ಅಡಿಕೆ ಉತ್ಪಾದನೆ ಹೆಚ್ಚುತ್ತಿದೆ- ಮಿಶ್ರ ಬೆಳೆಗೆ ಗಮನ ಕೊಡಿ.

ನಾಗಾಲೋಟದಿಂದ ಹೆಚ್ಚುತ್ತಿರುವ ಅಡಿಕೆ ತೋಟಗಳು ಎಷ್ಟು ಸಮಯದ ತನಕ ರೈತರ ಬದುಕನ್ನು ಆಧರಿಸಬಲ್ಲವು ತಿಳಿಯದು. ಕೆಲವೇ ಸಮಯದಲ್ಲಿ ಬೆಲೆ ಕುಸಿತವಾದರೂ ಆಗಬಹುದು ಇಂತಹ ಸಂದರ್ಭದಲ್ಲಿ ನಮ್ಮ ಬದುಕಿನ ಬಧ್ರತೆಗೆ ಮಿಶ್ರ ಬೆಳೆ ಅಥವಾ ಬದಲಿ ಬೆಳೆ ಬೇಕೇ ಬೇಕು. ಅಡಿಕೆ ಯಿಂದ  ಬರುವಷ್ಟು ಬರಲಿ. ಕೈ ಬಿಟ್ಟಾಗ ಮಿಶ್ರ ಬೆಳೆ ನಮ್ಮನ್ನ ಆಧರಿಸುವಂತಿರಲಿ.

 • ಒಂದು  ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಡಿಕೆ ಬೆಳೆಯುವುದರಲ್ಲಿ ಪ್ರಥಮ ಸ್ಥಾನದಲ್ಲಿತ್ತು.
 • ಕ್ರಮೇಣ  ಇಲ್ಲಿ  ಬೆಳೆ ಪ್ರದೇಶ ಕಡಿಮೆಯಾಗದಿದ್ದರೂ ಸಹ ಅವಕಾಶದ ಮಿತಿಯಿಂದಾಗಿ ಈ ಜಿಲ್ಲೆ ತನ್ನ ಮೊದಲ ಸ್ಥಾನವನ್ನು ಶಿವಮೊಗ್ಗಕ್ಕೆ ಬಿಟ್ಟು ಕೊಡಬೇಕಾಗಿ ಬಂತು.
 • ಶಿವಮೊಗ್ಗ ಜಿಲ್ಲೆಯಾದ್ಯಂತ ಅಡಿಕೆ ಬೆಳೆ ವ್ಯಾಪಿಸಿದ್ವು. ಈಗ ಇದೆಲ್ಲಾ ದಾಖಲೆಗಳನ್ನು ಮುರಿದು ದಾವಣಗೆರೆ ಮುಂದೆ ಬಂದಿದೆ.
 • ದಾವಣಗೆರೆ ಜಿಲ್ಲೆಯಾದ್ಯಂತ ಈಗ ಅಡಿಕೆ ಬೆಳೆ ವ್ಯಾಪಿಸಿದ್ದು, ಅಡಿಕೆ ಉತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಕೆಲವು ಮೂಲಗಳ ಪ್ರಕಾರ ಅಡಿಕೆಯ ಬೆಳೆ ಪ್ರದೇಶ ಭಾರೀ ಹೆಚ್ಚಳವಾಗಿದೆಯಂತೆ. ಕಲೆದ ವರ್ಷ ಮಳೆ ಚೆನ್ನಾಗಿ ಬಂದು ಈ ವರ್ಷ ಬಂಪರ್ ಇಳುವರಿಯೂ ಇದೆ ಎನ್ನುತ್ತಾರೆ  ಮೈದಾನ ಪ್ರದೇಶದ ಅಡಿಕೆ ಬೆಳೆಗಾರರು. ಈ ಕಾರಣಕ್ಕೆ ಏನಾದರೂ  ಮಾರುಕಟ್ಟೆ ಅಲ್ಲೋಲ ಕಲ್ಲೋಲವಾದರೆ ನಾವು ಕಂಗಾಲಾಗಬಾರದು. ಮಿಶ್ರ ಬೆಳೆಗಳ ಮೂಲಕ ಬೆಲೆ ಕುಸಿದರೂ ನಾವು ಸಿದ್ದರಾಗಬೇಕಿದೆ.

