ಇಲಾಖೆಗಳ ಮುಖಾಂತರ ಕೀಟನಾಶಕ ಮಾರಾಟ!.

ಬೆಳೆಒಳಸುರಿಗಳಾದ ಕೀಟನಾಶಕ – ರೋಗನಾಶಕ- ಕಳೆನಾಶಕ ಬಳಸಿ ಕೃಷಿಕರ ಆರೋಗ್ಯ ಕೆಡುತ್ತದೆ. ಪರಿಸರದ ಜೀವ ವೈವಿಧ್ಯಗಳ ಮೇಲೆ  ತುಂಬಾ ತೊಂದರೆ ಆಗುತ್ತದೆ. ಇದನ್ನು ಹಿತ ಮಿತ ಬಳಸಲು ನಮ್ಮ ದೇಶದ ಕೃಷಿಕರಿಗೆ ವೈಜ್ಞಾನಿಕ ಶಿಕ್ಷಣ ಇಲ್ಲ. ಕಾನೂನು ಕಟ್ಟು ನಿಟ್ಟು ಮಾಡಿದರೆ , ಮದುವೆಯಾಗಿ ಮಕ್ಕಳನ್ನು ಮಾಡಬಾರದು ಎಂದು ತಾಕೀತು ಮಾಡಿದಂತಾತ್ತದೆ. ಇದೆಲ್ಲಕ್ಕೂ ಪರಿಹಾರ ನಮ್ಮ ದೇಶದ ಕೃಷಿ ತೋಟಗಾರಿಕೆ ಅಭಿವೃದ್ದಿ ಇಲಾಖೆಗಳೇ ಇದನ್ನು ರೈತರಿಗೆ ಮಾರಾಟ ಮಾಡುವುದು ಸರಿಯಲ್ಲವೇ?.

ಹೊಸ  ಮಸೂದೆ:

  • ಭಾತರ ಸರಕಾರ ಕಳಪೆ ಕೀಟನಾಶಕ- ನಕಲಿ ಕೀಟನಾಶಕ- ವಾಯಿದೆ ಕಳೆದ ಕಿಟನಾಶಕ- ನಿಷೇದಿಸಲ್ಪಟ್ಟ ಕೀಟನಾಶಕಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಅನುಲವಾಗುವಂತೆ 1968 ರ ಕೀಟನಾಶಕ ಕಾಯಿದೆ   ತಂದಿತ್ತು.
  •    2018 ರಲ್ಲಿ    ಅದಕ್ಕೆ   ತಿದ್ದುಪಡಿ ತಂದು ನಕಲಿ, ವಾಯಿದೆ ಮೀರಿದ್ದು ಮುಂತಾದವುಗಳ ಮಾರಾಟ ಮಾಡಿದರೆ 50 ಲಕ್ಷ ತನಾ ದಂಡ, 5 ವರ್ಷದ ವರೆಗೆ ಜೈಲು ಮುಂತಾದ ನಿಬಂಧನೆಗಳನ್ನು ಸೇರಿಸಲಾಗಿತ್ತು.
  • ಈಗಿನ 2020 ರ  ತಿದ್ದುಪಡಿಯಲ್ಲಿ ಇದನ್ನು ಉಳಿಸಲಾಗಿಯೇ  ಎಂಬುದು ಸ್ಪಷ್ಟವಾಗಿಲ್ಲ.
  • ಆದರೆ ಮಾನವ ಆರೋಗ್ಯ ರಕ್ಷಣೆ, ಪರಿಸರ  ರಕ್ಷಣೆ, ಕೇಂದ್ರ ಕೀಟನಾಶಕ ಮಂಡಳಿಗೆ ವಿಷೇಶಾಧಿಕಾರ, ವರ್ಷ ವರ್ಷ  ನವೀಕರಣ, ರಾಜ್ಯ ಸರಕಾರಗಳ ಸಹಕಾರ, ಪ್ರಯೋಗಾಲಯ, ಡ್ರೋನ್ ಮುಂತಾದವುಗಳ ಮೂಲಕ ಸಿಂಪರಣೆ ಕಾನುನು ಬಾಹಿರ,  ತಯಾರಕರಿಗೆ  ಪ್ರಚಾರ  ಇತ್ಯಾದಿ ನಿಬಂಧನೆಗಳು ಮುಂತಾದವು ಹೊಸ 2020  ಕೀಟನಾಶಕ ನಿರ್ವಹಣ ಮಸೂದೆ   ಯಲ್ಲಿ ಇದೆ.
  •    ಕೀಟ ನಾಶಕ ನಿರ್ವಾಹಣಾ ಮಸೂದೆ ಇರಲಿ-  ಇದು ಅಗತ್ಯ ಸಹ.
  • ಆದರೆ ಇದರಿಂದ ನಮ್ಮ ದೇಶದಲ್ಲಿ ಕೀಟನಾಶಕಗಳ ಸರಬರಾಜು ಮಾರಾಟ ಮತ್ತು ಬಳಕೆ ಮೇಲೆ  ಸರಕಾರಕ್ಕೆ ಯಾವ ಹಿಡಿತವನ್ನೂ ಸಾಧಿಸಲಿಕ್ಕೆ ಆಗುವುದಿಲ್ಲ.
  • ನಮ್ಮ ವ್ಯವಸ್ಥೆಯೊಳಗೆ  ತಪ್ಪು ಮಾಡಿದವನಿಗೆ ತಪ್ಪಿಸಿಕೊಳ್ಳಲು ಸಾಕಷ್ಟು ಕಿಂಡಿ ದ್ವಾರಗಳು ಇರುತ್ತವೆ ಎಂಬುದು ಎಂಥಹ ಅವಿದ್ಯಾವಂತನಿಗೂ ಗೊತ್ತಾಗಿರುವ ಸತ್ಯ.
ರೈತರ ಹೊಲದಲ್ಲಿ ಅಲ್ಲಲ್ಲಿ ಬಿದ್ದಿರುವ ಕೀಟನಾಶಕ ಬಾಟಲಿಗಳು

