krushiabhivruddi

ಅಡಿಕೆ ಸಿಪ್ಪೆ ತೋಟಕ್ಕೆ ಹಾಕಿದರೆ ರೋಗ ಬರುತ್ತದೆಯೇ

ಅಡಿಕೆ ಸಿಪ್ಪೆ ತೋಟಕ್ಕೆ ಹಾಕಿದರೆ ರೋಗ ಬರುತ್ತದೆಯೇ?

ಅಡಿಕೆ ಬೆಳೆಗಾರರಲ್ಲಿ ಸಿಗುವ ತ್ಯಾಜ್ಯಗಳಾದ ಸುಲಿದ ಅಡಿಕೆ ಸಿಪ್ಪೆ, ಅದರ ಗರಿ, ಹಾಳೆ ಎಲ್ಲವನ್ನೂ ಒಟ್ಟು ಸೇರಿದರೆ ಅದರ ಪ್ರಮಾಣ, ಆ ಅಡಿಕೆ ತೋಟಕ್ಕೆ ಬೇಕಾಗುವ ಎಲ್ಲಾ ಸಾವಯವ ಅಂಶವನ್ನು  ಪೂರೈಸುವಷ್ಟು. ಆದರೆ ನಮ್ಮಲ್ಲಿ  ಅವುಗಳ ಸದುಪಯೋಗ ಆಗುತ್ತಿಲ್ಲ. ಹೆಚ್ಚಿನ ರೈತರು ಅಡಿಕೆ ತೋಟದಲ್ಲಿ ಸಿಗುವ ತ್ಯಾಜ್ಯಗಳನ್ನು  ಸಮರ್ಪಕವಾಗಿ ಬಳಕೆ ಮಾಡದೆ ನಷ್ಟ ಮಾಡಿಕೊಳ್ಳುತ್ತಾರೆ. ಇದನ್ನು ಸ್ವಲ್ಪವೂ ನಷ್ಟವಾಗದಂತೆ ಬಳಸಿ ರಕ್ಷಿಸಿದರೆ ಮಣ್ಣು ಫಲವತ್ತಾಗುತ್ತದೆ.ಬೆಳೆ ನಳನಳಿಸುತ್ತದೆ. ನೀವೆಂದಾದರೂ ಉತ್ತರ ಕರ್ನಾಟಕ, ಮಲೆನಾಡಿನ ಕಡೆ ಹೋಗಿದ್ದರೆ ಒಮ್ಮೆ ಅಲ್ಲಿನ…

Read more
ನೀರಿಗೆ ಬರ ಬಂದರೆ ? -. ಕಡಿಮೆ ನೀರಿನಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು

ನೀರಿಗೆ ಬರ ಬಂದರೆ ? ಕಡಿಮೆ ನೀರಿನಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು?  

2023 ನೇ ಇಸವಿ ನಮಗೆ ಮಳೆ ಇಲ್ಲದೆ ಬರಗಾಲದ ಸನ್ನಿವೇಶವನ್ನು ತೋರಿಸಿಯೇ ಬಿಡುತ್ತದೆಯೋ ಎಂಬ ಅನುಮಾನ ಮೂಡುತ್ತಿದೆ. ಜುಲೈ ತಿಂಗಳ ಕೊನೆಗೆ ಕಾಣೆಯಾದ ಮಳೆ ಮತ್ತೆ ಬಂದುದು ಆಗಾಗ ನೆಂಟರಂತೆ.  ಹೀಗೆ ಮುಂದುವರಿದರೆ ಬರಗಾಲ ಗ್ಯಾರಂಟಿ. ಯಾವುದಕ್ಕೂ ನಾವು ಸಿದ್ದರಾಗಿರಬೇಕು. ಕೆಲವು ಮೂಲಗಳ ಪ್ರಕಾರ ಇನ್ನು ಬರುವ  ಮಳೆ ಅಲ್ಪ ಸ್ವಲ್ಪ ಪ್ರಮಾಣದ್ದೇ ಹೊರತು, ತಳಕ್ಕಿಳಿದ ನೀರಿನ ಮಟ್ಟವನ್ನು ಮತ್ತೆ ಮೇಲಕ್ಕೇರಿಸುವಷ್ಟು  ಬಲವಾಗಿರುವುದಿಲ್ಲ. ಹಾಗಾಗಿ ನೀರಿನ ಕ್ಷಾಮ ಉಂಟಾಗಲೂಬಹುದು. ಅದಕ್ಕಾಗಿ ಈಗಲೇ ಸಿದ್ದರಾಗೋಣ. ಪ್ರಕೃತಿಯ ಮುಂದೆ ಮಾನವ…

Read more
ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ.

ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ.

ಕೆಸು  Colocasia or Taro ಎಂಬುದು ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುವ ಒಂದು ಕಳೆ ಸಸ್ಯ. ಇದರಲ್ಲಿ ನೂರಾರು ವಿಧಗಳಿದ್ದು, ಕೆಲವೇ  ಕೆಲವು ಅಡುಗೆ ಉದ್ದೇಶಕ್ಕೆ  ಬಳಕೆಮಾಡಲು ಸಲ್ಲುವಂತದ್ದು. ಹೆಚ್ಚಿನವು ಕಳೆ ಸಸ್ಯಗಳಂತೆ ಒಮ್ಮೆ ಹೊಲದಲ್ಲಿ ಹುಟ್ಟಿದರೆ ಅದನ್ನು ನಿರ್ನಾಮ ಮಾಡಲು ಸಾಧ್ಯವೇ ಆಗುವುದಿಲ್ಲ.  ಇದನ್ನು ನಿರ್ನಾಮ ಮಾಡುವುದು ಎಂದರೆ ಅದು ಭಗೀರಥ ಪ್ರಯತ್ನ ಎಂದೇ ಹೇಳಬಹುದು. ಇದು ಕಳೆಯಾಗಿ ಕಂಡರೂ ಅದು ಬೆಳೆಯುವುದು ಮಾತ್ರ ಫಲವತ್ತಾದ ಮಣ್ಣಿನಲ್ಲಿ ಎಂಬುದು ಇಲ್ಲಿ ಉಲ್ಲೇಖನೀಯ. ಒಳ್ಳೆಯವರಿಗೆ ಕಾಲವಿಲ್ಲ ಎಂಬ…

Read more
ಕಳೆದ ವರ್ಷ 7500. ಈ ವರ್ಷ 6300 ಅಡಿಕೆ ಮಾರುಕಟ್ಟೆ ಅಸ್ಥಿರವಾದೀತೇ

ಕಳೆದ ವರ್ಷ 7500. ಈ ವರ್ಷ 6300. ಅಡಿಕೆ ಮಾರುಕಟ್ಟೆ ಅಸ್ಥಿರವಾದೀತೇ?   

ಕಳೆದ ವರ್ಷ ಈ ಸಮಯದಲ್ಲಿ ಹಸಿ ಅಡಿಕೆಗೆ 7500 ರೂ. ಬೆಲೆಗೆ ಖರೀದಿ ಮಾಡಲಾಗುತ್ತಿತ್ತು. ಈ ವರ್ಷ ಪ್ರಾರಂಭಿಕ ದರ 6500, ಇನ್ನೂ ಇಳಿಕೆಯಾಗಿ 6300 ಕ್ಕೆ ಬಂದಿದೆ. ಇನ್ನೂ ಇಳಿಯುವ ಸಂಭವ. ಇದು ಮುಂದಿನ ಅಡಿಕೆ ಧಾರಣೆಯ ಅಸ್ಥಿರತೆಯನ್ನು ತೋರಿಸುತ್ತಿದೆ. ಕೆಂಪಡಿಕೆಯ ಉತ್ಪಾದನೆ ಭಾರೀ ಹೆಚ್ಚಳವಾಗುತ್ತಿದ್ದು, ಸಾಂಪ್ರದಾಯಿಕ ಪ್ರದೇಶಗಳ ಇಳುವರಿಯನ್ನು ಹೊಸ ಪ್ರದೇಶಗಳು ಹಿಂದಿಕ್ಕುತ್ತಿದೆ. ಜೋಳ, ರಾಗಿ, ಭತ್ತ ತರಕಾರಿ ಬೆಳೆಯುತ್ತಿದ್ದ ಬಯಲು ಸೀಮೆ ಪ್ರದೇಶಗಳಲ್ಲಿ  ಉತ್ತಮ ಇಳುವರಿ ಕಾಣಿಸುತ್ತಿದ್ದು,  ಮಾರುಕಟ್ಟೆ ಈ ಉತ್ಪಾದನೆಯನ್ನು ತಾಳಿಕೊಳ್ಳಬಹುದೇ…

Read more
ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.

 ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.   

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ದಿನಾಂಕ 11-08-2023ರ ಶುಕ್ರವಾರ ಒಟ್ಟು ಸುಮಾರು 425 ಟನ್  ಅಡಿಕೆ ವ್ಯವಹಾರ ನಡೆದಿದೆ. ಕಳೆದ ವಾರ ಯಾವುದೋ  ಸುದ್ದಿಯ ಕಾರಣಕ್ಕೆ ಕೆಂಪಡಿಕೆ ಧಾರಣೆಯಲ್ಲಿ  ಇಳಿಕೆ ಕಂಡು ಬಂತು. ಚಾಲಿ ಅಡಿಕೆಯ ಧಾರಣೆಯಲ್ಲಿ ಏರಿಕೆ ಆಗುತ್ತಾ ಇದೆ. ಆಗಸ್ಟ್  ತಿಂಗಳು ಸಪ್ಟೆಂಬರ್ ತಿಂಗಳಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬಹುದು ಎಂಬ ಆಶಾಭಾವನೆ  ಮಾರಾಟಗಾರರ ಮಾಹಿತಿಯಿಂದ ಕೇಳಿ ಬರುತ್ತಿದೆ. ಕೆಂಪಡಿಕೆ ಧಾರಣೆ ಇಳಿಕೆ ತಾತ್ಕಾಲಿಕವಾಗಿದ್ದು, ತಿಂಗಳಾಂತ್ಯಕ್ಕೆ  ಇದೆ. ಕ್ವಿಂಟಾಲಿಗೆ ರೂ.1000 ದಷ್ಟಾದರೂ ಏರಬಹುದು ಎನ್ನುತ್ತಾರೆ. ಕಳೆದ…

Read more
ಮೆಣಸಿನ ಬೆಳೆಯ ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ.

ಮೆಣಸಿನ ಬೆಳೆಯ ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ.

ಮೆಣಸಿನ ಬೆಳೆಯಲ್ಲಿ ಅತೀ ದೊಡ್ಡ ಸಮಸ್ಯೆ ಎಂದರೆ ಎಲೆ ಮುರುಟುವಿಕೆ. ಮೆಣಸು ಬೆಳೆಯುವ ಎಲ್ಲಾ ಪ್ರದೇಶಗಳಲ್ಲೂ ಈ ಸಮಸ್ಯೆ ಕಾಣಿಸುತ್ತದೆ. ಇದರಿಂದಾಗಿ ಭಾರೀ ಪ್ರಮಾಣದ ಇಳುವರಿ ಕಡಿಮೆಯಾಗುತ್ತದೆ. ಈ ರೋಗ ಯಾವ ಕಾರಣಕ್ಕೆ ಬರುತ್ತದೆ. ಯಾವ ಸಮಯದಲ್ಲಿ ಇದು ಹೆಚ್ಚು. ಇದನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ. ಮೆಣಸನ್ನು ಜಗತ್ತಿನ ಎಲ್ಲಾ ಜನರೂ ಒಂದು ಪ್ರಮುಖ ಮಸಾಲೆ ವಸ್ತುವಾಗಿ ಬಳಕೆ ಮಾಡುತ್ತಾರೆ. ಎಲ್ಲಾ ದೇಶಗಳಲ್ಲೂ ಇದು ಒಂದು ಪ್ರಮುಖ ವಾಣಿಜ್ಯ ಬೆಳೆಯೂ ಹೌದು. ಮಸಾಲೆ…

Read more
ಸಂಚಲನದ ಸುಳಿಯಲ್ಲಿ ಅಡಿಕೆ,ಕರಿಮೆಣಸು ಮಾರುಕಟ್ಟೆ

ಏರಿಳಿತದ ಸುಳಿಯಲ್ಲಿ ಅಡಿಕೆ,ಕರಿಮೆಣಸು ಮಾರುಕಟ್ಟೆ.ಮುಂದೆ ಯಾವುದರ ಸರದಿ?.

