krushiabhivruddi

ಕಲ್ಪರಸ – ನೀವು ಇನ್ನೂ ಕುಡಿದಿಲ್ಲವೇ – ಇಲ್ಲಿಗೆ ಹೋಗಿ.

ತೆಂಗಿನ ಮರದ ಹೂ ಗೊಂಚಲಿನಲ್ಲಿ ಒಂದು ರಸ (SAP) ಇದೆ. ಈ ರಸದಿಂದಲೇ, ಎಳನೀರು, ತೆಂಗಿನ ಕಾಯಿ ಆಗುತ್ತದೆ.  ಎಳನೀರು, ಕಾಯಿ ಆಗುವುದಕ್ಕೂ ಮುನ್ನ ನಾವು  ಇದನ್ನು ಸವಿಯಬಹುದು. ಅದೂ ಪರಿಶುದ್ಧವಾಗಿ. ಅದುವೇ ಕಲ್ಪರಸ.. ನಮ್ಮ ಪೂರ್ವಜರ ಕಾಲದಿಂದಲೂ ತೆಂಗಿನ ಮರ, ತಾಳೆ ಮರ, ಈಚಲು ಮರದ ಹೂ ಗೊಂಚಲಿನ ಅಮೃತ ಸಮಾನವಾದ ರಸದ ಮಹತ್ವವನ್ನು  ತಿಳಿಯಲಾಗಿತ್ತು. ಆದನ್ನು ತೆಗೆಯುವ ಕ್ರಮ ಮತ್ತು ದಾಸ್ತಾನು  ವಿಧಾನಗಳಿಂದ ಅದು ಕಲ್ಪರಸವಾಗದೆ  ಅಮಲು ಬರಿಸುವ ಸೇಂದಿ ಎಂಬ ಹೆಸರನ್ನು ಪಡೆದಿತ್ತು….

Read more

ಕಾಫೀ ತೋಟಗಳಿಗೆ ಹೂ ಮಳೆ ನೀರಾವರಿ.

ಹೂ ಮಳೆ ಎಂದರೆ ಕಾಫೀ ಹೂ ಮೊಗ್ಗು ಬರುವ ಸಮಯದಲ್ಲಿ ಅಗತ್ಯವಾಗಿ ಬರಲೇ ಬೇಕಾಗುವ ಮಳೆ ಬಾರದಿದ್ದ ಪಕ್ಷದಲ್ಲಿ  ತುಂತುರು ನಿರಾವರಿ ರೂಪದಲ್ಲಿ ಸಸ್ಯಗಳ ಮೇಲ್ಪಾಗಕ್ಕೆ  ಮಳೆಯೋಪಾದಿಯಲ್ಲೇ ನೀರ ಸಿಂಚನ ಮಾಡುವುದಕ್ಕೆ  ಹೂ ಮಳೆ  ಎನ್ನುತ್ತಾರೆ.. ಸಾಮಾನ್ಯವಾಗಿ ರೋಬಸ್ಟಾ ತಳಿಯ ಹೂ ಮೊಗ್ಗು ಅರಳುವ ಸಮಯದಲ್ಲಿ ಮಳೆ ಬಂದು ಕೃಪೆ ತೋರುತ್ತದೆ. ಕೆಲವೊಮ್ಮೆ  ಅದು ಕೈ ಕೊಡುತ್ತದೆ. ಆ ಸಮಯದಲ್ಲಿ ವಿಸ್ತಾರವಾದ ಬರೇ ಕಾಫೀ ಗಿಡಗಳು ಮಾತ್ರವಲ್ಲದೆ ಮರಮಟ್ಟುಗಳೂ  ಸದಸ್ಯರಾಗಿರುವ  ಕಾಫೀ ತೋಟಕ್ಕೆ ಕೃತಕ ಮಳೆಯನ್ನು ಸೃಷ್ಟಿಸಲು…

Read more

ನಿತ್ಯ ಆದಾಯ ಕೊಡುತ್ತದೆ- ಈ ಕೋಳಿ ಸಾಕಣೆ.

