ನಾವು ತರಕಾರಿ ಖರೀದಿ ಮಾಡುವಾಗ ನೋಟ ಚೆನ್ನಾಗಿರುವ, ಹುಳ ಬಾರದೇ ಇರುವಂತದ್ದನ್ನು ಆರಿಸಿ ಕೊಳ್ಳುತ್ತೇವೆ. ಒಂದು ವೇಳೆ ನಾವು ತಂದದ್ದರಲ್ಲಿ ಗಮನಿಸದೆ ಹುಳ ಇದ್ದರೆ ಅದನ್ನು ತೆಗೆದು ಬಿಸಾಡಿ, ಅಂಗಡಿಯವನಿಗೆ ಹಿಡಿ ಶಾಪ ಹಾಕುತ್ತೇವೆ. ವಾಸ್ತವವಾಗಿ ಹುಳ ಇರುವ ತರಕಾರಿ ಹಣ್ಣು ಹಂಪಲುಗಳಿದ್ದರೆ ಅದನ್ನು ಬಿಸಾಡದಿರಿ. ಹುಳ ತೆಗೆದು ದೂರ ಇಟ್ಟು ಅದನ್ನು ಬಳಸಿ. ಅದು ಆರೋಗ್ಯಕ್ಕೆ ಉತ್ತಮ.
- ಹುಳ ಬಾರದಂತೆ ಮಾಡಲು ಬಳಸುವ ಕೀಟನಾಶಕಗಳ ಉಳಿಕೆ ತರಕಾರಿಗಳಲ್ಲಿ ಉಳಿದಿರುತ್ತದೆ.
- ಆದ ಕಾರಣ ಬಳಕೆದಾರರು ಅತಿಯಾಗಿ ನೋಟ ಚೆನ್ನಾಗಿರುವ ತರಕಾರಿಗಳಿಗೆ ಮುಗಿ ಬೀಳದಿರಿ.
ಬಹಳ ಜನರಿಗೆ ಇದು ಗೊತ್ತೇ ಇಲ್ಲ:
- ಯಾವುದೇ ಹುಳ ಬಾರದ ತರಕಾರಿ ಉತ್ತಮ ಎಂದಷ್ಟೇ ನಾವು ತಿಳಿದಿದ್ದೇವೆ.
- ಆರೋಗ್ಯ ಕಳಕಳಿಯಿಂದ ಸಾವಯವ ಮಳಿಗೆಯಿಂದಲೇ ದುಬಾರಿ ಬೆಲೆ ತೆತ್ತು ಹಣ್ಣು ತರಕಾರಿ ತರುತ್ತೇವೆ.
- ಆದರೆ ಯಾವ ತರಕಾರಿಗೂ ಹುಳ ಬಾರದೆ ಇರುವುದಿಲ್ಲ.
- ಬಾರದಿರುವಂತೆ ಮಾಡಲು ರಾಸಾಯನಿಕ, ಕೀಟನಾಶಕವನ್ನು ಬಳಸಲೇ ಬೇಕಾಗುತ್ತದೆ.
- ಮನೆ ಬಳಕೆಗೆ ಬೆಳೆಸುವ ತರಕಾರಿಗಳಿಗೆ ಹುಳ ಬರುವುದು ಪ್ರಾರಂಬಿಕ ಹಂತದಲ್ಲಿ ಕಡಿಮೆ ಇರಬಹುದು.
- ಅದನ್ನೇ ವಾಣಿಜ್ಯಿಕವಾಗಿ ಬೆಳೆಸುವಾಗ ಹುಳಗಳ ಹಾಜರಾತಿ ಇದ್ಡೇ ಇರುತ್ತದೆ.
- ಬೆಳೆಯಲ್ಲಿ ಯಾವ ರೈತನಿಗೂ ಟ್ರಯಲ್ ಎಂಡ್ ಎರರ್ ಮಾಡಲು ಸಾಧ್ಯವಾಗುವುದಿಲ್ಲ.
- ಅವನು ಹಾಕಿದ ಬಂಡವಾಳವನ್ನು ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಿಸುವುದಲ್ಲದೆ ಬೇರೆ ನಿರ್ವಾಹವೇ ಇಲ್ಲದಾಗುತ್ತದೆ.
- ತರಕಾರಿಗಳಲ್ಲಿ ಬದನೆ, ಹೂ ಕೋಸು, ಕಾಲಿ ಪ್ಲವರ್, ಬೆಂಡೆ ಇತ್ಯಾದಿಗಳಿಗೆ ಕೀಟನಾಶಕ ಸಿಂಪಡಿಸಲೇ ಬೇಕಾಗುತ್ತದೆ.
