ಕಾಫಿ ಬೆಳೆಗೆ ಇದು ಅತೀ ದೊಡ್ಡ ಸಮಸ್ಯೆ.

by | Mar 13, 2020 | Coffee (ಕಾಫೀ), Plant Protection (ಸಸ್ಯ ಸಂರಕ್ಷಣೆ) | 0 comments

ಎಲೆಗಳ ಮೇಲೆ ತಾಮ್ರದ  ಕಲೆಗಳು ಕಂಡು ಬಂದು ಅದು ಒಣಗಿ ಎಲೆಗಳು ಉದುರಿ ಸಸ್ಯದಲ್ಲಿ ಬರೇ ಕಡ್ಡಿ ತರಹದ  ಗೆಲ್ಲುಗಳು ಮಾತ್ರ ಉಳಿಯುವ ಈ ರೋಗ ಇತ್ತೀಚೆಗೆ ಕಾಫೀ ಬೆಳೆಯಲಾಗುವ ಪ್ರದೇಶಗಳಲ್ಲಿ ವ್ಯಾಪಕವಾಗುತ್ತಿದೆ. ಇದು ಬೆಳೆಗಾರರಲ್ಲಿ ಅತಂಕವನ್ನು ಉಂಟುಮಾಡಿದೆ..

 • ಎಲೆ  ತುಕ್ಕು ರೋಗ , ಅರಶಿನ ಚುಕ್ಕೆ ಅಥವಾ ಎಲೆ ಚುಕ್ಕೆ ರೋಗ, leaf rust                 ಎಂಬುದು  ಇದರ  ಹೆಸ ರು.
 •  ಈ ರೋಗ ಆರ್ಥಿಕವಾಗಿ ಬೆಳೆಗಾರರಿಗೆ ಹೆಚ್ಚಿನ ಹಾನಿಯನ್ನು ತರುವಂತ ದ್ದು.
 • ಇದರಿಂದ ಶೇ. 70 ಕೂ ಹೆಚ್ಚು ಬೆಳೆ ನಷ್ಟ ಉಂಟಾಗುತ್ತದೆ.
 • ವಿದೇಶಗಳಲ್ಲಿ ಇದು ಬಾರೀ ಹಾನಿ ಮಾಡಿದ ವರದಿ  ಇದೆ.

 • ನಮ್ಮ ದೇಶಕ್ಕೆ  ಇದು ಸುಮಾರು  200  ವರ್ಷಕ್ಕೆ  ಹಿಂದೆ ಬಂದು ಅಲ್ಲಲ್ಲಿ ಸಾಕಷ್ಟು ಹಾನಿ ಮಾಡಿದೆ.

ಎಲ್ಲಿಂದ ಬಂತು:

 • ಈ ರೋಗ ಮೊತ್ತಮೊದಲು ಆಫ್ರಿಕಾ ದೇಶದಲ್ಲಿ,ನಂತರ ಅದು ಶ್ರೀಲಂಕಾ ಆ ನಂತರ ಬ್ರೆಝಿಲ್ ನಲ್ಲೂ ಕಂಡು ಬಂತು. ಇದು  ಹಾಗೆಯೇ ಭಾರತಕ್ಕೂ ಕಾಲಿಟ್ಟಿತು.
 • ಪ್ರಪಂಚದ ಬೇರೆ ಬೇರೆ ವರ್ಗದ ಕೀಟ ಬಾಧೆಗಳಲ್ಲಿ ಈ ರೋಗವನ್ನು ಪ್ರಮುಖ ಏಳನೇ ರೋಗವೆಂದು ಪರಿಗಣಿಸಲಾಗಿದೆ.
 • ಇದರ  ತೀವ್ರತೆ ಹೆಚ್ಚಾದರೆ ಇಡೀ ಕಾಫೀ ತೋಟವೇ ಹಾಳಾಗುವ ಸಾಧ್ಯತೆ ಇದೆ.

