ಅಡಿಕೆ ಧಾರಣೆ ಸ್ಥಿರ. ಬೆಳೆಗಾರರಿಗೆ ನೆಮ್ಮದಿ- ಸೋಮವಾರ ದಿನಾಂಕ 27-12-2021.

ಅಡಿಕೆ ಮಾರುಕಟ್ಟೆ ಅಂಗಳ

2021 ನೇ ಇಸವಿಯಲ್ಲಿ ಅಡಿಕೆ ಧಾರಣೆ ಬೆಳೆಗಾರರಿಗೆ ಹೊಸ ಉತ್ಸಾಹವನ್ನು ಕೊಟ್ಟಿದೆ. ಸಾಕಷ್ಟು ಹೊಸ ತೋಟಗಳು ತಲೆ ಎತ್ತಿವೆ. ಬಹಳಷ್ಟು ಬೆಳೆಗಾರರು ಬೀಜಕ್ಕಾಗಿಯೇ ಅಡಿಕೆ ಮಾರಾಟ ಮಾಡಿ ಲಾಭಮಾಡಿಕೊಂಡಿದ್ದಾರೆ.  ಅಡಿಕೆ ಧಾರಣೆಯೂ ಉತ್ತಮವಾಗಿತ್ತು. ಬೀಜದ ಅಡಿಕೆಗೂ 7-8 10 ರೂ ತನಕ ಇತ್ತು. ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ತೃಪ್ತಿಯ ಧಾರಣೆಯನ್ನು ಕಂಡು ವರ್ಷ ಇದು  ಎಂದರೆ ತಪ್ಪಾಗಲಾರದು. ಹೊಸ ವರ್ಷ 2022 ಸಹ ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ವರ್ಷವಾಗೇ ಇರಲಿದೆ.

ಯಾಕೋ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಸಂಚಲನ ಉಂಟಾಗುವ ಕುರುವು ಕಾಣಿಸುತ್ತಿದೆ. ಎಲ್ಲರ ದೃಷ್ಟಿ ಅಡಿಕೆ ಮಾರುಕಟ್ಟೆಯ ದೈತ್ಯ ಕ್ಯಾಂಪ್ಕೋ ಮೇಲೆಯೇ. ಇವರು ಏರಿಕೆ ಮಾಡಿದರೆ ಖಾಸಗಿ ವ್ಯಾಪಾರಿಗಳೂ ದರ ಏರಿಸುತ್ತಾರೆ. ಇಳಿಸಿದರೆ ಇವರೂ ಇಳಿಸುತ್ತಾರೆ. ಕ್ಯಾಂಪ್ಕೋ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಹಾಗಾಗಿ ಬೆಳೆಗಾರರಿಗೆ ವಿಶ್ವಾಸ ಉಂಟಾಗಿದೆ.ಖಾಸಗಿಯವರಲ್ಲಿ ಹಣಕಾಸಿನ ಅಡಚಣೆ ಎನ್ನುತ್ತಾರೆ. ಸ್ವಲ್ಪ ದಿನ ಕಾಯೋಣ. ದರ ಏರಲೂ ಬಹುದು ಎಂದು ಖರೀದಿಯನ್ನು ಮುಂದೂಡುವುದು ಕಂಡು ಬರುತ್ತಿದೆ. ರೈತ ಉತ್ಪಾದಕ ಸಂಸ್ಥೆಗಳು ಕ್ವಿಂಟಾಲಿಗೆ  ರೂ. 500 ಹೆಚ್ಚಿನ ದರದಲ್ಲಿ ಖರೀದಿಸುವ ವರದಿ ಇದೆ.

