ಅಂತರ್ಜಲ ಮಟ್ಟ ಏರಿಸಲು ಕಷ್ಟ ಇಲ್ಲ.

ಎಲ್ಲೆಡೆ ಆಂತರ್ಜಲ ಮಟ್ಟ ಕುಸಿದಿದೆ, ನಾಳೆಯ ನೀರಿಗಾಗಿ ಇಂದು ಚಿಂತನೆ ನಡೆಯುತ್ತಿದೆ.ನೀರಿನ ತೃಷೆ ತಣಿಸಲು ಆಂತರ್ಜಲ ಬಳಕೆ ಪ್ರಾರಂಭ ಆದ ನಂತರ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿತು. ಜನ ಮಳೆ ಕಡಿಮೆಯಾಗಿದೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಹೇಳುತ್ತಾ ಜಲ ಜಾಗೃತಿ ಮೂಡಿಸುತ್ತಿದ್ದಾರೆ. ವಾಸ್ತವಾಗಿ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಹಲವು ಇದೆ. ಇದರಲ್ಲಿ ಅತಿಯಾದ ನೀರಿನ ಬಳಕೆ ಒಂದು.

ಅಂತರ್ಜಲ ಕೆಳಗಿಳಿಯಲು ಕಾರಣ:

 • ಸರಳವಾಗಿ ಹೇಳಬೇಕೆಂದರೆ ಲೆಕ್ಕಕ್ಕಿಂತ ಮಿತಿ ಮೀರಿ ನೀರಿನ ಬಳಕೆ ಆದುದೇ ಅಂತರ್ಜಲ ಕುಸಿತಕ್ಕೆ ಕಾರಣ.
 • 1970  ರ ಸುಮಾರಿಗೆ ನಮ್ಮಲ್ಲಿ ಕೊಳವೆ ಬಾವಿಗಳ ಪರಿಚಯವಾಯಿತು. ಆ ನಂತರ 10 ವರ್ಷಗಳ ಕಾಲ ನಿಧಾನಗತಿಯಲ್ಲಿ ಕೊಳವೆ ಬಾವಿಗಳು ಹೆಚ್ಚುತ್ತಿದ್ದವು.
 • 1980 ರ ತರುವಾಯ ಕೊಳವೆ ಬಾವಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಾರಂಭಿಸಿತು.
 • 1990  ರ ನಂತರ ಪ್ರತೀ ಜಿಲ್ಲೆಯಲ್ಲೂ ವರ್ಷಕ್ಕೆ ಸರಾಸರಿ 2000 ಕ್ಕೂ ಹೆಚ್ಚು ಕೊಳವೆ ಬಾವಿಗಳು ತೋಡಲ್ಪಡುತ್ತಿವೆ.

2010  ತರುವಾಯ ಈ ಕೊಳವೆ ಬಾವಿಗಳು ಪ್ರತೀ ಮನೆಗೆ ಒಂದರಂತೆ ಆಗಿವೆ. ವಸತಿ ಸಮುಚ್ಚಯಗಳೂ ಕೊಳವೆ ಬಾವಿ ಅವಲಂಭಿಸಿವೆ.  ಗ್ರಾಮೀಣ ನೀರು ಸರಬರಾಜು ನಡೆಯುವುದೇ ಕೊಳವೆ ಬಾವಿಗಳಿಂದ.

ಇಂತಹ ನೀರು ಇಂಗುವ ಪಾತ್ರೆಗಳು ಬೇಸಿಗೆಯಲ್ಲೂ ಇರಬೇಕು.
 • ಕೃಷಿಕರಲ್ಲಿ ಅರ್ಧ ಎಕ್ರೆಗೆ ಒಂದರಂತೆ  ಕೊಳವೆ ಬಾವಿ ಇದೆ.
 • ನೀರು, ಮತ್ತು ವಿದ್ಯುತ್ ಇರುವಷ್ಟೂ ಸಮಯ  ಪಂಪು ಚಲಾವಣೆಯಲ್ಲಿಯೇ ಇರುತ್ತದೆ.
 • ಅಂತರ್ಜಲದ ಸುಲಭ ಲಭ್ಯತೆ, ಮತ್ತು ಅಧಿಕ ಬಳಕೆಯಿಂದ ಮೇಲು ಜಲದ ಬಾವಿಗಳೂ ಬೇಗ ಬತ್ತಿದವು. ಜನ ಬಾವಿ ಉಪಯೋಗಿಸುವುದೇ ಬಿಟ್ಟರು.

