ಅಡಿಕೆಗೆ ದರ ಏರಿಸಿದ್ದು ಯಾಕೋ?ಇಳಿಸಿದ್ದು ಯಾಕೋ? ಈ ಆಟದಲ್ಲಿ ಅದೆಷ್ಟು ಬೆಳೆಗಾರರ ಆಸೆ ನಿರಾಸೆಯಾಗಿದೆ ! ವರ್ತಕರು ನಷ್ಟ ಅನುಭವಿಸಿದ್ದಾರೆ! ದೊಡ್ಡ ಕುಳಗಳ ಮಧ್ಯೆ ಸಣ್ಣ ಕುಳಗಳು ರಚ್ಚಾಪಚ್ಚವಾಗಿಬಿಟ್ಟವೋ ಎಂಬ ಸ್ಥಿತಿ ಉಂಟಾಗಿದೆ. ಅಡಿಕೆ ಮಾರುಕಟ್ಟೆ ಎಂಬುದು ಬಹುಷಃ ಯಾವ ಅಂಜನ ಜ್ಯೋತಿಷ್ಯಕ್ಕೂ ಸಿಕ್ಕದ ಒಂದು ಗುಟ್ಟಾಗಿ ಉಳಿದಿದೆ.
ಕೆಂಪಡಿಕೆ ಮತ್ತೆ ಇಳಿಕೆಯಾಗಿದ್ದು ಗರಿಷ್ಟ ದರ 45,000 ದ ಅಸು ಪಾಸಿಗೆ ಇಳಿಕೆಯಾಗಿದೆ. ಶಿರಸಿ ಯಲ್ಲಾಪುರದಲ್ಲಿ ಹೊಸ ರಾಶಿ ಬಾರದ ಕಾರಣ ಸ್ವಲ್ಪ ಹೆಚ್ಚು ದರ ಇದೆ. ಚಾಲಿ ಖರೀದಿಗೆ ಖಾಸಗಿಯವರು ಹಣ ಇಲ್ಲ ಎಂದು ತೆಪ್ಪಗೆ ಕುಳಿತಿದ್ದಾರೆ. ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಕಳುಹಿಸಿ ಎನ್ನುತ್ತಾರಂತೆ.ಆದರೆ ಹಿಂದಿನ ಬಾಕಿಯೇ ಚುಕ್ತಾ ಆಗಿಲ್ಲದ ಕಾರಣ ಇಲ್ಲಿಯ ವ್ಯಾಪಾರಿಗಳು ಹಳೆ ಬಾಕಿಗಾಗಿ ಕಾಯುತ್ತಿದ್ದಾರೆ. ಸಾಂಸ್ಥಿಕ ಖರೀದಿದಾರರಲ್ಲಿ ಹಣಕಾಸಿನ ಹೊಂದಾಣಿಕೆಗೆ ಕಷ್ಟ ಉಂಟಾಗದ ಕಾರಣ ಖರೀದಿ ನಡೆಯುತ್ತಿದೆ. ಶಿರಸಿ, ಯಲ್ಲಾಪುರ, ಸಿದ್ದಾಪುರ ಕುಮಟಾ ಗಳಲ್ಲಿ ಚಾಲಿ ದರ ಕ್ವಿಂಟಾಲಿಗೆ 1000 ರೂ. ಗಿಂತಲೂ ಹೆಚ್ಚು ಇಳಿಕೆಯಾಗಿದೆ. ಕರಾವಳಿಯಲ್ಲಿ ಇಳಿಕೆಗೆ ದಿನಗಣನೆ ಆಗುತ್ತಿದೆ.
- ಈ ಮಧ್ಯೆ ನಾಲ್ಕು ವರ್ಷಗಳಿಂದ ನೆಲಕಚ್ಚಿದ್ದ ಕರಿಮೆಣಸು ಧಾರಣೆ ಮತ್ತೆ ಸ್ವಲ್ಪ ಎದ್ದು ಕುಳಿತಂತೆ ಕಾಣುತ್ತಿದೆ.
