ರಾಜ್ಯದಾದ್ಯಂತ ಅಡಿಕೆ ಧಾರಣೆ:ದಿನಾಂಕ:11-07-2022 ಸೋಮವಾರ.

ಅಡಿಕೆ ಧಾರಣೆ:ದಿನಾಂಕ:11-07-2022

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದು ಜುಲೈ ಎರಡನೇ ವಾರದ ಪ್ರಥಮ ಸೋಮವಾರ ದಿನಾಂಕ  11-07-2022 ಅಡಿಕೆ ಧಾರಣೆ ಸ್ಥಿರವಾಗಿತ್ತು. ಚಾಲಿ ಅಡಿಕೆಯ ಧಾರಣೆ ಹೊಸತು ಸ್ವಲ್ಪ ಏರಿಕೆ ಕಂಡು ಬಂದಿದೆ. ಇಂದಿನಿಂದ ಪ್ರಾರಂಭವಾಗಿ ಸ್ವಲ್ಪ ಸ್ವಲ್ಪವೇ ಹೊಸ ಅಡಿಕೆ ದರ ಏರುತ್ತಾ ಎರಡು ತಿಂಗಳ ಒಳಗೆ ಹಳೆ ಅಡಿಕೆ ಮತ್ತು ಹೊಸ ಅಡಿಕೆಯ ಬೆಲೆ ಹತ್ತಿರ ಬರಬಹುದು ಎಂಬುದಾಗಿ ವ್ಯಾಪಾರಿಗಳು ಹೇಳುತ್ತಾರೆ.

ಕೆಂಪಡಿಕೆ ಧಾರಣೆ ಸ್ಥಿರವಾಗಿದೆ. ಹಳೆ ಚಾಲಿಗೆ ಹೆಚ್ಚು ಬೆಲೆ ಇದೆ. ಆದರೆ ಬರುವುದು ತೀರಾ ಕಡಿಮೆ. ಇಂದು ಕರಾವಳಿಯ ಒಟ್ಟೂ ಮಾರುಕಟ್ಟೆಯಲ್ಲಿ 5 ಚೀಲವೂ ಹಳೆಚಾಲಿ ಬಂದಿಲ್ಲ ಎನ್ನುತ್ತಾರೆ ಮಂಗಳೂರಿನ ವ್ಯಾಪಾರಿಗಳು. ಈ ಕಾರಣದಿಂದ ಹೊಸ ಚಾಲಿಗೆ ಬೇಡಿಕೆ ಬರಬಹುದು. ಖಾಸಗಿಯವರು ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಿದ್ದಾರೆ.

ಚಾಲಿ ಅಡಿಕೆ ಧಾರಣೆ:

  • ಬಂಟ್ವಾಳ ಕೊಕಾ, 12500, 25000, 22500
  • ಹೊಸತು: 27500, 45000, 42000
  • ಹಳೆಯದು: 46000, 54500, 50000
  • ಬೆಳ್ತಂಗಡಿ ಕೋಕಾ: 25000, 26000, 25500
  • ಹೊಸತು: 31700, 43000, 39000
  • ಹಳೆಯದು: 37400, 54000, 50000
  • ಕಾರ್ಕಳ ಹೊಸತು: 40000, 45000, 43000
  • ಹಳೆಯದು  46000, 54500, 50000
  • ಕುಮಟಾ: ಹಳೆ ಚಾಲಿ: 46019, 47299, 46879
  • ಹೊಸ ಚಾಲಿ, 35799, 39009, 38849
  • ಹೊಸನಗರ ಹೊಸ್ಸ ಚಾಲಿ: 33009, 36319, 35099
  • ಕುಂದಾಪುರ ಹೊಸ ಚಾಲಿ, 39000, 42500, 41000
  • ಹಳೆ ಚಾಲಿ, 50000, 54500, 53500
  • ಮಂಗಳೂರು ಕೋಕಾ, 20000, 25000, 23000
  • ಪುತ್ತೂರು ಕೋಕಾ, 11000, 26000, 18500
  • ಹೊಸ ಚಾಲಿ: 30500, 43500, 37000
  • ಸಾಗರ ಹೊಸ ಚಾಲಿ: 23219, 37299, 36799
  • ಸಾಗರ ಬಿಳೇಗೋಟು, 22299, 29100, 28100
  • ಸಿದ್ದಾಪುರ ಹೊಸ ಚಾಲಿ, 34809, 38709, 37799
  • ಸಿದ್ದಾಪುರ ಬಿಳೆಗೋಟು, 25312, 31282, 30399
  • ಸಿರ್ಸಿ ಹೊಸ ಚಾಲಿ: 33000, 39399, 38175
  • ಬಿಳೇ ಗೋಟು, 23896, 32899, 30239
  • ಯಲ್ಲಾಪುರ ಹೊಸ ಚಾಲಿ: 34920, 38590, 37329
  • ಯಲ್ಲಾಪುರ: ಬಿಳೇಗೋಟು, 25199, 31319, 29992
  • ಪಟೋರಾ: 30,000-38500
  • ಉಳ್ಳಿ ಗಡ್ಡೆ:20,000-25,000
  • ಕರಿ ಕೋಕಾ:20,000-26,000
ಚಾಲಿ ಅಡಿಕೆ ಉತ್ತಮ ಶ್ರೇಣಿ