ಮಾನವ ಕೃಷಿ ಮಾಡುವಾಗ ಬರೇ ಬೆಳೆ  ಒಂದನ್ನೇ ನಂಬಿಕೊಂಡು ಇರಬಾರದು. ಹೀಗಾದರೆ ಅವನು ಸೋಲುತ್ತಾನೆ. ಸಮಗ್ರ ಕೃಷಿ ಎಂಬ ತತ್ವವನ್ನು  ಇದಕ್ಕಾಗಿಯೇ ಪರಿಚಯಿಸಲಾಗಿದೆ.. ಅನುಕೂಲ ಮಾಡಿಕೊಂಡು ಹಸು ಸಾಕಣೆ , ಮೀನು ಸಾಕಣೆ, ಕೋಳಿ ಸಾಕಣೆ,  ಆಡು ಸಾಕಣೆ ಮಾಡುತ್ತಿದ್ದರೆ ಅದರಿಂದ ಮುಖ್ಯ ಕೃಷಿಗೆ ಅನುಕೂಲವಾಗುತ್ತದೆ. ದೈನಂದಿನ ಆದಾಯಕ್ಕೆ ಹಸು ಸಾಕಣೆ ಅನುಕೂಲವಾದರೆ ವಾರಕ್ಕೆ , ತಿಂಗಳಿಗೆ ಆದಾಯವನ್ನು ಕೋಳಿ ಸಾಕಣೆ  ಒದಗಿಸಿಕೊಡುತ್ತದೆ. ಕೃಷಿ ಪೂರಕ ಆಗಿರಲಿ: ಕೋಳಿ ಸಾಕಣೆಯಲ್ಲಿ ಮೊಟ್ಟೆ ಕೋಳಿ ಹಾಗೂ  ಮಾಂಸದ ಕೋಳಿ…

Read more

ಅದ್ಭುತ ಇಳುವರಿಗೆ ರವದಿಯ ಕಾಂಪೋಸ್ಟು ಮಾಡಿ.

ಕಬ್ಬು ಬೆಳೆಗಾರರು ಹೆಚ್ಚಾಗಿ ಬೆಳೆ ಆದ ನಂತರ ರವದಿ ಸುಡುತ್ತಾರೆ. ಸುಡುವುದರಿಂದ ಪೊಟ್ಯಾಶ್ ಸತ್ವ ಉಳ್ಳ ಬರೇ ಬೂದಿ ಮಾತ್ರ ಮರಳಿ ದೊರೆಯುತ್ತದೆ. ಅದರ ಪ್ರಮಾಣ ಅತೀ ಅಲ್ಪ. ಅದರ ಬದಲು ಕಾಂಪೋಸ್ಟು ಮಾಡಿದರೆ,  ಹೆಚ್ಚಿನ  ಪ್ರಯೋಜನ ದೊರೆಯುತ್ತದೆ. ಹೆಚ್ಚಿನ ಲಭ್ಯ ರೀತಿಯ ಪೋಷಕಗಳು ಸಿಗುತ್ತವೆ. ಬೆಳೆ ತ್ಯಾಜ್ಯಗಳಲ್ಲಿ ಏನಿರುತ್ತದೆ: ಬಹುತೇಕ ಬೆಳೆ  ತ್ಯಾಜ್ಯಗಳಲ್ಲಿ  ಬೆಳೆಗಳಿಗೆ ಪೂರೈಕೆ ಮಾಡಲಾದ ಸತ್ವಾಂಶಗಳು ಸ್ವಲ್ಪ ಪ್ರಮಾಣದಲ್ಲಿ ಉಳಿದಿರುತ್ತದೆ. ಪೋಷಕಾಂಶಗಳ ಲೆಕ್ಕಾಚಾರದಲ್ಲಿ ನೋಡಿದರೆ  ಬೆಳೆ  ತ್ಯಾಜ್ಯಗಳಲ್ಲಿ ಸಾವಯವ ಇಂಗಾಲ, ಸಾರಜನಕ, ರಂಜಕ…

Read more
Shade net house

ಪಾಲೀ ಹೌಸ್ ಬೇಕಾಗಿಲ್ಲ – ನೆರಳು ಮನೆಯೇ ಸಾಕು.

