ಗೇರು ಚಿಗುರು ಬಿಡುವ ಸಮಯ ಅಕ್ಟೋಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ ತನಕವೂ ಮುಂದುವರಿಯುತ್ತದೆ. ಚಿಗುರುವ ಸಮಯದಲ್ಲಿ ಈ ಬೆಳೆಗೆ ಕೀಟಗಳ ತೊಂದರೆ ಜಾಸ್ತಿ.ಇದನ್ನು ನಿವಾರಣೆ ಮಾಡಿಕೊಳ್ಳದಿದ್ದರೆ , ಚಿಗುರು ಹಾಳಾಗುತ್ತದೆ. ಫಸಲು ಗಣನೀಯವಾಗಿ ಕಡಿಮೆಯಾಗುತ್ತದೆ.
ಯಾವ ಕೀಟಗಳಿಂದ ತೊಂದರೆ:
- ಚಿಗುರುವ ಸಮಯದಲ್ಲಿ ಎಳೆ ಚಿಗುರನ್ನು ತಿನ್ನಲು ಗುಲಗುಂಜಿ ಹುಳದ ತರಹದ ಒಂದು ಹಾರುವ ಕೀಟ ತಿನ್ನುತ್ತದೆ.
- ಇದರಿಂದ ಎಳೆ ಚಿಗುರು ಹಾಳಾಗಿ ಒಣಗುತ್ತದೆ.
- ಎಲೆಗಳಲ್ಲೊ ಹರಿತ್ತು ಇರುವುದಿಲ್ಲ. ತಿಂದು ಹಾಕಿದ ಹಿಕ್ಕೆ ಇರುತ್ತದೆ.
- ಕೆಲವು ಸಮಯದಲ್ಲಿ ಇದರ ಹಾವಳಿ ಹೆಚ್ಚು ಇರುತ್ತದೆ.
ಎಫಿಡ್ ಜಾತಿಯ ಕೀಟಗಳು, ಬಿಳಿ ನೊಣಗಳು ಸಹ ಚಿಗುರುವ ಭಾಗದಲ್ಲಿ ಕುಳಿತು ರಸ ಹೀರಿ ಚಿಗುರನ್ನು ಬೆಳೆಯಲು ಬಿಡುವುದಿಲ್ಲ. ಇದು ಚಿಗುರು ಮಾತ್ರವಲ್ಲದೆ ಮಿಡಿ ಕಾಯಿಗಳಿಗೂ ಬಾಧಿಸಿ. ಬೀಜವನ್ನು ಪೊಳ್ಳಾಗುವಂತೆ ಮಾಡುತ್ತದೆ.
- ಇದಕ್ಕೆ ನೈಸರ್ಗಿಕ ವೈರಿ ಕೀಟಗಳು ಗುಲಗುಂಜಿ ಹುಳ. ಇದರ ಸಂಖ್ಯೆ ಹೆಚ್ಚು ಇದ್ದರೆ ಈ ಕೀಟ ನಗಣ್ಯ.
- ಎಳೆ ಚಿಗುರನ್ನು ರಸ ಹೀರಿ ಹೆಚ್ಚು ಹಾನಿ ಮಾಡುವ ಕೀಟ ಟಿ ಸೊಳ್ಳೆ.
- ಇದು ಚಿಗುರು ಮೂಡುವ ಹಂತದಲ್ಲಿ ಹೊಸ ಚಿಗುರನ್ನು ಹಾನಿ ಮಾಡುತ್ತದೆ,
- ಹೂ ಮೊಗ್ಗು ಬರುವ ಹಂತದಲ್ಲಿ ಮೊಗ್ಗನ್ನು ಹಾಳು ಮಾಡುತ್ತದೆ.
- ಮಿಡಿ ಹಂತದಲ್ಲಿ ಮಿಡಿಯ ರಸ ಹೀರುತ್ತದೆ ಕಾಯಿಯಾಗುವ ಸಮಯದಲ್ಲಿ ಕಾಯಿಗಳ ಮೇಲೆಯೂ ಬಾಧಿಸುತ್ತದೆ.
ಇದು ರಸ ಹೀರಿದಾಗ ಚಿಗುರು, ಹೂ ಮೊಗ್ಗು, ಮಿಡಿ,ಕಾಯಿ ಕಪ್ಪಗಾಗಿ ಹಾಳಾಗುತ್ತದೆ. ಗೇರು ಬೆಳೆ ಬೆಳೆಯಲ್ಪಡುವ ಎಲ್ಲಾ ಕಡೆ ಇದರ ಬಾಧೆ ಇರುತ್ತದೆ.
