ತರಕಾರಿ ಬೆಳೆಗಾರರನ್ನು ರಕ್ಷಿಸಿದ ಸೀಡ್ ಟ್ರೇ ತಂತ್ರಜ್ಞಾನ
ಹಿಂದೆ ತರಕಾರಿ ಬೆಳೆಯುವವರು ಹೊಲದ ಸಿದ್ದತೆ ಮಾಡಿ, ಸಾಲುಗಳನ್ನು ಗುರುತು ಮಾಡಿ, ಬೀಜ ತಂದು ಬಿತ್ತನೆ ಮಾಡಿ ಜೋಪಾನವಾಗಿ ಆರೈಕೆ ಮಾಡಿ ತರಕಾರಿ ಬೆಳೆಸುತ್ತಿದ್ದರು. ಈಗ ಹಾಗಿಲ್ಲ. ನಾಳೆ ಟೊಮಾಟೋ ಅಥವಾ ಇನ್ಯಾವುದಾದರೂ ತರಕಾರಿ ಹಾಕಬೇಕೆಂದಾದರೆ ಇಂದು ಹೊಲದ ಸಿದ್ದತೆ ಮಾಡಿ, ನಾಳೆ ಸಸಿ ನೆಡಬಹುದು. ಮುಂಚಿತವಾಗಿಯೇ ಸಸಿ ಮಾಡಿಟ್ಟುಕೊಳ್ಳುವ ಸೀಡ್ ಟ್ರೇ ತಂತ್ರಜ್ಞಾನ ಇದೆ. ಇದರಲ್ಲಿ ಗಿಡ ಬೆಳೆಸಿ ಕೊಡುವವರೂ ಇದ್ದಾರೆ. ಇದು ತರಕಾರಿ ಬೆಳೆಗಾರರಿಗೆ ನಷ್ಟವನ್ನು ತುಂಬಾ ಕಡಿಮೆ ಮಾಡಿದೆ. ಸಮಯದ ಉಳಿತಾಯವನ್ನೂ ಮಾಡಿದೆ….