ಎಲ್ಲರ ಚಿತ್ತ ಅಡಿಕೆ ಧಾರಣೆಯ ಮೇಲೆ. ಈಗ ಕೆಲವು ದಿನಗಳಿಂದ ಕರಿಮೆಣಸು ಮೇಲೆಯೇ. ಅಡಿಕೆ ಧಾರಣೆ ಸಹ ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಕುತೂಹಲ. ಏರಿಕೆ ಆಗುತ್ತದೆ. ಹಾಗೆಯೇ ಇಳಿಕೆಯೂ ಆಗುತ್ತದೆ. ಅಕ್ಟೋಬರ್ ತಿಂಗಳ ಕೊನೆ ಎರಡು ವಾರಗಳಲ್ಲಿ ದರ ಸ್ಥಿರತೆ ಕಂಡುಬಂದಿದೆ. ಸಪ್ಟೆಂಬರ್ ನಲ್ಲಿ ನಿರಾಸೆ ಮೂಡಿಸಿದ್ದ ಧಾರಣೆ ಅಕ್ಟೋಬರ್ ನಲ್ಲಿ ಸ್ವಲ್ಪ ಧೈರ್ಯ ಕೊಟ್ಟಿದೆ.
ಸಧ್ಯಕ್ಕೆ ಅಡಿಕೆ ಧಾರಣೆ ಸ್ಥಿರತೆಯಲ್ಲಿ ಮುಂದುವರಿಯಲಿದೆ. ಏನಾದರೂ ವ್ಯತ್ಯಾಸಗಳಾಗುತ್ತಿದ್ದರೆ, ನಿನ್ನೆ ಪಶ್ಚಿಮ ಬಂಗಾಲ ಸರಕಾರ ಪಾನ್ ಮಸಾಲ, ಗುಟ್ಕಾ, ಮಾರಾಟ ಮತ್ತು ಉತ್ಪಾದನೆಯನ್ನು ನಿಷೇದಿಸಿದಾಗ ಏನಾದರೂ ಸಂಚಲನ ಉಂಟಾಗುತ್ತಿತ್ತು. ಅಂತದ್ದು ಏನೂ ಆಗದ ಕಾರಣ ಅಡಿಕೆ ಮಾರುಕಟ್ಟೆ ಸ್ಥಿರತೆಯನ್ನು ಕಾಣಲಿದೆ. ದರ ಇಳಿಕೆ ಆದರೆ ಸ್ವಲ್ಪ ಸಮಯ ಹಾಗೆಯೇ ಮುಂದುವರಿದು ಮತ್ತೆ ಏರಲಿದೆ. ಏರಿಕೆ ಆಗುತ್ತಲೇ ಇದ್ದರೆ ಒಮ್ಮೆ ಮತ್ತೆ ಇಳಿಕೆ ಹಾದಿ ಹಿಡಿಯಲಿದೆ ಎಂಬುದು ಈ ತನಕ ಮಾರುಕಟ್ಟೆಯ ಸ್ಥಿತಿಗತಿ ವಿಚಾರದಲ್ಲಿ ಕಂಡು ಬಂದ ಸಂಗತಿ.
ದಿನಾಂಕ 28 ಅಕ್ಟೋಬರ್ 2021 ರಂದು ಎಲ್ಲೆಲ್ಲಿ ಎಷ್ಟು ದರ ಇತ್ತು ಇಲ್ಲಿದೆ ವಿವರ.
ಊರು –ದಿನಾಂಕ- ವಿಧ – ಕನಿಷ್ಟ ದರ – ಗರಿಷ್ಟ ದರ- ಸರಾಸರಿ ದರ.
