ಹೀರೇ ಕಾಯಿಯಲ್ಲಿ ಅಧಿಕ ಇಳುವರಿ ಪಡೆಯುವುದು ಹೀಗೆ.

ಹೀರೇ ಕಾಯಿಗೆ ಪ್ರಮುಖ ತರಕಾರಿ ಬೆಳೆಯಾಗಿದ್ದು, ದೇಶದ ಎಲ್ಲಾ ಕಡೆ ಬೆಳೆಯಲ್ಪಡುತ್ತದೆ. ವ್ಯವಸ್ಥಿತವಾಗಿ ಬೆಳೆದರೆ ಇದರಲ್ಲಿ ಒಳ್ಳೆಯ ಆದಾಯ ಇದೆ. ಇದು ಮಳೆಗಾಲ ಮತ್ತು ಬೇಸಿಗೆ ಕಾಲಗಳಲ್ಲೆಲ್ಲಾ ಬೆಳೆಯಲ್ಪಡುವ  ತರಕಾರಿ.  ಇದು ಅತ್ಯಧಿಕ ಪೋಷಕಾಂಶಗಳನ್ನು ಪಡೆದ ತರಕಾರಿಯಾಗಿದೆ..

ಹೇಗೆ ಬೆಳೆಯುವುದು:

  • ಎಲ್ಲಾ ನಮೂನೆಯ  ಮಣ್ಣಿನಲ್ಲೂ ಬೆಳೆಯಬಹುದಾದ ಬೆಳೆ ಇದು.  ಮಣ್ಣನ್ನು ಸಡಿಲ ಮಾಡಿಕೊಂಡು ಬೆಳೆಯಬೇಕು.
  • ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಗುಣ ಇರಬೇಕು.
  • ಮಣ್ಣು ಮತ್ತು ಸಾವಯವ ಗೊಬ್ಬರ  ಸಮ ಪ್ರಮಾಣದಲ್ಲಿ ಇರಬೇಕು.
  • ಮಳೆಗಾಲದಲ್ಲಿ ಎತ್ತರಿಸಿದ ಸಾಲು ಉತ್ತಮ.
  • ಬೇಸಿಗೆಯಲ್ಲಿ ನೆಲಮಟ್ಟಕ್ಕೇ ಸಾಲು ಮಾಡಬೇಕು.
  • ಬೇರು ಚೆನ್ನಾಗಿ  ಹಬ್ಬುವಂತೆ  2 ಅಡಿ ವಿಸ್ತಾರಕ್ಕೆ ತಳ ಭಾಗದ ಮಣ್ಣನ್ನು ಸಡಿಲಮಾಡಿರಬೇಕು.

ಪೂರ್ಣ ಬಿಸಿಲು ಇರುವ ಸ್ಥಳವನ್ನು ಆಯ್ಕೆ ಮಾಡಬೇಕು. ಮಳೆಗಾಲದಲ್ಲಿ ನೀರು ನಿಲ್ಲುವ ಸ್ಥಳದಲ್ಲಿ ಬೆಳೆಸಬಾರದು. ಮರದ ಅಡಿ ಭಾಗ ಸೂಕ್ತವಲ್ಲ.

ಬೆಳೆ ಸೂಕ್ಷ್ಮಗಳು:

  • ಹೂ ಬರುವ ಸಮಯದಲ್ಲಿ ಮಳೆ ಬರಬಾರದು.
  • ಬಿಟ್ಟು ಬಿಟ್ಟು ಮಳೆ ಬರುವ ಸಮಯಕ್ಕೆ  ಸರಿಯಾಗು ಹೂ ಬಿಡುವಂತೆ ಬಿತ್ತನೆ ಮಾಡಬೇಕು.
  • ಹೀರೇ ಕಾಯಿಯ ಹೂವು ಅರಳುವುದು ಸಂಜೆ ಹೊತ್ತು.
  • ಈ ಸಮಯದಲ್ಲಿ ಒಂದು ರೀತಿಯ ಪತಂಗ ( ದುಂಬಿ) ಪರಾಗಸ್ಪರ್ಶಕ್ಕೆ ನೆರವಾಗುತ್ತದೆ.

  • ಹೂ ಅರಳುವ ಸಮಯದಲ್ಲಿ ಮಳೆ ಬರಬಾರದು.
  • ಹೀರೇ ಕಾಯಿ  ಬೆಳೆಗೆ 110  ದಿನಗಳ ಅವಧಿ. ಬಿತ್ತನೆ ಮಾಡಿ 1 ತಿಂಗಳಲ್ಲಿ ಹೂ ಬಿಡಲು ಪ್ರಾರಂಭವಾಗುತ್ತದೆ.
  • ಕಾಯಿಯು 8-10 ದಿನಕ್ಕೆ ಕಠಾವು ಮಾಡಲು ಸಿದ್ಧವಾಗುತ್ತದೆ. ಬೇಸಿಗೆಯ ಬೆಳೆಯನ್ನು ಜನವರಿಯಿಂದ ಫೆಬ್ರವರಿ ಒಳಗೆ ಬಿತ್ತನೆ ಮಾಡಬೇಕು.

