ಅಡಿಕೆಗೆ 2022 ಕ್ಕೆ ದಾಖಲೆಯ ಬೆಲೆ ಬರಲಿದೆ -ಅಡಿಕೆ ಧಾರಣೆ ದಿನಾಂಕ.16-12-2021.

ಅಡಿಕೆ ಬೇಯಿಸಿದ ರಾಸಿ

ಹೊಸ ವರ್ಷ 2022 ಕ್ಕೆ ಅಡಿಕೆ ಧಾರಣೆ ಐತಿಹಾಸಿಕ ದಾಖಲೆಯನ್ನು ನಿರ್ಮಿಸುತ್ತದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಈಗಾಗಲೇ ಹೊಸ ಚಾಲಿಗೆ ರೂ.465 ದಾಟಿದೆ. ಹಳೆ ಚಾಲಿ 540-545 ಕ್ಕೆ ಮುಟ್ಟಿದೆ. ಕೆಂಪು ರಾಶಿ ಸರಾಸರಿ 47,000 ದ ಗಡಿ ದಾಟಿದೆ. ಈ ವರ್ಷದ ಕೊನೆ ಒಳಗೆ ಹೊಸ ಚಾಲಿ ದರ  47500 ದಾಟುವ ಎಲ್ಲಾ ಸಾಧ್ಯತೆಗಳಿದ್ದು, ಹಳೆ ಚಾಲಿ 55,000 ಮುಟ್ಟುವ ನಿರೀಕ್ಷೆ ಇದೆ. ಹೊಸ ವರ್ಷದಲ್ಲಿ ಕೆಂಪಡಿಕೆ ದರ ಮೇಲೇರಲಿದೆ. ಚಾಲಿಯೂ 50000 ಗಡಿ ದಾಟಲಿದೆ ಎಂಬುದಾಗಿ ಕೆಲವು ವರ್ತಕರು ಅಭಿಪ್ರಾಯಪಡುತ್ತಾರೆ.

ಅಡಿಕೆ ಆಮದು ಆಗುವ ಯಾವ ಸಾಧ್ಯತೆಯೂ ಇಲ್ಲ. ಸರಕಾರ ಈ ವಿಷಯದಲ್ಲಿ ಭಾರಿ ಬಿಗು ಮಾಡಿದೆ ಎನ್ನುತ್ತಾರೆ. ದೇಶೀಯವಾಗಿ ಅಡಿಕೆ ಕಡಿಮೆ ಇದೆ. ಆಮದು ಆಗಬೇಕು ಎಂಬ ಒತ್ತಾಯಗಳಿದ್ದರೂ ಕೇಂದ್ರ ಸರಕಾರ ಇದಕ್ಕೆ ಸೊಪ್ಪು ಹಾಕದೆ ಅಡಿಕೆ ಬೆಳೆಗಾರರ ಪಾಲಿಗೆ ಮಹದುಪಕಾರ ಮಾಡಿದೆ ಎಂಬುದಾಗಿ ಜನ ಹೇಳುತ್ತಿದ್ದಾರೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ ನೈಸರ್ಗಿಕ ವಿಕೋಪಗಳ ಕಾರಣದಿಂದ ಭಾರತ ಹೊರತಾಗಿ ಅಡಿಕೆ ಬೆಳೆಯುವ ಬಾಂಗ್ಲಾ ದೇಶ ಮತ್ತು ಇಂಡೋನೇಶಿಯಾಗಳಲ್ಲಿ ಅಡಿಕೆ ಬೆಳೆ ಭಾರೀ ಹಾನಿ ಆಗಿ ಕೊರತೆ ಇರುವ ಕಾರಣ ಆಮದು ಆಗುತ್ತಿಲ್ಲ ಎಂಬುದಾಗಿಯೂ  ವರದಿಗಳಿವೆ. ಯಾವುದೋ ಅಜ್ಞಾತ ಕಾರಣಕ್ಕಾಗಿ ಅಡಿಕೆ ದರ ಏರಿಕೆ ಆಗುತ್ತಲೇ ಇದೆ. ಗುಟ್ಕಾ ತಯಾರಿಕೆಗೂ ಚಾಲಿ ಅಡಿಕೆಯನ್ನು ಬಳಕೆ ಮಾಡುತ್ತಿದ್ದಾರೆ. ಕಚ್ಚಾ ಸುಪಾರಿ ಸೇರಿಸಿ ಪಾನ್ ಸೇವಿಸುವವರಲ್ಲಿ ಬಹುತೇಕ ಮಂದಿ ಚಾಲಿಯನ್ನೇ ಬಳಕೆ ಮಾಡುತ್ತಿರುವ ಕಾರಣ ಚಾಲಿಗೆ ಬೇಡಿಕೆ ಹೆಚ್ಚಿದೆ. ಕೆಂಪಡಿಕೆ ದರ ಏರಿಕೆಗೆ ಮುಹೂರ್ತ ಕೂಡಿ ಬಂದಿಲ್ಲ. ಈ ವರ್ಷದ ಹವಾಮಾನ ವೈಪರೀತ್ಯ ಮತ್ತು ಸಂಸ್ಕರಣೆಗೆ ಉಂಟಾದ ತೊಂದರೆಗಳಿಂದಾಗಿ ಬೇಯಿಸಿ ಸಂಸ್ಕ್ರರಿಸುವ ಅಡಿಕೆಯೂ ಕೊರತೆ ಆಗಿ ಸದ್ಯವೇ ಈ ಮಾರುಕಟ್ಟೆ ಏರಿಕೆ ಕಾಣಬಹುದು ಎಂಬುದಾಗಿ ಹೇಳುತ್ತಿದ್ದಾರೆ.