ಬಂಟ್ವಾಳ: 28/10/2021, Coca, 18, 10000, 25000, 22500
BANTWALA, 28/10/2021, New Variety, 216, 25000, 50000, 46000
BANTWALA, 28/10/2021, Old Variety, 1, 46000, 51500, 49000
ಬೆಳ್ತಂಗಡಿ: 27/10/2021, New Variety, 105, 28000, 50000, 38500
BELTHANGADI, 26/10/2021, Coca, 5, 20000, 30000, 25000
BELTHANGADI, 25/10/2021, Old Variety, 307, 47750, 51500, 50000
ಬೆಂಗಳೂರು: 28/10/2021, Other, 34, 50000, 55000, 52500
ಭಧ್ರಾವತಿ: 26/10/2021, ರಾಶಿ, 449, 44799, 47519, 47007
ಚೆನ್ನಗಿರಿ: 28/10/2021, ರಾಶಿ 2996, 45599, 47369, 46172
ಚಿತ್ರದುರ್ಗ: 28/10/2021, Api, 6, 46419, 46829, 46649
CHITRADURGA, 28/10/2021, Bette, 220, 39810, 40279, 40059
CHITRADURGA, 28/10/2021, Kempugotu, 285, 30309, 30710, 30500
CHITRADURGA, 28/10/2021, ರಾಶಿ, 130, 45939, 46369, 46189
ದಾವಣಗೆರೆ: 22/10/2021, ರಾಶಿ, 313, 37569, 48509, 42980
ಹೊಸನಗರ: 22/10/2021, ಚಾಲಿ, 27, 32899, 44899, 42889
HOSANAGAR, 22/10/2021, Kempugotu, 18, 33099, 38499, 37699
HOSANAGAR, 22/10/2021, ರಾಶಿ, 489, 44399, 48929, 47839
ಕಾರ್ಕಳ: 28/10/2021, ಹೊಸ ಅಡಿಕೆ, 2, 35000, 42500, 38000
KARKALA, 28/10/2021, ಹಳೆ ಚಾಲಿ, 16, 46000, 50000, 48000
ಕುಮಟಾ: 28/10/2021, Chippu, 18, 32099, 41924, 41209
KUMTA, 28/10/2021, Coca, 7, 17429, 35875, 34869
KUMTA, 28/10/2021, ಹಳೆಚಾಲಿ2019, 10, 42669, 46807, 46219
KUMTA, 28/10/2021, ಹೊಸ ಚಾಲಿ2020. 91, 44999, 47609, 47149
KUMTA, 27/10/2021, Factory, 125, 13509, 18111, 17679
ಕುಂದಾಪುರ: 27/10/2021, Hale Chali, 47, 44000, 50000, 49600
KUNDAPUR, 27/10/2021, Hosa Chali, 1, 30000, 42500, 41500
ಮಡಿಕೇರಿ: 25/10/2021, Raw, 474, 48360, 48360, 48360
ಮಾಲೂರು: 27/10/2021, Other, 27, 48000, 52000, 49382
ಮಂಗಳೂರು: 28/10/2021, Coca, 229, 24445, 43750, 32500
ಪುತ್ತೂರು: 28/10/2021, Coca, 367, 10500, 26000, 18250
PUTTUR, 28/10/2021, New Variety, 145, 35500, 50000, 42750
ಸಾಗರ: 28/10/2021, Bilegotu, 17, 14450, 38289, 37699
SAGAR, 28/10/2021, ಚಾಲಿ, 275, 31510, 45599, 44899
SAGAR, 28/10/2021, Coca, 97, 14250, 37786, 36899
SAGAR, 28/10/2021, Kempugotu, 3, 19379, 38409, 37399
SAGAR, 28/10/2021, ರಾಶಿ, 52, 38699, 46899, 45889
SAGAR, 28/10/2021, ಸಿಪ್ಪೆಗೋಟು, 41, 17299, 25429, 24899
ಶಿಕಾರಿಪುರ: 26/10/2021, Red, 458, 36600, 47400, 44170