ಭವಿಷ್ಯದಲ್ಲಿ ಭಯ ಇದೆ:

 • ಕೆಂಪಡಿಕೆ ಮಾಡಲಾಗುವ ಅಡಿಕೆ ಬೆಳೆ ಪ್ರದೇಶ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಅಡಿಕೆ ಸಸಿಗಳು ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಚಿತ್ರದುರ್ಗ ಕಡೆಗಳಿಂದ ಮಾರಾಟವಾಗುತ್ತಿವೆ.
 • ಇದರಲ್ಲಿ 25%  ಬದುಕಿ ಉಳಿಯದೇ ಇದ್ದರೂ ಸಹ ಉಳಿದವು ತೋಟಗಳಾದರೆ ವಾರ್ಷಿಕ 1000  ಎಕ್ರೆಗೂ ಹೆಚ್ಚು, ಬೆಳೆ ಪ್ರದೇಶಗಳು ಹೆಚ್ಚಳವಾಗುತ್ತಿವೆ.
 • ಇದು ಈಗಿನಿಂದ ಅಲ್ಲ. ಸುಮಾರು 10-12 ವರ್ಷಗಳಿಂದ ಇದು ನಡೆಯುತ್ತಿದೆ.
 • ವಾರ್ಷಿಕ ಕನಿಷ್ಟ 1000  ಎಕ್ರೆಯಲ್ಲಿ ಸರಾಸರಿ 5000 ಟನ್ ಗಳಿಗೂ ಹೆಚ್ಚು  ಉತ್ಪಾದನೆ ಹೆಚ್ಚಳವಾಗುತ್ತಾ ಇದೆ.
 • ಅಡಿಕೆಯ ಬೇಡಿಕೆ ಪ್ರಮಾಣ ಅದಕ್ಕನುಗುಣವಾಗಿ ಏರಿಕೆಯಾಗುತ್ತಿಲ್ಲ.
 • ಇದು ಬೆಳೆಗಾರರಿಗೆ ಒಂದಲ್ಲ ಒಂದು ದಿನ ತೊಂದರೆಯಾಗಿಯೇ ಆಗುತ್ತದೆ.
 • ಈಗಿನ ಲೆಕ್ಕಾಚಾರದದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 94,077.50  ಹೆಕ್ಟೇರಿನಲ್ಲಿ  ಅಡಿಕೆ ಬೆಳೆ ಪ್ರದೇಶ ಇದೆ.
 • ದಾವಣಗೆರೆ ಜಿಲ್ಲೆಯೊಂದರಲ್ಲೇ ಇರುವ 4,46, 0000 ಹೆಕ್ಟೇರು ಭೂ ಪ್ರದೇಶದಲ್ಲಿ  3,ಲಕ್ಷ ಹೆಕ್ಟೇರುಗಳಿಗೂ ಹೆಚ್ಚು ಅಡಿಕೆ ಬೆಳೆ ಪ್ರದೇಶ ಇದೆ. Davanagere  leads in arecanut praoduction https://www.deccanherald.com/content/206254/future-tense-arecanut-growers-davangere.html
 • ಇದರಲ್ಲಿ ಕಳೆದ ಎರಡು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಪ್ರಾರಂಭವಾಗಿದ್ದು, ಇಡೀ ಅಡಿಕೆ ಮಾರುಕಟ್ಟೆಯಲ್ಲಿ  ದಾವಣಗೆರೆಯ ಪಾಲು ದೊಡ್ಡದಿದೆ.
 • ಈ ವರ್ಷ ಮಳೆ ಮತ್ತು ನೀರಿನ ಅನುಕೂಲದಿಂದಾಗಿ ಉತ್ಪತ್ತಿ ತುಂಬಾ ಹೆಚ್ಚು ಕಂಡುಬರುತ್ತಿದೆ.

