ಕೆಂಪಡಿಕೆ ಧಾರಣೆ 49000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49,000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49000 ಸಮೀಪಕ್ಕೆ ತಲುಪಿದೆ. ಇನ್ನೂ ಏರಿಕೆಯಾಗಬಹುದು ಎಂಬ ಸುದ್ದಿಗಳಿವೆ. ಕೆಂಪಡಿಕೆ ಏರಿದರೆ ಸಹಜವಾಗಿ ಚಾಲಿಯೂ ಏರಿಕೆಯಾಗಲೇಬೇಕು. ಈಗಾಗಲೇ ಚಾಲಿ ದಾರಣೆ ತುಸು ಏರಲಾರಂಭಿಸಿದೆ. ಇನ್ನೂ ಸ್ವಲ್ಪ ಏರಿಕೆ ಸಾಧ್ಯತೆಗಳಿವೆ. ಉತ್ಪಾದನಾ ಕ್ಷೇತ್ರದಿಂದ ಬೇಡಿಕೆ ಪ್ರಾರಂಭವಾಗಿದೆ. ಧೀರ್ಘ ಕಾಲದವರೆಗೆ ದರ ಇಳಿಕೆ ಹಾದಿಯಲ್ಲಿದ್ದ ಕಾರಣ ಈ ಬಾರಿ ದರ ಏರಿಕೆ ಸ್ವಲ್ಪ ಹೆಚ್ಚು ಸಮಯದ ತನಕ ಮುಂದುವರಿಯಬಹುದು ಎಂಬ ಲೆಕ್ಕಾಚಾರ ಇದೆ. ಕೆಂಪಡಿಕೆ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಇದೆ. ಹಾಗಾಗಿ ದರ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದೆ….

Read more
ಕಳೆದ ವರ್ಷ 7500. ಈ ವರ್ಷ 6300 ಅಡಿಕೆ ಮಾರುಕಟ್ಟೆ ಅಸ್ಥಿರವಾದೀತೇ

ಕಳೆದ ವರ್ಷ 7500. ಈ ವರ್ಷ 6300. ಅಡಿಕೆ ಮಾರುಕಟ್ಟೆ ಅಸ್ಥಿರವಾದೀತೇ?   

ಕಳೆದ ವರ್ಷ ಈ ಸಮಯದಲ್ಲಿ ಹಸಿ ಅಡಿಕೆಗೆ 7500 ರೂ. ಬೆಲೆಗೆ ಖರೀದಿ ಮಾಡಲಾಗುತ್ತಿತ್ತು. ಈ ವರ್ಷ ಪ್ರಾರಂಭಿಕ ದರ 6500, ಇನ್ನೂ ಇಳಿಕೆಯಾಗಿ 6300 ಕ್ಕೆ ಬಂದಿದೆ. ಇನ್ನೂ ಇಳಿಯುವ ಸಂಭವ. ಇದು ಮುಂದಿನ ಅಡಿಕೆ ಧಾರಣೆಯ ಅಸ್ಥಿರತೆಯನ್ನು ತೋರಿಸುತ್ತಿದೆ. ಕೆಂಪಡಿಕೆಯ ಉತ್ಪಾದನೆ ಭಾರೀ ಹೆಚ್ಚಳವಾಗುತ್ತಿದ್ದು, ಸಾಂಪ್ರದಾಯಿಕ ಪ್ರದೇಶಗಳ ಇಳುವರಿಯನ್ನು ಹೊಸ ಪ್ರದೇಶಗಳು ಹಿಂದಿಕ್ಕುತ್ತಿದೆ. ಜೋಳ, ರಾಗಿ, ಭತ್ತ ತರಕಾರಿ ಬೆಳೆಯುತ್ತಿದ್ದ ಬಯಲು ಸೀಮೆ ಪ್ರದೇಶಗಳಲ್ಲಿ  ಉತ್ತಮ ಇಳುವರಿ ಕಾಣಿಸುತ್ತಿದ್ದು,  ಮಾರುಕಟ್ಟೆ ಈ ಉತ್ಪಾದನೆಯನ್ನು ತಾಳಿಕೊಳ್ಳಬಹುದೇ…

Read more
ಅಡಿಕೆ ಕ್ರಯ ಏರಲಿದೆ- ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ

ಅಡಿಕೆ ಕ್ರಯ ಏರಲಿದೆ-  ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ.