ಶಿವಮೊಗ್ಗ: 28/10/2021, Gorabalu, 214, 17000, 38799, 36300
SHIVAMOGGA, 28/10/2021, ರಾಶಿ 414, 43199, 47209, 46200
SHIVAMOGGA, 27/10/2021, Saraku, 7, 51000, 74696, 67000
SHIVAMOGGA, 27/10/2021, Bette, 3, 48859, 50566, 50100
SHIVAMOGGA, 22/10/2021, New Variety, 8, 45599, 47599, 47129
ಸಿದ್ದಾಪುರ: 28/10/2021, Bilegotu, 30, 30999, 42999, 41299
SIDDAPURA, 28/10/2021, ಚಾಲಿ, 120, 42599, 47739, 47419
SIDDAPURA, 28/10/2021, Coca, 16, 24999, 36219, 33769
SIDDAPURA, 28/10/2021, Kempugotu, 2, 22099, 36599, 32099
SIDDAPURA, 28/10/2021, ರಾಶಿ, 5, 42639, 46969, 46819
SIDDAPURA, 28/10/2021, Tattibettee, 5, 33090, 42899, 39809
ಸಿರಾ: 25/10/2021, Other, 181, 9000, 48000, 42608
ಸಿರ್ಸಿ: 28/10/2021, Bette, 6, 38099, 44699, 41860
SIRSI, 28/10/2021, Bilegotu, 16, 30164, 42409, 38576
SIRSI, 28/10/2021, ಚಾಲಿ, 89, 45671, 47718, 46855
SIRSI, 28/10/2021, ರಾಶಿ, 20, 47729, 49619, 48565
ಸುಳ್ಯ : 27/10/2021, New Variety, 1291, 35000, 50000, 48100
SULYA, 25/10/2021, Coca, 117, 10000, 29000, 25600
ತೀರ್ಥಹಳ್ಳಿ: 24/10/2021, Bette, 6, 38000, 49589, 48019
TIRTHAHALLI, 24/10/2021, EDI, 1, 42166, 48919, 48299
TIRTHAHALLI, 24/10/2021, Gorabalu, 17, 34066, 38309, 37009
TIRTHAHALLI, 24/10/2021, Rashi, 36, 44199, 49099, 48899
TIRTHAHALLI, 24/10/2021, Saraku, 32, 46199, 73529, 66519
ತುಮಕೂರು: 28/10/2021, Rashi, 250, 45800, 47100, 46200
ಯಲ್ಲಾಪುರ: 28/10/2021, Bilegotu, 5, 34899, 41200, 39799
YELLAPURA, 28/10/2021, ಚಾಲಿ, 45, 42019, 48199, 47279
YELLAPURA, 28/10/2021, Coca, 7, 24299, 31509, 28619
YELLAPURA, 28/10/2021, Kempugotu, 1, 37035, 38199, 38199
YELLAPURA, 28/10/2021, ರಾಶಿ, 22, 46709, 50869, 49599
YELLAPURA, 28/10/2021, Tattibettee, 7, 40340, 45001, 41899
YELLAPURA, 22/10/2021, Api, 1, 51779, 51779, 51779
ಯಾಕೆ ಯಲ್ಲಾಪುರದಲ್ಲಿ ಯಾವಾಗಲೂ ದರ ಹೆಚ್ಚು:
ಯಲ್ಲಾಪುರದಲ್ಲಿ ದೊಡ್ದ ಪ್ರಮಾಣದಲ್ಲಿ ವ್ಯಾಪಾರ ಇರುವುದಿಲ್ಲ. ಇದು ಇತರ ಕಡೆಗೆ ಹೋಲಿಸಿದರೆ ಸಣ್ಣ ಮಾರುಕಟ್ಟೆ ಎಂತಲೇ ಹೇಳಬಹುದು. ಇಲ್ಲಿನ ಅಡಿಕೆಯ ಗಾತ್ರ ಸ್ವಲ್ಪ ದೊಡ್ದದು. ಗುಣಮಟ್ಟವೂ ಸಹ ಬೆಳೆ ಕಡಿಮೆಯಾದ ಕಾರಣ ಚೆನ್ನಾಗಿಯೇ ಇರುತ್ತದೆ. ಹಾಗೀ ಇಲ್ಲಿ ಉಳಿದೆಡೆಗಿಂತ 1000-1500 ರೂ. ಹೆಚ್ಚು ದರ ಇರುತ್ತದೆ. ಹಾಗೆಮ್ದು ಬೇರೆ ಕಡೆಯ ಮಾಲನ್ನು ಅಲ್ಲಿ ಮಾರಾಟ ಮಾಡಿದಾಗ ಆ ದರ ಸಿಗುವುದಿಲ್ಲ.