ಯಾರೂ ಕಲ್ಪಿಸಿಯೂ ಇರದಂತಹ ಸಂಚಲನವೊಂದು ಕರಿಮೆಣಸು ಮಾರುಕಟ್ಟೆಯಲ್ಲಿ ಜುಲೈ 2023 ರಲಿ ಘಟಿಸಿದೆ. ಹಾಗೆಯೇ ಅಡಿಕೆ ಮಾರುಕಟ್ಟೆಯಲ್ಲೂ ಒಂದು ಸಂಚಲನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಏನಾಗಬಹುದು? ಕರಿಮೆಣಸಿನ ಧಾರಣೆ ಏನಾಗಬಹುದು? ಇತರ ಉತ್ಪನ್ನಗಳಾದ ಕೊಬ್ಬರಿ, ಶುಂಠಿ, ಹಾಗೆಯೇ ರಬ್ಬರ್  ಧಾರಣೆ ಏನಾಗಬಹುದು ಎಂಬ ಕುತೂಹಲವೇ? ಕೆಲವು ಮಾರುಕಟ್ಟೆ  ತಿಳುವಳಿಕೆ ಉಳ್ಳ ಜನರ ಹಾಗು ಪರಿಸ್ಥಿತಿಗಳ ಆಧಾರದ ಮೇಲೆ ಒಂದು ಊಹನೆ ಹೀಗಿದೆ. 2023 ರ ಜುಲೈ ತಿಂಗಳಲ್ಲಿ ಹಠಾತ್ತಾಗಿ ಕರಿಮೆಣಸು, ಮಾರುಕಟ್ಟೆಯಲ್ಲಿ ಬೃಹತ್ ಸಂಚಲನ…

Read more
ಕರಿಮೆಣಸಿನ ಬೆಲೆ ಭಾರೀ ಏರಿಕೆ ಸಂಭವ

ಕರಿಮೆಣಸಿನ ಬೆಲೆ ಭಾರೀ ಏರಿಕೆ ಸಂಭವ –ಬೆಳೆಗಾರರು ಎಚ್ಚರಿಕೆಯಿಂದಿರಿ.

ಕಳೆದ ವಾರ 50000 ದ ಆಸುಪಾಸಿನಲ್ಲಿದ್ದ  ಕರಿಮೆಣಸಿನ ಬೆಲೆ ದಿಡೀರ್ ಆಗಿ ಒಂದೇ ವಾರದಲ್ಲಿ 56,000 ಕ್ಕೆ ಏರಿಕೆಯಾಗಿದೆ. ಕರಿಮೆಣಸು ಇದೆಯೇ ಎಂದು ಕೇಳುವ ಸ್ಥಿತಿ ಉಂಟಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ ದರ 60,000 ತನಕ ಏರಿದೆ. ಇನ್ನೂ ಏರಿಕೆ ಆಗಬಹುದು ಎಂಬ ಸುದ್ದಿ ಕೇಳಿಬರುತ್ತಿದೆ. ಮೆಣಸು ಬೆಳೆಯುವ ದೇಶಗಳಲ್ಲಿ ಉತ್ಪನ್ನದ ಕೊರೆತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ 5-6 ವರ್ಷಗಳಿಂದ ನೆಲಕಚ್ಚಿದ ಕರಿಮೆಣಸಿನ  ಬೆಲೆ ಕಳೆದ ವರ್ಷ 50,000 ದ ಆಸು ಪಾಸಿಗೆ ಬಂದಿತ್ತು.  ಒಮ್ಮೆ 55,000…

Read more
ಅಡಿಕೆ ಧಾರಣೆ ಸ್ವಲ್ಪ ಅಸ್ಥಿರವಾಗಿದೆ- ಬೆಳೆಗಾರರು ದೊಡ್ಡ ನಿರೀಕ್ಷೆ ಹೊಂದಬೇಕಾಗಿಲ್ಲ.

