ಭಾರತ ಸರಕಾರವು 2022 ವೇಳೆಗೆ ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವುದು ನಮೆಗೆಲ್ಲಾ ಗೊತ್ತಿದೆ. ಇದಕ್ಕೆ ಸಾಕಷ್ಟು ತಯಾರಿಗಳು ಆಗುತ್ತಿದೆ. ಈಗ ನಡೆಯುತ್ತಿರುವ ಪೂರ್ವ ತಯಾರಿಯಲ್ಲಿ ಯಾಕೋ ಭಾರತ ರೈತರ ಆದಾಯವು ದ್ವಿಗುಣಗೊಂಡರೂ ಸಹ ಅದು ಅವನಿಗೆ ಉಳಿಯಲಿಕ್ಕಿಲ್ಲವೇನೋ ಅನ್ನಿಸುತ್ತಿದೆ.
- ರೈತರ ಆದಾಯ ದ್ವಿಗುಣವಾಗುವುದು (doubling farmers‘ income) ಅನಿವಾರ್ಯ. ಅದರ ಅಗತ್ಯ ಆಡಳಿತ ನಡೆಸುವ ನಮ್ಮ ಮುಖಂಡರಿಗೆ ತಿಳುವಳಿಕೆಗ ಬಂದುದೂ ಸಹ ಸ್ವಾಗತಾರ್ಹ.
- ಯಾವಾಗಲೋ ಅದನ್ನು ಸರಕಾರ ಗಮನಿಸಿ ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿತ್ತು.
- ಈಗಲಾದರೂ ಬೊಬ್ಬೆ ಪ್ರಾರಂಭವಾಗಿದೆ.
- ಒಂದು ವೇಳೆ ಆದಾಯ ದ್ವಿಗುಣ ಆದರೆ, ಮತ್ತೆ ಹೊಸ ತಲೆಮಾರು ಕೃಷಿಯಲ್ಲಿ ಉಳಿಯಲು ಸಾಧ್ಯ.
- ಇಲ್ಲವಾದರೆ ಕೆಲವೇ ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು ಯಾರೂ ಆಯ್ಕೆ ಮಾಡಿಕೊಳ್ಳಲಾರರು.
ಪೂರ್ವ ತಯಾರಿ ಸರಿ ಇಲ್ಲ.
- ಕೃಷಿಯಲ್ಲಿ ಆದಾಯವನ್ನು ದ್ವಿಗುಣಗೊಳಿಸುವುದು ಅಷ್ಟು ಸುಲಭವಲ್ಲ. ಈಗಿರುವ ಕೃಷಿ ಉತ್ಪನ್ನಗಳ ಬೆಲೆಯನ್ನು ದುಪ್ಪಟ್ಟು ಹೆಚ್ಚಿಸುವುದೇ? ಅದು ಸಾಧ್ಯವಿಲ್ಲ.
- ಈಗಿನ ಉತ್ಪಾದನೆಯನ್ನು ಹೆಚ್ಚಿಸುವುದೇ ? ಅದು ಮಿಗತೆಯಾಗುತ್ತದೆ. ದರ ಬೀಳುತ್ತದೆ.
- ಹಾಗಾದೆರೆ ಹೇಗೆ ಕೃಷಿ ಆದಾಯವನ್ನು ದ್ವಿಗುಣ ಗೊಳಿಸುವುದು?
- ಕೃಷಿ ಆದಾಯವನು ದ್ವಿಗುಣಗೊಳಿಸಲು ಇರುವ ಏಕೈಕ ಉಪಾಯ ಕೃಷಿ ಪೂರಕ ಉದ್ದಿಮೆಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸುವುದು.
- ಇದರಲ್ಲೂ ಖಂಡಿತವಾಗಿ ಕೃಷಿ ಉತ್ಪನಗಳಿಗೆ ಬೇಡಿಕೆ ಹೆಚ್ಚುತ್ತದೆ ಎನ್ನಲಾಗುವುದಿಲ್ಲ ಉದ್ದಿಮೆ ನಡೆಸುವವರು ದೇಶದ ರೈತರ ಕೈಯಿಂದ ಅಧಿಕ ಬೆಲೆಗೆ ಉತ್ಪನ್ನಗಳನ್ನು ಖರೀದಿಸಬೇಕಾಗಿಲ್ಲ.
- ಆಮದು ಮಾಡಲೂ ಬಹುದು. ಇವೆಲ್ಲಾ ಚಕ್ರವ್ಯೂಹಗಳು ಸೃಷ್ಟಿಯಾಗುತ್ತಲೇ ಇರುತ್ತದೆ.