ಗ್ರಾಹಕರು ಒಂದು ವೇಳೆ ಹುಳ ಮುಟ್ಟಿದ ತರಕಾರಿ ಕೊಳ್ಳುತ್ತಾರೆ ಎಂದಾದರೆ ಬಹುಷಃ ತರಕಾರಿ ಬೆಳೆಗಾರರಿಗೆ ಕೀಟನಾಶಕಕ್ಕೆ ವ್ಯಯಿಸುವ ಖರ್ಚು ಉಳಿತಾಯವಾಗಿ ಭಾರೀ ಲಾಭವಾಗಬಹುದು.
ಕೀಟನಾಶಕ ಮತ್ತು ತರಕಾರಿ:
- ಈಗ ಹಿಂದಿನಂತೆ ಬೂದಿ, ಕಷಾಯಗಳಿಗೆ ಕೀಟಗಳು ಬಗ್ಗುವುದಿಲ್ಲ. ಕೀಟನಾಶಕಗಳಲ್ಲೂ ಪ್ರಭಲ ಕೀಟನಾಶಕಗಳೇ ಆಗಬೇಕು.
- ಅದಕ್ಕೆ ಸರಿಯಾಗಿ ಸರಕಾರ ಕೆಲವು ಸ್ಪರ್ಶ ಕೀಟನಾಶಕಗಳನ್ನು ನಿಷೇಧ ಮಾಡಿದೆ.
- ರೈತರು ಹೆಚ್ಚು ಸಮಯದ ತನಕ ಕೀಟಗಳಿಂದ ರಕ್ಷಣೆ ಇರಲಿ ಎಂದು ಅಂತರ್ ವ್ಯಾಪೀ Systemic insecticides)ಕೀಟನಾಶಕ ಬಳಸುತ್ತಾರೆ.
- ಈ ಕೀಟ ನಾಶಕಗಳಿಗೆ 20-30 ದಿನ ಉಳಿಕೆ ವಾಯಿದೆ ಇರುತ್ತದೆ.
- ಇದನ್ನು ಬಳಸಿದ ಗ್ರಾಹಕನ ಆರೋಗ್ಯದ ಮೇಲೆ ಇದು ನಿಧಾನವಾಗಿ ತೊಂದರೆ ಉಂಟು ಮಾಡುತ್ತದೆ.
ಕೀಟನಾಶಕ, ರೋಗ ನಾಶಕಗಳು ನಮ್ಮ ದೇಶದಲ್ಲಿ ಉಚಿತವಾಗಿಯೂ ಸಿಗುವುದಿಲ್ಲ. ಇದಕ್ಕೆ ಯಾವ ಸಹಾಯಧನವೂ ಇಲ್ಲ, ಇದು ಬಹಳ ದುಬಾರಿಯ ವಸ್ತು. ಗ್ರಾಹಕನಿಗೆ ಬೇಕಾಗಿ ರೈತರು ಲೀಟರಿಗೆ ರೂ. 3000 ಕ್ಕೂ ಹೆಚ್ಚಿನ ಬೆಲೆಯ ಕೀಟನಾಶಕ ಸಿಂಪರಣೆ ಮಾಡುತ್ತಾರೆ. ಇದು ಉಳಿತಾಯವಾದರೆ ಅವನಿಗೂ ಲಾಭ. ಅವನ ಆರೋಗ್ಯಕ್ಕೂ ಲಾಭ.
ಹಾಗಾದರೆ ಏನು ಪರಿಹಾರ:
- ಗ್ರಾಹಕರಾದ ನಾವು ತರಕಾರಿಗಳನ್ನು ಖರೀದಿ ಮಾಡುವಾಗ ಹುಳಮುಟ್ಟಿದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು.
- ಅದೇ ರೀತಿಯಲ್ಲಿ ಗಾತ್ರದ ಬಗ್ಗೆಯೂ ತಲೆ ಕೆಡಿಸಿಕೊಳ್ಳಬಾರದು.
- ಒಂದು ಸೌತೇ ಕಾಯಿ ಮುರುಟು ಆಗಲು ಕಾರಣ ಒಂದು ತಿಗಣೆ ಅಷ್ಟೇ. ಈ ತಿಗಣೆ ಮುಟ್ಟಿದ ತರಕಾರಿ ತಿಂದರೆ ಯಾವ ತೊಂದರೆಯೂ ಇಲ್ಲ.
- ಬರೇ ತಿಗಣೆಗಾಗಿ ಕೀಟನಾಶಕ ಬಳಸುವುದಿದ್ದರೆ ಅದು ಗ್ರಾಹಕರಿಗೆ ಒಳ್ಳೆಯ ವಸ್ತು ಬೇಕು ಎಂಬ ಕಾರಣಕ್ಕೆ.