ಚಾಲಿ ದರ ಶಿರಸಿ, ಸಿದ್ದಾಪುರ, ಯಲ್ಲಾಪುರಗಳಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಸ್ವಲ್ಪ ಇಳಿಕೆಯಾಗಿದೆ. ಸಹಜವಾಗಿಯೇ ಮುಂದಿನ ವಾರ,, ಹೊಸ ವರ್ಷದಲ್ಲಿ ಚಾಲಿ ದರ ತುಸು ಇಳಿಕೆಯಾಗಿ, ಸ್ವಲ್ಪ ಸಮಯ ಹಾಗೆಯೇ ಮುಂದುವರಿದು ಮತ್ತೆ ಏರಿಕೆ ಆಗಬಹುದು ಎನ್ನುತ್ತಾರೆ. ಆದರೆ ಕೆಂಪಡಿಕೆ ಮಾತ್ರ ಸಧ್ಯಕ್ಕೆ ಹೀಗೆಯೇ ಸ್ಥಿರವಾಗಿ ಉಳಿದು, ಕೆಲವೇ ಸಮಯದಲ್ಲಿ  ಮತ್ತೆ ಸ್ವಲ್ಪವೇ ಏರಿಕೆ ಕಾಣಲಿದೆ. ಚಿತ್ರದುರ್ಗ, ಭೀಮಸಮುದ್ರ ಮುಂತಾದ ಕಡೆ ಕೆಲವು ದೊಡ್ಡ ಬೆಳೆಗಾರರು ಈ ವರ್ಷ ಖಂಡಿತವಾಗಿಯೂ 75,000 ರೂ ತನಕ ದರ ಏರಬಹುದು ಎನ್ನುತ್ತಾರೆ. ಅದಕ್ಕೆ ಅವರು ಕೊಡುವ ಕಾರಣ, ಕೆಂಪಡಿಕೆ ಎಂದಿನಷ್ಟು ಇಲ್ಲದಿರುವುದು. ಬೆಳೆಗಾರರ ಯಾವ ಲೆಕ್ಕಾಚಾರವೂ, ದರ ಏರಿಕೆ ಇಳಿಕೆಯಲ್ಲಿ ಫಲಕೊಡುವುದಿಲ್ಲ. ಅಡಿಕೆ ಆಮದು ಎಲ್ಲಿತನಕ ಆಗುವುದಿಲ್ಲವೋ ಆ ತನಕ ದರ ಇಳಿಯುವುದಿಲ್ಲ. ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆ ತನಕ ರೈತರ ಹಿತವನ್ನು ಸರಕಾರ ನಿರ್ಲಕ್ಷ್ಯ ಮಾಡದು.  ಆ ತನಕ ತಾತ್ಕಾಲಿಕ  ದರ ಇಳಿಕೆ- ಏರಿಕೆ ಆಗುತ್ತಾ ಮಾರುಕಟ್ಟೆ ಮುಂದುವರಿಯಲಿದೆ.

