ಈ ಹಣ್ಣು ತಿಂದರೆ ಆರೋಗ್ಯ ನಿಮ್ಮ ಹತೋಟಿಯಲ್ಲಿರುತ್ತದೆ.

ಪ್ಯಾಶನ್ ಪ್ರುಟ್ Passiflora ಎಂಬ ಹಣ್ಣನ್ನು ಬಹಳ ಹಿಂದಿನಿಂದಲೂ ತಜ್ಞರು ಬಹಳ ಆರೋಗ್ಯಕರ ಹಣ್ಣು ಎಂದು ಹೇಳುತ್ತಾ ಬಂದಿದ್ದಾರೆ. ಇದನ್ನು ಮೈನರ್ ಪ್ರೂಟ್  ವಿಭಾಗದಲ್ಲಿ ಸೇರಿಸಿ ಅದರ ಆರೋಗ್ಯ ಗುಣ, ಬೆಳೆ ಕ್ರಮ, ಮೌಲ್ಯ ವರ್ಧನೆ ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆದಿದೆ. ಬೆಂಗಳೂರಿನ ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ.

 • ಇಲ್ಲಿ ಅರ್ಕಾ ಕಾವೇರಿ ಎಂಬ ನೇರಳೆ ಬಣ್ಣದ  ಹಣ್ಣಿನ ತಳಿಯನ್ನೂ ಅಭಿವೃದಿ ಮಾಡಲಾಗಿದೆ.
 • ಈ ಹಣ್ಣು  ಬೆಳೆಸಲು ಯಾವುದೇ ಕಷ್ಟವಿಲ್ಲ.
 • ಧೀರ್ಘಾವಧಿಯ ತನಕ  ವರ್ಷ ಪೂರ್ತಿ ಹಣ್ಣುಗಳನ್ನು ಕೊಡುತ್ತಿರುತ್ತದೆ.
 • ಪಟ್ಟಣಗಳಲ್ಲಿ  ಇದಕ್ಕೆ ಭಾರೀ ಬೇಡಿಕೆ ಇದ್ದು ಉತ್ತಮ ಬೆಲೆಯೂ ಇದೆ.
 • ಭವಿಷ್ಯದಲ್ಲಿ ಆಹಾರ ಈ ಹಣ್ಣಿಗೆ ಭಾರೀ ಮಹತ್ವವೂ ಬರಲಿದೆ.

ಇದು ಉಷ್ಣ ವಲಯದ ಹಣ್ಣು. ಭಾರತವೂ ಸೇರಿದಂತೆ ದಕ್ಷಿಣ ಅಮೇರಿಕಾ , ಆಸ್ತ್ರೇಲಿಯಾ ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಬೆಳೆಯುತ್ತದೆ. ಇದನ್ನು ಜ್ಯೂಸ್ ಉದ್ದೇಶಕ್ಕೆ ಬಳಸಲಾಗುತ್ತಿದ್ದು, ಹುಳಿ ರುಚಿಯ ಇದು ವಿಶಿಷ್ಟ ಸುವಾಸನೆಯನ್ನು ಒಳಗೊಂಡಿದೆ.

 • ದುಂಡಗೆ ಆಕಾರದ ಈ ಹಣ್ಣಿನ ಒಳಗೆ ರಸ ಭರಿತ ತಿರುಳು ಇರುತ್ತದೆ.
 • ತಿರುಳಿನ ಜೊತೆಗೆ ಬೀಜವೂ ಸೇರಿರುತ್ತದೆ.
 • ಸಣ್ಣ ಗಾತ್ರದ ಬೀಜಗಳು, ಬೀಜ ಸಮೇತ ಹಸಿ ಕೊಳಿ ಮೊಟ್ಟೆ ಕುಡಿದಂತೆ ರಸವನ್ನು ಕುಡಿಯಬಹುದು.
 • ಅದನ್ನು ಜ್ಯೂಸ್ ಸಹ ಮಾಡಬಹುದು.
 • ಈ ಹಣ್ಣಿನಲ್ಲಿ  ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ
 • ಅಮೂಲ್ಯ ಆಂಟಿ ಆಕ್ಸಿಡೆಂಟ್ ಇರುವ ಕಾರಣ ಜಗತ್ತಿನಾದ್ಯಂತ ಇದಕ್ಕೆ ಭಾರೀ ಮಹತ್ವ ಬಂದಿದೆ.