ಕರಿಮೆಣಸು ಧಾರಣೆ:
ಎಲ್ಲರ ಗಮನ ಕಳೆದ ನಾಲ್ಕು ವರ್ಷಗಳಿಂದ ಅಂಗಾತ ಮಲಗಿದ್ದ ಕರಿಮೆಣಸಿನ ಬೆಲೆ ತಟಕ್ಕೆಂದು ಎದ್ದು ನಿಂತುದರ ಮೇಲೆ. ಕರಿಮೆಣಸಿನ ಮಾರುಕಟ್ಟೆಯೇ ಹಾಗೆ. ಒಂದೆರಡು ವರ್ಷ ಮೇಲೆ ಮತ್ತೆ ಕೆಳಗೆ. ಒಂದೇ ಒಂದು ಅನುಕೂಲ ಎಂದರೆ ಚೆನ್ನಾಗಿ ಪಕ್ವವಾಗಿ ಕೊಯಿಲು ಮಾಡಿ ಒಣಗಿಸಿದ ಮೆಣಸನ್ನು 7-9 ವರ್ಷಗಳ ತನಕವೂ ದಾಸ್ತಾನು ಇಡಬಹುದು. ಹಾಗಾಗಿ ಕೃಷಿಕರು ದರ ಇಲ್ಲದಿದ್ದರೆ ನಿರಖು ಠೇವಣಿ ಬ್ಯಾಂಕಿನಲ್ಲಿ ಇಡುವ ಬದಲಿಗೆ ದಾಸ್ತಾನು ಇಟ್ಟರೆ ಅದಕ್ಕಿಂತ ಹೆಚ್ಚಿನ ಬಡ್ಡಿ ಇದು ಕೊಡುತ್ತದೆ.
ವಾಸ್ತವವಾಗಿ ದಕ್ಷಿಣ ಕನ್ನಡದ ಹೆಚ್ಚಿನ ಕಡೆಗಳಲ್ಲಿ ಖಾಸಗಿ ವ್ಯಾಪಾರಿಗಳು ಕರಿಮೆಣಸನ್ನು ಕ್ವಿಂಟಾಲಿಗೆ 47,500 – 51,000 ದರದಲ್ಲಿ ಖರೀದಿ ನಡೆಸುತ್ತಿದ್ದಾರೆ. ಕ್ಯಾಂಪ್ಕೋ 45,500 ದರದಲ್ಲಿ ಖರೀದಿ ನಡೆಸುತ್ತಿದೆ. ಮೇಲೆ ತಿಳಿಸಲಾದ ಬೆಲೆ ಎಲ್ಲಾ ರೈತ ಸಮುದಾಯಕ್ಕೂ ಗೊತ್ತಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ದಾಖಲೆಯಲ್ಲಿ ಮಂಗಳೂರಿನಲ್ಲಿ ನಡೆದ ಗರಿಷ್ಟ ಖರೀದಿ ದರ 37000 ರೂ. ಸರಾಸರಿ 28000. ಇದು ಸ್ವಲ್ಪ ಪ್ರಮಾಣ ಅಲ್ಲ, ಒಟ್ಟು 223 ಚೀಲಗಳು. ಒಂದು ಚೀಲ ಅಂದರೆ 60 ಕಿಲೋ. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಧಾರಣೆಯ ಅರಿವಿಲ್ಲದೆ ಯಾವ ರೈತ ಮಾರಾಟ ಮಾಡಿದರೋ ಗೊತ್ತಿಲ್ಲ.ಬಹುಷಃ ಕಡಿಮೆ ದರದಲ್ಲಿ ಖರೀದಿ ಎಂದು ಅಂಡರ್ ಬಿಲ್ಲಿಂಗ್ ಆಗಿರಬೇಕು.
- ನಿನ್ನೆ ಸುಳ್ಯದಲ್ಲಿ 40,000- 40500 ದರದಲ್ಲಿ ಖರೀದಿ ಆಗಿದೆ.
- ಇಂದು ಶಿರಸಿಯಲ್ಲಿ 49000 -51300 ದರದಲ್ಲಿ 2 ಚೀಲ ಮಾರಾಟವಾಗಿದೆ.
- ಯಲ್ಲಾಪುರದಲ್ಲಿ 46500 -47200 ದರದಲ್ಲಿ 1 ಚೀಲ ವ್ಯಾಪಾರವಾಗಿದೆ.
- ಸಕಲೇಶಪುರದಲ್ಲಿ ಆಯದ ಮೆಣಸು 50,000 ದರದಲ್ಲಿ ಖರೀದಿ ಆಗಿದೆ.
- ಆಯ್ದ ಮೆಣಸು 52,000 ಕ್ಕೆ ಖರೀದಿ ಆಗಿದೆ (ಸತ್ಯಮೂರ್ತಿ)
- ಮಂಗಳೂರು ಪಿಬಿ ಅಬ್ದುಲ್ ಹಮೀದ್ ಇವರಲ್ಲಿ 48000 ದರದಲ್ಲಿ ಖರೀದಿ ಆಗಿದೆ.
