ಚಾಲಿ ದರ ಹಿಂದೆ- ಕೆಂಪು ಸ್ಥಿರ: ದಿನಾಂಕ:21-12-2021 ರ ಧಾರಣೆ.

ಕೆಂಪು ಅಡಿಕೆ

ಹೊಸ ಚಾಲಿ ಮಾರುಕಟ್ಟೆಗೆ   ಬರಲಾರಂಭಿಸಿದೆ. ಚಾಲಿಯ ಗುಣ ಮಟ್ಟದ ಮೇಲೆ ಬೆಳೆಗಾರರಿಗೆ ಹೆಚ್ಚು ಖಾತ್ರಿ ಇಲ್ಲದ ಕಾರಣ ಬಿದ್ದ ಒದ್ದೆಯಾದ ಅಡಿಕೆಯನ್ನು ಹೇಗೂ ದರ ಒಳ್ಳೆಯದಿದೆಯಲ್ಲಾ ಎಂದು ಮಾರಾಟ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಚಾಲಿಗೆ ಖಾಸಗಿ ವ್ಯಾಪಾರಸ್ಥರಲ್ಲಿ ದರ ಕಡಿಮೆ, ಸಹಕಾರಿಗಳಲ್ಲಿ ಸ್ಥಿರವಾಗಿಯೂ ಇದೆ. ನಾಳೆ ನಾಡಿದ್ದಿನಲ್ಲಿ ಸಾಂಸ್ಥಿಕ ಖರೀದಿದಾರರೂ ಸ್ವಲ್ಪ ದರ ಇಳಿಸುವ ಮುನ್ಸೂಚನೆ ಇದೆ. ಕೆಂಪು ಅಡಿಕೆ ಬೆಳೆಗಾರರಲ್ಲಿ ದೊಡ್ಡ ಬೆಳೆಗಾರರು ಮತ್ತು ಚೇಣಿಯವರು ಮಾರಾಟಕ್ಕೆ  ದರ ಯಾವಾಗ ಏರುತ್ತದೆ ಎಂದು ಕಾಯುತ್ತಿದ್ದಾರೆ.

ಈ ಬಾರಿ ಕೆಲವು ಬೆಳೆಗಾರರಲ್ಲಿ ಉತ್ತಮ ಇಳುವರಿಯೂ ಕೆಲವರಲ್ಲಿ ಕಡಿಮೆಯೂ ಆಗಿ ಒಟ್ಟಾರೆ ಕಳೆದ ವರ್ಷದಷ್ಟೇ ಇಳುವರಿ ಆಗಬಹುದು ಎಂಬ ಅಂದಾಜು ಇದೆ.  ಚಿತ್ರದುರ್ಗ,ಜಿಲ್ಲೆ, ದಾವಣಗೆರೆ, ಇಲ್ಲೆಲ್ಲಾ ಉತ್ತಮ ಇಳುವರಿ ಇದೆ. ಕರಾವಳಿ,ಮಲೆನಾಡಿನಲ್ಲಿ ಮುಂದಿನ ವರ್ಷ ಫಸಲು ತುಂಬಾ ಕಡಿಮೆಯೇನೋ ಅನ್ನಿಸುತ್ತಿದೆ. ಇನ್ನು ಕೆಲವು ಸಮಯದ ತನಕ ಚಾಲಿ ದರ ಸ್ವಲ್ಪ ಇಳಿಕೆ ಆಗಬಹುದು. ಮತ್ತೆ ಪುನಹ ಹಿಂದಿನ ಸ್ಥಿತಿಗೇ ಮರಳಬಹುದು. ಈಗಾಗಲೇ ಶಿರಸಿ, ಸಿದ್ದಾಪುರ, ಕುಮಟಾ, ಯಲ್ಲಾಪುರಗಳಲ್ಲಿ ಚಾಲಿ ದರ ಸ್ವಲ್ಪ ಇಳಿಕೆಯ ಹಾದಿಯಲ್ಲಿದೆ. ಕೆಂಪಡಿಕೆ ಉತ್ಪಾದನೆ ಮಲೆನಾಡಿನಲ್ಲಿ ಕಡಿಮೆ ಇರುವ ಕಾರಣ ದರ ಏರಿಕೆ ಆಗಬಹುದು ಎನ್ನುತ್ತಾರೆ ಚಿತ್ರದುರ್ಗದ ಓರ್ವ ಅಡಿಕೆ ವ್ಯಾಪಾರಿಗಳು. ಈ ಬಾಗದ ಕೆಲವು ರೈತರು ಅಡಿಕೆ ದಾಸ್ತಾನು ಇಟ್ಟಿದ್ದಾರೆ. ವ್ಯಾಪಾರಿಗಳಲ್ಲೂ  ಸ್ವಲ್ಪ ಪ್ರಮಾಣ ದಾಸ್ತಾನು ಇದೆ. ಬಹುತೇಕ ಬೆಳೆಗಾರರು ಈ ವರ್ಷ ಕೆಂಪು ಭಾರೀ ಮೇಲೆ ಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ.

