ಇದರ ಒಂದು ತುಂಡು ಚೂರನ್ನು ತಂದು ನಿಮ್ಮ ಮನೆಯ ಅಥವಾ ಹೊಲದ ಗಿಡದ ಮೇಲೆ ಎಲ್ಲಿಯಾದರೂ ಹಾಕಿ. ಅದು ಬದುಕುತ್ತದೆ. ಇದಕ್ಕೆ ಎಲೆ ಇಲ್ಲ. ಬೇರೂ ಇಲ್ಲ. ಬದುಕಲು ಮಣ್ಣೂ ಬೇಕಾಗಿಲ್ಲ. ಎಲೆ , ಕಾಂಡ ಎಲ್ಲೆಲ್ಲೂ ಬದುಕುತ್ತದೆ. ಕಡಿದು ತೆಗೆದು ಸುಟ್ಟರೆ ಸಾಯಬಹುದು. ಇಲ್ಲವಾದರೆ ಮತ್ತೆ ಅಲ್ಲೇ ಹುಟ್ಟಿಕೊಳ್ಳುತ್ತದೆ. ಇದು ಒಂದು ಪರಾವಲಂಭಿ ಸಸ್ಯವಾಗಿದ್ದು, ಇದನ್ನು ಬದನಿಕೆ ಎನ್ನುತ್ತಾರೆ.
- ಕೆಲವರು ಈ ಬಳ್ಳಿಯನ್ನು ಔಷಧೀಯ ಬಳ್ಳಿ ಎನ್ನುತ್ತಾರೆ.
- ಆದರೆ ಇದು ಔಷಧೀಯ ಬಳ್ಳಿ ಅಲ್ಲ. ಬದಲಿಗೆ ಇದು ಒಂದು ಬದನಿಕೆ ಸಸ್ಯ.
- ಕೆಲವು ಮೂಲಿಕಾ ತಜ್ಞರು ಇದರಲ್ಲಿ ಔಷಧೀಯ ಗುಣ ಪತ್ತೆ ಮಾಡಿರಬಹುದು.
- ಆದರೆ ಸಸ್ಯ ಸಾಂರಾಜ್ಯದಲ್ಲಿ ಇದು ಇನ್ನೊಂದು ಸಸ್ಯದಲ್ಲಿ ಆಶ್ರಯ ಪಡೆದು ಅದನ್ನು ಕೊಲ್ಲುವ ಬಳ್ಳಿ.
- ಇದು ಎಲೆಗಳಿಲ್ಲದ ಸಸ್ಯವಾಗಿದು, ಯಾವುದೇ ಕೆಳಸ್ಥರದ ಸಸ್ಯದ ಮೇಲೆ ಇದರ ಒಂದು ತುಂಡು ಬಿದ್ದರೂ ಅದು ಬದುಕಿಕೊಳ್ಳಿತ್ತದೆ.
- ಕ್ರಮೇಣ ಅದಕ್ಕೆ ಆಶ್ರಯ ಕೊಟ್ಟ ಸಸ್ಯವನ್ನು ಕೊಲ್ಲುತ್ತದೆ.
ಆಹಾರವನ್ನು ತಯಾರಿಸದೆ ಯಾರೋ ತಯಾರಿಸಿದ ಆಹಾರವನ್ನು ಕಬಳಿಸಿ ಬದುಕುವ ಜೀವಿಗಳಿಗೆ ಪರೋಪ ಜೀವಿಗಳು ಎನ್ನುತ್ತಾರೆ. ಸಸ್ಯಗಳಲ್ಲಿ ಇಂತಹ ಪರಾವಲಂಭಿ ಸಸ್ಯಗಳಿದ್ದು, ಅವುಗಳನ್ನು ಬದನಿಕೆಗಳು ಎಂದು ಕರೆಯುತ್ತಾರೆ. ಬದನಿಕೆಗಳಲ್ಲಿ ಬೇರೆ ಬೇರೆ ವರ್ಗಗಳಿದ್ದು, ಇತ್ತೀಚಿನ ದಿನಗಳಲ್ಲಿ ಕಸ್ಕುಟಾ ಎಂಬ ಬದನಿಕೆ ಬಳ್ಳಿ ಅತಿಯಾಗಿ ಹಬ್ಬುತ್ತಿದೆ.
ಸಸ್ಯದ ಬಗ್ಗೆ ಮಾಹಿತಿ:
- Cuscuta sp ಎಂಬುದು ಈ ಬಳ್ಳಿ ಯ ಹೆಸರು.