ಯಾವ ಲೆಕ್ಕಾಚಾರಕ್ಕೂ ಸಿಗದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆಯತ್ತ ಮುಖಮಾಡಿದೆ. ಸಾಮಾನ್ಯವಾಗಿ ವಸ್ತುವೊಂದರ ಬೆಲೆ ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಭಿಸಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಆದರೆ ಅಡಿಕೆ ಹಾಗಿಲ್ಲ. ಬೆಳೆ ಹೆಚ್ಚಾದರೂ ಬೆಲೆ ಏರಬಹುದು. ಬೆಳೆ ಕಡಿಮೆಯಾದರೂ ಬೆಲೆ ಏರದೆ ಇರಬಹುದು. ಇದೆಲ್ಲಾ ಅಡಿಕೆ ಮಾರುಕಟ್ಟೆಯಲ್ಲಿ ಯಾವಾಗಲೂ ನಡೆಯುತ್ತಿರುವಂತದ್ದು.ವರ್ಷದುದ್ದಕ್ಕೂ ಗುಟ್ಕಾ ಫ್ಯಾಕ್ಟರಿ ನಡೆಯುತ್ತಿರುತ್ತದೆ. ಗುಟ್ಕಾ ತಿನ್ನುವವರು, ಪಾನ್ ತಿನ್ನುವವರು ಅದಕ್ಕೆ ರಜೆ / ವಿರಾಮ ಕೊಡುವ ಕ್ರಮವೇ ಇಲ್ಲ. ಆದರೂ  ಬೆಲೆ ಮಾತ್ರ ಒಮ್ಮೊಮ್ಮೆ ಏರುತ್ತಾ ಹೋಗುತ್ತದೆ….

Read more
ನಾಟಿ ಹತ್ತಿ

ನಾಟಿ ಹತ್ತಿಯನ್ನು ಕೊಳ್ಳುವವರೇ ಇಲ್ಲ. ಬಿಟಿ ಗೇ ಬೇಡಿಕೆ

ಹತ್ತಿ  ಬೆಳೆಯುವ ರೈತರು ಯಾರ ಮಾತನ್ನೂ  ನಂಬಲಿಲ್ಲ. ನಾಟಿ ಹತ್ತಿಗೆ ವಿದಾಯ ಹೇಳಿಯೇ ಬಿಟ್ಟರು. ನಮಗೆ ಹುಳ ಬಾರದ ಹತ್ತಿ ತಳಿ ಬೇಕು ಎಂದು ಬೋಲ್ ಗಾರ್ಡ್  (ಬಿಟಿ) ಹತ್ತಿ ಬೀಜವನ್ನು ಕದ್ದು ಮುಚ್ಚಿಯಾದರೂ ಬೆಳೆಸಿದರು. ಈಗ ದೇಶದಲ್ಲಿ ಬೆಳೆಸಲ್ಪಡುವ  99 %   ಹತ್ತಿ ಬಿಟಿಯೇ. ಇದರ ಬೀಜ ಮಾತ್ರ ಸಿಗದಿದ್ದರೆ ರೈತರು ಏನು ಮಾಡಲಿಕ್ಕೂ ಹಿಂಜರಿಯಲಿಕ್ಕಿಲ್ಲ. ಅಷ್ಟೂ ಜನ ಬಿಟಿ ಹತ್ತಿಯನ್ನು ಹಚ್ಚಿಕೊಂಡಿದ್ದಾರೆ. ಮಾರುಕಟ್ಟೆಯೂ ಸಹ ಬಿಟಿ ಪರವಾಗಿದ್ದು, ಅದಕ್ಕೆ ಬೇಡಿಕೆ- ಬೆಲೆ. ನಮ್ಮ ರಾಜ್ಯದಲ್ಲಿ…

Read more
ರಬ್ಬರ್ ಬೆಳೆಯನ್ನು ಕೇಳುವವರೇ ಇಲ್ಲದಾಯಿತಾ

ರಬ್ಬರ್ ಬೆಳೆಯನ್ನು ಕೇಳುವವರೇ ಇಲ್ಲದಾಯಿತಾ? ಎಲ್ಲಿ ಹೋಯಿತು ರಬ್ಬರ್ ಬೋರ್ಡ್?