 

Click to WhatsApp and  build  your website now!
 

 • ಭೂ ಮೇಲ್ಮೈಯಲ್ಲಿ ನೀರು ನೆಲಕ್ಕೆ ಇಳಿದು ಅದು ಅಂತರ್ಜಲಕ್ಕೆ ಸೇರ್ಪಡೆಯಾಗಲು ಇದ್ದ ನೈಸರ್ಗಿಕ ವ್ಯವಸ್ಥೆಗಳಾದ ಮರಮಟ್ಟುಗಳು, ತಗ್ಗು, ಹೊಂಡ ಮುಂತಾದ ಅವಕಾಶಗಳು ಇಲ್ಲದೆ  ನೀರು ನೇರವಾಗಿ ಹರಿದು ಹೋಗುವ  ಸ್ಥಿತಿ ಉಂಟಾಯಿತು.
ನೀರು ನಿಲ್ಲುವ ಪಾತ್ರೆಗಳಿದ್ದರೆ ಮಾತ್ರ ಅಂತರ್ಜಲ ಉಳಿಯಬಲ್ಲುದು. ಅದನ್ನು ಮಣ್ಣು ಹಾಕಿ ನಾಶ ಮಾಡಬಾರದು.

ಹೇಗೆ ಸಂರಕ್ಷಿಸಬಹುದು:

 • ಕೊಳವೆ ಬಾವಿಗಳು ಜನರ ನೀರಿನ ತೃಷೆಯನ್ನು ನೀಗಿಸುವಲ್ಲಿ ಮಹತ್ತರವಾದ ಪಾತ್ರವನ್ನು ಹೊಂದಿವೆ. ಇದು ಇಲ್ಲದಿದ್ದರೆ ಇಂದು ಜೀವನವೇ ಇಲ್ಲ ಎಂಬಂತಾಗಿದೆ.
 • ಒಂದು ವೇಳೆ ಕೊಳವೆ ಬಾವಿ ತೋಡಬಾರದು, ಅಥವಾ ನೀರು ತೆಗೆಯಬಾರದು ಎಂದರೆ ನಮ್ಮಲ್ಲಿ ಜಲ ಯುದ್ಧ ಘೋಷಣೆಯಾದಂತೆ.
 • ಕೊಳವೆ ಬಾವಿಯ ನೀರಿನ ಉಪಯೋಗದ ಶಿಕ್ಷಣ ಇಲ್ಲದಿರುವುದೇ ಇದೆಲ್ಲದರ ಮೂಲ ಕಾರಣ.
 • ಪ್ರಾರಂಭದಲ್ಲಿ ಹೇಳಿದಂತೆ ಅದು ಮುಗಿದು ಹೋಗುವ ಸಂಪನ್ಮೂಲ ಎಂಬುದು ಜನತೆಗೆ ಗೊತ್ತಾಗಬೇಕು.
 •  ಹಳ್ಳಿ ಹಳ್ಳಿ ಗಳಲ್ಲಿ ಮಳೆಗಾಲ ಕಳೆದ ತಕ್ಷಣ ಹರಿದು ಹೋಗುವ ನೀರನ್ನು ಒಡ್ಡು ಹಾಕಿ ನಿಲ್ಲಿಸಿದರೆ ಮೇಲು ಜಲ ವೃದ್ದಿಯಾಗುತ್ತದೆ. ಅಂತರ್ಜಲಕ್ಕೂ  ಇದು ಸೇರಿಕೊಳ್ಳುತ್ತದೆ.
 •  ಬೇಸಿಗೆಯಲ್ಲಿ ಅಧಿಕ ನೀರು ಅಂತರ್ಜಲಕ್ಕೆ  ಸೇರುವುದು.
 • ಈ ಸಮಯದಲ್ಲಿ ನೀರನ್ನು ಹೆಚ್ಚು ಹೆಚ್ಚು ಹಿಂಡಿದಾಗ ಅದು ಶೊಷಣೆಗೆ ಒಳಗಾಗುತ್ತದೆ.
ಸಣ್ಣ ಅಣೆಕಟ್ಟುಗಳು ಅಗತ್ಯ.