ಬಿಳಿ ಅಡಿಕೆ

ಇಂದಿನ ಅಡಿಕೆ ಧಾರಣೆ: ಕ್ವಿಂಟಾಲ್

 • ಬಂಟ್ವಾಳ: 27/12/2021, Coca, 14, 12500, 25000, 22500
 • BANTWALA, 27/12/2021, New Variety, 25, 27500, 45000, 42000
 • BANTWALA, 27/12/2021, Old Variety, 18, 46000, 53000, 50000
 • ಬೆಳ್ತಂಗಡಿ: 27/12/2021, Coca, 90, 25720, 29500, 28000
 • BELTHANGADI, 27/12/2021, New Variety, 68, 29000, 45000, 34000
 • BELTHANGADI, 27/12/2021, Old Variety, 188, 47320, 53000, 50000
 • ಬೆಂಗಳೂರು: 27/12/2021, Other, 124, 55000, 60000, 57500
 • ಭದ್ರಾವತಿ:, 24/12/2021, Rashi, 711, 45099, 47969, 47171
 • ಚೆನ್ನಗಿರಿ: 23/12/2021, Rashi, 4345, 46422, 47939, 47407
 • ದಾವಣಗೆರೆ: 27/12/2021, Rashi, 167, 43169, 47600, 46420
 • ಹೊನ್ನಾಳಿ: 24/12/2021, Rashi, 60, 47699, 47899, 47759
 • ಹೊಸನಗರ: 24/12/2021, Kempugotu, 99, 33899, 39449, 38009
 • HOSANAGAR, 24/12/2021, Rashi, 1285, 46710, 48399, 47899
 • ಕಾರ್ಕಳ: 27/12/2021, New Variety, 15, 40000, 45000, 43000
 • KARKALA, 27/12/2021, Old Variety, 32, 46000, 53000, 50000
 • ಕುಮಟಾ: 27/12/2021, Chippu, 30, 24509, 39999, 39219
 • KUMTA, 27/12/2021, Coca, 20, 20169, 29999, 28769
 • KUMTA, 27/12/2021, Factory, 100, 13019, 18899, 17889
 • KUMTA, 27/12/2021, Hale Chali, 50, 48089, 49801, 49449
 • KUMTA, 27/12/2021, Hosa Chali, 150, 35509, 50699, 39769
 • ಕುಂದಾಪುರ: 23/12/2021, Hale Chali, 31, 48000, 53000, 52000
 • KUNDAPUR, 23/12/2021, Hosa Chali, 28, 38000, 44000, 43000
 • ಮಂಗಳೂರು: 24/12/2021, Coca, 33, 30000, 40000, 31000
 • ಪುತ್ತೂರು: 27/12/2021, New Variety, 83, 27500, 45000, 36250
 • PUTTUR, 27/12/2021, Old Variety, 450, 11000, 26000, 18500
 • PUTTUR, 24/12/2021, Coca, 325, 11000, 26000, 18500
 • ಸಾಗರ: 27/12/2021, Bilegotu, 21, 19199, 35266, 26699
 • SAGAR, 27/12/2021, Chali, 98, 32099, 47170, 46589
 • SAGAR, 27/12/2021, Coca, 6, 26219, 38299, 32899
 • SAGAR, 27/12/2021, Kempugotu, 5, 28899, 38669, 37199
 • SAGAR, 27/12/2021, Rashi, 136, 42000, 48199, 47499
 • SAGAR, 27/12/2021, Sippegotu, 26, 6890, 22499, 19569
 • ಶಿಕಾರಿಪುರ: 24/12/2021, Red, 330, 45000, 46600, 45900
 • SHIKARIPUR, 22/12/2021, Rashi, 42, 44800, 45900, 45000
 • ಶಿವಮೊಗ್ಗ: 27/12/2021, Bette, 373, 48509, 53840, 50600
 • SHIVAMOGGA, 27/12/2021, Gorabalu, 1602, 17160, 37650, 36690
 • SHIVAMOGGA, 27/12/2021, Rashi, 5384, 46000, 47801, 47590
 • SHIVAMOGGA, 27/12/2021, Saraku, 111, 50101, 71396, 66600
 • ಸಿದ್ದಾಪುರ: 27/12/2021, Bilegotu, 14, 27399, 39699, 38899
 • SIDDAPURA, 27/12/2021, Chali, 29, 40289, 48699, 47209
 • SIDDAPURA, 27/12/2021, Coca, 7, 26109, 34399, 30199
 • SIDDAPURA, 27/12/2021, Hosa Chali, 18, 32699, 40519, 34799
 • SIDDAPURA, 27/12/2021, Kempugotu, 2, 21899, 34399, 30099
 • SIDDAPURA, 27/12/2021, Rashi, 87, 42369, 48599, 47859
 • SIDDAPURA, 24/12/2021, Tattibettee, 11, 32889, 46899, 39099
 • ಶಿರಸಿ: 27/12/2021, Bette, 6, 38899, 46808, 43519
 • SIRSI, 27/12/2021, Bilegotu, 17, 21999, 42509, 29201
 • SIRSI, 27/12/2021, Chali, 76, 35699, 50261, 48665
 • SIRSI, 27/12/2021, Rashi, 50, 36899, 48869, 48454
 • ಸುಳ್ಯ: 27/12/2021, Old Variety, 225, 45000, 53000, 49500
 • ತೀರ್ಥಹಳ್ಳಿ: 26/12/2021, Bette, 25, 46899, 53899, 51189
 • TIRTHAHALLI, 26/12/2021, EDI, 74, 43866, 47999, 47899
 • TIRTHAHALLI, 26/12/2021, Gorabalu, 411, 30109, 37499, 36899
 • TIRTHAHALLI, 26/12/2021, Rashi, 745, 43109, 48269, 47909
 • TIRTHAHALLI, 26/12/2021, Saraku, 3, 48109, 74100, 64099
 • ತುಮಕುರು: 24/12/2021, Rashi, 105, 45900, 46800, 46400
 • ಯಲ್ಲಾಪುರ: 27/12/2021, Bilegotu, 6, 27299, 34619, 30319
 • YELLAPURA, 27/12/2021, Chali, 37, 39261, 49630, 48110
 • YELLAPURA, 27/12/2021, Coca, 8, 22099, 31089, 28899
 • YELLAPURA, 27/12/2021, Kempugotu, 1, 31158, 36199, 33142
 • YELLAPURA, 27/12/2021, Rashi, 62, 46121, 52499, 49799
 • YELLAPURA, 27/12/2021, Tattibettee, 7, 37337, 45895, 43300
 • YELLAPURA, 27/12/2021, Api, 1, 52179, 56169, 54279
 • ಹಣ್ಣು ಅಡಿಕೆ  ಕಿಲೋ.:75-80
 • ಹೊಸ ಪಟೋರ: 39,000-41,000
 • ಹೊಸ ಕರಿ:28,000-30,000
 • ಹಳ ಪಟೋರ:45,200-47,500
 •  ಹಳೆ ಕರಿಗೋಟು:29,000-31,000
 • ಹೊಸ ಉಳ್ಳಿ ಗಡ್ಡೆ:27,000-29,000
 • ಹಳೆ ಉಳ್ಳಿ ಗಡ್ಡೆ:29,000-31,000