ಪಟೋರಾ, ಕರಿಕೋಕಾ ಮತ್ತು ಉಳ್ಳಿಗಡ್ಡೆಗೆ ಬೇಡಿಕೆ ಹೆಚ್ಚಾಗಿದೆ.

ಕೆಂಪಡಿಕೆ ಮಾರುಕಟ್ಟೆ:

  • ಭದ್ರಾವತಿ: ರಾಶಿ, 47399, 49869, 49174
  • ಚೆನ್ನಗಿರಿ: ರಾಶಿ. 639, 48459, 50536, 49555
  • ಚಿತ್ರದುರ್ಗ: ಅಪಿ, 49039, 49469, 49289
  • ಬೆಟ್ಟೆ , 39219, 39699, 39449
  • ಕೆಂಪುಗೋಟು: 25, 29300, 29700, 29500
  • ರಾಶಿ, 48529, 48979, 48759
  • ಹೊನ್ನಾಳಿ ರಾಶಿ, 49799, 49799, 49799
  • ಹೊಸನಗರ ಬಿಳೇ ಗೋಟು, 23899, 25099, 23899
  • ಕೆಂಪುಗೋಟು, 35699, 37591, 36899
  • ರಾಶಿ: 47709, 50269, 49989
  • ಕುಮಟಾ ಕೋಕಾ, 18089, 29989, 29529
  • ಪ್ಯಾಕ್ಟರಿ, 10509, 19699, 18999
  • ಸಾಗರ ಕೋಕಾ, 20029, 33100, 30099
  • ಕೆಂಪುಗೋಟು, 27619, 37199, 36899
  • ರಾಶಿ: 32399, 49819, 48799
  • ಸಿಪ್ಪೆಗೋಟು: 14501, 20650, 19770
  • ಶಿಕಾರಿಪುರ: ಮಿಶ್ರ, 44500, 53400, 47500
  • ಶಿವಮೊಗ್ಗ ಬೆಟ್ಟೆ, 52519, 53719, 52770
  • ಗೊರಬಲು: 18009, 38009, 37199
  • ರಾಶಿ, 43869, 49909, 49399
  • ಸರಕು: 60000, 79100, 75640
  • ಕೊಕಾ: 23112, 32112, 29312
  • ಕೆಂಪುಗೋಟು: 31012, 32312, 31012
  • ರಾಶಿ: 45299, 48799, 47509
  • ತಟ್ಟೆ ಬೆಟ್ಟೆ: 37819, 45399, 44299
  • ಸಿರ್ಸಿ ಬೆಟ್ಟೆ, 26000, 46991, 39303
  • ರಾಶಿ: 45099, 48601, 48051
  • ತೀರ್ಥಹಳ್ಳಿ: ಬೆಟ್ಟೆ: 24, 52399, 53529, 53009
  • ಇಡಿ, 41668, 49899, 49729
  • ಗೊರಬಲು, 34899, 37869, 37509
  • ರಾಶಿ, 41699, 50099, 49869
  • ಸರಕು:56166, 80000, 70500
  • ಕೆಂಪುಗೋಟು: 29899, 34266, 32209
  • ರಾಶಿ, 47148, 52865, 48419
  • ತಟ್ಟೆ ಬೆಟ್ಟೆ: 38820, 45495, 41629
  • ಕೋಕಾ: 18899, 28999, 24301

ಕಾಳು ಮೆಣಸು ಧಾರಣೆ:

ಕಾಳು ಮೆಣಸಿನ ಧಾರಣೆ ಈ ತಿಂಗಳು ಏರಿಕೆ ಕಾಣಬೇಕಿತ್ತು. ಆದರೆ ಕೊಚ್ಚಿ ಮಾರುಕಟ್ಟೆಯಲ್ಲಿ ಬೇಡಿಕೆ  ಹೆಚ್ಚು ಇಲ್ಲದ ಕಾರಣ ದರ ಏರಿಕೆಯೂ ಆಗದೆ ಇಳಿಕೆಯೂ ಆಗದೆ ಸ್ಥಿರವಾಗಿದೆ. ಆಮದು ಸ್ವಲ್ಪ ಆಗಿದೆಯಾದರೂ ದೊಡ್ಡ ಹೊಡೆತ ಇಲ್ಲ. ಕೊಚ್ಚಿ ಮಾರುಕಟ್ಟೆಯಲ್ಲಿ ಸ್ವಲ್ಪ ಏರಿಕೆಯಾದರೆ ಇಲ್ಲಿ ಏರುತ್ತದೆ. ಬೇಡಿಕೆಯೇ ದರ ಏರಿಕೆಗೆ ಕಾರಣವಾಗಿದೆ. ಉತ್ತರ ಭಾರತದಿಂದ ಬೇಡಿಕೆ ಇನ್ನು ಪ್ರಾರಂಭವಾಗಬೇಕಿದೆ. ಎಪಿಎಂಸಿ ಲೆಕ್ಕಕ್ಕೆ ಬರುವ ಮೆಣಸಿಗಿಂತ ಹೆಚ್ಚಿನ ಮೆಣಸು ಹೊರಗೆ ವ್ಯವಹಾರ ಆಗುತ್ತಿದೆ.

ಕರಿಮೆಣಸು ಉತ್ತಮ
  • ಮಂಗಳೂರು: AP Abdul Hameed:490-00
  • ಕಾರ್ಕಳ: ಕಾಮಧೇನು: 480-00
  • ಚಿಕ್ಕಮಗಳೂರು: 470-00-475-00- 490-00
  • ಮೂಡಿಗೆರೆ: 480-00
  • ಬೆಳ್ತಂಗಡಿ:480-00-485-00
  • ಪುತ್ತೂರು:480-00
  • ಸುಳ್ಯ:480-00
  • ಸಿರಸಿ: 480-00
  • ಸಾಗರ:480-00-485-00
  • ತೀರ್ಥಹಳ್ಳಿ:485-00
  • ಕಳಸ:480-00

ಕ್ಯಾಂಪ್ಕೋ ದರ ಲೀಟರ್ ( 600 gram, 12 % ಗಿಂತ ಕಡಿಮೆ) ತೂಕ ಮತ್ತು ತೇವಾಂಶ ಮಾಪಕದಲ್ಲಿ ಅಳೆದು ಸರಿ ಬಂದರೆ 480-00  ಎಲ್ಲಾ ಕಡೆ ಇದೆ.

ಕೊಬ್ಬರಿ ಮಾರುಕಟ್ಟೆ:

ಸರಕಾರ ಖಾದ್ಯ ತೈಲದ ಬೆಲೆ ಇಳಿಸಲು ನಿರ್ಧೇಶನ ನೀಡಿದ ಕಾರಣ ತೆಂಗಿನ ಎಣ್ಣೆಯ ಬೆಲೆ ಸ್ವಲ್ಪ ಇಳಿಕೆಯಾಗಬಹುದು. ಅದಕ್ಕನುಗುಣವಾಗಿ  ತೆಂಗಿನ ಎಣ್ಣೆ ಕೊಬ್ಬರಿಗೆ ಸ್ವಲ್ಪ ಇಳಿಕೆ ಆಗಲೂ ಬಹುದು. ಬಾಲ್ ಕೊಬ್ಬರಿಗೂ ಸಹ. 14300 ತನಕ ಏರಿಕೆಯಾಗಿದ್ದ ದರ ಇಂದು 14,000 ಕ್ಕೆ ಇಳಿಕೆಯಾಗಿದೆ.  ಮಳೆ ಮುಗಿಯುವ ತನಕ ಹೀಗೇ ಮುಂದುವರಿಯಬಹುದು. ಚೌತಿ ಸಮಯಕ್ಕೆ ದರ ಎರಿಕೆ ಆಗಬಹುದು.

  • ಅರಸೀಕೆರೆ:ಬಾಲ್ ಕೊಬ್ಬರಿ:12600-13900
  • ತಿಪಟೂರು:12800-14200
  • ಮಂಗಳೂರು: ಎಣ್ಣೆ ಕೊಬ್ಬರಿ,8000-9000
  • ಪುತ್ತೂರು: 8500-9100
  • ಹಸಿ ಕಾಯಿ: 24-25 ರೂ. /ಕಿಲೋ.