ಮಾಡಬೇಕಾದ್ದು ಏನು?

  • ನಿಜವಾಗಿ ಸರಕಾರ ಮಾಡಬೇಕಾದ್ದು, ಮೂಲದ ರಿಪೇರಿ ಅಥವಾ ಮರು ನಿರ್ಮಾಣ.
  • ನಮ್ಮಲ್ಲಿ ಯಾವುದೋ ಬಹುರಾಷ್ಟ್ರೀಯ ಕಂಪೆನಿ, ಅಥವಾ ದೇಶೀಯ  ದೈತ್ಯ ಕಂಪೆನಿಗಳು ಕೃಷಿ ರಾಸಾಯನಿಕಗಳ ಉತ್ಪಾದನೆ  ಮಾಡುತ್ತಿದೆ.
  • ಇದನ್ನು ದಾಸ್ತಾನುಗಾರರು, ಮತ್ತು ಮಾರಾಟಗರಾರ ಮೂಲಕ ರೈತರಿಗೆ  ತಲುಪಿಸುತ್ತಿದೆ.
  • ಇದರಲ್ಲಿ ಮಧ್ಯವರ್ತಿಗಳಾಗಿ ಸರಕಾರೀ ವ್ಯವಸ್ಥೆಯಾದ ಕೃಷಿ ವಿಜ್ಞಾನಿಗಳು, ಅಭಿವೃದ್ದಿ ಇಲಾಖೆಗಳು ಇದ್ದು ಇವರು ಯಾವ ಬೆಳೆಗೆ ಯಾವುದು ಸೂಕ್ತ ಎಂದು ಶಿಫಾರಸು ಮಾಡುತ್ತಾರೆ.
  • ಇವರ ಶಿಪಾರಸಿನ ಮೇಲೆ ಅಥವಾ ಇವರ ಅಂಕಿತದ ಮೇಲೆ  ಈ ಕೀಟನಾಶಕ ಮಾರುಕಟ್ಟೆಯಲ್ಲಿ ಚೆಲ್ಲಾಟವಾಡುತ್ತದೆ.
ಬತ್ತ- ಅತ್ಯಧಿಕ ಕೀಟನಾಶಕ ಬಳಕೆಯಾಗುವ ಬೆಳೆ. ಎಲ್ಲವೂ ಅಸುರಕ್ಷಿತ ವಿಧಾನ
  • ನಮ್ಮಲ್ಲಿ ಸರಕಾರ ನಿಯೋಜಿತ ಯಾವ ಅಧಿಕೃತ ತಜ್ಞನೂ ಸಹ ಇಂಥ ಬ್ರಾಂಡ್ ನ ಕೀಟನಾಶಕವನ್ನೇ ಬಳಕೆ ಮಾಡಿ ಎಂದು ಹೇಳುವಂತಿಲ್ಲ.
  • ಅವರು ಏನಿದ್ದರೂ ಇಂಥ ರಾಸಾಯನಿಕ ಅಂಶಗಳು ಉಳ್ಳ ಕೀಟನಾಶಕ ಬಳಕೆ ಮಾಡಿ  ಎನ್ನುತ್ತಾರೆ.
  • ಇದರ ಆಧಾರದ ಮೇಲೆ  ಒಂದು ರಾಸಾಯನಿಕ ಸಂಯೋಜನೆಯ ನೂರಾರು ಕೀಟ- ರೋಗ ನಾಶಕಗಳು ಮಾರುಕಟ್ಟೆಯಲ್ಲಿ ವೆ.
  •   ನನ್ನದು ಒಳ್ಳೆಯದು, ನನ್ನದು ಒಳ್ಳೆಯದು ಎಂದು ಮಾರಲ್ಪಡುತ್ತವೆ.
  • ನಮ್ಮ ದೇಶದ ರೈತ ತನ್ನ ವೃತ್ತಿಯಲ್ಲಿ ವೈಜ್ಞಾನಿಕ ತಿಳುವಳಿಕೆಯನ್ನು ಸ್ವಲ್ಪವೂ ಹೊಂದಿರದವನಿಗೆ ಇದೆಲ್ಲಾ ಎಲ್ಲಿ ಅರ್ಥ ಆಗಬೇಕು.
  • ಅವನು  ಮಾರಾಟಗಾರರು ಕೊಡುವುದನ್ನು  ಬಳಕೆ ಮಾಡುತ್ತಾನೆ.
  • ಮಾರಾಟ  ಮಾಡುವವನು ತನಗೆ ಯಾವುದರಲ್ಲಿ ಕಮಿಶನ್ ಹೆಚ್ಚು ಇದೆ, ಯಾರು ಫಾರೀನ್ ಟೂರ್ ವ್ಯವಸ್ಥೆ ಮಾಡುತ್ತಾರೆ ಅವರ  ಬ್ರಾಂಡ್ ಅನ್ನು  ಹೆಚ್ಚು ಮೂವ್ ಮಾಡುತ್ತಾರೆ.
  •   ಇದನ್ನು ಸರಿಪಡಿಸುವ ಕೆಲಸ ಆಗದೆ ವಿನಹ ಯಾವ ನಿಬಂಧನೆಗಳೂ ಸಹ ಪ್ರಯೋಜನಕ್ಕೆ  ಬರಲಾರದು.