ಬೆಳೆ ಬೆಳೆಸುವಾಗ ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ  ಮಾಡಬೇಕು. ಪಾಲೀ ಹೌಸ್  ಎಂದರೆ ಅದು ಆನೆ ಸಾಕಿದಂತೆ. ಅದರ ಬದಲು ತುಂಬಾ ಕಡಿಮೆ ಖರ್ಚಿನಲ್ಲಿ  ಆಗುವ ನೆರಳು ಬಲೆ  ಅಥವಾ ನೆಟ್ ಹೌಸ್  ಒಳಗೆ  ಬಹುತೇಕ ಎಲ್ಲಾ ನಮೂನೆಯ  ಬೆಳೆಗಳನ್ನೂ ಬೆಳೆಯಬಹುದು. ರೈತರಿಗೆ ಇದೇ ಅನುಕೂಲಕರ.   ನೆರಳು ಮನೆ  ಎಂದರೆ ಬೆಳೆಗಳ ಮೇಲ್ಭಾಗದಲ್ಲಿ ನಿರ್ದಿಷ್ಟ ಪ್ರಮಾಣದ ನೆರಳನ್ನು ಒದಗಿಸುವ  ಪರದೆಯನ್ನು  ಹಾಸಿ ಮಾಡಿದ ರಚನೆ. ಇಲ್ಲಿ ನೆರಳು ಎಂಬುದು ಕೆಲವು ಬೆಳೆಗಳಿಗೆ ಬೇಕಾಗುತ್ತದೆಯಾದರೂ  ಇದರ…

Read more
ಅಡಿಕೆ ಮರದಲ್ಲಿ ವೀಳ್ಯದೆಲೆ ಮಿಶ್ರ ಬೆಳೆ

ಅಡಿಕೆಯೊಂದಿಗೆ ವೀಳ್ಯದೆಲೆ- ಲಾಭದ ಮಿಶ್ರ ಬೆಳೆ.

ವೀಳ್ಯದೆಲೆಯ ಬೆಲೆ ಗೊತ್ತೇ?  100 ಎಲೆಗೆ 100 ರೂ. ತನಕವೂ ಆಗುವುದುಂಟು. ಅಲ್ಲದೆ ಇದು ವಾರ ವಾರ ಆದಾಯ ಕೊಡುವ ಬೆಳೆ. ಅಡಿಕೆ ಮರಕ್ಕೆ  ಇದನ್ನು ಹಬ್ಬಿಸಿದರೆ ಒಳ್ಳೆಯ ಲಾಭ. ಅಡಿಕೆ ಬೆಳೆಯುವ ಕೆಲವು ಭಾಗಗಳಲ್ಲಿ ಇದೇ ಅಡಿಕೆಯೊಂದಿಗೆ ಮಿಶ್ರ ಬೆಳೆ. ಅಡಿಕೆ  ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳ  ಸಾಲಿನಲ್ಲಿ ಕರಿಮೆಣಸು–ಕೊಕ್ಕೋ, ಬಾಳೆ ಮಾತ್ರವಲ್ಲ, ವೀಳ್ಯದೆಲೆ ಬೆಳೆಯೂ ಲಾಭದಾಯಕ . ದಿನಾ ಆದಾಯ ತಂದು ಕೊಡಬಲ್ಲ ಈ ಬೆಳೆಯನ್ನು ರಾಜ್ಯದ ಹೆಚ್ಚಿನ ಕಡೆ ಅಡಿಕೆ ಮರಗಳಿಗೆ ಹಬ್ಬಿಸಿಯೇ…

Read more
ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು

ತೆಂಗಿನ ಸಸಿ ಕಳೆಗುಂದಿ ಸಾಯುವುದಕ್ಕೆ ಇದು ಕಾರಣ.