ಪೋಶಕಾಂಶಗಳ  ಖನಿ:

 • ಅತ್ಯದಿಕ ಪ್ರಮಾಣದಲ್ಲಿ ವಿಟಮಿನ್  ಎ ಇರುವ ಹಣ್ಣುಗಳಲ್ಲಿ ಇದು ಒಂದು.ವಿಟಮಿನ್ ಎ ಸತ್ವವು ನಮ್ಮ ದೇಹಕ್ಕೆ ಚರ್ಮದ ರಕ್ಷಣೆಗೆ, ಕಣ್ಣು ದೃಷ್ಟಿಗೆ  ಮತ್ತು ದೇಹಾಂತರ್ಗತ ಶಕ್ತಿಯನ್ನು ಹೆಚ್ಚಿಸಲು ಅಗತ್ಯ.
 • ಇದರಲ್ಲಿರುವ ಪೋಷಕಗಳು: ವಿಟಮಿನ್ ಎ,229 IU , ಪೊಟ್ಯಾಶಿಯಂ 63 ಮಿಲಿ ಗ್ರಾಂ, ಮೆಗ್ನೀಶಿಯಂ  5 ಮಿಲಿ ಗ್ರಾಂ, 5.4 ಮಿಲಿ ಗ್ರಾಂ ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನ ಅಂಶ ಒಳಗೊಂಡಿದೆ.
 • ಆಂಟಿ ಆಕ್ಸಿಡೆಂಟ್ ಗಳು ಇದರಲ್ಲಿ ಹೇರಳವಾಗಿರುತ್ತದೆ.
 • ಬಹುತೇಕ ಆಂಟಿ ಆಕ್ಸಿಡೆಂಟ್ ಸಿದ ಉತ್ಪನ್ನ ತಯಾರಕರು ಇದರ ಹಣ್ಣನ್ನು ಬಳಕೆ ಮಾಡಿರುತ್ತಾರೆ.
 • ದೇಹದಲ್ಲಿ ಅನವಶ್ಯಕ ವಿಷಾಂಶಗಳನ್ನು ಹೊರ ಹಾಕಿ, ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುತ್ತದೆ.
 • ಜೀವಕೋಶಗಳ  ಶಕ್ತಿ ಹೆಚ್ಚಿಸುತ್ತದೆ. ಆಯಾಸ ಕಡಿಮೆ ಮಾಡುತ್ತದೆ.
 • ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, ಹೃದಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
 • ಇದರಲ್ಲಿ ನಾರಿನ ಅಂಶ ಉತ್ತಮವಾಗಿದೆ.
 • ಇದು ಸಕ್ಕರೆ ಖಾಯಿಲೆಯನ್ನು ದೂರ ಮಾಡುತ್ತದೆ.
 • ಇದನ್ನು ತಿಂದ ತಕ್ಷಣವೇ  ಸಕ್ಕರೆ ಖಾಯಿಲೆ ಉಳ್ಳವರ ರಕ್ತದ ಸಕ್ಕೆರೆ ಪ್ರಮಾಣ ಕಡಿಮೆಯಗುತ್ತದೆ. (ಬೀಜ ಸಮೇತ ತಿನ್ನಬೇಕು)

ಬಳಕೆ ಹೇಗೆ:

Eating part of Fashion fruit

 • ಹಣ್ಣು ಗೋಲಾಕಾರದಲ್ಲಿರುತ್ತದೆ. ಸುಲಭವಾಗಿ ಒಡೆದು ನೇರವಾಗಿ ಒಳಗಿನ ಬೀಜದ ಜೊತೆಗೆ ಇರುವ ಲೋಳೆಯನ್ನು     ಕುಡಿಯಬಹುದು.
 • ಇಲ್ಲವೇ ಈ ಬೀಜ ಸಮೇತ  ಒಂದು ಜಾಲರಿಗೆ ಹಾಕಿ, ಸೋಸಿ ರಸವನ್ನು ಮಾತ್ರ ಸಂಗ್ರಹಿಸಬಹುದು.
 • ಇದನ್ನು ರಕ್ಷಕ ಬಳಸಿ ಹೆಚ್ಚು ಸಮಯದ ತನಕ ಹೊರ ತಂಪು ವಾತಾವರಣದಲ್ಲಿ ಸಂಗ್ರಹಿಸಬಹುದು.
 • ಪ್ರಿಡ್ಜ್ ನಲ್ಲಿ ಇಟ್ಟರೆ ಹೆಚ್ಚು ರಕ್ಷಕಗಳಿಲ್ಲದೆ ಬೇಕಾದಾಗ ಬಳಕೆ ಮಾಡಬಹುದು.

