ಅಡಿಕೆ ಖರೀದಿಗೆ ದುಡ್ಡಿಲ್ಲ- ಕರಿಮೆಣಸಿಗೆ ಬೇಡಿಕೆ -07-10-2021 ರ ಧಾರಣೆ.

by | Oct 7, 2021 | Market (ಮಾರುಕಟ್ಟೆ) | 0 comments

ಅಡಿಕೆಗೆ ದರ ಏರಿಸಿದ್ದು ಯಾಕೋ?ಇಳಿಸಿದ್ದು ಯಾಕೋ? ಈ ಆಟದಲ್ಲಿ ಅದೆಷ್ಟು ಬೆಳೆಗಾರರ ಆಸೆ ನಿರಾಸೆಯಾಗಿದೆ ! ವರ್ತಕರು ನಷ್ಟ ಅನುಭವಿಸಿದ್ದಾರೆ! ದೊಡ್ಡ ಕುಳಗಳ ಮಧ್ಯೆ ಸಣ್ಣ ಕುಳಗಳು ರಚ್ಚಾಪಚ್ಚವಾಗಿಬಿಟ್ಟವೋ ಎಂಬ ಸ್ಥಿತಿ ಉಂಟಾಗಿದೆ.  ಅಡಿಕೆ ಮಾರುಕಟ್ಟೆ ಎಂಬುದು ಬಹುಷಃ ಯಾವ ಅಂಜನ ಜ್ಯೋತಿಷ್ಯಕ್ಕೂ ಸಿಕ್ಕದ ಒಂದು ಗುಟ್ಟಾಗಿ ಉಳಿದಿದೆ.

ಕೆಂಪಡಿಕೆ ಮತ್ತೆ ಇಳಿಕೆಯಾಗಿದ್ದು ಗರಿಷ್ಟ ದರ 45,000 ದ ಅಸು ಪಾಸಿಗೆ ಇಳಿಕೆಯಾಗಿದೆ. ಶಿರಸಿ ಯಲ್ಲಾಪುರದಲ್ಲಿ ಹೊಸ ರಾಶಿ ಬಾರದ ಕಾರಣ ಸ್ವಲ್ಪ ಹೆಚ್ಚು ದರ ಇದೆ. ಚಾಲಿ ಖರೀದಿಗೆ ಖಾಸಗಿಯವರು ಹಣ ಇಲ್ಲ ಎಂದು ತೆಪ್ಪಗೆ ಕುಳಿತಿದ್ದಾರೆ. ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಕಳುಹಿಸಿ ಎನ್ನುತ್ತಾರಂತೆ.ಆದರೆ ಹಿಂದಿನ ಬಾಕಿಯೇ ಚುಕ್ತಾ ಆಗಿಲ್ಲದ ಕಾರಣ ಇಲ್ಲಿಯ ವ್ಯಾಪಾರಿಗಳು ಹಳೆ ಬಾಕಿಗಾಗಿ ಕಾಯುತ್ತಿದ್ದಾರೆ. ಸಾಂಸ್ಥಿಕ  ಖರೀದಿದಾರರಲ್ಲಿ ಹಣಕಾಸಿನ ಹೊಂದಾಣಿಕೆಗೆ ಕಷ್ಟ ಉಂಟಾಗದ ಕಾರಣ ಖರೀದಿ ನಡೆಯುತ್ತಿದೆ. ಶಿರಸಿ, ಯಲ್ಲಾಪುರ, ಸಿದ್ದಾಪುರ ಕುಮಟಾ ಗಳಲ್ಲಿ ಚಾಲಿ ದರ ಕ್ವಿಂಟಾಲಿಗೆ 1000 ರೂ. ಗಿಂತಲೂ ಹೆಚ್ಚು ಇಳಿಕೆಯಾಗಿದೆ. ಕರಾವಳಿಯಲ್ಲಿ ಇಳಿಕೆಗೆ ದಿನಗಣನೆ ಆಗುತ್ತಿದೆ.