- ಕ್ಯಾಂಪ್ಕೋ ಸಂಸ್ಥೆ ಇಂದು ಕ್ವಿಂಟಾಲಿಗೆ 41000 ದ ದರ ಗೊತ್ತು ಮಾಡಿದೆ.
- ಖಾಸಗಿ ವ್ಯಾಪಾರಿಗಳು ರೂ.500 ಮುಂದೆ ಇದ್ದಾರೆ.
- ಶಿರಸಿಯಲ್ಲಿ ಇಂದು ಅತ್ಯಧಿಕ ದರ 43190 ಸರಾಸರಿ ದರ 42847ಕ್ಕೆ ಟೆಂಡರ್ ಆಗಿದೆ.
- ಈ ಪರಿಸ್ಥಿತಿ ನೋಡುವಾಗ ಸ್ವಲ್ಪ ಬೆಲೆ ಏರಿಕೆ ಆಗುವ ಸೂಚನೆ ಕಂಡು ಬರುತ್ತದೆ.
ಕಾಫೀ ತೋಟದವರಲ್ಲಿ ಕರಿಮೆಣಸು ದಾಸ್ತಾನು ಇಲ್ಲ. ಕೆಲವು ಅಡಿಕೆ ತೋಟದ ಬೆಳೆಗಾರರಲ್ಲಿ ಇದೆ. ವ್ಯಾಪಾರಿಗಳು ಆಗಲೇ ದಾಸ್ತಾನು ಕ್ಲೀಯರ್ ಮಾಡಿಕೊಂಡಿದ್ದಾರೆ. ಆಮದು ಮೆಣಸು ಇದೆ ಎನ್ನುತ್ತಾರೆ ಶಿರಸಿಯ ಒಬ್ಬ ವ್ಯಾಪಾರಿ. ಹಾಗೆಂದು ಸರಕಾರ ಬಿಗು ಮಾಡಿದರೆ ಮೆಣಸಿನ ದರ 50,000 ದಾಟುವುದರಲ್ಲಿ ಸಂದೇಹ ಇಲ್ಲ. ಕಾರಣ ಸರಕಾರ ಆಮದು ದರ 50000 ನಿರ್ಧರಿಸಿದೆ. ಅದಕ್ಕೆ ಹೊಂದುವ ತೆರಿಗೆ ಪಾವತಿಸಿ ಎಷ್ಟು ಕಡಿಮೆಗೂ ವಿದೇಶದ ಮೆಣಸು ಖರೀದಿಸಬಹುದು ಎಂಬ ಸಡಿಲಿಕೆ ಇರುವ ಕಾರಣ ಮೆಣಸು ಏರಿಕೆ ಕಾಣುತ್ತಿಲ್ಲ.
ಊರು ದಿನಾಂಕ ವಿಧ ಅವಕ- ಕನಿಷ್ಟ – ಗರಿಷ್ಟ- ಸರಾಸರಿ
BANTWALA, 07/10/2021, Coca, 15, 10000, 25000, 22500
BANTWALA, 07/10/2021, New Variety, 217, 25000, 50000, 46000
BANTWALA, 07/10/2021, Old Variety, 8, 46000, 51500, 49000
BELTHANGADI, ವ್ಯಾಪಾರ ಇಲ್ಲ. Coca, 4, 20000, 28500, 23000
BELTHANGADI, – New Variety, 38, 22000, 50000, 45000
BELTHANGADI, – Old Variety, 309, 48970, 51500, 49500
BELTHANGADI, – Other, 20, 25600, 40000, 35000
BENGALURU, 07/10/2021, Other, 35, 50000, 55000, 52500
BHADRAVATHI, ಟೆಂಡರ್ ಇಲ್ಲ Rashi, 248, 41199, 45619, 43861
CHANNAGIRI, ಟೆಂಡರ್ ಇಲ್ಲ Rashi, 488, 42999, 46021, 44651
CHITRADURGA, 07/10/2021, Api, 5, 45219, 45629, 45449
CHITRADURGA, 07/10/2021, Bette, 135, 37810, 38279, 38059
CHITRADURGA, 07/10/2021, Kempugotu, 180, 31600, 32000, 31800
CHITRADURGA, 07/10/2021, Rashi, 90, 44739, 45169, 44989
DAVANAGERE, ಟೆಂಡರ್ ಇಲ್ಲ Rashi, 286, 42122, 46409, 45700
HONNALI, ಟೆಂಡರ್ ಇಲ್ಲ Rashi, 9, 46899, 46899, 46899
KARKALA, 07/10/2021, Old Variety, 46, 46000, 50000, 48000
KARKALA, 05/10/2021, New Variety, 31, 35000, 42500, 38000
KUMTA, 07/10/2021, Chippu, 7, 25509, 40789, 40249