ಹೇಗೆ  ಸರಿಪಡಿಸಬಹುದು:

  • ಭಾರತ ದೇಶದಲ್ಲಿ ಒಟ್ಟಾರೆ  ಕೀಟನಾಶಕ್ದ ವ್ಯವಹಾರ 20 ಸಾವಿರ ಕೊಟಿಗೂ ಹೆಚ್ಚು.
  • ಭಾತರ ದೇಶದ ಪ್ರಪಂಚದಲ್ಲಿ ಕೀಟನಾಶಕ ಉಪಯೋಗದಲ್ಲಿ ನಾಲ್ಕನೇ  ಸ್ಥಾನದಲ್ಲಿದೆ.
  • ಇಷ್ಟೊಂದು ಸ್ದೊಡ್ದ ಪ್ರಮಾಣದ ವ್ಯವಹಾರವನ್ನು ರಾಷ್ಟ್ರೀಕರಣ ಗೊಳಿಸಿ ಸರಕಾರದ ಇಲಾಖೆಗಳ ಮೂಲಕವೇ  ರೈತರಿಗೆ ಕೀಟನಾಶಕಗಳು ಅಭ್ಯವಾಗುವಂತಾದರೆ  ಸರಕಾರದ ಖಜಾನೆಗೆ ಏನಿಲ್ಲವೆಂದರೂ ಇಷ್ಟೊಂದು ದೊಡ್ದ ಮೊತ್ತದಲ್ಲಿ 25 %ಲಾಭವಾಗಬಲ್ಲುದು.
  • ಇದು ಇಲಾಖೆಯನ್ನು ಅದರದ್ದೇ ಕಾಲಿನಲ್ಲಿ ನಿಂತು ನಡೆಸುವಷ್ಟು  ದೊಡ್ಡ ಮೊತ್ತವಾಗಿರುವ ಕಾರಣ ಸರಕಾರ ಇದರ ಬಗ್ಗೆ  ಗಮನಹರಿಸುವುದು ಸೂಕ್ತ.
ರೈತರ ಹೊಲದಲ್ಲಿ ಗುಜುರಿಗಾಗಿ ಶೇಖರಿಸಿಟ್ಟ ಕೀಟನಾಶಕ ಬಾಟಲಿಗಳು

