ಕಬ್ಬು ಬೆಳೆ

ಕಬ್ಬು ಬೆಳೆಗೆ ರಂಜಕ ಗೊಬ್ಬರ ಮತ್ತು ಇಳುವರಿ.

ಕಬ್ಬಿನ ಬೇಸಾಯದಲ್ಲಿ ಇಳುವರಿ ಹೆಚ್ಚಬೇಕಾದರೆ ಬೇರುಗಳು ಅಧಿಕ ಪ್ರಮಾಣದಲ್ಲಿ ಇರಬೇಕು. ಸಸ್ಯಗಳಿಗೆ ಬೇರೇ ಆಧಾರ.  ಹೆಚ್ಚು ಹೆಚ್ಚು ಬೇರುಗಳಿದ್ದರೆ ಆಹಾರ ಸಂಗ್ರಹಣೆ ಹೆಚ್ಚಿ ಬೆಳೆ ಆರೋಗ್ಯವಾಗಿರುತ್ತದೆ.  ಬೇರಿನ ಬೆಳೆವಣಿಗೆ ಮತ್ತು ಕಾಂಡದ ಬೆಳೆವಣಿಗೆಗೆ ರಂಜಕ ಗೊಬ್ಬರ ಅವಶ್ಯಕ. ಕಬ್ಬು ಸಸ್ಯದ ಬೇರು ಸಮರ್ಪಕವಾಗಿ ಬೆಳೆಯದಿದ್ದರೆ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಜಕಾಂಶ ಇಲ್ಲದಿದ್ದರೆ , ದ್ಯುತಿ ಸಂಶ್ಲೇಷಣ ಕ್ರಿಯೆ ಸರಿಯಾಗಿ ನಡೆಯದು. ಬೇರಿನ ಭಾಗದಲ್ಲಿ ಉಷ್ಣತಾಮಾನವು 16- 22 ಡಿಗ್ರಿ ತನಕ ಇದ್ದಾಗ ಬೇರುಗಳು…

Read more
ಸಮರ್ಪಕ ಪೋಶಕಾಂಶ ದೊರೆತ ಕಬ್ಬು ಬೆಳೆ

ಕಬ್ಬು ಬೆಳೆಗೆ ಪೊಟ್ಯಾಶ್ ಗೊಬ್ಬರದ ಮಹತ್ವ

ಕಬ್ಬಿನ ಬೆಳೆಗೆ ಪೊಟ್ಯಾಶಿಯಂನ ಅವಶ್ಯಕತೆ ಹೆಚ್ಚು.  ಪೊಟ್ಯಾಶಿಯಂ ಸತ್ವ ಕೊರತೆಯಾದ ಕಬ್ಬಿನ ಬೆಳೆಗೆ ಬೆಲೆ ಇಲ್ಲ.ಅದು ಕಬ್ಬು ಎನ್ನಿಸಿಕೊಳ್ಳಲಾರದು.ಸಾರಜನಕ ಕೊಡಿ. ರಂಜಕ ಕೊಡಿ ಆದರೆ ಪೊಟ್ಯಾಶಿಯಂ ಕೊಟ್ಟಾಗ  ಮಾತ್ರ ಅದರ ಪ್ರತಿಫಲ ಲಭ್ಯ. ಇದು ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವ ಪೊಷಕಾಂಶ. ಹಿಂದೆ ನಮ್ಮಲ್ಲಿ ಸಕ್ಕರೆ ತಯಾರಿಕೆ ಇರಲಿಲ್ಲ. ಬೆಲ್ಲವೇ ಹೆಚ್ಚು. ಉತ್ತಮ ಬೆಲ್ಲ ದೊರೆಯಬೇಕಾದರೆ  ಮಣ್ಣಿಗೆ ಬೂದಿ ಅಂಶ ಯಥೇಚ್ಚವಾಗಿ ಬೇಕು ಎಂದು ಹೊಲಕ್ಕೆ ರವದಿ ಮತ್ತು ಇನ್ನಿತರ ತ್ಯಾಜ್ಯಗಳನ್ನು ಹಾಕಿ ಅದನ್ನು ಸುಟ್ಟು ಪೊಟ್ಯಾಶಿಯಂ ಸತ್ವವನ್ನು…

Read more
ಕಬ್ಬು ಬೆಳೆಗೆ ಸಾರಜನಕ ಪೋಷಕದ ಫಲ

ಕಬ್ಬು ಬೆಳೆಗೆ ಸಾರಜನಕ ಪೋಷಕಾಂಶದ ಮಹತ್ವ.