ಸಸ್ಯಾಭಿವೃದ್ದಿ:

Pink colour fruit

 • ಇದು ಒಂದು ಬಳ್ಳಿ ಸಸ್ಯ. ಯಾವುದಾದರೂ ಮರಕ್ಕೆ ಹಬ್ಬುತ್ತದೆ. ಚಪ್ಪರದಲ್ಲೂ ಬೆಳೆಸಬಹುದು.
 • ಮನೆ ಛಾವಣಿಗೂ ಹಬ್ಬಿಸಿ ಬೆಳೆಸಬಹುದು. ಇದು ಬೀಜದಿಂದ ಸಸ್ಯಾಭಿವೃದ್ದಿಯಾಗುತ್ತದೆ.
 • ಬಳ್ಳಿ ತುಂಡುಗಳನ್ನೂ ಸಸ್ಯಾಭಿವೃದ್ದಿ ಮಾಡಬಹುದು.
 • ಇದಕ್ಕೆ ಕಸಿ ವಿಧಾನದ ಅವಶ್ಯಕತೆ ಇರುವುದಿಲ್ಲ.
 • ನೆಟ್ಟು ಎರಡನೇ ವರ್ಷಕ್ಕೇ ಫಲ ಕೊಡಲು ಪ್ರಾರಂಭವಾಗುತ್ತದೆ.
 • ಇದರ ಹೂವು ಬಹಳ ಆಕರ್ಷಕವಾಗಿದ್ದು, ಗಡಿಯಾರದ ತರಹ ಇರುತ್ತದೆ.
 •   ಗಿಡ ಬಹಳ ವರ್ಷದ ತನಕ ಬದುಕಿರುತ್ತದೆ.
 • ಹಬ್ಬಲು ಅವಕಾಶ ಸಿಕ್ಕಿದಷ್ಟೂ ಹೆಚ್ಚು ಹೆಚ್ಚು ಹಣ್ಣುಗಳನ್ನು ಕೊಡುತ್ತದೆ.

ತಳಿಗಳು:

 Fashion fruit grown on roof

 • ಪ್ಯಾಶನ್ ಪ್ರೂಟ್ ನಲ್ಲಿ ಹೊರ ತೊಗಟೆಯ ಬಣ್ಣಕ್ಕೆ ಅನುಗುಣವಾಗಿ,  ಗಾತ್ರ ಹೊಂದಿ ಮೂರು ವಿಧಗಳು ಇವೆ.
 • ಒಂದು ಹಳದಿ ಬಣ್ಣದ ಹೊರ ತೊಗಟೆ. ಮತ್ತೊಂದು ಕೆನ್ನೆತರು ಬಣ್ನದ ಹೊರ ತೊಗಟೆ.   ಇನ್ನೊಂದು  ದೊಡ್ದದು (Giant granadilla)
 • ಒಂದೇ ರೀತಿಯ ಹನ್ಣಿನ ತಿರುಳು.ಒಂದೇ ಸುವಾಸನೆ. ರುಚಿ ಸಹ ಏಕ ಪ್ರಕಾರವಾಗಿರುತ್ತದೆ.
 • ಕೆನ್ನೆತ್ತರು ಬಣ್ಣದ ತಳಿ ಹೆಚ್ಚು ಕಾಯಿ ಬಿಡುತ್ತದೆ ಎನ್ನುತ್ತಾರೆ.
 • ಅದು ಪೂರ್ಣ ಸತ್ಯವಲ್ಲ. ಎರಡೂ ಬಗೆಯವುಗಳೂ ಉತ್ತಮವಾಗಿ ಕಾಯಿ ಬಿಡುತ್ತದೆ.
 • ಮಾರಾಟಕ್ಕೆ ಆಕರ್ಷಕ ಬಣ್ಣ ಇರುವ ಕಾರಣ ಕೆಂಪು ಬಣ್ಣದ ಕಾಯಿಗೆ ಹೆಚ್ಚಿನ ಬೇಡಿಕೆ.

ಇದನ್ನು ಎಲ್ಲರೂ ಬೆಳೆಸಬೇಕು. ಸ್ವಲ್ಪ ನೀರಾಶ್ರಯ ಇರುವ ಮಳೆಗಾಲದಲ್ಲಿ ನೀರು ನಿಲ್ಲದ ಜಾಗದಲ್ಲಿ ಬಳ್ಳಿ ನೆಟ್ಟರೆ ಕೊಳ್ಳುವವರು ಇದ್ದರೆ ಮಾರಾಟ ಮಾಡಬಹುದು. ತಮಗೆ ಬೇಕಾದ ಹಣ್ಣುಗಳನ್ನು ತಮ್ಮ ಹೊಲದಲ್ಲೇ ಪಡೆಯಬಹುದು. ಮಿಕ್ಕವುಗಳು ಮಂಗ ಮುಂತಾದವುಗಳಿಗೆ ಆಹಾರವಾಗಿ ಬೇರೆ ಬೆಳೆಗಳಿಗೆ ಉಪಟಳ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!