ಏನು ಪರಿಹಾರ:
- ದೇಶದ ಕೃಷಿಕರು ಈಗ ಬೆಳೆ ಬೆಳೆಸಲು ವ್ಯಯಿಸುವ ಖರ್ಚನ್ನು ಕಡಿಮೆ ಮಾಡುವಂತಾದರೆ ಬಹುಶಃ ದುಪ್ಪಟ್ಟಲ್ಲದಿದ್ದರೂ ಅರ್ಧ ಪಟ್ಟಾದರೂ (50%) ಖರ್ಚು ಉಳಿತಾಯವಾಗಿ ಆದಾಯ ಹೆಚ್ಚಳವಾಗಬಹುದು.
- ರೈತರು ಅಗತ್ಯವಾಗಿ ಬಳಕೆ ಮಾಡುವ ಕೀಟನಾಶಕ- ರೋಗ ನಾಶಕಗಳ ಮೇಲೆ ಸರಕಾರ 18% ಸರಕು ತೆರಿಗೆಯನ್ನು ವಿಧಿಸಿತ್ತದೆ.
- ಅದೇ ರೀತಿಯಲ್ಲಿ ಖರೀದಿ ಮಾಡುವ ಯಂತ್ರೋಪಕರಣಗಳ ಮೇಲೆ ಯೂ 18% ತೆರಿಗೆಯನ್ನು ವಿಧಿಸುತ್ತದೆ.
- ರಸ ಗೊಬ್ಬರಗಳ ಮೇಲೆ 5% ತೆರಿಗೆಯನ್ನು ವಿಧಿಸುತ್ತದೆ.
- ಪೈಪುಗಳು ಫಿಟ್ಟಿಂಗುಗಳ ಮೇಲೆ 12% ತೆರಿಗೆಯನ್ನು ವಿಧಿಸುತ್ತದೆ.
ಇದೆಲ್ಲಾ ಒಂದೆಡೆಯಾದರೆ ಈ ಉತ್ಪನ್ನಗಳ ಬೆಲೆಯ ಕಥೆಯೇ ಬೇರೆ. ದಿನದಿಂದ ದಿನಕ್ಕೆ ಇದರ ಬೆಲೆ ಹೆಚ್ಚಳವಾಗುತ್ತಲೇ ಇದೆ. ಕೀಟನಾಶಕ, ಶಿಲೀಂದ್ರ ನಾಶಕ, ರಸಗೊಬ್ಬರ ಮುಂತಾದ ಪ್ರತೀಯೊಂದು ಕೃಷಿ ಒಳಸುರಿಗಳ ಬೆಲೆ ಹೆಚ್ಚುತ್ತಲೇ ಇದೆ. ದೇಶೀಯ ತಯಾರಿಕೆಯ ಕೀಟ ನಾಶಕ ಶಿಲೀಂದ್ರ ನಾಶಕಗಳನ್ನು ಬ್ಯಾನ್ ಮಾಡಿ , ಅದರ ಬದಲಿಗೆ 5-6 ಪಟ್ಟು ಹೆಚ್ಚಿನ ಬೆಲೆಯುಳ್ಳ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ.
- ಕಳೆದ ಹಲವಾರು ವರ್ಷಗಳಿಂದ ದೇಶದ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುತ್ತಿದ್ದ ಕೀಟನಾಶಕಗಳು ಈಗ ಯಾವುದೋ ಕಾರಣಗಳ ಮೇಲೆ ನೀಷೇಧಕ್ಕೊಳಪಟ್ಟಿದೆ. ರೈತರ ಜೇಬಿಗೆ ಕತ್ತರಿ ಹಾಕಲಾಗಿದೆ.
ಕೀಟಗಳು ಪ್ರಭಲವೋ – ಕೀಟನಾಶಕ ಕಳಪೆಯೋ?
- ಈಗಿನ ಹೊಸ ಬೆಳವಣಿಗೆಯೆಂದರೆ ಕೃಷಿ ರಾಸಾಯನಿಕಗಳಿಗೆ ಕೀಟಗಳು ಬಗ್ಗುತ್ತಿಲ್ಲ.
- ಸೆಕೆಂಡ್ ಜನರೇಷನ್ ಪೆಸ್ಟಿಸೈಡ್ ಗಳು ಕಳಪೆಯೋ ರೈತನಿಗೆ ತಿಳಿಯುವುದು ಅಸಾದ್ಯವಾಗಿದೆ.
- ಸೈನಿಕ ಹುಳವನ್ನು ನಿಯಂತ್ರಿಸಲಾಗುತ್ತಿಲ್ಲ.