ಹೀಗೆ ಮಾಡಿದರೆ  ಮಾತ್ರ ಉಳಿಗಾಲ:

 • ಎಲ್ಲಾ ಜಲ ಸಾಕ್ಷರ ಶಿಕ್ಷಕರು ಜನರಿಗೆ ಮಿತ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸಬೇಕು.
 • ಕೊಳವೆ ಬಾವಿ ಬೇಕು. ಜೊತೆಗೆ ಕೃಷಿಕರಿಗೆ  ಮೇಲು ಜಲ ಮೂಲಗಳಾದ ಕೆರೆ, ಬಾವಿ ನೀರು ಬಳಕೆ ಬಗ್ಗೆ ಉತ್ತೇಜನವೂ ಕೊಡಬೇಕು.
 • ನೆಲದ ನೀರಿನಲ್ಲಿ ಇರುವ ಸತ್ವಾಂಶಗಳು ಬೆಳೆಗಳಿಗೆ, ಆರೋಗ್ಯಕ್ಕೆ ಒಳ್ಳೆಯದು.
 • ಇದನ್ನು  ಜನರಿಗೆ ತಿಳಿಸಬೇಕು. ಕೊಳವೆ ಬಾವಿಯ ನೀರನ್ನು ಆಪತ್ಕಾಲದ ನೀರಾಗಿ ಮಾತ್ರ ಬಳಕೆ ಮಾಡಲು ಆವಕಾಶ ಕೊಡಬೇಕು.
 • ಮಿತ ನೀರಾವರಿಗಾಗಿ ಪ್ರೋತ್ಸಾಹ  ಕೊಡಬೇಕು. ಯಾರು ಕಡಿಮೆ ವಿದ್ಯುತ್ ಬಳಕೆ ಮಾಡುತ್ತಾರೆಯೋ ಅವರಿಗೆ ಕೆಲವು ರಿಯಾಯಿತಿ ನೀಡಬೇಕು.
 •  ಕೊಳವೆ ಬಾವಿಯ ನೀರನ್ನು ಬಳಕೆ ಮಾಡುವವರು ಕಡ್ದಾಯವಾಗಿ ಮಿತ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ನಿಬಂಧನೆ ಇರಬೇಕು.

ಸ್ವೇಚ್ಚಾಚಾರ ಬೇಡ:

ಕೊಳವೆ ಬಾವಿಯ ನೀರನ್ನು ಹರಿ ನೀರಾವರಿಗೆ ಬಲಸಬೇಡಿ.
 • ನೆಲದ ಅಡಿಯಲ್ಲಿ ನಮ್ಮ ಕಣ್ಣಿಗೆ ಕಾಣದ ಗುಪ್ತಗಾಮಿನಿ ನದಿಗಳು ಹರಿಯುತ್ತಿವೆ ಎಂದು ಜನ ತಿಳಿದಿದ್ದಾರೆ.
 • ಇಂತಹ ನದಿಗಳು ನೆಲದ ಅಡಿಯಲ್ಲಿ ಇಲ್ಲ. ಎಲ್ಲಾ ನೀರೂ ಮೇಲು ಭಾಗದಿಂದ ಪ್ರಕೃತಿ ನಿಯಮದಂತೆ ಮಣ್ಣು, ಕಲ್ಲುಗಳ ಸೆರೆಗಳ ಮಧ್ಯೆ ಇಳಿದು ಅಂತರ್ಜಲವನ್ನು ಸೇರಬೇಕು.
 • ಅದು ದಾಸ್ತಾನು ಆದ ನೀರಿನ ಸಂಗ್ರಹವೇ ಹೊರತು ಜಲಗೋಳದಿಂದ ಉಧ್ಭವವಾಗುವ ನೀರಿನ ಮೂಲ ಅಲ್ಲ.
 • ಇದನ್ನು ಬ್ಯಾಂಕ್ ನಲ್ಲಿ ಅಪತ್ಕಾಲಕ್ಕೆ ಇರಲಿ ಎಂದು ಇಟ್ಟ ಹಣದಂತೆ ಜೋಪಾನವಾಗಿ ಬಳಕೆ ಮಾಡಬೇಕು.