ಇಂದು ಅಡಿಕೆ ಧಾರಣೆ:ಕ್ವಿಂಟಾಲು.

ಚಾಲಿ ಅಡಿಕೆ 1

ಊರು-ದಿನಾಂಕ-ವಿಧ-ಒಟ್ಟು ಅವಕ- ಕನಿಷ್ಟ- ಗರಿಷ್ಟ – ಸರಾಸರಿ.

 • ಬಂಟ್ವಾಳ: 21/12/2021, ಕೋಕಾ, 27, 12500, 25000, 22500
 • ಬಂಟ್ವಾಳ 21/12/2021, ಹೊಸ ಚಾಲಿ , 4, 27500, 45000, 42000
 • ಬಂಟ್ವಾಳ: 21/12/2021, ಹಳೆ ಚಾಲಿ, 16, 46000, 53000, 50000
 • ಬೆಳ್ತಂಗಡಿ: 21/12/2021, ಹೊಸ ಚಾಲಿ, 23, 28000, 45000, 39000
 • ಬೆಳ್ತಂಗಡಿ: 21/12/2021, ಹಳೆ ಚಾಲಿ, 119, 46430, 53000, 50000
 • ಬೆಳ್ತಂಗಡಿ: 21/12/2021, ಕೋಕಾ, 4, 26000, 29000, 27500
 • ಬೆಂಗಳೂರು: 20/12/2021, ಇತರ, 100, 45000, 55000, 50000
 • ಬಧ್ರಾವತಿ: 21/12/2021, ರಾಶಿ, 734, 45799, 47699, 46850
 • ಚೆನ್ನಗಿರಿ: 21/12/2021, ರಾಶಿ, 3087, 45899, 47899, 47289
 • ಚಿತ್ರದುರ್ಗ: 21/12/2021, ಅಪಿ, 4, 46610, 47019, 46889
 • ಚಿತ್ರದುರ್ಗ: 21/12/2021, ಬೆಟ್ಟೆ, 195, 39339, 39779, 39500
 • ಚಿತ್ರದುರ್ಗ: 21/12/2021, ಕೆಂಪುಗೋಟು, 280, 32349, 32769, 32500
 • ಚಿತ್ರದುರ್ಗ: 21/12/2021, ರಾಶಿ, 125, 46129, 46559, 46399
 • ದಾವಣಗೆರೆ: 21/12/2021, ರಾಶಿ, 361, 36311, 46731, 46240
 • ಹೊಳಲ್ಕೆರೆ: 21/12/2021, ರಾಶಿ, 779, 45179, 46899, 46475
 • ಹೊನ್ನಾಳಿ: 21/12/2021, ರಾಶಿ, 25, 46900, 46900, 46900
 • ಹೊಸನಗರ: 17/12/2021, ಚಾಲಿ, 7, 43269, 43269, 43269
 • ಹೊಸನಗರ: 17/12/2021, ಕೆಂಪುಗೋಟು, 71, 32569, 39219, 38199
 • ಹೊಸನಗರ: 17/12/2021, ರಾಶಿ, 1033, 43820, 48199, 47899
 • ಕಾರ್ಕಳ: 21/12/2021, ಹೊಸ ಚಾಲಿ, 22, 40000, 45000, 43000
 • ಕಾರ್ಕಳ: 21/12/2021, ಹಳೆ ಚಾಲಿ, 23, 46000, 53000, 50000
 • ಕುಮ್ಟಾ: 20/12/2021, ಚಿಪ್ಪು, 30, 25609, 41089, 38789
 • ಕುಮ್ಟಾ: 20/12/2021, ಕೋಕಾ 20, 21019, 35089, 34629
 • ಕುಮ್ಟಾ: 20/12/2021, ಫ್ಯಾಕ್ಟರಿ 90, 13509, 18929, 18219
 • ಕುಮ್ಟಾ:, 20/12/2021, ಹಳೆ ಚಾಲಿ, 70, 48089, 49709, 49219
 • ಕುಮ್ಟಾ:, 20/12/2021, ಹೊಸ ಚಾಲಿ 130, 38019, 41889, 41349
 • ಕುಂದಾಪುರ: 20/12/2021, ಹಳೆಚಾಲಿ, 17, 48000, 53000, 52000
 • ಕುಂದಾಪುರ: 20/12/2021, ಹೊಸ ಚಾಲಿ, 21, 38000, 44000, 43000
 • ಮಡಿಕೇರಿ: 21/12/2021, ಕಚ್ಚಾ 40, 51091, 51091, 51091
 • ಮಂಗಳೂರು: 21/12/2021, ಕೋಕಾ, 196, 27400, 32000, 30000
 • ಪುತ್ತೂರು: 21/12/2021, ಕೋಕಾ, 325, 11000, 26000, 18500
 • ಪುತ್ತೂರು: 21/12/2021, ಹೊಸ ಚಾಲಿ, 140, 27500, 45000, 36250
 • ಪಟೋರ್‍:                                         38,000-46000
 • ಉಳ್ಳಿ ಗಡ್ಡೆ: ಸಿಪ್ಪೆ ಗೋಟು                         25000-32500
 • ಕರಿಗೋಟು:                                        25000-30500