ಕೆಂಪಡಿಕೆಯ ಮೇಲೆ ಕಲಬೆರಕೆಯ ಅಪವಾದ ಹೆಚ್ಚಾಗಿರುವುದೇ ಇದರ ದರ ಕುಸಿಯಲು ಕಾರಣ. ಚಾಲಿಗೂ ಬೇಯಿಸಿದ ಅಡಿಕೆಗೂ ಸುಮಾರು 5000 ರೂ ದರ ವ್ಯತ್ಯಾಸ ಇರಬೇಕು. ಆದರೆ ಚಾಲಿಯ ದರ ಮುಂದೆ ಇದೆ. ಅದಕ್ಕೆ ಕಾರಣ ಗ್ರಾಹಕರ ಆಯ್ಕೆ ಬದಲಾವಣೆ ಆಗಿದೆ ಎಂಬುದಂತೂ ಸ್ಪಷ್ಟ. ಬೆಳೆಗಾರರು ತಮ್ಮ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಸಂಸ್ಕರಿಸಬೇಕು. ಕೃತಕ ಬಣ್ಣ್ನ ಹಾಕುವಿಕೆ ಮುಂತಾದ ಕೃತ್ರಿಮಗಳನ್ನು ಮಾಡದೆ ಬೇಯಿಸಿದ ಅಡಿಕೆಯನ್ನು ಬ್ರಾಂಡಿಂಗ್ ಮಾಡಬೇಕಾದ ಅಗತ್ಯ ಇದೆ.

ಅಡಿಕೆ ಹರಾಜು ಪ್ರದೇಶ

ಇಂದು ಅಡಿಕೆ ಧಾರಣೆ:

