ಗ್ಲೆರಿಸೀಡಿಯಾ – ಯೂರಿಯಾ ಗೊಬ್ಬರ ಕೊಡುವ ಗಿಡ.
ಪ್ರಕೃತಿಯಲ್ಲಿ ಎಲ್ಲವೂ ಇದೆ. ಆದರೆ ನಮಗೆ ಗೊತ್ತಾಗುವುದಿಲ್ಲ. ರೈತರು ಸೂಕ್ಷ್ಮವಾಗಿ ಪ್ರಕೃತಿಯನ್ನು ಗಮನಿಸಬೇಕು. ಆಗ ಅವರಿಗೆ ಹಲವಾರು ಸಂಗತಿಗಳು, ಹಾಗೆ ತಪ್ಪು ತಿಳುವಳಿಕೆಗಳು ಪರಿಹಾರವಾಗುತ್ತವೆ. ಸಾರಜನಕ ಏನು? ಸಾರಜನಕ ಗೊಬ್ಬರ ಎಂಬುದು ಸಸ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವ ಪೋಷಕ. ಈ ಪೋಷಕವು ಹೆಚ್ಚಿನ ಸಾವಯವ ವಸ್ತುಗಳಲ್ಲಿ ಇರುತ್ತದೆ. ಇದನು ಕೃತಕವಾಗಿ ಯೂರಿಯಾ ರೂಪದಲ್ಲಿ ಒದಗಿಸಲಾಗುತ್ತದೆ. ಸಾರಜನಕ ಎಂಬುದು ವಾತಾವರಣದಲ್ಲಿ ಅನಿಲ ರೂಪದಲ್ಲಿ ಇರುವ ಮೂಲವಸ್ತುವಾಗಿದ್ದು ಪ್ರೊಟೀನು ರಚನೆಯಲ್ಲಿ ಅತಿ ಮುಖ್ಯ ಭಾಗವಾಗಿರುತ್ತದೆ. ಸಸ್ಯಗಳು ಈ ಸಾರಜನಕವನ್ನು ನೇರವಾಗಿ…