 ಕಬ್ಬು ಬೆಳೆಗೆ ಸಾರಜನಕ ಪೋಷಕಾಂಶ  ಅತ್ಯಂತ ಮಹತ್ವದ ಗೊಬ್ಬರವಾಗಿದ್ದು, ರೈತರು ಸಮಯಾಧಾರಿತವಾಗಿ ಇದನ್ನು ಕೊಡುವುದರಿಂದ  ಉತ್ತಮ ಇಳುವರಿ ಪಡೆಯಬಹುದು. ಕಬ್ಬಿನ ಬೆಳೆ ಬೆಳೆಯುವಾಗ ಅದರಿಂದ ನಾವು ಮರಳಿ ಪಡೆಯುವುದು ಬರೇ 12 %  ಸಕ್ಕರೆ ಮಾತ್ರ . ಉಳಿದ ರವದಿ, ಮಡ್ಡಿ, ಕಾಕಂಬಿ, ಮುಂತಾದವುಗಳನ್ನು ಮಣ್ಣಿಗೆ ಸೇರಿಸಿದರೆ ಕಬ್ಬಿಗೆ ಬೇರೆ ಪೋಷಕಾಂಶವನ್ನು ಕಡಿಮೆ ಕೊಟ್ಟೂ  ಬೆಳೆ ಬೆಳೆಸಬಹುದು. ಇವೆಲ್ಲಾ ಬರೇ  ಹೇಳಲಿಕ್ಕಷ್ಟೇ ಚಂದ . ಪ್ರಾಯೋಗಿಕವಾಗಿ  ಇದನ್ನು ಮಾಡಲಿಕ್ಕಾಗುವುದಿಲ್ಲ. ಕಬ್ಬಿನ ಹೊಲ ಒಂದು ಕಡೆ, ಸಕ್ಕರೆ ಕಾರ್ಖಾನೆ …

Read more

ಕಾಫೀ – ಬೋರರ್ ನಿಯಂತ್ರಣಕ್ಕೆ ಜೈವಿಕ ಪರಿಹಾರ.

ಕಾಫಿಯಲ್ಲಿ  ಕಾಯಿ ಕೊರಕ  ಎಲ್ಲಾ  ಕಡೆಯಲ್ಲೂ  ಕಂಡು ಬರುವ ದೊಡ್ದ  ಸಮಸ್ಯೆ.  ಕಪ್ಪು ಬಣ್ಣದ ಕೀಟವೊಂದು  ಕಾಫೀ ಕಾಯಿಯ ನಾಭಿ ಭಾಗದಲ್ಲಿ  ಒಳಸೇರಿ ಕೊರೆದು  ಕಾಯಿಯನ್ನು ಹಾಳು ಮಾಡುತ್ತದೆ. ಕಾಫಿಯ ಕಾಯಿಯ ಒಳಗೆ  ಪ್ರವೇಶ ಮಾಡಿ ಅಲ್ಲಿ ತೂತು ಕೊರೆದು  ಮೊಟ್ಟೆ ಇಡುತ್ತದೆ. ಅಲ್ಲೇ ಮೊಟ್ಟೆ  ಒಡೆಯುತ್ತದೆ. ಒಂದು ವರ್ಷದಲ್ಲಿ  ಕೀಟವು 8-10 ತಲೆಮಾರನ್ನು  ಅಲ್ಲೇ ಪೂರೈಸಿರುತ್ತದೆ.ಇದಕ್ಕೆ ವಿಷ ರಾಸಾಯನಿಕದ ಬದಲು ಜೈವಿಕ ವಿಧಾನ ಸುರಕ್ಷಿತ… ಜೀವನ ಚಕ್ರ: ಈ ಕೀಟ ಗಿಡದ ಮೇಲೆ  ಇರಲಿ, ನೆಲದಲ್ಲೇ …

Read more

ಕಾಫಿ ಬೆಳೆಗೆ ಇದು ಅತೀ ದೊಡ್ಡ ಸಮಸ್ಯೆ.

ಎಲೆಗಳ ಮೇಲೆ ತಾಮ್ರದ  ಕಲೆಗಳು ಕಂಡು ಬಂದು ಅದು ಒಣಗಿ ಎಲೆಗಳು ಉದುರಿ ಸಸ್ಯದಲ್ಲಿ ಬರೇ ಕಡ್ಡಿ ತರಹದ  ಗೆಲ್ಲುಗಳು ಮಾತ್ರ ಉಳಿಯುವ ಈ ರೋಗ ಇತ್ತೀಚೆಗೆ ಕಾಫೀ ಬೆಳೆಯಲಾಗುವ ಪ್ರದೇಶಗಳಲ್ಲಿ ವ್ಯಾಪಕವಾಗುತ್ತಿದೆ. ಇದು ಬೆಳೆಗಾರರಲ್ಲಿ ಅತಂಕವನ್ನು ಉಂಟುಮಾಡಿದೆ.. ಎಲೆ  ತುಕ್ಕು ರೋಗ , ಅರಶಿನ ಚುಕ್ಕೆ ಅಥವಾ ಎಲೆ ಚುಕ್ಕೆ ರೋಗ, leaf rust                 ಎಂಬುದು  ಇದರ  ಹೆಸ ರು.  ಈ ರೋಗ ಆರ್ಥಿಕವಾಗಿ ಬೆಳೆಗಾರರಿಗೆ…