- ಜೈವಿಕ ತಂತ್ರಜ್ಞಾನ ಹೆಸರಿನಲ್ಲಿ ಮೋಸ ನಡೆಯುತ್ತಿದೆ.
- ಡೊಸೇಜ್ ಹೆಚ್ಚಳವಾಗುತ್ತಿದೆ. ಅದಲ್ಲದಿದ್ದರೆ ಮತ್ತೊಂದನ್ನು ಆರಿಸುವ ಸ್ಥಿತಿ. ಎಲ್ಲೆಲ್ಲೂ ಕಳೆಪೆ ( quality of pesticides) , ಮತ್ತು ಮೋಸದ ವ್ಯವಹಾರಗಳೇ ತುಂಬಿದೆ.
- ಇದರಿಂದ ಅಂತಿಮವಾಗಿ ಕೃಷಿಕನ ಆದಾಯಕ್ಕೆ ಕತ್ತರಿ ಬೀಳುವುದಾಗಿದೆ.
ಇದು ದುರದೃಷ್ಟ:
- ಸರಕಾರದ ಆಡಳಿತ ವ್ಯವಸ್ಥೆ ರೈತರ ಹಿತವನ್ನು ಗಮನಿಸುವುದಿಲ್ಲ.
- ಅದರ ಜೊತೆಗೆ ಕೃಷಿ ಸಂಶೋಧಕರೂ ಸಹ ಬಹುರಾಷ್ಟ್ರೀಯ ಕಂಪೆನಿಗಳ ದಾಸರಾಗುತ್ತಿದ್ದು, ತಮ್ಮ ಶಿಫಾರಸುಗಳನ್ನು ದುಬಾರಿ ಬೆಲೆಯ ಉತ್ಪನ್ನಗಳತ್ತ ಬದಲಿಸುತ್ತಿದ್ದಾರೆ.
- ವೈದ್ಯರೂ ಮೆಡಿಕಲ್ ಶಾಪ್ ನವರ ಒಳ ಒಪ್ಪದಂತೆ ತಜ್ಞರು ಮತ್ತು ತಯಾರಕರ ಒಳ ಒಪ್ಪಂದ ( ವಿದೇಶ ಪ್ರವಾಸ, ಪ್ರಾಜೆಕ್ಟ್ ಆಮಿಶಕ್ಕೆ ) ನಡೆಯುತ್ತಿದೆ.
ಎಂ ಆರ್ ಪಿ ಎಂಬ ಬ್ಲೇಡ್:
- ಭಾರತದಲ್ಲಿ ಎಂ ಆರ್ ಪಿ ಎಂಬ ವ್ಯವಸ್ಥೆಗೆ ಯಾವ ಮಾನ ಮರ್ಯಾದೆಯೂ ಇಲ್ಲ.
- ಒಂದೊಂದು ಕೃಷಿ ಒಳಸುರಿ ಒಂದೊಂದು ಪ್ರದೇಶದಲ್ಲಿ ಒಂದೊಂದು ದರದಲ್ಲಿ ಮಾರಲ್ಪಡುತ್ತದೆ.
- ಒಂದು ಉತ್ಪನ್ನವನ್ನು 40% ತನಕ ಕಡಿಮೆ ಬೆಲೆಗೆ ಮಾರಾಟ ಮಾಡುವವರೂ ಇದ್ದಾರೆ.
- ಅದನ್ನೇ ಎಂ ಆರ್ ಪಿ ದರಕ್ಕೇ ಮಾರಾಟ ಮಾಡುವವರೂ ಇದ್ದಾರೆ.
- ಮೌನವಾಗಿ ಕೃಷಿಕರಿಗೆ ಕಳಪೆ ರಸಗೊಬ್ಬರಗಳನ್ನು ಪೂರೈಕೆ ಮಾಡುವುದದು ನಡೆಯುತ್ತಿರುವಂತೆ ಕಾಣುತ್ತಿದೆ.
- ಆಮದು ಉತ್ಪನ್ನವಾದ ವಿಶೇಷ ರಸಗೊಬ್ಬರಗಳನ್ನು ಮಾರುಕಟ್ಟೆಗೆ ಪರಿಚಯಿಸಿ ರೈತರಿಂದ ಹೆಚ್ಚಿನ ಹಣ ಸುಲಿಗೆಗೆಯ ಹುನ್ನಾರ ಯಾರಿಗೂ ತಿಳಿಯದಂತೆ ನಡೆಯುತ್ತಿದೆ.