ಊರು –ದಿನಾಂಕ –ವಿಧ- ಒಟ್ಟು ಅವಕ- ಕನಿಷ್ಟ- ಗರಿಷ್ಟ- ಸರಾಸರಿ

 • ಅರಕಲಗೂಡು: 10/12/2021, ಕಚ್ಚಾ, 390, 2000, 2000, 2000
 • ಬಂಟ್ವಾಳ: 16/12/2021, ಕೋಕಾ, 12, 12500, 25000, 22500
 • BANTWALA, 16/12/2021, ಹೊಸ ಚಾಲಿ, 3, 27500, 45000, 42000
 • BANTWALA, 16/12/2021, ಹಳೆ ಚಾಲಿ, 19, 46000, 53000, 50000
 • ಬೆಳ್ತಂಗಡಿ: 15/12/2021, ಹೊಸ ಚಾಲಿ, 145, 30000, 45000, 41000
 • BELTHANGADI, 14/12/2021, ಹಳೆ ಚಾಲಿ, 193, 42800, 53000, 48000
 • ಬೆಂಗಳೂರು: 15/12/2021, ಇತರ, 100, 45000, 55000, 50000
 • ಭದ್ರಾವತಿ: 16/12/2021, ರಾಶಿ, 697, 45309, 47809, 47142
 • ಚೆನ್ನಗಿರಿ: 16/12/2021, ರಾಸಿ, 3764, 44099, 47699, 47055
 • ಚಿತ್ರದುರ್ಗ: 16/12/2021, ಅಪಿ, 3, 46729, 47169, 46979
 • CHITRADURGA, 16/12/2021, ಬೆಟ್ಟೆ, 100, 39819, 40299, 40049
 • CHITRADURGA, 16/12/2021, ಕೆಂಪುಗೋಟು, 160, 31609, 32010, 31800
 • CHITRADURGA, 16/12/2021, ರಾಶಿ, 55, 46239, 46689, 46459
 • ದಾವಣಗೆರೆ: 16/12/2021, ರಾಸಿ, 297, 32669, 47309, 46160
 • ಹೊನ್ನಾಳಿ: 15/12/2021, ರಾಸಿ, 3, 46950, 46950, 46950
 • ಹೊಸನಗರ: 10/12/2021, ಚಾಲಿ, 2, 47539, 47539, 47539
 • HOSANAGAR, 10/12/2021, ಕೆಂಪುಗೋಟು, 79, 34609, 39299, 38299
 • HOSANAGAR, 10/12/2021, ರಾಸಿ 818, 45109, 48699, 48099
 • ಕಾರ್ಕಳ: 16/12/2021, ಹೊಸ ಅಡಿಕೆ, 8, 40000, 45000, 43000
 • KARKALA, 16/12/2021, ಹಳೆ ಅಡಿಕೆ, 8, 46000, 53000, 50000
 • ಕುಮಟಾ: 16/12/2021, ಚಿಪ್ಪು, 6, 24109, 41288, 40549
 • KUMTA, 16/12/2021, ಕೋಕಾ, 2, 20100, 35088, 34699
 • KUMTA, 16/12/2021, ಹಳೆ ಚಾಲಿ, 12, 47900, 50539, 49879
 • KUMTA, 16/12/2021, ಹೊಸ ಚಾಲಿ, 10, 36769, 42829, 42269
 • KUMTA, 15/12/2021, ಫ್ಯಾಕ್ಟರಿ, 70, 12609, 18699, 17919
 • ಕುಂದಾಪುರ: 16/12/2021, ಹಳೆ ಚಾಲಿ, 1, 48000, 53000, 52500
 • KUNDAPUR, 16/12/2021, ಹೊಸ ಚಾಲಿ, 19, 38000, 45000, 43000
 • ಮಡಿಕೇರಿ: 16/12/2021, ಕಚ್ಚಾ, 75, 49461, 49461, 49461
 • ಮಂಗಳೂರು: 16/12/2021, ಕೋಕಾ, 130, 23500, 28000, 27200
 • ಪುತ್ತೂರು: 16/12/2021, ಕೋಕಾ, 510, 11000, 26000, 18500
 • PUTTUR, 16/12/2021, ಹೊಸ ಚಾಲಿ, 117, 27500, 45000, 36250
 • ಸಾಗರ: 16/12/2021, ಬಿಳೇ ಗೋಟು, 1, 22290, 39115, 37409
 • SAGAR, 16/12/2021, ಚಾಲಿ, 25, 36599, 48099, 47499