ಹಾಗೆಂದು ಬರೇ ದಾವಣಗೆರೆ ಮಾತ್ರವಲ್ಲ. ತುಮಕೂರು ಜಿಲ್ಲೆಯೂ ಅಡಿಕೆ ಬೆಳೆ ಪ್ರದೇಶಕ್ಕೆ ಸೇರ್ಪಡೆಯಾಗುತ್ತಿದೆ. ಅತ್ತ ಮಂಡ್ಯದ ರೈತರೂ ಸಹ ಈಗ ಅಡಿಕೆಯತ್ತ ಬದಲಾಗುತ್ತಿದ್ದಾರೆ. ಇವೆಲ್ಲವೂ ಇನ್ನೇನು ಒಂದೆರಡು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಏನಾದರೂ ಒಂದು ಸಂಚಲನವನ್ನು ಉಂಟು ಮಾಡಲಿದೆ. ಅದು ಅನುಕೂಲಕರವಾಗಿಯೂ ಇರಬಹುದು, ಬೇಸರದ ವಿಚಾರವೂ ಆಗಬಹುದು. ಇದನ್ನು ಯಾರಿಂದಲೂ ಊಹಿಸಲು ಅಸಾಧ್ಯ.

ಗಾಬರಿ ಪಡಬೇಕಾಗಿಲ್ಲ:

 • ಕಳೆದ ಸುಮಾರು 10 ವರ್ಷಗಳಿಂದಲೂ ತಜ್ಞರು ಇದನ್ನೇ ಹೇಳುತ್ತಾ ಬಂದಿದ್ದಾರೆ.
 • ಆದರೆ ಇದರ ಎಡೆಯಲ್ಲಿ ಬೆಲೆ ಏರಿಕೆಯೂ ಆಗಿದೆ, ಸ್ವಲ್ಪ ಇಳಿಕೆಯೂ ಆಗಿದೆ.
 • ಬೆಳೆದವರು ಪಾಸ್ ಆಗಿದ್ದಾರೆ, ಅಂಜಿದವರು ಅಲ್ಲೇ ಬಾಕಿಯಾಗಿದ್ದಾರೆ.
 • ಅಡಿಕೆ ಕೊಳ್ಳುವವರು ಇಲ್ಲ ಎಂದಾಗಲಿಲ್ಲ. ಮುಂದೆಯೂ ಕೊಳ್ಳುವವರು ಇಲ್ಲ ಎಂದಾಗುವುದಿಲ್ಲ.
 • ಬೆಲೆ ಕುಸಿತವಾದರೂ ಆಗಬಹುದು. ಈ ಸಮಯದಲ್ಲಿ ನಮ್ಮ ರಕ್ಷಣೆಗೆ ಬಹು ಬೆಳೆಗಳು  ಅಗತ್ಯವಾಗಿ ಬೇಕು.

ಈ ತನಕ ಯಾಕೆ ತೊಂದರೆ ಆಗಿಲ್ಲ:

 • ಗುಟ್ಕಾ ತಯಾರಿಕೆ ಹೊರತಾಗಿ ಅಡಿಕೆಗೆ ಬೇರೆ ಯಾವ ಬಳಕೆಯೂ ಇಲ್ಲ.
 • ಗುಟ್ಕಾ ಬಳಕೆ ಅಷ್ಟೊಂದು ಪ್ರಮಾಣದಲ್ಲಿ ಕಡಿಮೆಯಾಗಿಲ್ಲವಾದರೂ ಸಹ ಹೊಸತಾಗಿ ಗುಟ್ಕಾ ಬಳಕೆಮಾಡುವವರ ಪ್ರಮಾಣ ಹೆಚಾಗುತ್ತಿಲ್ಲ. Gutkha consumption declining https://economictimes.indiatimes.com/news/politics-and-nation/consumption-and-availability-of-gutka-has-decreased-who/articleshow/45536663.cms
 • ಇದು ಆಗಲೂ ಬಾರದು.