ಇದನ್ನು ಕೊಟ್ಟರೂ ಆದಾಯ ಹೆಚ್ಚುತ್ತದೆ:
- ಕೃಷಿ ಎಂದ ಮಾತ್ರಕ್ಕೆ ಅದರಲ್ಲಿ ಬದುಕುವವರು ಕೃಷಿಕರು ಮಾತ್ರವಲ್ಲ. ಅವರಿಗಿಂತ ಹೆಚ್ಚು ಜನ ಅದನ್ನು ಅವಲಂಭಿಸಿ ಬದುಕುತ್ತಾರೆ.
- ಇದು ದೇಶದ ಆರ್ಥ ವ್ಯವಸ್ಥೆಯ ಸುಸ್ಥಿರತೆಗೆ ಭದ್ರ ಬುನಾದಿ. ಇದನ್ನು ಅಡಳಿತ ಶಾಹಿಗಳು, ನೀತಿ ನಿಯಮಾವಳಿ ರೂಪಕರು ಅರಿಯಬೇಕು.
ಒಂದೆಕ್ರೆ ಹೊಲ ವಾರ್ಷಿಕ 100-150 ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುವ ಕ್ಷೇತ್ರವಾಗಿರುವುದು ಸತ್ಯವಾಗಿರುವಾಗ, ಈ ಕ್ಷೇತ್ರಕ್ಕೆ ಉದ್ಯೋಗ ಖಾತ್ರಿಯ (Mahatma Gandhi National Rural Employment Guarantee) ಪ್ರಥಮ ಆದ್ಯತೆಯನ್ನು ನೀಡುವ ಬದಲು ಅದನ್ನು ದುರ್ವ್ಯಯ ಮಾಡುವ ನಮ್ಮ ಸರಕಾರಕ್ಕೆ ಏನೆನ್ನಬೇಕೋ ತಿಳಿಯುವುದಿಲ್ಲ.
- ಸರಕಾರ ನಿಜವಾಗಿ ರೈತರ ಆದಾಯವನ್ನು ದ್ವಿಗುಣ ಗೊಳಿಸುವ ಬಯಕೆ ಹೊಂದಿದೆಯೇ ಆದರೆ ಪ್ರತೀ ರೈತನಿಗೂ ಅವನ ಹಿಡುವಳಿಗೆ ಅನುಗುಣವಾಗಿ ಉದ್ಯೋಗ ಖಾತ್ರಿಯ ಹಣವನ್ನು ನೇರ ವರ್ಗಾವಣೆ ಮೂಲಕ ಹಂಚಿದರೆ ರೈತರ ಆದಾಯದಲ್ಲಿ 50% ಉಳಿತಾಯವಾಗಲಿದೆ.
- ಸರಕಾರ ಯಾವ ಜಾದೂ ಮಾಡಬೇಕಾಗಿಲ್ಲ. ಖರ್ಚನ್ನು ಕಡಿಮೆ ಮಾಡಿಸಿದರೆ ಸ್ವಯಂ ಅಗಿ ಆದಾಯ ಹೆಚ್ಚಳವಾಗುತ್ತದೆ.
- ಆದರೆ ಯಾರ ಕಿಸೆಯೂ ಭರ್ತಿಯಾಗುವುದಿಲ್ಲ.
ಸರಕಾರಕ್ಕೆ ಕೃಷಿಕರ ಆದಾಅವನ್ನು ಹೆಚ್ಚಿಸುವ ನೈಜ ಕಳಕಳಿ ಇದ್ದರೆ ಅದಕ್ಕೆ ಅಗತ್ಯವಾಗುವ ಮೇಲೆ ತಿಳಿಸಲಾದ ಮೂಲಭೂತ ಸಂಗತಿಗಳನ್ನು ಅನುಷ್ಟಾನಕ್ಕೆ ತರಬೇಕು. ರೈತರ ಖರ್ಚು ಕಡಿಮೆಯಾಯಿತೆಂದರೆ ಅವನ ಆದಾಯ ಹೆಚ್ಚಳವಾಗುತ್ತದೆ. ಸರಕರಾದ ಜವಾಬ್ಧಾರಿಯೂ ಕಡಿಮೆಯಾಗುತ್ತದೆ
ಈ ವಿಚಾರ ನಿಮಗೆ ಒಪ್ಪಿಗೆಯಾದರೆ ಅದನ್ನು ಸಂಬಂಧಿಸಿದವರಿಗೆ ಸಂದೇಶ ತಲುಪುವ ತನಕ ಹಂಚಿಕೊಳ್ಳಿ.
End of the article:——————-
search words: farmers income# agriculture policy# Dubbling of farmers income# Agriculture inputs# employment in agriculture sector# pesticides# fertilizers# MRP of agriculture inputs# inferior qualities of agro chemicals#exploitation of farmers# Government policies on agriculture development#