
ಜರ್ಸಿ – ಎಚ್ ಎಪ್ ಹಸುವಿನ ಸಗಣಿಯಲ್ಲಿ ಪೋಷಕಾಂಶ ಹೆಚ್ಚು.
ಜರ್ಸಿ – ಎಚ್ ಎಫ಼್ ಹಸುಗಳು ಹಾಕುವ ಸಗಣಿಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದರೆ ಬೇಸರ ಮಾಡಿಕೊಳ್ಳಬೇಡಿ. ನಿಜವಾಗಿಯೂ ಇದು ಸತ್ಯ. ಈ ಹಸುಗಳು ವಿದೇಶಿ ತಳಿಗಳಾದರೂ ಅವು ಹಾಕುವ ಸಗಣಿಯಲ್ಲಿ ಪೋಷಕಾಂಶ ಚೆನ್ನಾಗಿಯೇ ಇರುತ್ತದೆ. ಹಾಗೆಂದು ನಾಟೀ ಹಸುಗಳ ಸಗಣಿಯಲ್ಲಿ ಇಲ್ಲ ಎಂದಲ್ಲ. ಯಾವ ಹಸುಗಳಿಗೆ ಅಧಿಕ ಸತ್ವದ ಆಹಾರ ಕೊಡಲಾಗುತ್ತದೆಯೋ ಅವುಗಳು ವಿಸರ್ಜಿಸುವ ತ್ಯಾಜ್ಯದಲ್ಲಿ ಆ ಸತ್ವಗಳ ಉಳಿಕೆ ಇರುತ್ತವೆ. ಹಸುಗಳಲ್ಲಿ ನಾಟಿ ಮತ್ತು ವಿದೇಶೀ ತಳಿ ಎಂಬ ಎರಡು ವಿಧಗಳು. ನಾಟಿ ತಳಿಗೆ…