ನಿಯಂತ್ರಣ:
- ಇದರ ನಿಯಂತ್ರಣಕ್ಕೆ ಸದ್ಯದ ಮಟ್ಟಿಗೆ ರಾಸಾಯನಿಕ ಕೀಟನಾಶಕಗಳೇ ಹೆಚ್ಚು ಪರಿಣಾಮಕಾರಿಯಾಗಿವೆ.
- ಜೈವಿಕ ಕೀಟ ನಾಶಕಗಳ ಬಳಕೆಯ ಯಾವುದೇ ಪ್ರಯೋಗಗಳು ಆಗಿಲ್ಲ.
- ರಸ ಹೀರುವ ಕೀಟ ನಿಯಂತ್ರಣಕ್ಕೆ ಪರಿಣಾಮಕಾರೀ ಸಸ್ಯ ಜನ್ಯ ಕೀಟನಾಶಕಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
- ಕೀಟನಾಶಕವನ್ನು ಚಿಗುರು ಮೊಗ್ಗು ಮೂಡುವ ಹಂತದಲ್ಲಿ , ಹೂ ಮೊಗ್ಗು ಮೂಡುವ ಹಂತದಲ್ಲಿ ಮತ್ತು ಮಿಡಿ ಬಿಡುವ ಹಂತದಲ್ಲಿ ಸಿಂಪರಣೆ ಮಾಡಬೇಕು.
- ಎಲ್ಲಾ ನಮೂನೆಯ ಕೀಟಗಳಿಗೂ ಒಂದೇ ಔಷಧಿ ಸಾಕಾಗುತ್ತದೆ.
ಯಾವ ಕೀಟನಾಶಕ:
- ರಾಸಾಯನಿಕ ಕೀಟ ನಾಶಕಗಳಲ್ಲಿ ಎಕಾಲಕ್ಸ್, (ಕ್ವಿನಾಲ್ ಫೋಸ್) ರೋಗರ್, ಡೈಮಿಥೋಯೇಟ್ ಕಾನ್ಫಿಡಾರ್ ( ಇಮಿಡಾ ಕ್ಲೋಫ್ರಿಡ್) ಕೀಟ ನಾಶಕಗಳನ್ನು ಬಳಕೆ ಮಾಡಬಹುದು.
- ಗೇರು ಸಂಶೋಧನಾ ನಿರ್ಧೇಶನಾಲಯವು ಕರಾಟೆ ( ಲಾಂಬ್ಡಾ ಸೈಹೋಥ್ರಿನ್) ಕೀಟನಾಶಕವನ್ನು ಶಿಫಾರಸು ಮಾಡುತ್ತಾರೆ.
- ಇದು ಜಾಗರೂಕತೆಯಲ್ಲಿ ಬಳಸಬೇಕಾದ ಕೀಟನಾಶಕ. ಮೈ ಚರ್ಮಕೆ ಬಿದ್ದಲ್ಲಿ, ನೀರಿನ ಸಂಪರ್ಕ( ಕೈಕಾಲು ತೊಳೆದು, ಸ್ನಾನ ಮಾಡುವಾಗ) ಯಾತನೆಯ ಉರಿ ಉಂಟು ಮಾಡುತ್ತದೆ.
- ಸೂಕ್ತ ಮುನ್ನೆಚ್ಚರಿಕೆ ವಹಿಸಿ ಸಿಂಪಡಿಸಬೇಕು.
ಅಂಟಿನ ಹಾಳೆಗಳ ಮೂಲಕ ಟಿ ಸೊಳ್ಳೆಯನ್ನು ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ ಗೇರು ಸಂಶೋಧನಾ ನಿರ್ಧೇಶನಾಲಯದ ವಿಜ್ಞಾನಿಗಳು.
- ಉಳಿದ ಕೀಟನಾಶಕದಲ್ಲಿ ಈ ತೊಂದರೆ ಇಲ್ಲವಾದರೂ ಅಜಾಗರೂಕತೆ ಮಾಡಬಾರದು. ಗಾಳಿಯ ದಿಕ್ಕಿಗೆ ವಿರುದ್ಧವಾಗಿ ಸಿಂಪಡಿಸಬಾರದು.
ಚಹ ಸೊಳ್ಳೆ ಹಾಗೂ ಇನ್ನಿತರ ಕೀಟಗಳ ನಿಯಂತ್ರಣಕ್ಕೆ ಧೂಳು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ. ಇದು ಮಾಡಲು ಕ್ಲಿಷ್ಟ ಕೆಲಸವಾದ ಕಾರಣ ಸಾಧ್ಯವಾಗದು. ಕಲ್ಲೆಣ್ಣೆ ( ಮಿನರಲ್ ಆಯಿಲ್)”ಟಿ” ಸೊಳ್ಳೆ ನಿಯಂತ್ರಣಕ್ಕೆ ಸಹಕಾರಿ.