 • SAGAR, 16/12/2021, ಕೋಕಾ, 1, 17699, 37899, 34699
 • SAGAR, 16/12/2021, ಕೆಂಪುಗೋಟು, 1, 29539, 40339, 30199
 • SAGAR, 16/12/2021, ರಾಸಿ, 58, 43699, 47910, 46799
 • SAGAR, 16/12/2021, ಸಿಪ್ಪೆಗೋಟು, 37, 8219, 27160, 26580
 • ಶಿಕಾರಿಪುರ: 15/12/2021, ರಾಸಿ, 122, 41400, 45490, 43400
 • ಶಿವಮೊಗ್ಗ: 16/12/2021, ಬೆಟ್ಟೆ, 81, 47189, 53699, 52330
 • SHIVAMOGGA, 16/12/2021, ಗೊರಬಲು, 133, 17020, 38999, 37590
 • SHIVAMOGGA, 16/12/2021, ರಾಸಿ, 1675, 44999, 47599, 47299
 • SHIVAMOGGA, 16/12/2021, ಸರಕು, 50, 51069, 75096, 67200
 • ಸಿದ್ದಾಪುರ:16/12/2021, ಬಿಳೇ ಗೋಟು 16, 31599, 39099, 37899
 • SIDDAPURA, 16/12/2021, ಚಾಲಿ 110, 46477, 50509, 49899
 • SIDDAPURA, 16/12/2021, ಕೋಕಾ 16, 26699, 36499, 32609
 • SIDDAPURA, 16/12/2021, ಹೊಸ ಚಾಲಿ, 6, 32099, 39599, 37699
 • SIDDAPURA, 16/12/2021, ಕೆಂಪುಗೋಟು 2, 32199, 36000, 34299
 • SIDDAPURA, 16/12/2021, ರಾಸಿ 32, 46699, 48689, 47569
 • SIDDAPURA, 16/12/2021, ತಟ್ಟೆ ಬೆಟ್ಟೆ2, 33809, 38090, 37080
 • ಸಿರ: 14/12/2021, ಇತರ 30, 9000, 48000, 24000
 • ಸಿರ್ಸಿ: 16/12/2021, ಬೆಟ್ಟೆ, 4, 40810, 46599, 43122
 • SIRSI, 16/12/2021, ಬಿಳೇಗೋಟು, 13, 16899, 44899, 39280
 • SIRSI, 16/12/2021, ಚಾಲಿ 122, 42899, 51208, 50099
 • SIRSI, 16/12/2021, ರಾಸಿ 22, 45689, 49508, 48979
 • ಸುಳ್ಯ: 16/12/2021, ಹೊಸತು, 54, 25000, 45000, 30000
 • SULYA, 16/12/2021, ಹಳೆ ಅಡಿಕೆ, 4, 45000, 52000, 49500
 • ತೀರ್ಥಹಳ್ಳಿ: 12/12/2021, ಬೆಟ್ಟೆ, 75, 47009, 53459, 50899
 • TIRTHAHALLI, 12/12/2021, ಇಡಿ 111, 42666, 47499, 47199
 • TIRTHAHALLI, 12/12/2021, ಗೊರಬಲು 358, 24009, 38545, 37299
 • TIRTHAHALLI, 12/12/2021, ರಾಸಿ 703, 43329, 47769, 47599
 • TIRTHAHALLI, 12/12/2021, ಸರಕು, 21, 42166, 73170, 67189
 • ತುಮಕೂರು: 16/12/2021, ರಾಶಿ, 245, 45800, 46800, 46200
 • ಯಲ್ಲಾಪುರ: 16/12/2021, ಬಿಳೇಗೋಟು 4, 30661, 39012, 33212
 • YELLAPURA, 16/12/2021ಚಾಲಿ, 63, 40899, 50890, 49511
 • YELLAPURA, 16/12/2021, ಕೋಕಾ, 7, 23100, 31899, 28899
 • YELLAPURA, 16/12/2021, ಕೆಂಪುಗೋಟು 1, 30879, 33069, 32142
 • YELLAPURA, 16/12/2021, ರಾಶಿ, 58, 45951, 52129, 50199
 • YELLAPURA, 16/12/2021, ತಟ್ತೆ ಬೆಟ್ಟೆ 1, 38042, 45269, 43350