ಕರಿಮೆಣಸು ಧಾರಣೆ:

ಕರಿಮೆಣಸು ಧಾರಣೆ ಇನ್ನು ಸ್ವಲ್ಪ ಇಳಿಕೆ ಆಗಬಹುದು. ಸರಾಸರಿ ಖರೀದಿ ದರ ರೂ. 500 ಮಾತ್ರ. ಹಾಗೆಂದು ಇದು ತಾತ್ಕಾಲಿಕವಾಗಿರುತ್ತದೆ. ಕೊಯಿಲು ಪೂರ್ತಿ ಮುಗಿದ ನಂತರವೇ ದರ ಏರಿಕೆ ಸಾದ್ಯ.ಮೆಣಸಿನ ಉತ್ಪಾದನೆ ಸುಮಾರು 20 % ದಷ್ಟು ಕಡಿಮೆ ಆಗಬಹುದು ಎಂಬ ಲೆಕ್ಕಾಚಾರ ಇದೆ. ಈಗಾಗಲೇ  ಸ್ವಲ್ಪ ಕೊಯಿಲು ಆಗಿದೆ. ಈ ವರ್ಷ ಕೆಲವು ಕಡೆ  ಹವಾಮಾನ ಕಾರಣದಿಂದ ಮೂರು ಸಲ ಕೊಯಿಲು ಅಗತ್ಯವೇನೋ ಎನ್ನಿಸುತ್ತಿದೆ. ಆಮದು ಮೆಣಸು ಇದೆ ಎಂಬುದಾಗಿ ಕೆಲವು ವರ್ತಕರು ಹೇಳುತ್ತಿದ್ದು, ಹಿಂದಿನಷ್ಟು ಇಲ್ಲ ಎಂಬುದಾಗಿಯೂ ಹೇಳುತ್ತಾರೆ. ಈ ಹಿಂದೆ ಬೆಲೆ 560 ತನಕ ಏರಿಕೆಯಾಗಿದ್ದರೂ ಸಹ ಕೊಟ್ಟವರು ತುಂಬಾ ಕಡಿಮೆ. ಬೆಳೆಗಾರರಲ್ಲಿ ಸಾಕಷ್ಟು ದಾಸ್ತಾನು ಇದೆ ಎಂಬುದಾಗಿಯೂ ಹೇಳುತ್ತಿದ್ದಾರೆ.

ಕರಿಮೆಣಸು

ಇಂದು ಧಾರಣೆ: ಕಿಲೋ.

ಹೆಚ್ಚಿನ ಕಡೆ ಇಂದು ಮೆಣಸು ವ್ಯಾಪಾರ ಆಗಿಲ್ಲ, ಆದ ಪ್ರಮಾಣ ತುಂಬಾ ಕಡಿಮೆ ಇದ್ದು, ಬೆಳೆಗಾರರು ಕಾದು ನೋಡುತ್ತಿದ್ದಾರೆ.

 • ಮಂಗಳೂರು: 505.00
 • ಸುಳ್ಯ: 507.00
 • ಪುತ್ತೂರು:500.00
 • ಶಿರಸಿ: 512.00
 • ಸಿದ್ದಾಪುರ:495.00
 • ಯಲ್ಲಾಪುರ: 502.00
 • ಸಕಲೇಶಪುರ: 515.00
 • ಮುಡಿಗೆರೆ: 510.00
 • ಚಿಕ್ಕಮಗಳೂರು: 515.00

ಕೊಬ್ಬರಿ ಧಾರಣೆ: ಕ್ವಿಂಟಾಲು.