ಶ್ರೀಲಂಕಾದಲ್ಲಿ ಈ ರೋಗ ಕಾರಣದಿಂದ  ಕಾಫೀ ತೋಟಗಳೇ  ನಿರ್ನಾಮವಾದ ಬಗ್ಗೆ  ಮಾಹಿತಿ ಇದೆ. ಇಲ್ಲಿ ಬೆಳೆಗಾರರು ಕಾಫಿಯ ಬದಲು ಚಹ ಬೆಳೆಸಲು ಮುಂದಾದುದೇ ಈ ಕಾರಣಕ್ಕೆ  ಎನ್ನಲಾಗುತ್ತದೆ.

ಗಿಡ ಹೀಗಾಗುತ್ತದೆ

ಹೇಗೆ ರೋಗ ಬರುತ್ತದೆ:

 • ಎಲ್ಲಾ ಸಮಯದಲ್ಲೂ  ಈ ರೋಗ ಹರಡುವುದಿಲ್ಲ.
 • ಕೆಲವು ಅನುಕೂಲಕರ ವಾತಾವರಣದಲ್ಲಿ  ಮಾತ್ರ ಹೆಚ್ಚಾಗಿ ಹರಡುತ್ತದೆ.
 • ಮೇ ತಿಂಗಳಿನಿಂದ ನವೆಂಬರ್  ಡಿಸೆಂಬರ ತನಕದ ಅವಧಿಯಲ್ಲಿ ತಂಪು ಆರ್ಧ್ರ ಹವಾಮಾನದಲ್ಲಿ ಈ ರೋಗಕ್ಕೆ  ಕಾರಣವಾದ ಶಿಲೀಂದ್ರದ  ಹರಡುವಿಕೆ ಹೆಚ್ಚು.
 • ಮಳೆ – ಬಿಸಿಲು ಇರುವಾಗ   ಇದರ ಹರಡುವಿಕೆಗೆ ಅನುಕೂಲ.
 • ಹಾಗೆಂದು ಇದು ನಿರ್ದಿಷ್ಟ ಕಾಲಮಾನದಲ್ಲಿ ಮಾತ್ರ  ಬರುವ ರೋಗ ಅಲ್ಲ.
 • ವರ್ಷದ ಎಲ್ಲಾ ಕಾಲದಲ್ಲೂ ಬರುತ್ತದೆ.
 • ಉಲ್ಬಣಗೊಳ್ಳಲು ಮಳೆಗಾಲದ ಹವಾಮಾನ  ಪೂರಕ.
 • ಶುಷ್ಕ ವಾತಾವರಣದಲ್ಲಿ ರೋಗ ಕಾರಕ ಶಿಲೀಂದ್ರ ಇದ್ದರೂ ಸಹ ಅದು ಹೆಚ್ಚು ಚಾಟುವಟಿಕೆಯಲ್ಲಿರುವುದಿಲ್ಲ.
 • ರೈನ್ ಗನ್ ನೀರಾವರಿ ಮಾಡಿ ಕೆಲವೇ ಸಮಯದಲ್ಲಿ ಅತಿಯಾಗಿ  ಮಳೆ ಬಂದರೆ ಚಟುವಟಿಕೆ  ಹೆಚ್ಚುತ್ತದೆ.

ರೋಗ ಕಾರಕ ಶೀಲೀಂದ್ರದ ಹೆಸರು Uredospores.  ಇದು ಗಾಳಿ , ನೀರು, ಮಂಜು, ಕೀಟ  ಪ್ರಾಣಿ ಮತ್ತು ಮನುಷ್ಯರ ಮೂಲಕ ಹರಡುತ್ತದೆ.

 • ಎಲೆಗಳ ಅಡಿ ಭಾಗದಲ್ಲಿ ನಸು ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ.
 • ನಂತರ ಅದು ದೊಡ್ಡದಾಗುತ್ತಾ ಎಲೆ ಎಲ್ಲಾ  ಹಳದಿಯಾಗಿ  ಉದುರುತ್ತದೆ.
 • ಇವು ರೋಗ ಬಂದಾಗ ಗಿಡದ ಎಲೆಗಳು ಉದುರುತ್ತವೆ.