ಕುಮಟಾದಲ್ಲಿ ಯಾವಾಗಲೂ ಚಾಲಿ ದರ ಶಿರಸಿ ದರಕ್ಕಿಂತ 1000-2000 ಕಡಿಮೆ ಇರುತ್ತಿತ್ತು. ಕರಾವಳಿಯಾದರೂ ಕರಾವಳಿಯ ದರಕ್ಕಿಂತಲೂ ಕಡಿಮೆ ಇರುತ್ತಿತ್ತು. ಈ ವರ್ಷ ಚಾಲಿಯ ಬೇಡಿಕೆಯ ಕಾರಣ ಇಲ್ಲಿಯೂ ಕರಾವಳಿಯ ದರಕ್ಕೆ ಸಮನಾಗಿ ಬೆಲೆ ದೊರೆಯುವಂತಾಗಿದೆ. ಕೃಷಿ ಉತ್ಪನ್ನ ಮಾರುಕಟ್ತೆ ಸಮಿತಿಗಳಲ್ಲಿ ಹರಾಜಾಗುವ ದರಕ್ಕಿಂತ ಹೊರ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ 1000-1500 ರೂ ದರ ಹೆಚ್ಚು ಇರುತ್ತದೆ.

ಕೊಬ್ಬರಿ ಧಾರಣೆ:ಕ್ವಿಂಟಾಲು.

ಕೊಬ್ಬರಿ ಧಾರಣೆ ಏರಿಕೆಯೂ ಆಗದೆ ಇಳಿಕೆಯೂ ಆಗದೆ ಸ್ಥಿರವಾಗಿತ್ತು. ಕೊಬ್ಬರಿ ಕೊರತೆ ಇದೆ. ಕೆಲವು ತೆಂಗಿನ ತೋಟಗಳು ಅಡಿಕೆ ತೋಟಗಳಾಗುತ್ತಿದ್ದು, ತೆಂಗಿನ ಕಾಯಿ ಕೊರತೆ ಮುಂದುವರಿಯಲಿದೆ.

 •  ಅರಸೀಕೆರೆ: 16/12/2021, ಬಾಲ್ 14000, 17,550, 17511
 • ಬೆಂಗಳೂರು: 16/12/2021, ಬಾಲ್ 17000, 20000, 19500
 • ಚನ್ನರಾಯಪಟ್ನ, 16/12/2021, ಬಾಲ್, 16000, 17500, 17300
 • C.R.PATNA, 16/12/2021, ಎಣ್ಣೆ 10000, 10000, 10000
 • ಕೆ ಆರ್ ಪೇಟೆ: 16/12/2021, ಇತರ 10250, 10250, 10250
 • ಮಂಗಳೂರು:  06/12/2021, ಎಣ್ಣೆ  8350, 14700, 9000
 • ಪುತ್ತೂರು: 16/12/2021, ಎಣ್ಣೆ  4500, 11500, 8000
 • ತುಮಕೂರು: 16/12/2021, ಇತರ, 8050, 9600, 8450
 • ತುರುವೇಕೆರೆ: 16/12/2021, ಬಾಲ್ ಕೊಬ್ಬರಿ 17800, 17500, 17100
ಕರಿಮೆಣಸು ಉತ್ತಮ

ಕರಿಮೆಣಸು ಧಾರಣೆ:

ಕರಿಮೆಣಸು ದರದಲ್ಲಿ ಯಾವ ಏರಿಕೆಯ ಸೂಚನೆಯೂ ಕಾಣಿಸುತ್ತಿಲ್ಲ. ಈಗಾಗಲೇ ಕೊಯಿಲು ಪ್ರಾರಂಭವಾಗಿದೆ. ಈ ವರ್ಷದ ಹವಾಮಾನ ಕಾರಣದಿಂದ ಎಲ್ಲಾ ತಳಿಗಳಲ್ಲೂ ಸ್ವಲ್ಪ ಬೇಗ ಕರೆ ಹಣ್ಣಾಗಿದೆ.  ಹಾಗೆಂದು ಎಲ್ಲಾ ಬೆಳೆದಿಲ್ಲ. ಮಳೆ ಮಾರ್ಚ್ ಎಪ್ರೀಲ್ ತಿಂಗಳಲ್ಲೇ  ಬಂದ ಕಾರಣ ಆಗ ಮೂಡಿದ ಕರೆಗಳು ಈಗ ಹಣ್ಣಾಗುತ್ತಿವೆ ಅಷ್ಟೇ. 2-3% ಹಣ್ಣಾಗಿದೀ ಂದು ಕೊಯಿಲು ಮಾಡಬೇಡಿ. ತೂಕ ನಷ್ಟ ಉಂಟಾಗಬಹುದು.ಕ್ಯಾಂಪ್ಕೋ ಉತ್ತಮ ಮೆಣಸನ್ನು ಕಿಲೋ ರೂ. 510ಕ್ಕೆ ಖರೀದಿಸುತ್ತಿದ್ದರೆ ಖಾಸಗಿಯವರು ಕೆಲವರು 5 ರೂ ಹೆಚ್ಚು ಕಡಿಮೆಗೆ ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ಕೊಂಡರೆ ಅವರಿಗೆ ಬೇಡಿಕೆ ಇಲ್ಲದ ಸ್ಥಿತಿ ಉಂಟಾದ ಕಾರಣ ಬೆಲೆ ಏರುತ್ತಿಲ್ಲ ಕರಿಮೆಣಸಿನ ಪ್ರಮುಖ ಮಾರುಕಟೆಯಾದ ಕೊಚ್ಚಿ ಮಾರುಕಟ್ಟೆಯಲ್ಲಿ ದರ ಹೆಚ್ಚು ಕಡಿಮೆ ಆಗಿಲ್ಲ. ಮುಂದಿನ ವರ್ಷದ ಮೇ ತರುವಾಯ  ದರ ಏರಿಕೆ ಆಗಬಹುದು.

ಇಂದಿನ ದರ: ಕಿಲೊ

ಕನಿಷ್ಟ – ಗರಿಷ್ಟ- ಸರಾಸರಿ.

 • ಬಂಟ್ವಾಳ: 480-500-510
 • ಮಂಗಳೂರು: 500-510
 • ಪುತ್ತೂರು:492-500-510
 • ಬದಿಯಡ್ಕ: 500-510
 • ಶಿರಸಿ: 480-512-500
 • ಸಿದ್ದಾಪುರ:465-510-509
 • ಸಕಲೇಶಪುರ:500-520-510
 • ಮೂಡಿಗೆರೆ:500-525-510
 • ಚಿಕ್ಕಮಗಳೂರು:500-520-510
 • ತೀರ್ಥಹಳ್ಳಿ:500-510
 • ಮಡಿಕೇರಿ:500-505
 • ಕಳಸ:515-510
 • ಹಾಸನ:500

ಹಸಿ ಶುಂಠಿ: ಕ್ವಿಂಟಾಲು.

ಮಳೆ ನಿಂತಿದೆ. ಬಿಸಿಲು ಇರುವ ಕಾರಣ ಶುಂಠಿ ಒಣಗಿಸಲು ಅನುಕೂಲವಾಗಿದೆ. ಆ ಕಾರಣ ಹಸಿ ಶುಂಠಿ ದರ ಸ್ವಲ್ಪ ಏರಿಕೆ ಆಗಲಾರಂಭಿಸಿದೆ. ಶುಂಠಿ ಬೆಳೆ ಹೆಚ್ಚು ಇದ್ದರೂ ಕೊಳೆ ಹೆಚ್ಚಾದ ಕಾರಣ ಬೆಳೆ ಕಡಿಮೆಯಾಗಿದೆ. ಇನ್ನೂ ಸ್ವಲ್ಪ ದರ ಏರಿಕೆ ಆಗಬಹುದು ಎಂಬ ವದಂತಿಗಳಿವೆ.

 • ಬೇಲೂರು: 10/12/2021, Green Ginger, 1000, 1000, 1000
 • ಚಿಂತಾಮಣಿ: 09/12/2021, Green Ginger,  3000, 4000, 3500
 • ಹಾಸನ: 10/12/2021, Green Ginger, 600, 1000, 1000
 • ಕೋಲಾರ: 10/12/2021, Green Ginger, 2500, 3500, 3000
 • ಮೈಸೂರು: 10/12/2021, Green Ginger, 3800, 4000, 3900
 • ರಾಮನಗರ: 10/12/2021, Green Ginger, 1200, 2000, 1600
 • ಶಿವಮೊಗ್ಗ: 10/12/2021, Green Ginger, 1800, 2000, 1900
 • ಟಿ-ನರಸೀಪುರ: 10/12/2021, Green Ginger, 1500,2000, 1900