ರಬ್ಬರ್ ಬೆಳೆ ನಮ್ಮ ಅಡಿಕೆ ತೆಂಗಿನಂತಲ್ಲ. ಈ ಬೆಳೆಗೆ ಇರುವ  ಅವಕಾಶ ಅಪಾರ. ಆದರೆ ರಬ್ಬರ್ ಬೆಳೆಯನ್ನು ಕೇಳುವವರೇ ಇಲ್ಲ. ರಬ್ಬರ್ ಬೆಳೆಗಾರರಿಗೆ ಬೆಂಬಲವಾಗಿ ಇರಲಿ ಎಂದು ಸ್ಥಾಪಿಸಲಾದ ರಬ್ಬರ್  ಬೋರ್ಡ್ ಸಹ ಬೆಳೆಗಾರರ ನೆರವಿಗೆ ಬರುವುದು ಕಾಣಿಸುತ್ತಿಲ್ಲ.ರಬ್ಬರ್ ಬೆಲೆ ಕುಸಿಯಲಾರಂಭಿಸಿ ಸುಮಾರು 9-10 ವರ್ಷಗಳಾಗಿದೆ. ಒಮ್ಮೆ ಪಾತಾಳಕ್ಕೆ, ಮತ್ತೆ ಸ್ವಲ್ಪ ಆಸೆ ಹುಟ್ಟಿಸಿ  ಪುನಹ ಪಾತಾಳಕ್ಕೇ ಇಳಿಯುತ್ತಿದೆ. ಬಹುಷಃ ಶೇರು ಮಾರುಕಟ್ಟೆಯಲ್ಲಿ ಶೇರು ಮಾರಿದ ನಂತರ ಬೆಲೆ ಏರಲಾರಂಭಿಸಿದಂತೆ  ರಬ್ಬರ್ ಮರಗಳನ್ನು ಎಲ್ಲರೂ ಕಡಿದು ಮುಗಿದ…

Read more
ಅಡಿಕೆ ರಾಸಿ

ಮುಂದಿನ ತಿಂಗಳಲ್ಲಿ ಅಡಿಕೆ ಧಾರಣೆ ಹೇಗಾಗಬಹುದು?

ಜನವರಿ 2022 ಅಡಿಕೆ ಬೆಳೆಗಾರರು ಹೊಸ ಚಾಲಿ ಅದೂ ಸಾಧಾರಣ ಗುಣಮಟ್ಟದ ಅಡಿಕೆಗೆ ಕಿಲೋ 430-440  ತನಕ ಪೆಡೆದಿದ್ದರು. ಫೆಬ್ರವರಿಯಲ್ಲಿ ಧಾರಣೆ ಕುಂಟುತ್ತಾ  ಸಾಗಿದೆ.  ಕ್ಯಾಂಪ್ಕೋ ಬೆಂಬಲದಲ್ಲಿ ದರ ಬೀಳಲಿಲ್ಲ ಎನ್ನಲಾಗುತ್ತಿದೆ. ಖಾಸಗಿಯವರು ದರ ಇಳಿಸಿ, ನಾವು ಸ್ಪರ್ಧೆಗೆ ಇಲ್ಲ ಎಂದು ಹಿಂದೆ ಸರಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮುಂದಿನ ತಿಂಗಳು ಚಾಲಿ ಅಡಿಕೆ ದರ ಸ್ವಲ್ಪ ಹಿಂದೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಸ್ವಲ್ಪ ಪ್ರಮಾಣದಲ್ಲಿ  ಆಮದು ಆಗಿದೆಯಾದರೂ, ಇದನ್ನು ಸರಕಾರದ ಗಮನಕ್ಕೆ ತಂದು…

Read more
ಕೆಂಪಡಿಕೆ ರಾಸೀ

ಕೆಂಪಡಿಕೆ ಉಮೇದು – ಚಾಲಿ ನಡುಕ- ಕರಿಮೆಣಸು ಕುಸಿತ.22-02-2022 ಮಾರುಕಟ್ಟೆ.

ಈ ವರ್ಷದ ನಿರೀಕ್ಷೆಯಂತೆ ಕೆಂಪಡಿಕೆ ದರಕ್ಕೆ ಅಂಜಿಕೆ ಇಲ್ಲ. ಇದು ಏರಿಕೆಯಾಗುವುದು ತಡವಾದರೂ ಇಳಿಕೆ ಆಗುವ ಸಾಧ್ಯತೆ ತುಂಬಾ ಕಡಿಮೆ. ಚಾಲಿ ಮಾತ್ರ ಈ ವರ್ಷ ಭಾರೀ ಏರಿಕೆಯ ನಿರೀಕ್ಷೆ ಇಲ್ಲ. ಹಾಗೆಂದು ಬಾರೀ ಇಳಿಕೆಯೂ ಆಗದು. ಇಂದು ದಿನಾಂಕ 22-02-2022 ಮಂಗಳವಾರ ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು, ಕೊಬ್ಬರಿ, ರಬ್ಬರ್, ಕಾಫೀ ದರ ಹೇಗಿತ್ತು ಗಮನಿಸಿ. ಚಾಲಿ ದರ ಖಾಸಗಿಯವರ ಸ್ಪರ್ಧೆ ಇಲ್ಲದೆ ಅಲ್ಲಾಡುತ್ತಿಲ್ಲ. ಹಾಗೆಂದು ಕರಾವಳಿಯಲ್ಲಿ ಅಡಿಕೆ ಬೆಳೆಗಾರರು…

Read more
ಅಡಿಕೆ ಮಾರುಕಟ್ಟೆ ಅಂಗಳ

ಅಡಿಕೆ ಧಾರಣೆ ಸ್ಥಿರ. ಬೆಳೆಗಾರರಿಗೆ ನೆಮ್ಮದಿ- ಸೋಮವಾರ ದಿನಾಂಕ 27-12-2021.

