ ಮತ್ತು ಸಾರ್ವಜನಿಕ ಹಣದ ಅಪವ್ಯಯಕ್ಕೆ ದಾರಿ ಅಷ್ಟೇ.
  • ಇಂತಹ ಯೋಚನೆಗಳನ್ನು ಮಂತ್ರಿ ಮಾಗದರ  ತಲೆಗೆ ತುಂಬಿಸಲು ಕೆಲವು ಜನ ಇರುತ್ತಾರೆ.
  • ಇವರಿಗೆ ತಾವು ಅಲ್ಲಿ ದೊಡ್ಡ ಹುದ್ದೆ ಅಲಂಕರಿಸಿ ಸಾರ್ವಜನಿಕರ ಹಣದಲ್ಲಿ ಮಜಾ ಮಾಡಲು ಇದು ಒಂದು ಅವಕಾಶ.

ಸಾವಯವಕ್ಕೆ ಕೃಷಿ ವಿಶ್ವ ವಿಧ್ಯಾನಿಲಯ ಬೇಕೇ?

  • ಒಂದು ವಿಶ್ವ ವಿಧ್ಯಾನಿಲಯ ಎಂದರೆ ಸಣ್ಣ ವಿಷಯ ಎಂದು ತಿಳಿಯಬೇಡಿ.
  • ಕೋಟ್ಯಾಂತರ ರೂ. ಖರ್ಚು ಇದೆ. ಇದು ಎಲ್ಲಿಂದ ಬರಬೇಕು.
  • ಬರೇ ಕಟ್ಟಡ, ವ್ಯವಸ್ಥೆ ಇತ್ಯಾದಿಗಳಲ್ಲ. ಅಲ್ಲಿ ವಿಷಯ ವಸ್ತು  ತಜ್ಞರಾದ  ವಿಜ್ಞಾನಿಗಳನ್ನು ನೇಮಿಸಬೇಕು.
  • ಅವರಿಗೆ ಮಾಸಿಕ ಲಕ್ಷಾಂತರ ರೂ ವೇತನ.
  • ಕೋಟಿಗಳು ಎಷ್ಟಿದರೂ ಸಾಲದು.
  • ಇದಕ್ಕೆಲ್ಲಾ  ನಮ್ಮಿಂದ ವಸೂಲಿಯಾದ ಕರಗಳಿಂದಲೇ  ಹಣದ ಹೊಂದಾಣಿಕೆ ಆಗಬೇಕು.
  • ಸಾವಯವ ಕೃಷಿ ವಿಶ್ವ ವಿಧ್ಯಾನಿಲಯ ಆದರೆ ಸಾಲದು.
  • ಅದಕ್ಕೆ ಕಾಲೇಜುಗಳೂ ಆಗಬೇಕು.
  • ಇದೆಲ್ಲವೂ ಸಾರ್ವಜನಿಕರಿಗೆ ಕರದ ಹೊರೆಯನ್ನು ಹೆಚ್ಚಿಸುತ್ತದೆಯೇ ಹೊರತು ಬೇರೆ ಏನೂ ಆಗುವುದಿಲ್ಲ.
  • ಇಷ್ಟಕ್ಕೂ ಸಾವಯವ ಕೃಷಿ ಎಂದರೆ ಅದು ಯಾರಿಗೂ ಗೊತ್ತಿಲ್ಲದ ವಿಚಾರ ಅಲ್ಲ.
  • ಅದರ ತಳಹದಿಯಲ್ಲೇ ನಮ್ಮ ಪೂರ್ವಜರು ಕೃಷಿ ಮಾಡಿದ್ದು.
  • ಅದೇ ಸಿದ್ದಾಂತಕ್ಕೆ  ಸ್ವಲ್ಪ ಉಪ್ಪು ಖಾರ ಸೇರಿಸಿ ಈಗಿನ ಆಧುನಿಕ ( ರಾಸಾಯನಿಕ) ಕೃಷಿ ವಿಜ್ಞಾನವನ್ನೂ ರೂಪಿಸಲಾಗಿದೆ.

ರಾಸಾಯನಿಕ ಕೃಷಿ ವಿಜ್ಞಾನ ಎಂಬುದಾಗಿ ಹೆಸರು ಪಡೆದ ವಿಷಯದಲ್ಲಿ ಅಧ್ಯಯನ  ಮಾಡಿದವರೇ ಇಲ್ಲಿ ಭೋಧನೆ ಮತ್ತು ಸಂಶೋಧನೆ ನಡೆಸಬೇಕೇ ಹೊರತು ಯಾರೋ ಒಬ್ಬ ಪ್ರಾಮಾಣಿಕ ಸಾವಯವ ಕೃಷಿಕ ಅಲ್ಲಿ ಭೋಧಕ ಅಥವಾ ಸಂಶೋಧಕನಾಗಿರುವುದಿಲ್ಲ.