ಬಹಳಷ್ಟು ಕೃಷಿಕರ ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು? ನಮ್ಮ ಹಿರಿಯರು ತೆಂಗಿನ ಮರದ ಯಾವುದೇ ಹಸಿ ಭಾಗ ಕಡಿಯಬಾರದು ಎಂದಿದ್ದಾರೆ. ಹಾಗೆಯೇ ತೆಂಗಿನ ಮರ ಕಡಿಯಬಾರದು ಎಂದು ತಾಕೀತು ಮಾಡಿದ್ದಾರೆ. ಇದು ಯಾಕೆ ಗೊತ್ತೇ? ಒಂದು ಮರ ಕಡಿದರೆ ಅದರ ಫಲವಾಗಿ ನಾಲು ಮರ ಹೋಗುತ್ತದೆ. ಕಾರಣ ಮರದ ರಸದ ಆ ವಾಸನೆಯನ್ನು ಹುಡುಕಿಕೊಂಡು ಕೆಂಪು ಮೂತಿ ಹುಳ ಬರುತ್ತದೆ.ಅದು ಯಾವುದಾದರೂ ಮರದಲ್ಲಿ ತನ್ನ ಸಂತಾನಾಭಿವೃದ್ದಿ ಮಾಡುತ್ತದೆ. ತೆಂಗಿನ  ಮರಗಳಿಗೆ ಕುರುವಾಯಿ…

Read more

ನಯಾ ಪೈಸೆ ಖರ್ಚಿಲ್ಲದ ಕೃಷಿ ಹೀಗೆ.

ದೇಸೀ ಹಸುವೊಂದಿದ್ದರೆ  ನೀವು ಯಾವ ಗೊಬ್ಬರದಂಗಡಿಯವನನ್ನೂ  ಸಾಕಬೇಕಾಗಿಲ್ಲ.  ಹಸುವಿನ ಸಗಣಿ, ಅದರ ಮೂತ್ರ, ಮಜ್ಜಿಗೆ, ಹಾಲು, ಶುಂಠಿ ರಸ, ಬ್ರಹ್ಮಾಸ್ತ್ರ, ಅಗ್ನ್ಯಾಸ್ತ್ರ, ನೀಮಾಸ್ತ್ರ ಮುಂತಾದ ಸ್ಥಳೀಯವಾಗಿ ದೊರೆಯುವ ಮೂಲ ವಸ್ತುಗಳಿಂದ ಬೆಳೆಯ ಸರ್ವಾಂಗೀಣ ಅವಶ್ಯಕತೆಯನ್ನೂ ಪೂರೈಸಬಹುದು. ಎಲ್ಲವೂ ಬದಲಾಗಲಿದೆ : ಕೆಲವೇ ವರ್ಷಗಳಲ್ಲಿ ಈ ದೇಶದಲ್ಲಿರುವ ಸರಕಾರೀ ಸ್ವಾಮ್ಯದ ರಸಗೊಬ್ಬರ  ತಯಾರಿಕಾ  ಸಂಸ್ಥೆಗಳು ಬಾಗಿಲು ಹಾಕಲಿವೆ. ಲಕ್ಷಾಂತರ ಜನ ನಿರುದ್ಯೋಗಿಗಳಾಗಲಿದ್ದಾರೆ. ಕೊಟ್ಯಾಂತರ ರೂಪಾಯಿ ವ್ಯವಹಾರದ  ರಸಗೊಬ್ಬರ, ಕೀಟ ನಾಶಕ, ರೋಗನಾಶಕ ಹಾಗೂ ಇನ್ನಿತರ ಬೆಳೆ  ಸಂರಕ್ಷಕ ತಯಾರಕರು…

Read more
ಸ್ಥಳೀಯ ರಾಮ ಫಲ ಹಣ್ಣು

ಸ್ಥಳೀಯ ಹಣ್ಣು ಬೆಳೆಸಿ- ಈಗ ಇದಕ್ಕೆ ಭಾರೀ ಬೇಡಿಕೆ.