ತಜ್ಞರೇ ಕೊಟ್ಟರೆ ಅಪಾಯ ಇಲ್ಲ:

  • ನಮ್ಮ ದೇಶದಲ್ಲಿ ಕೀಟನಾಶಕಗಳನ್ನು ಮನಬಂದಂತೆ ಬಳಕೆ ಮಾಡುವುದು ಮತ್ತು ಅದರಿಂದ ಅನಾಹುತಗಳಾಗುವುದು ಬಹಳ ಹಿಂದಿನಿಂದಲೂ ನಡೆದುಬಂದ ವಸ್ತು ಸ್ಥಿತಿ.
  • ಬೆಳೆ ಸಂರಕ್ಷಣೆಗೂ ಕೀಟನಾಶಕದ ಬಳಕೆ ಆಗುತ್ತದೆ.
  • ಪ್ರಾಣ ತೆಗೆದುಕೊಳ್ಳಲೂ ಸಹ ಇದನ್ನು ಉಪಯೋಗಿಸುವುದೇ ಹೆಚ್ಚು.
  • ಭತ್ತ 26-28% – ಹತ್ತಿ 18-20% ಬೆಳೆಗೆ ಅತ್ಯಧಿಕ ಪ್ರಮಾಣದಲ್ಲಿ ಕೀಟನಾಶಕ ಬಳಕೆಯಾಗುವುದು.
  • ಈ ಎಲ್ಲಾ ರೈತರೂ ಅಂಗಡಿಯವನ ಶಿಫಾರಸು ಅಥವಾ ಗೊಬ್ಬರ   ಕೊಡುವವನ ಶಿಪಾರಸನ್ನೇ ಅನುಸರಿಸುವವರು.
  • 90% ರೈತರು ಸಾಲರೂಪದಲ್ಲಿ ಇದನ್ನು ಖರೀದಿ ಮಾಡುವವರು.
  • ಇವರಿಗೆ  ಕಾನೂನಿನ ಆಸರೆ ಪಡೆಯುವುದು, ಅಥವಾ ಯಾರ ಗಮನಕ್ಕೆ ತರುವುದಾಗಲೀ ಮಾಡಲು ಯಾವುದೇ  ದೈರ್ಯ ಇರುವುದಿಲ್ಲ.
  • ಬಳಕೆದಾರರಿಂದ ಮಾಹಿತಿ ಪಡೆಯದೆ ಯಾರೂ ಏನೂ ಮಾಡಲು ಸಾಧ್ಯವಿಲ್ಲದ  ಕಾರಣ ಈ  ನಿಬಂಧನೆಗಳು  ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗದು.
  • ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಥವಾ ಇನ್ನಿತರ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಎಲ್ಲಾ ನಮೂನೆಯ ತಜ್ಞರೂ  ಇರುತ್ತಾರೆ.
  • ಇವರಿಗೆ ಎಲ್ಲದರ ಒಳ ಹೊರಗು ಗೊತ್ತಿರುತ್ತದೆ. ಇವರ ಮೂಲಕ ಬೇಕಾದಲ್ಲಿಗೆ  ಬೇಕಾದಷ್ಟೇ ಕೀಟ- ರೋಗ- ಕಳೆ ನಾಶಕ ದೊರೆಯುವಂತಾದರೆ ಎಲ್ಲಾ ಸಮಸ್ಯೆಗಳೂ ಮುಗಿದಂತೆ.

ಇದನ್ನು ಪ್ರಜ್ಞಾವಂತರಾದ ನಮ್ಮ ರೈತರು ಸರಕಾರದ ಗಮನಕ್ಕೆ ತರಬೇಕು. ರೈತ ಕಳಕಳಿಯುಳ್ಳ ಸರಕಾರದ ಮಂತ್ರಿಗಳಿಗೆ ಇದು ತಲುಪಬೇಕು. ಆಗ ನಮ್ಮ ಮತ್ತು ಪರಿಸರದ ರಕ್ಷಣೆ ಸಾಧ್ಯ.

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
 

One thought on “ಇಲಾಖೆಗಳ ಮುಖಾಂತರ ಕೀಟನಾಶಕ ಮಾರಾಟ!.

Leave a Reply

Your email address will not be published. Required fields are marked *

error: Content is protected !!