- ಆದ ಕಾರಣ ಮುರುಟು ತರಕಾರಿಯನ್ನು ತಿರಸ್ಕರಿಸಬೇಡಿ.
ಬದನೆ, ಹೂ ಕೋಸು, ಕಾಲಿ ಪ್ಲವರ್, ಬೆಂಡೆಯಲ್ಲಿ ಹುಳ ಇದ್ದರೆ ಭಯ ಬೇಡ. ಈ ಹುಳ ಆರೋಗ್ಯಕ್ಕೆ ಹಾಳಲ್ಲ.ಇದು ಪ್ರೋಟೀನುಗಳ ಆಗರ. ಹುಳವನ್ನು ತಿನ್ನಬೇಡಿ,ಆದರೆ ಇದು ತಿಂದ ತರಕಾರಿಯನ್ನು ಅಂಜದೆ ತಿನ್ನಬಹುದು. ಬೇರೆ ದೇಶಗಳಲ್ಲಿ ಈ ಹುಳಗಳಿಂದ ಪ್ರೋಟೀನು ಸಂಮೃದ್ಧ ಸಿದ್ದ ಆಹಾರ ತಯರಿಸುತ್ತಾರೆ.
The eggs, larvae, and adults of vegetables have been eaten by humans from prehistoric times to the present day. Insect-eating is common in most parts of the world. China, USA, Thailand and many more countries, Eighty percent of the world’s nations eat insects of 1,000 to 2,000 species. Some companies are trying to In western countries insect food supplements are common. FAO has registered many insects, caterpillars etc as food supplement.
- ಭಾರತವನ್ನು ಹೊರತು ಪಡಿಸಿ ಹಲವಾರು ದೇಶಗಳಲ್ಲಿ ಇದನ್ನು ಮಾನವ ಆಹಾರವಾಗಿ ಬಳಸುತ್ತಾನೆ.
ಕೊಳೆತಿದ್ದರೆ ತಿನ್ನಬೇಡಿ:
- ಬಹುತೇಕ ತರಕಾರಿಗಳು ಹಣ್ಣು ಹಂಪಲು ತರಕಾರಿಗಳು ಕೊಳೆಯುತ್ತವೆ.
- ಇದು ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾಗಳಿಂದ. ಇದನ್ನು ತಿಂದರೆ ತೊಂದರೆ ಇದೆ.
- ಅದೇ ರೀತಿಯಾಗಿ ಜಂತು ಹುಳ ಬಾಧಿತ ಹಣ್ಣು ತರಕಾರಿಗಳಿಂದಲೂ ಆರೋಗ್ಯಕ್ಕೆ ತೊಂದರೆ ಇದೆ.
- ಹಾಗೆಂದು ಹುಳ ತಿಂದ ತರಕಾರಿಯನ್ನು ತಿಂದರೂ ಯಾವ ಹಾನಿಯೂ ಆಗದು.
- ಕೀಟ, ಹುಳುವಿಗಾಗಿ ರೈತರು ನಿರ್ವಾಹವಿಲ್ಲದೆ ಕೀಟನಾಶಕ ತಯಾರಕರನ್ನು ಸಾಕುತ್ತಾರೆ. ಆ ಹಣ ಉಳಿದರೆ ರೈತನಿಗೆ ಲಾಭವಲ್ಲವೇ?
ಗ್ರಾಹಕರು ರೈತನನ್ನು ಅರ್ಥ ಮಾಡಿಕೊಳ್ಳಬೇಕು. ರೈತ ಇದನ್ನೆಲ್ಲಾ ಮಾಡುವುದು ಹಣ ಮಾಡಲಿಕ್ಕಾಗಿ ಅಲ್ಲ. ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲಿಕ್ಕಾಗಿಯೂ ಅಲ್ಲ. ಅವನು ಸಮಾಜಕ್ಕೆ ವಿಷ ತಿನ್ನುಸುವವ ಅಲ್ಲವೇ ಅಲ್ಲ. ಅವನ ಹೊಟ್ಟೆ ಪಾಡಿಗೆ ನಿರ್ವಾಹವಿಲ್ಲದೆ ಇದನ್ನು ಮಾಡುತ್ತಿದ್ದಾನೆ. ಗ್ರಾಹಕರು ಸಹಕರಿಸಿದರೆ ರೈತ ಮತ್ತು ಗ್ರಾಹಕರಿಬ್ಬರೂ ಸುರಕ್ಷಿತರಾಗಬಲ್ಲರು.
end of the article:—————————————————————–
search words: Insect as food# Insects are protein rich# Insect damaged vegetables # Insect damaged fruits# Insects and humans # Human health and fresh vegetables #Fresh look and insecticides#