- ಕಾರ್ಕಳ ಕಾಮಧೇನು ಟ್ರೇಡರ್ಸ್ ಇವರಲ್ಲಿ 49500 ದರದಲ್ಲಿ ಖರೀದಿ ನಡೆದಿದೆ.
- ಮೂಡಿಗೆರೆ A1 ಟ್ರೇಡರ್ಸ್ ಇವರು 49000 ದರದಲ್ಲಿ ಖರೀದಿ ಮಾಡಿದ್ದಾರೆ.
- ಸಕಲೇಶಪುರ ಎಸ್ ಕೆ ಟ್ರೇಡರ್ಸ್ ಇವರು 50,000 ದರದಲ್ಲಿ ಖರೀದಿ ಮಾಡಿದ್ದಾರೆ.
- ಸಕಲೇಶಪುರ ರಾಯಲ್ ಟ್ರೇಡರ್ಸ್ ಇವರು 50,000 ದರದಲ್ಲಿ ಖರೀದಿ ಮಾಡಿದ್ದಾರೆ.
- ಶಿರಸಿಯ ಕದಂಬ ಮಾರ್ಕೆಟಿಂಗ್ ಇವರು 46000 ದರದಕ್ಕೆ ಖರೀದಿ ಮಾಡುತ್ತಾರೆ.
- ಕಲಸ PIB ಟ್ರೇಡರ್ಸ್ ಇವರು 48,000 ರೂ. ಗಳಿಗೆ ಖರೀದಿ ಮಾಡಿದ್ದಾರೆ.
- ಗೋಣಿಕೊಪ್ಪದಲ್ಲಿ ಶ್ರೀ ಮಾರುತಿ ಟ್ರೇಡರ್ಸ್ ಇವರು 47,000 ದರದಲ್ಲಿ ಖರೀದಿ ಮಾಡಿದ್ದಾರೆ.
ಕೇರಳ ಕೊಚ್ಚಿ ಮಾರುಕಟ್ಟೆಯಲ್ಲಿ ಆಯ್ದ ಮೆಣಸಿಗೆ 47200 ಆಯದ ಮೆಣಸಿಗೆ 45200 ಇದೆ. ಇದು ಕರ್ನಾಟಕದ ಧಾರಣೆಗೆ ಹೋಲಿಸಿದಾಗ ಕಡಿಮೆ ಇದೆ.
ಚಾಲಿ ಅಡಿಕೆ ಸ್ವಲ್ಪ ಸ್ವಲ್ಪ ಕೊಡುವುದು ಉತ್ತಮ. ಮುಂದಿನ ವರ್ಷ ಚಾಲಿಯ ಉತ್ಪಾದನೆ ಹೆಚ್ಚು ಇದೆ. ಹೇಗೆಂದರೆ ಎಲ್ಲಾ ಕಡೆ ಅಡಿಕೆ ಬೆಳೆದು ಚಾಲಿ ಆಗಿದೆ. ಹಾಗಾಗಿ ಸ್ವಲ್ಪ ದರ ಇಳಿಯಲೂ ಬಹುದು. ಹಾಗೆಯೇ ಇರಲೂ ಬಹುದು. ಹಾಗಾಗಿ ಈಗ ಉತ್ತಮ ದರವೇ ಇರುವ ಕಾರಣ ಖರ್ಚಿಗೆ ಬೇಕಾದಷ್ಟು ಕೊಡುತ್ತಾ ಇರುವುದು ಸಮಂಜಸ ಎನ್ನಿಸುತ್ತದೆ.
ಕೆಂಪಡಿಕೆ ಬೆಳೆಗಾರರೂ ಸಹ ಈ ಸಮಯದಲ್ಲೂ ಸಲ್ಪ ಕೊಡಿ. ಮುಂದೆ 50000 ಆಗುವುದಿದ್ದರೆ ಅಗ ಮಾರಾಟಕ್ಕೂ ಸ್ವಲ್ಪ ಉಳಿಸಿಕೊಳ್ಳಿ. ಮೂಂದಿನ ಬೆಳೆ ಬರುವ ತನಕ ಹಳೆ ಮಾಲನ್ನು ಉಳಿಸಿಕೊಂಡು ಮಾರುವುದು ಬುದ್ದಿವಂತಿಕೆ.