ಮಳೆಗಾಲದ ಬೆಳೆಯನ್ನು ಮೇ ಕೊನೆಗೆ ಒಂದು ಮಳೆ ಬಂದ ತಕ್ಷಣ ಅಥವಾ ಜುಲಾಯಿ  ತಿಂಗಳಲ್ಲಿ  ಬಿತ್ತನೆ ಮಾಡಬೇಕು. ಈ ಸಮಯದಲ್ಲಿ ಬಿತ್ತನೆ ಮಾಡಿದಾಗ ಹೂ ಬಿಡುವಾಗ ಮಳೆ ಕಡಿಮೆಯಾಗುತ್ತದೆ.

  • ಅಧಿಕ ತೇವಾಂಶ  ಉಳ್ಳ ಹೊಳೆ ಬದಿ, ಹಳ್ಳದ ಬದುಗಳಲ್ಲಿ ನಾಟಿ ಮಾಡುವಾಗ ನವೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಿದರೆ ಅನುಕೂಲ.
  • ಸಸಿಗಳನ್ನು 2 ಅಡಿ ಅಂತರಕ್ಕೊಂದರಂತೆ  ಉಳಿಸಿಕೊಳ್ಳಬೇಕು. ಒಂದು ಬುಡದಲ್ಲಿ 2 ಸಸಿಯನ್ನು ಉಳಿಸಿಕೊಳ್ಳಬಹುದು.
  • ಸಾಲಿನಿಂದ ಸಾಲಿಗೆ 2 ಮೀಟರು ಅಂತರ  ಇಟ್ಟರೆ ಅನುಕೂಲ.

ಬಳ್ಳಿ ತರಬೇತಿ:

  • ಹೀರೇ ಕಾಯಿಯನ್ನು ಚಪ್ಪರ ಹಾಕಿಯೇ ಬೆಳೆಸಬೇಕು.
  • ಇಲ್ಲವಾದರೆ ಕಾಯಿ ಗಳು ಮುರುಟುತ್ತವೆ.
  • ಮಣ್ಣಿನ ಸಂಪರ್ಕವಾದಾಗ ಕಾಯಿ ಕೊಳೆಯುತ್ತದೆ.
  • ಚಪ್ಪರವನ್ನು ಮರದ ಗೂಟಗಳಿಗೆ ನೈಲಾನ್  ಹಗ್ಗಗಳನ್ನು ಹೆಣೆದು ಮಾಡಿಕೊಳ್ಳಬೇಕು.
  • 10 ಅಡಿಗೊಂದರಂತೆ ಚಪ್ಪರಕ್ಕೆ ಸಪೋರ್ಟ್ ಕೊಡಬೇಕು.
  • ಸಸಿ ಮೇಲೇರಲು  ಸಹ ನೈಲಾನ್ ಹಗ್ಗವನ್ನು ಅಡ್ಡಕ್ಕೆ ಕಟ್ಟಿ ಅದಕ್ಕೆ ಏರುವಂತೆ ಮಾಡಬೇಕು.
  • ಚಪ್ಪರದ ಎತ್ತರ 5-6 ಅಡಿ ಇರಬೇಕು.
  • ಚಪ್ಪರಕ್ಕೆ ಬಳ್ಳಿ ತಲುಪಿದ ನಂತರ ಚಿಗುರು ತುದಿಯನ್ನು ಸ್ವಲ್ಪ ಚಿವುಟಿದರೆ ಅಡ್ದ ಚಿಗುರುಗಳು ಬಂದು ಅದರಲ್ಲಿ ಬೇಗ ಹೂವಾಗುತ್ತದೆ.

ತಳಿ ಯಾವುದು:

  • ಸ್ಥಳೀಯ  ತಳಿಗಳ ಸಮಸ್ಯೆ ಎಂದರೆ  ಬಳ್ಳಿ ಉದ್ದ ಬೆಳೆದ ನಂತರ  ಹೂವು ಬಿಡಲಾರಂಭಿಸುತ್ತದೆ.
  • ವಾಣಿಜ್ಯಿಕ  ಉದ್ದೇಶಕ್ಕೆ ಈ ತಳಿಗಳು ಸೂಕ್ತವಲ್ಲ.
  • ಹೈಬ್ರೀಡ್ ತಳಿಯ ಹೀರೇ ಕಾಯಿ 8-10 ಅಡಿ ಬೆಳೆದ ತಕ್ಷಣ ಹೂ ಬಿಡಲಾರಂಭಿಸುತ್ತವೆ.
  • ಗ್ರಾಹಕರ ಆಕರ್ಷಣೆಗೆ ತಕ್ಕ ಉದ್ದದ ಕಾಯಿ ಇರುತ್ತದೆ.
  • ಅರ್ಕಾ ಸುಜಾತ ಎಂಬ ತಳಿ 100 ದಿನದ ತಳಿ. ಇದು 30-35  ಸೆಂ. ಮೀ.. ಉದ್ದ ಇದ್ದು, ಹೀರೇ ಕಾಯಿಯ ಸುವಾಸನೆ ಚೆನ್ನಾಗಿದೆ. ಸಾಗಾಣಿಕೆಯಲ್ಲಿ  ಮುರಿಯುವುದಿಲ್ಲ.