Imaginary photo for Organic university

 ವಿಜ್ಞಾನ ಹೇಳುವ ಸಾವಯವ ಇಷ್ಟು:

  • ಸಾವಯವ ಕೃಷಿ ಎಂದರೆ  ಸಾಕಷ್ಟು ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸಿ ಮಣ್ಣನ್ನು ಜೈವಿಕವಾಗಿ ಶ್ರೀಮಂತಗೊಳಿಸುವುದು.
  • ಸಾವಯವ ಮೂಲದ ಬೇರೆ ಬೇರೆ ಗೊಬ್ಬರಗಳನ್ನು ಬಳಕೆ ಮಾಡುವುದು.
  • ಇವುಗಳ ಕ್ಷಮತೆ ಹೆಚ್ಚಿಸಲು ಜೀವಾಣುಗಳನ್ನು ಸೇರಿಸುವುದು.
  • ಸಾವಯವ ವಿಧಾನದಲ್ಲಿ ಕೀಟ – ರೋಗ ನಿಯಂತ್ರಣಕ್ಕೆ ಬೇವು, ಹೊಂಗೆ ಮುಂತಾದವುಗಳ ಸಸ್ಯಔಷಧಿಯನ್ನು ಬಳಕೆ ಮಾಡುವುದು.
  • ಜೈವಿಕ ರೋಗ, ಕೀಟ ನಿಯಂತ್ರಕಗಳ ಮೂಲಕ ಕೀಟ – ರೋಗ ನಿಯಂತ್ರಣ ಮಾಡುವುದು.
  • ಹುಳಿ ಮಜ್ಜಿಗೆ, ಜೀವಾಮೃತ, ಹಸುವಿನ ಗಂಜಳ, ಸಗಣಿಗಳ ಬಳಕೆ ಮಾಡಿ ಮಣ್ಣನ್ನು ಉತ್ತಮಪಡಿಸಿ  ಬೆಳೆ ಪಡೆಯುವುದು.
  • ಇದು ಬಿಟ್ಟರೆ ಬೇರೆ ಏನು ಇದೆ!
  • ಇದಕ್ಕೆ ಸ್ವಲ್ಪ ಒಗ್ಗರಣೆಯಾಗಿ ಏನೂ ಮಾಡದೆ ಕೃಷಿ ಮಾಡುವ ನೈಸರ್ಗಿಕ ವಿಧಾನ.

ರೈತರಿಗೆ ಬೇಕಾಗಿರುವುದು ಇದು ಅಲ್ಲ;

  • ಸಾವಯವ ಕೃಷಿಯತ್ತ ನಮ್ಮ ರೈತರನ್ನು ಮತ್ತೆ ಮರಳಿ ತರಲು ಬೇಕಾಗುವುದು ತಳಮಟ್ಟದ ಶಿಕ್ಷಣ ಒಂದೇ.
  • ಸಿಹಿ ಇದ್ದಲ್ಲಿಗೆ ಇರುವೆಗಳು ಬಂದಂತೆ ಲಾಭ ಇದ್ದರೆ ಯಾವ ಕೃಷಿಕನೂ ಅದರತ್ತ ಬರುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
  • ಅದು  ಕೋಟಿ ಕೋಟಿ ಖರ್ಚು ಮಾಡಿ ವಿಶ್ವ ವಿಧ್ಯಾನಿಲಯ ಸ್ಥಾಪನೆಯಿಂದ ಆಗಬೇಕಾಗಿಲ್ಲ.
  • ಇರುವ ವ್ಯವಸ್ಥೆಗಳ ಮೂಲಕವೇ ಮಾಡಬಹುದು.
  • ಆದರೆ ಹೇಳಬೇಕಾದವರಿಗೆ ಜ್ಞಾನ ಇದ್ದರಲ್ಲವೇ ಇವರು ಹೇಳುವುದು ಹಾಗಾಗಿದೆ ನಮ್ಮ ಸ್ಥಿತಿ.

ಬಹುಶಃ ನಮ್ಮಲ್ಲಿರುವ ಕೃಷಿ, ತೋಟಗಾರಿಕಾ ವಿಶ್ವ ವಿಧ್ಯಾನಿಲಯ, ಸಂಶೋಧನಾ ಕೇಂದ್ರ, ಅಭಿವೃದ್ಧಿ ಇಲಾಖೆಗಳಲ್ಲಿ ಪ್ರಾಯೋಗಿಕವಾಗಿ ಕೃಷಿ ಮಾಡುತ್ತಿದ್ದು, ಸಾರ್ವಜನಿಕರಿಗೆ ತಿಳುವಳಿಕೆ ಕೊಡುವ ಜನ ಎಷ್ಟು ಇರಬಹುದು. ಹೆಚ್ಚೆಂದರೆ 2-3% ಇರಬಹುದು. ಹೆಚ್ಚಿನ  ಜನ ಕೃಷಿ, ತೋಟಗಾರಿಕಾ ವಿಜ್ಞಾನಿಗಳು ಆಗಿದ್ದರೆ ಅದು ಅವರ ಜೀವನೋಪಾಯಕ್ಕಾಗಿ ಹೊರತು  ಆ ಕ್ಷೇತ್ರದ ಉದ್ದಾರಕ್ಕೆ ಅಲ್ಲ.