ಕೊಬ್ಬರಿ

ತೆಂಗಿನ ಕಾಯಿ, ಕೊಬ್ಬರಿ ಇಳುವರಿ ಕಡಿಮೆ ಇದೆ. ಬೇಡಿಕೆಯೂ ಚೆನ್ನಾಗಿದೆ. ಇನ್ನು ಹೆಚ್ಚು ಹೆಚ್ಚು ಸಮಾರಂಭಗಳು ಇರುವ ಕಾರಣ ಕೊಬ್ಬರಿ ದರ ಮತ್ತು ತೆಂಗಿನ ಕಾಯಿ ದರ ಸ್ವಲ್ಪ ಏರಿಕೆ ಆಗಬಹುದು.

 • ಅರಸೀಕೆರೆ : ಬಾಲ್ ಕೊಬ್ಬರಿ. 17300-17750
 • ಚೆನ್ನರಾಯಪಟ್ನ: ಎಣ್ಣೆ ಕೊಬ್ಬರಿ. 9500-9530
 • ಮಂಗಳೂರು: ಎಣ್ಣೆ ಕೊಬ್ಬರಿ. 8000-11500
 • ತುಮಕೂರು: ಬಾಲ್ ಕೊಬ್ಬರಿ:16800-18200
 • ತುರುವೇಕೀರೆ:  ಬಾಲ್ ಕೊಬ್ಬರಿ. 17900-17900

ಹಸಿ ಶುಂಠಿ: ಕ್ವಿಂಟಾಲು.

ಹಸಿ ಶುಂಠಿ ದರ ಈ ವರ್ಷ ಏರಿಕೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಮಳೆಯ ಕಾರಣ ದಿಂದ ಬೆಳೆ ಸ್ವಲ್ಪ ಹಾಳಾಗಿದೆ. ಹಾಗೆಯೇ ಒಣ ಶುಂಠಿಯ ದರವೂ ಕಡಿಮೆಯಾಗಿದೆ. ಹಾಗಾಗಿ  ಬೇಡಿಕೆ ಕಡಿಮೆಯಾಗಿ ದರ ಇಳಿಕೆಯಾಗಿದೆ. ಮುಂದಿನ ಹಂಗಾಮಿನಲ್ಲಿ ಶುಂಠಿ ನೆಡುವವರು ಕಡಿಮೆಯಾಗುವ ಸಾಧ್ಯತೆ ಇದೆ.

 • ಬೇಲೂರು: 24/12/2021, ಹಸಿ, 1000, 1000, 1000
 • ಚೆನ್ನರಾಯಪಟ್ನ: 22/12/2021, ಹಸಿ, 1000, 1000, 1000
 • ಹಾಸನ: 23/12/2021, ಹಸಿ,  500, 600, 600
 • ಕೋಲಾರ: 22/12/2021, ಹಸಿ, 2000, 2500, 2300
 • ಮೈಸೂರು: 24/12/2021, ಹಸಿ, 3800, 4000, 3900
 • ಶಿವಮೊಗ್ಗ: 27/12/2021, ಹಸಿ,  1800, 2000, 1900
 • ಶಿರಸಿ: 26/12/2021, ಹಸಿ, 1500, 2000, 1900

ಏಲಕ್ಕಿ ಧಾರಣೆ:ಕಿಲೋ.

ಸಭೆ ಸಮಾರಂಭಗಳು, ಜನ ತಿರುಗಾಟ ಕಡಿಮೆಯಾದ ಕಾರಣ ಏಲಕ್ಕಿಯ ದರ ಸ್ಥಿರವಾಗಿದೆ. ಅಂಥಃ ಇಳಿಕೆ ಆಗಿಲ್ಲ. ಇದೇ ದರ ಮುಂದುವರಿಯುವ ಸಾಧ್ಯತೆ ಇದೆ.