KUMTA, 07/10/2021, Coca, 2, 18109, 37005, 36379
KUMTA, 07/10/2021, Hale Chali, 8, 42010, 46099, 45469
KUMTA, 07/10/2021, Hosa Chali, 29, 44149, 46099, 45819
KUMTA, 04/10/2021, Factory, 225, 12099, 21299, 20769
KUNDAPUR, 07/10/2021, Hale Chali, 38, 46000, 49500, 49300
KUNDAPUR, 07/10/2021, Hosa Chali, 1, 30000, 36000, 34500
MALUR, 04/10/2021, Red, 20, 40000, 45000, 41667
MANGALURU, 07/10/2021, Coca, 265, 25000, 30000, 27000
PUTTUR, 07/10/2021, New Variety, 11, 35500, 50000, 42750
SAGAR, 07/10/2021, Bilegotu, 26, 26899, 39200, 38209
SAGAR, 07/10/2021, Chali, 207, 36001, 45069, 44699
SAGAR, 07/10/2021, Coca, 15, 12500, 38700, 36801
SAGAR, 07/10/2021, Kempugotu, 1, 30899, 38299, 36299
SAGAR, 07/10/2021, Rashi, 75, 38599, 45299, 44799
SAGAR, 07/10/2021, Sippegotu, 97, 8519, 24089, 23669
SHIVAMOGGA, 07/10/2021, Bette, 22, 44009, 50069, 47190
SHIVAMOGGA, 07/10/2021, Gorabalu, 256, 17000, 37500, 36220
SHIVAMOGGA, 07/10/2021, New Variety, 6, 39410, 43569, 42819
SHIVAMOGGA, 07/10/2021, Rashi, 438, 40009, 45969, 44590
SHIVAMOGGA, 05/10/2021, Saraku, 109, 49000, 73377, 65070
SIDDAPURA, 07/10/2021, Bilegotu, 18, 33699, 41009, 39189
SIDDAPURA, 07/10/2021, Chali, 104, 44099, 46729, 46099
SIDDAPURA, 07/10/2021, Coca, 13, 23899, 39099, 26699
SIDDAPURA, 07/10/2021, Kempugotu, 1, 32699, 34389, 34389
SIDDAPURA, 07/10/2021, Rashi, 17, 42989, 45599, 45599
SIDDAPURA, 07/10/2021, Tattibettee, 1, 40019, 44649, 40019
SIRA, 04/10/2021, Other, 413, 9000, 51000, 46212
SIRSI, 07/10/2021, Bette, 8, 16018, 45189, 42600
SIRSI, 07/10/2021, Bilegotu, 25, 20181, 42176, 39441
SIRSI, 07/10/2021, Chali, 281, 44699, 47211, 46280
SIRSI, 07/10/2021, Rashi, 31, 26001, 47099, 46512
TUMAKURU, 01/10/2021, Rashi, 24, 48100, 50300, 49300
YELLAPURA, 07/10/2021, Api, 1, 50399, 50399, 50399