Read more

ಕಾಫೀ ತೋಟಗಳಿಗೆ ಹೂ ಮಳೆ ನೀರಾವರಿ.

ಹೂ ಮಳೆ ಎಂದರೆ ಕಾಫೀ ಹೂ ಮೊಗ್ಗು ಬರುವ ಸಮಯದಲ್ಲಿ ಅಗತ್ಯವಾಗಿ ಬರಲೇ ಬೇಕಾಗುವ ಮಳೆ ಬಾರದಿದ್ದ ಪಕ್ಷದಲ್ಲಿ  ತುಂತುರು ನಿರಾವರಿ ರೂಪದಲ್ಲಿ ಸಸ್ಯಗಳ ಮೇಲ್ಪಾಗಕ್ಕೆ  ಮಳೆಯೋಪಾದಿಯಲ್ಲೇ ನೀರ ಸಿಂಚನ ಮಾಡುವುದಕ್ಕೆ  ಹೂ ಮಳೆ  ಎನ್ನುತ್ತಾರೆ.. ಸಾಮಾನ್ಯವಾಗಿ ರೋಬಸ್ಟಾ ತಳಿಯ ಹೂ ಮೊಗ್ಗು ಅರಳುವ ಸಮಯದಲ್ಲಿ ಮಳೆ ಬಂದು ಕೃಪೆ ತೋರುತ್ತದೆ. ಕೆಲವೊಮ್ಮೆ  ಅದು ಕೈ ಕೊಡುತ್ತದೆ. ಆ ಸಮಯದಲ್ಲಿ ವಿಸ್ತಾರವಾದ ಬರೇ ಕಾಫೀ ಗಿಡಗಳು ಮಾತ್ರವಲ್ಲದೆ ಮರಮಟ್ಟುಗಳೂ  ಸದಸ್ಯರಾಗಿರುವ  ಕಾಫೀ ತೋಟಕ್ಕೆ ಕೃತಕ ಮಳೆಯನ್ನು ಸೃಷ್ಟಿಸಲು…

Read more
ಫ್ರೂನಿಂಗ್ ಕ್ರಮ

ಕಾಫೀ ಗಿಡದ ವೈಜ್ಞಾನಿಕ ಪ್ರೂನಿಂಗ್ ವಿಧಾನ.

ಕಾಫೀ ಸಸ್ಯ ಅದರಷ್ಟಕ್ಕೇ ಬೆಳೆದರೆ  ಸಣ್ಣ ಮರವೇ ಆಗಬಲ್ಲುದು. ಆದರೆ  ಕೊಯಿಲು ಮುಂತಾದ ನಿರ್ವಹಣೆಗೆ ಅದನ್ನು ವ್ಯವಸ್ಥಿತವಾಗಿ ಆಕಾರ ಕೊಡಬೇಕು. ಅದನ್ನೇ ಪ್ರೂನಿಂಗ್ ಎನ್ನುತ್ತಾರೆ. ಹಂತ ಹಂತವಾಗಿ ನೇರ ಚಿಗುರನ್ನು ತೆಗೆದು ರೆಕ್ಕೆ  ಚಿಗುರನ್ನು ಮಾತ್ರ ಉಳಿಸುವ ಈ ವಿಧಾನ ಕಾಫಿ ಬೆಳೆಯ ಪ್ರಮುಖ ನಿರ್ವಹಣೆ. ಕಾಫೀ ಬೆಳೆಯ ನಾಡಿನಲ್ಲಿ  ನಿತ್ಯ ಕಾಫೀ ತೋಟದ ಕೆಲಸ ಇದ್ದೇ ಇರುತ್ತದೆ. ಮಳೆಗಾಲ ಪ್ರಾರಂಭದಲ್ಲಿ ಮರದ ನೆರಳು ತೆಗೆಯುವ ಕೆಲಸವಾದರೆ ಮಳೆಗಾಲ ಮುಗಿಯುವಾಗ ಸಸ್ಯದಲ್ಲಿ ಬರುವ ಚಿಗುರು ತೆಗೆಯುವ ಕೆಲಸ….

Read more
error: Content is protected !!