- ಇದು ಯಾವುದಾದರೂ ಸಸ್ಯದ ಮೇಲೆ ಬೆಳೆದು ಆ ಸಸ್ಯದ ಗೆಲ್ಲು, ಕಾಂಡದಿಂದ ಅದರ ಬಳಕೆಗೆ ಇರುವ ಆಹಾರವನ್ನು ಕದ್ದು ತಾನು ತಿಂದು ಬದುಕಿ ಅದನ್ನು ಸಾಯಿಸುತ್ತದೆ,
- ಹೂವಿನ ಗಿಡ, ನೆಲದ ಬೆಳೆಗಳು, ಬೇಲಿ ಸಸ್ಯಗಳಲ್ಲಿ ಈಗ ಹೆಚ್ಚಾಗಿ ಕಂಡು ಬರಲಾರಂಭಿಸಿದೆ.
- ಹಳದಿ ಬಣ್ಣದ ನೂಲಿನೆಳೆಯ ತರಹದ ದೇಹವುಳ್ಳ ಈ ಬಳ್ಳಿಗೆ ಎಲೆ ಎಂಬುದೇ ಇಲ್ಲ.
- ಹೂ ಬಿಡುತ್ತದೆ. ಕಾಯಿಯಾಗುತ್ತದೆ. ಕಾಯಿಯಲ್ಲಿ ಬೀಜಗಳಿರುತ್ತವೆ.
- ಆ ಬೀಜಗಳ ಮೂಲಕ ಸಸ್ಯಾಭಿವೃದ್ದಿಯಾಗುತ್ತದೆ. ಸಸ್ಯಾಭಿವೃದ್ದಿಗೆ ಬೀಜಗಳೇ ಬೇಕಾಗಿಲ್ಲ.
- ಬಳ್ಳಿಯ ಒಂದು ತುಂಡು ಮತ್ತೊಂದು ಸಸ್ಯದ ಮೇಲೆ ಬಿದ್ದರೂ ಸಹ ಅದು ಬದುಕಿ ಬೆಳೆಯುತ್ತದೆ.
- ಇದರಲ್ಲಿ ಕೆಂಪು ಬಣ್ಣದ್ದೂ ಇದೆ.
ನಿಯಂತ್ರಣ:
- ಇದನ್ನು ತೆಗೆದು ಸುಟ್ಟು ನಾಶ ಮಾಡಬಹುದು. ಗ್ಲೈಪೋಸೆಟ್ ಕಳೆ ನಾಶಕವನ್ನು ಹೊಡೆಯುವುದರಿಂದ ಸಾಯುತ್ತದೆ.
- ಹಾಗೆಂದು ಬಿದ್ದ ಬೀಜಗಳು ಮತ್ತೆ ಹುಟ್ಟುತ್ತವೆ.
- ಸಣ್ಣ ತುಂಡೂ ಸಹ ಉಳಿಯದಂತೆ ತೆಗೆದು ಸುಡಬೇಕು.
- ಸಾಮಾನ್ಯವಾಗಿ ಜನವರಿ ಫೆಬ್ರವರಿಯಲ್ಲಿ ಹೂವಾಗುತ್ತದೆ.
- ಹೂವು ಆಗುವ ಸಮಯದಲ್ಲೇ ಕಳೆನಾಶಕ ಸಿಂಪಡಿಸಿ ನಾಶಮಾಡಬೇಕು.
- ಬೀಜ ಬೆಳೆಯಲು ಬಿಡಬಾರದು.
- ಇದನ್ನು ಹಟ್ಟಿ ಕೊಟ್ಟಿಗೆಗೆ ಹಾಕಬಾರದು.
- ಕಾಫೀ ತೋಟಗಳಲ್ಲಿ ಇದರ ಹಾವಳಿ ಹೆಚ್ಚು ಇದ್ದುದು ಈಗ ಈ ಪ್ರದೇಶಗಳಿಗೂ ವ್ಯಾಪಿಸಲಾರಂಭಿಸಿದೆ.
ಇದನ್ನು ಕ್ಷುಲ್ಲಕ ಎಂದು ತಾತ್ಸಾರ ಮಾಡಬೇಡಿ. ಮುಂದೆ ಇದು ನಮ್ಮ ಬೆಳೆಗಳಿಗೂ ತೊಂದರೆ ಮಾಡಬಹುದು.