ನಿಯಂತ್ರಣ:

ಶೇ 0.5 ರ ಬೋರ್ಡೋ ದ್ರಾವಣ ಸಿಂಪಡಿಸಿ

 • ಪ್ರಾರಂಭದಲ್ಲಿ ಈ ರೋಗ ನಿವಾರಣೆಗೆ ಬೊರ್ಡೋ ದ್ರಾವಣದ  ಸಿಂಪರಣೆ ಯನ್ನು ಶಿಫಾರಸು ಮಾಡಲಾಗುತ್ತಿತ್ತು.
 • ಇದರಲ್ಲಿ ಫಲಿತಾಂಶ ಸಿಗದ ಕಾರಣ  ಇದರ ಬದಲಿಗೆ ಬೇರೆ ಶಿಲೀಂದ್ರ ನಾಶಕದ ಅರಸುವಿಕೆ ಅಗತ್ಯವಾಯಿತು.
 • ಹಾಗೆಂದು ಇದು ಕೆಲವು ಕಡೆ ಫಲಿತಾಂಶ  ಕೊಟ್ಟಿದೆ.

 ಫೆಬ್ರವರಿ- ಮಾರ್ಚ್ ಹೂ ಮೊಗ್ಗು ಮೂಡುವ ಸಮಯ   ಮತ್ತು ಮೇ – ಜೂನ್  ಮಳೆ ಗಾಲಕೆ ಮುಂಚೆ, ಹಾಗೂ ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಮಳೆ ಮುಗಿಯುವ ಸಮಯದಲ್ಲಿ  ಶೇ. 0.5  ರ  ಬೋರ್ಡೋ ದ್ರಾವಣವನ್ನು ಸಿಂಪಡಿಸಿದರೆ  ಶಿಲೀಂದ್ತದ ಬೀಜಾಂಕುರ ತಡೆಯಲ್ಲಡುತ್ತದೆ.

 •  ಅಂತರ್ ವ್ಯಾಪೀ ಶಿಲೀಂದ್ರ ನಾಶಕವಾದ  Bayleton ( Triadimefon ) ವನ್ನು ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ  ಒಮ್ಮೆ
 • ಮಳೆಗಾಲ ಮುಗಿಯುವ ಸಮಯದಲ್ಲಿ ಒಮ್ಮೆ  ಸಿಂಪರಣೆ  ಮಾಡಿದರೆ  ರೋಗಕಾರಕ  ಶಿಲೀಂದ್ರ ನಿಯಂತ್ರಣಕ್ಕೆ  ಬರುತ್ತದೆ.’
 • ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ  ತಳಿಗಳನ್ನು ಬೆಳೆಸಿದರೆ  ಬೆಳೆಗಾರರು ನಿಶ್ಚಿಂತರಾಗಿರಬಹುದು.

ಈ ರೋಗ ಹತೋಟಿಗೆ ಶೇ 0.5 ರ ಬೋರ್ಡೋ ದ್ರಾವಣದಷ್ಟು ಅಗ್ಗದ ಶಿಲೀಂದ್ರ ನಾಶಕ ಬೇರೆ ಇಲ್ಲ. ಇದು ಬರೇ ಈ ರೋಗ ಮಾತ್ರವಲ್ಲ ಎಲೆ, ಕಾಯಿ ಕೊಳೆ ರೋಗವನ್ನು ಸಹ ತಡೆಯುವ ಕಾರಣ ಇದನ್ನು ಬಳಸಿ ನಿಯಂತ್ರಣ ಆಗದಿದ್ದ ಪಕ್ಷದಲ್ಲಿ ಮಾತ್ರ ಬೇರೆ ಬಳಕೆ ಮಾಡಿ.

 

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!