YELLAPURA, 07/10/2021, Bilegotu, 1, 32122, 39769, 37299
YELLAPURA, 07/10/2021, Chali, 85, 41909, 47190, 46209
YELLAPURA, 07/10/2021, Coca, 14, 24299, 34012, 31012
YELLAPURA, 07/10/2021, Kempugotu, 1, 31599, 35600, 33100
YELLAPURA, 07/10/2021, Rashi, 20, 43779, 48989, 46875
YELLAPURA, 07/10/2021, Tattibettee, 12, 40099, 43060, 42290
ಕರಿಮೆಣಸು ಧಾರಣೆ:
ಊರು ದಿನಾಂಕ ವಿಧ ಅವಕ ಕನಿಷ್ಟ ಗರಿಷ್ಟ ಸರಾಸರಿ
BELTHANGADI, 01/10/2021, Other, 4, 38000, 39700, 39000
CHANNAGIRI, 05/10/2021, Black Pepper, 3, 38518, 40089, 39382
KARKALA, 07/10/2021, Black Pepper, 3, 38500, 41000, 40000
MANGALURU, 07/10/2021, Black Pepper, 56, 20000, 30000, 28000
SAGAR, 07/10/2021, Other, 1, 38009, 38329, 38009
SIDDAPURA, 07/10/2021, Black Pepper, 1, 40699, 40869, 40869
SIRSI, 07/10/2021, Black Pepper, 2, 42489, 43199, 42847
YELLAPURA, 07/10/2021, Other, 1, 39311, 39311, 39311
ಕಾಫೀ ಧಾರಣೆ:
AP: ₹ 13550
AC: ₹ 230
RP: ₹ 6100
RC: ₹ 136
ರಬ್ಬರ್ ಧಾರಣೆ:
ಗ್ರೇಡ್-166.50
ಲಾಟ್ -155.50
ಸ್ಕ್ರಾಪ್- 99-107
ನವರಾತ್ರೆ ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ದೀಪಾವಳಿಯೂ ಇದೆ. ದೀಪಾವಳಿ ಸಮಯದ ಅಗತ್ಯಕ್ಕಾಗಿ ಈಗಲೇ ಕೊಳ್ಳುವಿಕೆ ದಾಸ್ತಾನು ನಡೆದಿದೆ ಎಂಬ ಸುದ್ದಿ ಇದೆ. ಇದೆಲ್ಲಾ ಒಂದು ಊಹನೆ ಇದ್ದರೂ ಇರಬಹುದು. ಬಹುಷಃ ಕೆಲವು ಸಮಯ ಇನ್ನು ದರ ತುಸು ಇಳಿಕೆಯೇ ಹೊರತು ಏರಿಕೆ ಸಂದೇಹ ಎನ್ನಿಸುತ್ತದೆ. ಹಾಗೆಂದು ದರ ಇಳಿಕೆ ತಾತ್ಕಾಲಿಕ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಮೆಣಸಿಗೆ ಚಾನ್ಸ್ ಇದೆ:
ಶ್ರೀಲಂಕಾ ದಲ್ಲಿ ಮೆಣಸಿನ ಇಳುವರಿ ಕಡಿಕೆ ಆಗುವ ಅಂದಾಜು. ವಿಯೆಟ್ನಾಂ ನಲ್ಲಿ ಈಗಿನ ದರಕ್ಕೆ ಅವರಿಗೆ ಈ ಕೃಷಿ ಪೂರೈಸುವುದಿಲ್ಲ ಎಂದು ಬೇರೆ ಕೃಷಿಯತ್ತ ಬದಲಾವಣೆ ಮಾಡುತ್ತಿದ್ದಾರೆ. ಗುಣಮಟ್ಟದ ಮೆಣಸಿಗೆ ಭಾರತವೇ ಹಿಂದಿನಿಂದಲೂ ಪ್ರಸಿದ್ದಿ ಆದ ಕಾರಣ ಮುಂದಿನ ವರ್ಷದಿಂದ ಮೆಣಸಿನ ಬೆಲೆ 50,000 ದಾಟಿದರೂ ಅಚ್ಚರಿ ಇಲ್ಲ. ಕಳೆದ ವರ್ಷದ ಹಾಗೂ ಅದರ ಹಿಂದಿನ ವರ್ಷದ ಮಾಲನ್ನು ದಾಸ್ತಾನು ಇಟ್ಟು ಕೊಂಡು, ಅದಕ್ಕೂ ಹಿಂದಿನ ವರ್ಷದ ದಾಸ್ತಾನು ಇದ್ದವರು ನವೆಂಬರ್ ಎರಡನೇ ವಾರದ ಒಳಗೆ ಮಾರಾಟ ಮಾಡಿ ನಗದೀಕರಣ ಮಾಡಬಹುದು.