  • ಅರ್ಕಾ ಸುಮಿತ್ ತಳಿ ಕಡು ಹಸುರು ಬಣ್ಣದಲ್ಲಿದ್ದು, 110 ದಿನಗಳ ಅವಧಿ. ಉದ್ದದ ಕಾಯಿಗಳು.
  • ನಾಮಧಾರೀ ಕಂಪೆನಿಯ ಹೀರೇ ಕಾಯಿ ಉತ್ತಮ ಹೈಬ್ರೀಡ್ ತಳಿಯಾಗಿದ್ದು, ಸಾಕಷ್ಟು ಜನ ಇದನ್ನು ಆಯ್ಕೆ ಮಾಡುತ್ತಾರೆ.

ಅಧಿಕ ಇಳುವರಿಗೆ ಗೊಬ್ಬರಗಳು:

  • ಹೀರೇ ಕಾಯಿಗೆ  ಸಾವಯವ ಗೊಬ್ಬರಗಳನ್ನು ನಾಟಿ ಮಾಡುವ ಸಮಯದಲ್ಲೇ  ಹಾಕಬೇಕು.
  • ಹೂ ಬಿಡುವ ತನಕ ಸಾರಜನಕ – ರಂಜಕ ಯುಕ್ತ ಗೊಬ್ಬರವನ್ನು , ನಂತರ ಪ್ರತೀ ವಾರಕ್ಕೊಮ್ಮೆ ಸಾರಜನಕ : ರಂಜಕ ಮತ್ತು ಪೊಟ್ಯಾಶ್ ಉಳ್ಳ ರಾಸಾಯನಿಕ (15:15:15 ಅಥವಾ ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು 200 ಲೀ. ನೀರಿಗೆ 2-3 ಕಿಲೋ ಪ್ರಮಾಣದಲ್ಲಿ ಹಾಕಿ ಕಲಕಿ ಗಿಡಕ್ಕೆ  1 ಲೀ. ಪ್ರಮಾಣದಲ್ಲಿ ಕೊಡಬೇಕು.
  • ಇದನ್ನು ಪ್ರತೀ ವಾರ ಕೊಯಿಲು ಮುಗಿಯುವ ತನಕ ಕೊಡುತ್ತಿದ್ದರೆ ಪ್ರಾರಂಭದಿಂದ ಕೊನೆಯ ತನಕ ಏಕ ಪ್ರಕಾರದ  ಕಾಯಿ ಸಿಗುತ್ತದೆ.

ಇದು ಪ್ರಮುಖ್ಯ:

  • ಹೀರೇ ಕಾಯಿ ಬೆಳೆಯುವಾಗ  ಮಿಡಿ ಹೂ ಬಿಡುವ ಸಮಯದಲ್ಲಿ ಒಂದು ಎಕ್ರೆಗೆ 4-5  ರಷ್ಟು ಹಣ್ಣು ನೊಣದ ಟ್ರಾಪುಗಳನ್ನು ಹಾಕಬೇಕು. ತಡ ಮಾಡಬಾರದು.
  • ಅಗತ್ಯ ಬಿದ್ದರೆ ಹಣ್ಣು ನೊಣ ನಿಯಂತ್ರಣಕ್ಕೆ ಕಡಿಮೆ ಅವಧಿಯ ಕೀಟನಾಶಾವನ್ನು ಸಿಂಪಡಿಸಬೇಕು.

  • ಕೀಟನಾಶಕಕ್ಕಿಂತ ಹೆಚ್ಚು ಟ್ರಾಪು ಹಾಕಿ ಹಣ್ಣು ನೊಣ ನಿಯಂತ್ರಿಸುವುದು ಉತ್ತಮ

ಟ್ರಾಪು ಹಾಕುವುದರಿಂದ ಮತ್ತು ವಾರ ವಾರ ಪೊಷಕಾಂಶಗಳನ್ನು ಕೊಡುವುದರಿಂದ  ಗರಿಷ್ಟ ಪ್ರಮಾಣದಲ್ಲಿ ಕಾಯಿ ಉಳಿಯುತ್ತದೆ. ಎಕ್ರೆಗೆ ಏನಿಲ್ಲವೆಂದರೂ 20 ಟನ್ ಇಳುವರಿ ದೊರೆಯುತ್ತದೆ.  ಒಂದು ಎಕ್ರೆಯಲ್ಲಿ 2 ಲಕ್ಷ ತನಕ ಆದಾಯ ಪಡೆಯಬಹುದು.

 
 

Leave a Reply

Your email address will not be published. Required fields are marked *

error: Content is protected !!