  • ಈ ಮಧ್ಯೆ ನಾಲ್ಕು ವರ್ಷಗಳಿಂದ ನೆಲಕಚ್ಚಿದ್ದ ಕರಿಮೆಣಸು ಧಾರಣೆ ಮತ್ತೆ  ಸ್ವಲ್ಪ ಎದ್ದು ಕುಳಿತಂತೆ  ಕಾಣುತ್ತಿದೆ.
  • ಕ್ಯಾಂಪ್ಕೋ ಸಂಸ್ಥೆ ಇಂದು ಕ್ವಿಂಟಾಲಿಗೆ 41000 ದ ದರ ಗೊತ್ತು ಮಾಡಿದೆ.
  • ಖಾಸಗಿ ವ್ಯಾಪಾರಿಗಳು ರೂ.500 ಮುಂದೆ ಇದ್ದಾರೆ.
  • ಶಿರಸಿಯಲ್ಲಿ ಇಂದು ಅತ್ಯಧಿಕ ದರ 43190 ಸರಾಸರಿ ದರ  42847ಕ್ಕೆ ಟೆಂಡರ್ ಆಗಿದೆ.
  • ಈ ಪರಿಸ್ಥಿತಿ ನೋಡುವಾಗ ಸ್ವಲ್ಪ ಬೆಲೆ ಏರಿಕೆ ಆಗುವ ಸೂಚನೆ ಕಂಡು ಬರುತ್ತದೆ.
ಆತ್ಯಧಿಕ ದರಕ್ಕೆ ಖರೀದಿಯಾದ ಕಪ್ಪಾಗಿರುವ ಕರಿಮೆಣಸು
ಆತ್ಯಧಿಕ ದರಕ್ಕೆ ಖರೀದಿಯಾದ ಕಪ್ಪಾಗಿರುವ ಕರಿಮೆಣಸು

ಕಾಫೀ ತೋಟದವರಲ್ಲಿ ಕರಿಮೆಣಸು ದಾಸ್ತಾನು ಇಲ್ಲ. ಕೆಲವು ಅಡಿಕೆ ತೋಟದ ಬೆಳೆಗಾರರಲ್ಲಿ ಇದೆ.  ವ್ಯಾಪಾರಿಗಳು ಆಗಲೇ ದಾಸ್ತಾನು ಕ್ಲೀಯರ್ ಮಾಡಿಕೊಂಡಿದ್ದಾರೆ. ಆಮದು ಮೆಣಸು ಇದೆ ಎನ್ನುತ್ತಾರೆ ಶಿರಸಿಯ ಒಬ್ಬ ವ್ಯಾಪಾರಿ. ಹಾಗೆಂದು ಸರಕಾರ ಬಿಗು ಮಾಡಿದರೆ ಮೆಣಸಿನ ದರ 50,000 ದಾಟುವುದರಲ್ಲಿ ಸಂದೇಹ ಇಲ್ಲ. ಕಾರಣ ಸರಕಾರ ಆಮದು ದರ 50000 ನಿರ್ಧರಿಸಿದೆ. ಅದಕ್ಕೆ ಹೊಂದುವ ತೆರಿಗೆ ಪಾವತಿಸಿ ಎಷ್ಟು ಕಡಿಮೆಗೂ ವಿದೇಶದ ಮೆಣಸು ಖರೀದಿಸಬಹುದು ಎಂಬ ಸಡಿಲಿಕೆ ಇರುವ ಕಾರಣ ಮೆಣಸು ಏರಿಕೆ ಕಾಣುತ್ತಿಲ್ಲ.  