ಅಡಿಕೆ ಧಾರಣೆ ಸ್ವಲ್ಪ ಅಸ್ಥಿರವಾಗಿದೆ- ಬೆಳೆಗಾರರು ದೊಡ್ಡ ನಿರೀಕ್ಷೆ ಹೊಂದಬೇಕಾಗಿಲ್ಲ.

ಜುಲೈ ತಿಂಗಳ ಪ್ರಾರಂಭದಲ್ಲಿ ಕೆಂಪಡಿಕೆ ಧಾರಣೆ ಏರಿಕೆ ಪ್ರಾರಂಭವಾಗಿ ಬೆಳೆಗಾರರು  ಹೆಚ್ಚಿನ ನಿರೀಕ್ಷೆ ಹೊಂದುವಂತಾಯಿತು. ಇನ್ನೂ ಏರಬಹುದು ಸ್ವಲ್ಪ ಕಾಯೋಣ ಎಂದು ಮಾರಾಟಕ್ಕೆ ಹಿಂದೇಟು ಹಾಕುವ ಸ್ಥಿತಿ. ಸಹಜವಾಗಿ ಎಲ್ಲರೂ ಹೀಗೇ ಮಾಡುವುದು. ಆದರೆ ದರ ಏರುತ್ತಾ  ಏರುತ್ತಾ ಮುಂದೆ ಹೋಗುವುದಿಲ್ಲ. ಕೆಲ ಸಮಯದ ನಂತರ ಇಳಿಕೆ ಆಗಿಯೇ ಆಗುತ್ತದೆ. ಈಗ ಸ್ವಲ್ಪ ಇಳಿಕೆ ಸಾಧ್ಯತೆ ಕಾಣಿಸುತ್ತಿದೆ. ದರ ಏರಿಕೆಯಾಗುವಾಗ ಮಾಲು ಕೊಡಲು ಯಾವ ರೈತನಿಗೂ  ಮನಸ್ಸು ಬರುವುದಿಲ್ಲ. ಕೊನೆಗೆ ಇಳಿಕೆಯಾಗುವಾಗ ಮಾರಾಟ ಮಾಡುವುದು ಅನಿವಾರ್ಯವಾಗುತ್ತದೆ. ಇದುವೇ…

Read more
ತೆಂಗಿನ ಮರಗಳಿಗೆ ಯಾವಾಗ ಹೇಗೆ ಗೊಬ್ಬರ ಹಾಕಬೇಕು?

ತೆಂಗಿನ ಮರಗಳಿಗೆ ಯಾವಾಗ ಹೇಗೆ ಗೊಬ್ಬರ ಹಾಕಬೇಕು?

ತೆಂಗಿನ ಮರ ತೋಟಗಾರಿಕಾ ಬೆಳೆಗಳಲ್ಲಿ ಅತೀ ಹೆಚ್ಚು  ಪೋಷಕಾಂಶಗಳನ್ನು ಬಯಸುವ ಬೆಳೆ. ವರ್ಷವಿಡೀ ಬೆಳವಣಿಗೆ ಇರುವ ಇದು ಎಲ್ಲಾ ಋತುಮಾನದಲ್ಲೂ ಏಕಪ್ರಕಾರ ಪೋಷಕಗಳನ್ನು ಬಯಸುತ್ತದೆ. ಬಹಳಷ್ಟು ರೈತರು ತೆಂಗಿಗೆ ಗೊಬ್ಬರ ಕೊಡುವ ವಿಚಾರದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಮರದ ಉತ್ತಮ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಯಾವ ರೀತಿಯಲ್ಲಿ ಗೊಬ್ಬರ ಹಾಕಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ. ತೆಂಗಿನ ಮರದ ಶಿರ ಭಾಗ ಲಕ್ಷಣ ಅದರ ಆರೋಗ್ಯವನ್ನು ತಿಳಿಸುತ್ತದೆ. ಮರದ ಗರಿಗಳು ಚತ್ರಿಯಂತೆ ಬಿಡಿಸಿರಬೇಕು.  ಮರದಲ್ಲಿ 35…

Read more
error: Content is protected !!