ನಮ್ಮ ಮಕ್ಕಳು ಗುಟ್ಕಾ ತಿನ್ನಬಾರದು ಹೇಗೆಯೋ ಹಾಗೇ ಹೊಸ ತಲೆಮಾರು ಗುಟ್ಕಾ ಅಡಿಕೆ ತಿನ್ನುವುದನ್ನು ಕಡಿಮೆಮಾಡಬೇಕಾದ್ದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಅಗತ್ಯವೂ ಸಹ. ಹಾಗೆಂದು ಅಡಿಕೆ ಬೆಳೆಗಾರರು ಬೆಲೆ ಕಡಿಮೆಯಾದರೂ ಬದುಕಬೇಕು. ಇದಕ್ಕೆ ಇರುವ ಉಪಾಯ, ಅಡಿಕೆಯೊಂದಿಗೆ ಮಿಶ್ರ ಬೆಳೆಗಳಿಗೆ ಹೆಚ್ಚಿನ ಗಮನ ಕೊಡುವುದು.

ಯಾವ ಮಿಶ್ರ ಬೆಳೆ ಸೂಕ್ತ:

 • ಅಡಿಕೆ ಬೆಳೆಯಲ್ಪಡುವ ಪ್ರದೇಶದುದ್ದಕ್ಕೂ ಬೆಳೆಯಬಹುದಾದ ಮಿಶ್ರ ಬೆಳೆಗಳಲ್ಲಿ ಬಾಳೆ ಕರಿಮೆಣಸು, ವೀಳ್ಯದೆಲೆ ಪ್ರಾಮುಖ್ಯವಾದುದು. ಅಡಿಕೆ ಮರಗಳನ್ನು ಹಾಗೆಯೇ ಉಳಿಸಿಕೊಂಡು ಈ ಬೆಳೆಗಳನ್ನು ಬೆಳೆಯಬೇಕು.
 • ಬಾಳೆ ಅಡಿಕೆ ತೋಟದಲ್ಲಿ ಬೆಳೆದಾಗ ಅದರಲ್ಲೂ ಮೈದಾನ ಪ್ರದೇಶದಲ್ಲಿ ಇದನ್ನು ಬೆಳೆದಾಗ ಅಡಿಕೆ ತೋಟದಲ್ಲಿ ಸೂಕ್ಷ್ಮ ವಾತಾವರಣ ಸೃಷ್ಟಿಯಾಗುತ್ತದೆ. ಮಣ್ಣು ಫಲವತ್ತಾಗುತ್ತದೆ.
 • ಕರಿಮೆಣಸಿನ ಬೆಳೆಯನ್ನು ಅಡಿಕೆ ಮರದ ಆಶ್ರಯದಲ್ಲಿ ಬೆಳೆದಾಗ ಅಡಿಕೆಯಲ್ಲಿ ದೊರೆಯುವ ಆದಾಯದಷ್ಟೇ ಇದರಲ್ಲೂ ಪಡೆಯಬಹುದು.
 • ಕರಿಮೆಣಸಿನ ಬೆಳೆ ಬರೇ ಕರಾವಳಿ ಮಲೆನಾಡಿಗೆ ಮಾತ್ರ ಸೂಕ್ತವಾದ ಬೆಳೆ ಅಲ್ಲ. ಅರೆಮಲೆನಾಡು ಭಾಗದಲ್ಲೂ ಇದು ಉತ್ತಮವಾಗಿ ಬೆಳೆಯುತ್ತದೆ.
 • ವಿಳ್ಯದೆಲೆ ಬೆಳೆ ಅಡಿಕೆ ಮರಗಳ ಆಸರೆಯಲ್ಲಿ  ಚೆನ್ನಾಗಿ ಬರುತ್ತದೆ. ಈ ಬೆಳೆಗೆ ಆಂಶಿಕ ನೆರಳು ಅಗತ್ಯವಾಗಿದ್ದು, ಅಡಿಕೆಯೊಂದಿಗೆ ಅನುಕೂಲ ಇದ್ದವರು ವೀಳ್ಯದೆಲೆ ಬೆಳೆಯಬಹುದು.
 • ಮಿಶ್ರ ಬೆಳೆಗಳಲ್ಲಿ ಅಡಿಕೆ ತೋಟದ ಮಧ್ಯಂತರಕ್ಕೆ ಸೂಕ್ತವಾದ ಮತ್ತೊಂದು ಬೆಳೆ ಕೊಕ್ಕೋ. ಒಂದು  ಸಸಿಗೆ ವಾರ್ಷಿಕ 500  ರೂ. ಗಳಷ್ಟು ಅದಾಯವನ್ನು ಕೊಡಬಲ್ಲುದು.
 • ಅಡಿಕೆ ಮಧ್ಯಂತರದಲ್ಲಿ ಏಲಕ್ಕಿಯನ್ನು ಬೆಳೆದು ಅಡಿಕೆಯ ಉತ್ಪಾದನೆಯಷ್ಟೇ ಉತ್ಪತ್ತಿ ಪಡೆಯಬಹುದು.