ರಾಮಫಲ ಹಣ್ಣಿನ  ಬೆಲೆ ಏನಾದ್ರೂ ಗೊತ್ತೇ? ಕಿಲೋ 200 ಕ್ಕೆ ಮಾರಾಟ ಮಾಡುತ್ತಾರೆ. ರೈತರಿಗೆ  ರೂ.50 ಸಿಗುವುದಕ್ಕೆ ತೊಂದರೆ  ಇಲ್ಲ. ಸೀತಾಫಲದ ಯಥಾವತ್ ರುಚಿಯ ಈ ಹಣ್ಣಿನ ಬೆಳೆಗೆ ನೀರು, ಗೊಬ್ಬರ, ಕೀಟನಾಶಕ, ರೋಗನಾಶಕ ಬೇಕಾಗಿಲ್ಲ. ಚಳಿಗಾಲದಲ್ಲಿ ಮೊದಲು ದೊರೆಯುವ ಹಣ್ಣು. ಉತ್ತಮ ಬೇಡಿಕೆ  ಇದೆ. ಒಮ್ಮೆ ತಿಂದವರು ಮತ್ತೆ ಬೇಕು ಎಂದು ಬಯಸುವ ಹಣ್ಣು ಇದು.  ವಿದೇಶದ ಹಣ್ಣು, ಎಂದರೆ ಎಷ್ಟು ಬೆಲೆಯದರೂ ಕೊಳ್ಳುವ ನಾವು ಸ್ಥಳೀಯ ಹಣ್ಣುಗಳ ಪೌಷ್ಟಿಕತೆ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ….

Read more
less water ans weed less

15 ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು!

ಪಾಲಿಥೀನ್ ಶೀಟನ್ನು ಮಳೆಗಾಲ ಮುಗಿಯುವಾಗ ನೆಲಕ್ಕೆ ಹಾಕಿ. ತೀವ್ರ ಬೇಸಿಗೆಯ ಜನವರಿ ನಂತರ  15 ದಿನಕ್ಕೊಮ್ಮೆ ನೀರುಣಿಸಿದರೆ ಯತೇಚ್ಚ ಸಾಕಾಗುತ್ತದೆ.ಈ ವಿಧಾನದಿಂದ ಗರಿಷ್ಟ ನೀರು ಉಳಿಸಬಹುದು. ಸಸ್ಯಗಳ ಬೇರುಗಳಿಗೆ ಬೇಕಾಗುವ ಸೂಕ್ತ ವಾತಾವರಣವನ್ನೂ ದೊರಕಿಸಿಕೊಡಬಹುದು.  ಆಧುನಿಕ ತಂತ್ರಜ್ಞಾನಗಳು ಕೃಷಿ ಕ್ಷೇತ್ರದ ಸುಧಾರಣೆಗೆ ನೀಡಿದ ಕೋಡುಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದರೆ ಭವಿಷ್ಯದಲ್ಲಿ  ನೀರಿನ ಸಮಸ್ಯೆಯಿಂದ ಪಾರಾಗಬಹುದು.    ಒಂದು ಕಾಲದಲ್ಲಿ ತರಕಾರಿ ಬೆಳೆಗಳಿಗೆ ಮಾತ್ರ ಬಳಸಲ್ಪಡುತ್ತಿದ್ದ ಈ ಮಲ್ಚಿಂಗ್ ಶೀಟುಗಳು ಈಗ ಬಹುತೇಕ ಎಲ್ಲಾ ಬೆಳೆಗಳಿಗೂ ಬಳಕೆಯಾಗುತ್ತಿವೆ.  ಮಲ್ಚಿಂಗ್…

Read more
error: Content is protected !!