  • ಕೃಷಿ ಕ್ಷೇತ್ರದಲ್ಲಿ ಇಳಿದು ಮಾಡಿ ನೋಡಿ ಹೇಳುವ ಕೃಷಿ ವಿಜ್ಞಾನಿಗಳನ್ನು ಹುಡುಕುವುದೇ ಕಷ್ಟ.

ಮೊದಲು ಇದನ್ನು ಸರಿಮಾಡಿ:

  • ಇಲ್ಲಿ ನಿಷ್ಟುರವಾಗಿ ಹೇಳಬಯಸುವುದೇನೆಂದರೆ ನಮ್ಮಲ್ಲಿ ಈಗ ಇರುವ ಕೃಷಿ- ತೋಟಗಾರಿಕಾ ವಿಶ್ವ ವಿಧ್ಯಾನಿಲಯ, ಸಂಶೋಧನಾ ಕೇಂದ್ರಗಳು, ಅಭಿವೃದ್ದಿ ಇಲಾಖೆಗಳಲ್ಲಿ ಕೆಲಸಮಾಡುತ್ತಿರುವ  ಶಿಕ್ಷಣ ಪಡೆದ ತಜ್ಞರು  ತಾವು ಪಡೆಯುತ್ತಿರುವ  ಲಕ್ಷಾಂತರ ರೂ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಸರಿಯಾಗಿ ತಿಳಿಯುವ ಪ್ರಯತ್ನವನ್ನು ಮಾಡಿ.
  • ರೈತನಿಗೆ ಸುರಕ್ಷಿತ ಬೇಸಾಯ ವಿಧಾನ ಹೇಗೆ, ಯಾವುದು ಅಸುರಕ್ಷಿತ ಎಂಬುದನ್ನು ಪ್ರತೀ ವ್ಯಕ್ತಿಗೂ ಸಂದೇಶ ತಲುಪುವಂತೆ ಹೇಳಿ ಕೊಡಿ.
  • ಇಷ್ಟೊಂದು ಕೃಷಿ ವಿಜ್ಞಾನ ಮುಂದುವರಿದಿದ್ದರೂ ನಮ್ಮಲ್ಲಿ ಇಂದಿಗೂ 50% ಜನ ರೈತರಿಗೆ NPK ಎಂದರೆ ಏನು ಎಂಬುದು ತಿಳಿದಿಲ್ಲ.
  • ಇಂತಹ ಮೂಲಭೂತ ಸಂಗತಿಗಳನ್ನು  ತಿಳುಯುವಂತೆ ಮಾಡಿ.
  • ಒಬ್ಬ ರೈತನಿಗೆ ತನ್ನ ಬೆಳೆಗೆ ಕೀಟದ ತೊಂದರೆಯಾಗಿದೆಯೇ , ರೋಗವೇ, ಪೋಷಕಾಂಶದ ವ್ಯತ್ಯಾಸವೇ,ಎಂಬುದನ್ನು ಗುರುತಿಸುವಷ್ಟು  ಕನಿಷ್ಟ ಜ್ಞಾನವನ್ನು ಕೊಡಲು ಶ್ರಮಿಸಿರಿ.
  • ರೈತನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೃಷಿ ತಜ್ಞರು ಬೇಕಾಗಿದ್ದಾರೆ.

ಸರಕಾರ  ಯಾರದೋ ಒತ್ತಾಯಕ್ಕೆ ಇಂದು ಸಾವಯವ ಕೃಷಿ ವಿಶ್ವ ವಿಧ್ಯಾನಿಲಯವನ್ನು ಸ್ಥಾಪಿಸುತ್ತದೆ. ನಾಳೆ, ನೈಸರ್ಗಿಕ ಕೃಷಿಯದ್ದು, ಮುಂದೆ ಜೈವಿಕ ಹೀಗೆ ಎಷ್ಟು ವಿಶ್ವ  ವಿಧ್ಯಾನಿಲಯಗಳಾದರೂ ಅದರ ಹೊರೆ ಸಾರ್ವಜನಿಕರಾದ ನಮ್ಮ ಮೇಲೆ ಬೀಳುತ್ತದೆ. ಈಗಾಗಲೇ ಕರಭಾರದಿಂದ ತತ್ತರಿಸಿರುವ ಸಾರ್ವಜನಿಕರು ಸರಕಾರ ಮಾಡುವ ಇಂತಹ ಅನವಶ್ಯಕ ಕೆಲಸಗಳನ್ನು ಪ್ರಶ್ನಿಸುವ ಮಟ್ಟಕ್ಕೆ ಬಾರದಿದ್ದರೆ  ಮುಂದಿನ ದಿನಗಳು ಬಹಳ ಕಷ್ಟದ್ದಾಗಲಿವೆ.

Leave a Reply

Your email address will not be published. Required fields are marked *

error: Content is protected !!