ಏಲಕ್ಕಿ ಧಾರಣೆ: ಕಿಲೋ

 • ರಾಶಿ ಉತ್ತಮ:800-850
 • ಜರಡಿ: 1000-1050
 • ಆಯ್ದದ್ದು:1000-1300
 • ಹಸಿರು ಸಾಧಾರಣ:800-850
 • ಹಸಿರು ಬೋಲ್ಡ್: 1,300-1,400

ಜಾಯೀ ಸಾಂಬಾರ:

 • ಜಾಯೀ ಕಾಯಿ ಕೊಲೋ: 195-210
 • ಜಾಯೀ ಪತ್ರೆ ಕಿಲೋ: 900-1050

ರಬ್ಬರ್ ದರ:

ರಬ್ಬರ್ ಧಾರಣೆ ಕಿಲೋ ಮೇಲೆ  ಮತ್ತೆ ರೂ.5 ರಷ್ಟು ಇಳಿಕೆಯಾಗಿದೆ. ಮಳೆ ಹೋಗಿ ಚಳಿ ಬಂದು ಟ್ಯಾಪಿಂಗ್ ಪ್ರಾರಂಭವಾಗಿ ಹೀಗೆ ಆಗಿದೆ ಎನ್ನಲಾಗುತ್ತಿದೆ. ಬೆಳೆ ಉತ್ಪಾದನೆ, ಕೆಲಸಗಾರರ ಕಾರಣದಿಂದ ಮುಂದೆ ರಬ್ಬರ್ ದರ ಏರಿಕೆ ಆಗುವ ಸಾಧ್ಯತೆ ಇದೆ.

ಇಂದಿನ ದರ : ಕಿಲೋ:

 • GREDE:1X 181-00
 • RSS 4: 174-00
 • RSS 3: 174-50
 • RSS 5: 168-00
 • LOT:  162-00
 • SCRAP:115-00 107-00

ಕಾಫೀ ದಾರಣೆ:

ಮಳೆಯಿಂದಾಗಿ ಅರೇಬಿಕಾ ಕಾಫಿ ಬೆಳೆಗೆ ಭಾರೀ ಹಾನಿ ಉಂಟಾಗಿದೆ. ರೋಬಸ್ಟಾ ಇಳುವರಿ ಚೆನ್ನಾಗಿದೆ. ಬೆಲೆ ಸ್ವಲ್ಪ ಏರಿದೆ. ಇನ್ನೂ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ.

 • ಅರೇಬಿಕಾ ಪಾರ್ಚ್ ಮೆಂಟ್: 15,400-15,200 (50 kg)
 • ಅರೇಬಿಕಾ ಚೆರಿ: 6300-6500(50 kg)
 • ರೋಬಸ್ಟಾ ಪಾರ್ಚ್ ಮೆಂಟ್: 6350-6500(50 kg)
 • ರೋಬಸ್ಟಾ ಚೆರಿ: 3500-3800 (50 kg)

ಚಾಲಿ ಅಡಿಕೆ ಈ ತಿಂಗಳ ಕೊನೆ ತನಕ ದರ ಇನ್ನೂ ಸ್ವಲ್ಪ ಏರಿಕೆ ಆಗಬಹುದು.  ಬೆಲೆ ಏರುಗತಿಯಲ್ಲಿ ಇರುವ ಕಾರಣ ಯಾರೂ ಅಡಿಕೆ ಕೊಡುತ್ತಿಲ್ಲ. ಹಾಗಾಗಿ ಬೆಲೆ ಏರಿಕೆ ಆಗಬಹುದು. ಹಾಗೆಯೇ ಕೆಂಪಡಿಕೆಗೂ 2022 ಜನವರಿ  ಫೆಬ್ರವರಿಯ ಸುಮಾರಿಗೆ  ಸರಾಸರಿ 50,000 ತನಕ ಏರಿಕೆ ಆಗಬಹುದು.

Leave a Reply

Your email address will not be published. Required fields are marked *

error: Content is protected !!