2021 ನೇ ಇಸವಿಯಲ್ಲಿ ಅಡಿಕೆ ಧಾರಣೆ ಬೆಳೆಗಾರರಿಗೆ ಹೊಸ ಉತ್ಸಾಹವನ್ನು ಕೊಟ್ಟಿದೆ. ಸಾಕಷ್ಟು ಹೊಸ ತೋಟಗಳು ತಲೆ ಎತ್ತಿವೆ. ಬಹಳಷ್ಟು ಬೆಳೆಗಾರರು ಬೀಜಕ್ಕಾಗಿಯೇ ಅಡಿಕೆ ಮಾರಾಟ ಮಾಡಿ ಲಾಭಮಾಡಿಕೊಂಡಿದ್ದಾರೆ.  ಅಡಿಕೆ ಧಾರಣೆಯೂ ಉತ್ತಮವಾಗಿತ್ತು. ಬೀಜದ ಅಡಿಕೆಗೂ 7-8 10 ರೂ ತನಕ ಇತ್ತು. ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ತೃಪ್ತಿಯ ಧಾರಣೆಯನ್ನು ಕಂಡು ವರ್ಷ ಇದು  ಎಂದರೆ ತಪ್ಪಾಗಲಾರದು. ಹೊಸ ವರ್ಷ 2022 ಸಹ ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ವರ್ಷವಾಗೇ ಇರಲಿದೆ. ಯಾಕೋ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ…

Read more
sugarcane trash burning

Sugarcane farmers believe in Thrash burning – Why?

90% above sugarcane farmers still follow thrash burning in sugarcane, because, they  realized the advantages of this. It is the cheapest method of disease control. Sugarcane is one of the main commercial crop in India. According to statistical survey, in India sugarcane is cultivated in 4.32 million hectares of land and every year,  300 million…

Read more

ಎಣ್ಣೆ ತಾಳೆ ಬೆಳೆಗೆ ಮರುಳಾಗದಿರಿ. ಹೇಳುವಷ್ಟು ಸುಲಭದ ಬೆಳೆ ಅಲ್ಲ.

ಸರಕಾರದ ಇಲಾಖೆಗಳು ದೇಶೀಯವಾಗಿ ಖಾದ್ಯ ಎಣ್ಣೆ ಉತ್ಪಾದನೆಗಾಗಿ ನಮ್ಮನ್ನು ಹುರಿದುಂಬಿಸುತ್ತಿವೆ.ಆದರೆ ಎಣ್ಣೆ ತಾಳೆ  ಬೆಳೆ ನಮಗೆಷ್ಟು ಕೈ ಹಿಡಿಯಬಹುದು ಎಂಬುದನ್ನು ಇಲ್ಲಿ ಓದಿ ನಂತರ ನಿರ್ಧರಿಸಿ. ತಾಳೆ ಎಣ್ಣೆ ಎಂಬುದು ಪ್ರಮುಖ ಖಾದ್ಯ ಮತ್ತು ಅಖಾಧ್ಯ ಎಣ್ಣೆ ಮೂಲವಾಗಿದ್ದು, ಇದನ್ನು  ರೈತರು ತಮ್ಮ ಹೊಲದಲ್ಲಿ  ಸಸಿ ನೆಟ್ಟು  ಬೆಳೆಸಿ ಅದರ  ಫಲದಿಂದ ಪಡೆಯಲಾಗುತ್ತದೆ. ಇದು ನಮ್ಮ ದೇಶದ ಮೂಲದ ಬೆಳೆಯಲ್ಲ. ಮಲೇಶಿಯಾ, ಇಂಡೋನೇಶಿಯಾ ಮುಂತಾದ ದೇಶಗಳಲ್ಲಿ ಬೆಳೆಯುತ್ತಿರುವ ಈ ತಾಳೆ ಮರ, ಈಗ ಖಾದ್ಯ ಎಣ್ಣೆ ಸ್ವಾವಲಂಭನೆ …

Read more
error: Content is protected !!