ಶುಂಠಿ ಧಾರಣೆ:

ಶುಂಠಿ

ಶುಂಠಿ ದರ ಭಾರೀ ಏರಿಕೆ ಎಂಬ ಸುದ್ದಿಗಳಷ್ಟೇ. ಅಂತಹ ದರ ಏರಿಕೆ ಆಗಿಲ್ಲ. ಸಹಜವಾಗಿ ಈಗ ಕೊರತೆ ಇರುವ ಕಾರಣ ತುಸು ಏರಿಕೆಯಗಿದೆ. ಬೆಳೆಗಾರರಲ್ಲಿ ಹಸಿ ಶುಂಠಿ ದಾಸ್ತಾನು ಇಲ್ಲ. ಒಣ ಶುಂಠಿ ಇದೆ. ಕೇರಳದ ಬೆಳೆಗಾರರಲ್ಲಿ ಸ್ವಲ್ಪ ಸ್ಟಾಕು ಇದೆ. 2013 ರಲ್ಲಿ ಒಮ್ಮೆ 8000 ರೂ ದಾಟಿದೆ. ಹಾಗೆ ಆಗುವ ಸಾಧ್ಯತೆ ಇಲ್ಲದಿಲ್ಲ. ಮುಂದಿನ ವರ್ಷವಂತೂ ಶುಂಠಿ ಬೆಳೆ ತುಂಬಾ ಕಡಿಮೆಯಾದ ಕಾರಣ ಉತ್ತಮ ಬೆಲೆ ನಿರೀಕ್ಷಿಸಬಹುದು.

  • ಶಿವಮೊಗ್ಗ: 1800-1900-2000 (60 ಕಿಲೋ ಚೀಲ)
  • ಸೊರಬ: 1750-1900-2050
  • ಶಿರಸಿ:1500-2000
  • ಸಾಗರ: 1700-1800
  • ಬೇಲೂರು:1350-1400
  • ಹಾಸನ:1300-1350

ದೆಹಲಿ ಮಾರುಕಟ್ಟೆಯಲ್ಲಿ ಇಂದು 4500-5000  ತನಕ ಮಾರಾಟವಾಗಿದೆ. ಮೈಸೂರಿನಲ್ಲಿ  3300 3500 ದರಕ್ಕೆ ಮಾರಾಟವಾಗಿದೆ. ಹೊಸ ಬೆಳೆ ಬರುವ ತನಕ ಈ ದರ ಮುಂದುವರಿಯಬಹುದು,

ಕಾಫೀ ಧಾರಣೆ:

  • ಅರೇಬಿಕಾ ಪಾರ್ಚ್ ಮೆಂಟ್:15900-16100
  • ಅರೇಬಿಕಾ ಚೆರಿ: 9000-9300
  • ರೋಬಸ್ಟಾ ಪಾರ್ಚ್ ಮೆಂಟ್:9450-9800
  • ರೋಬಸ್ಟಾ ಚೆರಿ:4500-4700

ರಬ್ಬರ್ ಧಾರಣೆ:

  • RSS 4: 173.00
  • 1X Grade:185.00
  • RSS 5 :164.50
  • RSS 3: 174.00
  • LOT:158.00
  • SCRAP:113.00-121.00

ಮರ ಸಾಂಬಾರ:

  • ಜಾಯೀ ಕಾಯಿ: ಕಿಲೋ:215-240
  • ಜಾಯೀ ಪತ್ರೆ: 1100-1200

ಅಡಿಕೆ ಬೆಳೆಗಾರರು ಸ್ವಲ್ಪ ಕಾದು ಮಾರಾಟ ಮಾಡುವುದು ಸೂಕ್ತ. ಈಗಾಗಲೇ ಬೆಳೆಗಾರರು ಗಟ್ಟಿ ನಿರ್ಧಾರ ಮಾಡಿ ಮಾರುಕಟ್ಟೆಗೆ ಅಡಿಕೆ ಬಿಡದ ಕಾರಣ ದರ ಸ್ಥಿರವಾಗಿದೆ. ಇದೇ ತಂತ್ರವನ್ನು ಅನುಸರಿಸಿ ಮಾರುಕಟ್ಟೆ ಹಿಡಿತವನ್ನು ಪಡೆಯಬಹುದು.

Leave a Reply

Your email address will not be published. Required fields are marked *

error: Content is protected !!