ರೈತರು ಮಿಶ್ರ ಬೆಳೆಗಳನ್ನು ಆಯ್ಕೆ ಮಾಡುವಾಗ  ಸಮಾಜದ ಎಲ್ಲಾ ವರ್ಗವೂ ಬಳಕೆ ಮಾಡುವಂತಹ ಬೆಳೆಯನ್ನು ಆಯ್ಕೆ ಮಾಡಬೇಕು. ಇದು ಆಹಾರ ಬಳಕೆಯ ಬೆಳೆಯಾಗಿದ್ದರೆ  ಯಾವಾಗಲೂ ಕೈಕೊಡುವ ಸಾಧ್ಯತೆ ಇಲ್ಲ. ಅಡಿಕೆಯಂತಹ ಅಧಿಕ ಅದಾಯ- ಅಧಿಕ ರಿಸ್ಕ್ ನ ಬೆಳೆಯನ್ನೊಂದೇ ಬೆಳೆಯಬೇಡಿ. ಈಗಿನ ತಾಂತ್ರಿಕತೆಯಲ್ಲಿ ಸಾಂಪ್ರದಾಯಿಕ ಬೆಳೆ ಪ್ರದೇಶ ಮತ್ತು ಅಸಾಂಪ್ರದಾಯಿಕ ಪ್ರದೇಶಗಳ ಇತಿಮಿತಿಯನ್ನು ಸರಿಪಡಿಸಲು ಕಷ್ಟ ಇಲ್ಲ. ಅದೂ ಇರಲಿ ಜೊತೆಗೆ ಮಿಶ್ರ  ಬೆಳೆಯೂ ಇರಲಿ.
ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳಿಗೆ ಸ್ವಾಗತ. ಕಮಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ತಿಳಿಸಿ
end of the article:———————————–
search words: aracanut production# arecanut growing areas #Davanagere becoming leader in areca production # Areca in plain area # Inter crop with arecanut # Banana an intercrop # betel leaf in areca garden # Cardamom  inter crop with areca garden #

2 thoughts on “ಅಡಿಕೆ ಉತ್ಪಾದನೆ ಹೆಚ್ಚುತ್ತಿದೆ- ಮಿಶ್ರ ಬೆಳೆಗೆ ಗಮನ ಕೊಡಿ.

 1. Kokko and arecanut are NOT made for each other. This is a wrong information.
  Other than this, it is a good article.

  1. hi , thanks for your comment …
   we would like to know why did you feel that ” Kokko and arecanut are NOT made for each other.” please share your idea

Leave a Reply

Your email address will not be published. Required fields are marked *

error: Content is protected !!