 • ಕೂಳೆ:500-550
 • ನಡುಗೋಲು: 600-650
 • ರಾಶಿ:700-900
 • ಜರಡಿ:800-900
 • ಆಯ್ದದ್ದು:1000-1050
 • ಹಸುರು: 900-1000
 • ಹಸುರು ಬೋಲ್ಡ್:1300-1400

ಜಾಯೀ ಸಾಂಬಾರ: ಕಿಲೋ.

 • ಜಾಯೀ ಕಾಯಿ ಕಿಲೋ:190-210-240
 • ಜಾಯೀ ಪತ್ರೆ: 800-900-1050

ಕಾಫೀ ದಾರಣೆ: 50 ಕಿಲೋ.

ಕಾಫಿ ಈ ವರ್ಷ ಸ್ವಲ್ಪ  ಏರಿಕೆ ಆಗುವ ಸಾಧ್ಯತೆ ಇದೆ. ಹಾಗೆಂದು ಇದು ಬೆಳೆಗಾರರಿಗೆ ಲಾಭದಾಯಕವಲ್ಲ. ಎಲ್ಲಾ ಉತ್ಪಾದನಾ ವೆಚ್ಚ 25-50 % ಏರಿಕೆಯಾಗಿದ್ದು, 5-10 %  ಬೆಲೆ ಏರಿಕೆ ಅಗಿದೆ. ಅದಕ್ಕನುಗುಣವಾಗಿ ಬೆಳೆ ಸುಮಾರು 20-25 % ನಷ್ಟವಾಗಿದೆ.

 • ಅರೇಬಿಕಾ ಪಾರ್ಚ್ ಮೆಂಟ್:15300-15450
 • ಅರೇಬಿಕಾ ಚೆರಿ:6600-7000
 • ರೋಬಸ್ಟಾ ಪಾರ್ಚ್ ಮೆಂಟ್:6350-6600
 • ರೋಬಸ್ಟಾ ಚೆರಿ:3700-3900

ರಬ್ಬರ್ ಧಾರಣೆ: ಕಿಲೋ.

ರಬ್ಬರ್ ದರ ಇಳಿಕೆಯಾಗಿದೆ. ಇನ್ನೂ ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದೆ. ಉತ್ಪಾದನಾ ಕ್ಷೇತ್ರಗಳಲ್ಲಿನ ಬೇಡಿಕೆಯ ಭಾರೀ ಕುಸಿತದಿಂದಾಗಿ  ರಬ್ಬರ್ ಗೆ ಬೇಡಿಕೆ ಕಡಿಮೆಯಾಗಿದೆ.

 • 1X Grade: 167.00
 • RSS 4 :158.50
 • RSS 5 153.00
 • RSS 3 159.00
 • Lot:148.00
 • Scrap:100.00-92.00

ಅಡಿಕೆಗೆ ಧಾರಣೆ ಏರಿಕೆಯಾಗಿದೆ. ಆದರೆ ಅನಿಶ್ಚಿತತೆ ಇದೆ. ಮೆಣಸ್ ಸಹ ಹಾಗೆಯೇ. ಬೆಲೆ ಏನೋ ಏರಿಕೆಯಾಗಿದೆ. ಆದರೆ ಅದರ ಲಾಭ ಕೃಷಿಕನಿಗಿಂತ ಕೃಷಿ ಒಳಸುರಿ ಉತ್ಪಾದಕರಿಗೆ ಸಿಗುತ್ತಿದೆ. ಪ್ರತೀಯೊಂದು ಕೃಷಿ ಒಳಸುರಿಗಳ ಬೆಲೆ ಹೆಚ್ಚಳವಾಗಿದ್ದು,  ರೈತರ ಎಲ್ಲಾ  ಲಾಭವನ್ನು ಅದು ನುಂಗಿ ಹಾಕಿದೆ. ಅಡಿಕೆ ಬೆಳೆಗಾರರು  ಹಳೆ ಅಡಿಕೆ, ಡಬ್ಬಲ್ ಚೋಳು ಇತ್ಯಾದಿಗಳನ್ನು ಮಾರಾಟ ಮಾಡುವುದು ಸೂಕ್ತವೇನೋ ಅನ್ನಿಸುತ್ತದೆ. ಹೊಸ್ಸ ಚಾಲಿಯನ್ನು ಮಾರಾಟ  ಮಾಡುವುದನ್ನು ಮುಂದೂಡಿ.

Leave a Reply

Your email address will not be published. Required fields are marked *

error: Content is protected !!