ಇದು ಎಲ್ಲರಿಗೂ ತಿಳಿದಿರಲಿ:

ಹರಿ ನೀರಾವರಿ ಮಾಡಬೇಡಿ.
 • ಈ ಎಲ್ಲಾ ನೀರಿಗೂ ಮಳೆಯ ಮೂಲಕ ನೀರು ಭೂಮಿಗೆ ಬಿದ್ದು, ಅದು ತಗ್ಗು ಪ್ರದೇಶದಲ್ಲಿ, ನದಿಗಳ ಹೊಂಡಗಳಲ್ಲಿ ತಂಗಲ್ಪಟ್ಟು ಸ್ವಲ್ಪ ಸ್ವಲ್ಪವೇ ಕೆಳಮುಖ ಇಳಿದು ಆದ ಜಲ ಮೂಲ.
 • ಇದು ಮಳೆಗಾಲದಲ್ಲಿ ಇಂಗುವುದಕ್ಕಿಂತ ಮಳೆ ಇಲ್ಲದ ಸಮಯದಲ್ಲಿ ಇಂಗುವುದೇ ಅಧಿಕ.
 • ನೀರು ಅಂತರ್ಜಲಕ್ಕೆ ಇಳಿಯುವ ಯಾವ ರಂದ್ರಗಳೂ ಕಾಣಿಸುವುದಿಲ್ಲ.ಅವೆಲ್ಲಾ ಬಿರುಕುಗಳು.
 • ಎಲ್ಲಾ ನಮೂನೆಯ ಶಿಲೆಯಲ್ಲಿಯೂ ಏಕ ಪ್ರಕಾರದ ಬಿರುಕುಗಳು ಇರುವುದಿಲ್ಲ. ಕೆಲವು ಶಿಲೆಗಳಲ್ಲಿ ಆತೀ ಹೆಚ್ಚು ಬಿರುಕುಗಳು ಇರುತ್ತವೆ.
 • ಉತ್ತರ ಕರ್ನಾಟಕದ ಬಯಲು ಸೀಮೆಯ ಪ್ರದೇಶಗಳ ಶಿಲೆಗಳಲ್ಲಿ ಬಿರುಕುಗಳು ಹೆಚ್ಚು ಇರುತ್ತವೆ.
 • ಅದೇ ಕಾರಣದಿಂದ ಚೆನ್ನಾಗಿ ಮಳೆಯಾದಾಗ ಆಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ.
ಬಾವಿಯ ನೀರು ಬೆಳೆಗೆ ಅತ್ಯುತ್ತಮ ಎಂಬುದು ಎಲ್ಲರಿಗೂ ತಿಳಿದಿರಲಿ.

ನೀರಿನ ಮಿತವ್ಯಯ ಮಾಡದೆ ವಿನಹ ನಾವು ಎಷ್ಟೇ ಜಲ ಮರುಪೂರಣ, ಮಳೆ ಕೊಯಿಲು ಮಾಡಿದರೂ ಮುಂದಿನ ಎಲವು ವರ್ಷಗಳಲ್ಲಿ ಜಲ ಯುದ್ದ ಘೋಷಣೆ ಆಗಿಯೇ ತೀರುತ್ತದೆ.

ಸುಲಭವಾಗಿ ದೊರೆಯುತ್ತದೆ ಎಂಬ ಕಾರಣದಿಂದ ಅಂತರ್ಜಲ ಮೂಲದ ನೀರಿಗೇ ಎಲ್ಲರೂ ಮಾರು ಹೋಗಿ ಮೇಲು ಜಲದ  ನೀರನ್ನು ಕಡೆಗಣಿಸಿರುವುದೇ ಆದ ತಪ್ಪು. ಎರಡೂ ಬಗೆಯ ಸಂಪತ್ತನ್ನೂ ವಿವೇಚನೆಯಿಂದ ಬಳಸಿಕೊಂಡಿದ್ದರೆ ಈ ಸಮಸ್ಯೆ  ಬರುತ್ತಲೇ ಇರಲಿಲ್ಲ. 
 

One thought on “ಅಂತರ್ಜಲ ಮಟ್ಟ ಏರಿಸಲು ಕಷ್ಟ ಇಲ್ಲ.

Leave a Reply

Your email address will not be published. Required fields are marked *

error: Content is protected !!