ಊರು                 ದಿನಾಂಕ        ವಿಧ    ಅವಕ- ಕನಿಷ್ಟ – ಗರಿಷ್ಟ- ಸರಾಸರಿ

BANTWALA, 07/10/2021, Coca, 15, 10000, 25000, 22500

BANTWALA, 07/10/2021, New Variety, 217, 25000, 50000, 46000

BANTWALA, 07/10/2021, Old Variety, 8, 46000, 51500, 49000

BELTHANGADI, ವ್ಯಾಪಾರ ಇಲ್ಲ. Coca, 4, 20000, 28500, 23000

BELTHANGADI, –                New Variety, 38, 22000, 50000, 45000

BELTHANGADI, –               Old Variety, 309, 48970, 51500, 49500

BELTHANGADI, –               Other, 20, 25600, 40000, 35000

BENGALURU, 07/10/2021, Other, 35, 50000, 55000, 52500

BHADRAVATHI, ಟೆಂಡರ್ ಇಲ್ಲ  Rashi, 248, 41199, 45619, 43861

CHANNAGIRI, ಟೆಂಡರ್ ಇಲ್ಲ Rashi, 488, 42999, 46021, 44651

CHITRADURGA, 07/10/2021, Api, 5, 45219, 45629, 45449

CHITRADURGA, 07/10/2021, Bette, 135, 37810, 38279, 38059

CHITRADURGA, 07/10/2021, Kempugotu, 180, 31600, 32000, 31800

CHITRADURGA, 07/10/2021, Rashi, 90, 44739, 45169, 44989

DAVANAGERE, ಟೆಂಡರ್ ಇಲ್ಲ Rashi, 286, 42122, 46409, 45700

HONNALI, ಟೆಂಡರ್ ಇಲ್ಲ Rashi, 9, 46899, 46899, 46899

KARKALA, 07/10/2021, Old Variety, 46, 46000, 50000, 48000

KARKALA, 05/10/2021, New Variety, 31, 35000, 42500, 38000

KUMTA, 07/10/2021, Chippu, 7, 25509, 40789, 40249

KUMTA, 07/10/2021, Coca, 2, 18109, 37005, 36379

KUMTA, 07/10/2021, Hale Chali, 8, 42010, 46099, 45469

KUMTA, 07/10/2021, Hosa Chali, 29, 44149, 46099, 45819

KUMTA, 04/10/2021, Factory, 225, 12099, 21299, 20769

KUNDAPUR, 07/10/2021, Hale Chali, 38, 46000, 49500, 49300

KUNDAPUR, 07/10/2021, Hosa Chali, 1, 30000, 36000, 34500

MALUR, 04/10/2021, Red, 20, 40000, 45000, 41667

MANGALURU, 07/10/2021, Coca, 265, 25000, 30000, 27000

PUTTUR, 07/10/2021, New Variety, 11, 35500, 50000, 42750

SAGAR, 07/10/2021, Bilegotu, 26, 26899, 39200, 38209

SAGAR, 07/10/2021, Chali, 207, 36001, 45069, 44699

SAGAR, 07/10/2021, Coca, 15, 12500, 38700, 36801

SAGAR, 07/10/2021, Kempugotu, 1, 30899, 38299, 36299

SAGAR, 07/10/2021, Rashi, 75, 38599, 45299, 44799

SAGAR, 07/10/2021, Sippegotu, 97, 8519, 24089, 23669

SHIVAMOGGA, 07/10/2021, Bette, 22, 44009, 50069, 47190

SHIVAMOGGA, 07/10/2021, Gorabalu, 256, 17000, 37500, 36220

SHIVAMOGGA, 07/10/2021, New Variety, 6, 39410, 43569, 42819

SHIVAMOGGA, 07/10/2021, Rashi, 438, 40009, 45969, 44590

SHIVAMOGGA, 05/10/2021, Saraku, 109, 49000, 73377, 65070

SIDDAPURA, 07/10/2021, Bilegotu, 18, 33699, 41009, 39189

SIDDAPURA, 07/10/2021, Chali, 104, 44099, 46729, 46099

SIDDAPURA, 07/10/2021, Coca, 13, 23899, 39099, 26699

SIDDAPURA, 07/10/2021, Kempugotu, 1, 32699, 34389, 34389

SIDDAPURA, 07/10/2021, Rashi, 17, 42989, 45599, 45599

SIDDAPURA, 07/10/2021, Tattibettee, 1, 40019, 44649, 40019

SIRA, 04/10/2021, Other, 413, 9000, 51000, 46212

SIRSI, 07/10/2021, Bette, 8, 16018, 45189, 42600

SIRSI, 07/10/2021, Bilegotu, 25, 20181, 42176, 39441

SIRSI, 07/10/2021, Chali, 281, 44699, 47211, 46280

SIRSI, 07/10/2021, Rashi, 31, 26001, 47099, 46512

TUMAKURU, 01/10/2021, Rashi, 24, 48100, 50300, 49300

YELLAPURA, 07/10/2021, Api, 1, 50399, 50399, 50399

YELLAPURA, 07/10/2021, Bilegotu, 1, 32122, 39769, 37299

YELLAPURA, 07/10/2021, Chali, 85, 41909, 47190, 46209

YELLAPURA, 07/10/2021, Coca, 14, 24299, 34012, 31012

YELLAPURA, 07/10/2021, Kempugotu, 1, 31599, 35600, 33100

YELLAPURA, 07/10/2021, Rashi, 20, 43779, 48989, 46875

YELLAPURA, 07/10/2021, Tattibettee, 12, 40099, 43060, 42290

ಟೆಂಡರ್ ಗೆ ಬಂದ ಕೆಂಪು ಹಾಗೂ ಚಾಲಿ ಅಡಿಕೆ

ಕರಿಮೆಣಸು ಧಾರಣೆ:

ಊರು                 ದಿನಾಂಕ        ವಿಧ    ಅವಕ ಕನಿಷ್ಟ  ಗರಿಷ್ಟ  ಸರಾಸರಿ

BELTHANGADI, 01/10/2021, Other, 4, 38000, 39700, 39000

CHANNAGIRI, 05/10/2021, Black Pepper, 3, 38518, 40089, 39382

KARKALA, 07/10/2021, Black Pepper, 3, 38500, 41000, 40000

MANGALURU, 07/10/2021, Black Pepper, 56, 20000, 30000, 28000

SAGAR, 07/10/2021, Other, 1, 38009, 38329, 38009

SIDDAPURA, 07/10/2021, Black Pepper, 1, 40699, 40869, 40869

SIRSI, 07/10/2021, Black Pepper, 2, 42489, 43199, 42847

YELLAPURA, 07/10/2021, Other, 1, 39311, 39311, 39311

ಕಾಫೀ ಧಾರಣೆ:

AP:        ₹ 13550

AC:        ₹ 230

RP:        ₹ 6100

RC:        ₹ 136

ರಬ್ಬರ್ ಧಾರಣೆ:

ಗ್ರೇಡ್-166.50

ಲಾಟ್ -155.50

ಸ್ಕ್ರಾಪ್- 99-107

ನವರಾತ್ರೆ  ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ದೀಪಾವಳಿಯೂ ಇದೆ. ದೀಪಾವಳಿ ಸಮಯದ ಅಗತ್ಯಕ್ಕಾಗಿ ಈಗಲೇ ಕೊಳ್ಳುವಿಕೆ ದಾಸ್ತಾನು ನಡೆದಿದೆ ಎಂಬ ಸುದ್ದಿ ಇದೆ. ಇದೆಲ್ಲಾ ಒಂದು ಊಹನೆ ಇದ್ದರೂ ಇರಬಹುದು. ಬಹುಷಃ ಕೆಲವು ಸಮಯ ಇನ್ನು ದರ ತುಸು ಇಳಿಕೆಯೇ ಹೊರತು ಏರಿಕೆ ಸಂದೇಹ ಎನ್ನಿಸುತ್ತದೆ.  ಹಾಗೆಂದು ದರ ಇಳಿಕೆ ತಾತ್ಕಾಲಿಕ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಮೆಣಸಿಗೆ ಚಾನ್ಸ್ ಇದೆ:

ಶ್ರೀಲಂಕಾ ದಲ್ಲಿ ಮೆಣಸಿನ ಇಳುವರಿ ಕಡಿಕೆ ಆಗುವ ಅಂದಾಜು. ವಿಯೆಟ್ನಾಂ ನಲ್ಲಿ ಈಗಿನ ದರಕ್ಕೆ ಅವರಿಗೆ ಈ ಕೃಷಿ ಪೂರೈಸುವುದಿಲ್ಲ ಎಂದು ಬೇರೆ ಕೃಷಿಯತ್ತ ಬದಲಾವಣೆ ಮಾಡುತ್ತಿದ್ದಾರೆ. ಗುಣಮಟ್ಟದ ಮೆಣಸಿಗೆ ಭಾರತವೇ ಹಿಂದಿನಿಂದಲೂ ಪ್ರಸಿದ್ದಿ ಆದ ಕಾರಣ ಮುಂದಿನ ವರ್ಷದಿಂದ ಮೆಣಸಿನ ಬೆಲೆ 50,000 ದಾಟಿದರೂ ಅಚ್ಚರಿ ಇಲ್ಲ. ಕಳೆದ ವರ್ಷದ ಹಾಗೂ ಅದರ ಹಿಂದಿನ ವರ್ಷದ  ಮಾಲನ್ನು ದಾಸ್ತಾನು ಇಟ್ಟು ಕೊಂಡು, ಅದಕ್ಕೂ ಹಿಂದಿನ ವರ್ಷದ ದಾಸ್ತಾನು ಇದ್ದವರು ನವೆಂಬರ್ ಎರಡನೇ ವಾರದ ಒಳಗೆ ಮಾರಾಟ ಮಾಡಿ ನಗದೀಕರಣ ಮಾಡಬಹುದು.

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!