 • ಸಾಗರ: 21/12/2021, ಬಿಳೇಗೋಟು, 12, 37499, 37599, 37499
 • ಸಾಗರ: 21/12/2021, ಚಾಲಿ, 113, 45205, 47201, 45205
 • ಸಾಗರ: 21/12/2021, ಕೋಕಾ, 5, 34099, 34099, 34099
 • ಸಾಗರ:  21/12/2021, ರಾಶಿ, 140, 45889, 48889, 47779
 • ಸಾಗರ:  21/12/2021, ಸಿಪ್ಪೆಗೋಟು, 49, 19999, 26732, 24999
 • ಸಾಗರ: 21/12/2021,  ಇತರ 2, 22819, 40169, 38499
 • ಶಿಕಾರಿಪುರ: 21/12/2021, ಕೆಂಪು 122, 41400, 45490, 43400
 • ಶಿವಮೊಗ್ಗ: 21/12/2021, ಬೆಟ್ಟೆ, 3, 48019, 54109, 51500
 • ಶಿವಮೊಗ್ಗ: 21/12/2021, ಗೊರಬಲು 241, 16910, 38209, 37200
 • ಶಿವಮೊಗ್ಗ: 21/12/2021, ರಾಶಿ 251, 43269, 47799, 47290
 • ಶಿವಮೊಗ್ಗ: 21/12/2021, ಸರಕು 1, 50100, 73166, 65200
 • ಸಿದ್ದಾಪುರ: 21/12/2021, ಬಿಳೇಗೋಟು, 21, 28899, 40299, 37099
 • ಸಿದ್ದಾಪುರ: 21/12/2021, ಚಾಲಿ 119, 44299, 49499, 48989
 • ಸಿದ್ದಾಪುರ: 21/12/2021, ಕೋಕಾ 17, 28699, 39499, 33499
 • ಸಿದ್ದಾಪುರ:, 21/12/2021, ಹೊಸ ಚಾಲಿ 11, 37099, 40989, 38099
 • ಸಿದ್ದಾಪುರ:21/12/2021, ಕೆಂಪುಗೋಟು, 6, 23699, 37199, 32609
 • ಸಿದ್ದಾಪುರ: 21/12/2021, ರಾಶಿ, 160, 46289, 48489, 47999
 • ಸಿದ್ದಾಪುರ: 21/12/2021, ತಟ್ಟೆಬೆಟ್ಟೆ, 4, 33699, 47499, 38089
 • ಸಿರಾ: 20/12/2021, ಇತರ 310, 9000, 47000, 42420
 • ಸಿರ್ಸಿ: 21/12/2021, ಬೆಟ್ಟೆ, 13, 38660, 45669, 43292
 • ಸಿರ್ಸಿ:21/12/2021, ಬಿಳೇಗೋಟು: 24, 27099, 44299, 38607
 • ಸಿರ್ಸಿ:21/12/2021, ಚಾಲಿ, 317, 38309, 50691, 49375
 • ಸಿರ್ಸಿ:21/12/2021, ರಾಶಿ 100, 46009, 49108, 48680
 • ಸುಳ್ಯ: 21/12/2021, ಹೊಸ ಚಾಲಿ, 54, 25000, 45000, 30000
 • ಸುಳ್ಯ: 21/12/2021, ಹಳೆಚಾಲಿ, 4, 45000, 52000, 49500
 • ತೀರ್ಥಹಳ್ಳಿ: 19/12/2021, ಬೆಟ್ಟೆ, 47, 46099, 53159, 51009
 • ತೀರ್ಥಹಳ್ಳಿ: 19/12/2021, ಇಡಿ, 121, 42501, 47999, 47799
 • ತೀರ್ಥಹಳ್ಳಿ:, 19/12/2021, ಗೊರಬಲು, 352, 28009, 37509, 37099
 • ತೀರ್ಥಹಳ್ಳಿ: 19/12/2021, ರಾಶಿ 1120, 43409, 48201, 47999
 • ತೀರ್ಥಹಳ್ಳಿ: 19/12/2021, ಸರಕು, 49, 48569, 74700, 68099
 • ತುಮಕೂರು: 21/12/2021, ರಾಶಿ 247, 45700, 46800, 46200
 • ಯಲ್ಲಾಪುರ: 21/12/2021, ಬಿಳೇಗೋಟು, 10, 29299, 38899, 34899
 • ಯಲ್ಲಾಪುರ:  21/12/2021, ಚಾಲಿ, 99, 39012, 50291, 49410
 • ಯಲ್ಲಾಪುರ:  21/12/2021, ಕೋಕಾ 22, 22809, 32899, 28899
 • ಯಲ್ಲಾಪುರ:  21/12/2021, ಕೆಂಪುಗೋಟು 5, 30211, 36099, 34099
 • ಯಲ್ಲಾಪುರ:, 21/12/2021, ರಾಶಿ, 151, 46750, 52899, 50489
 • ಯಲ್ಲಾಪುರ:  21/12/2021, ತಟ್ಟೆ ಬೆಟ್ಟೆ, 34, 38899, 45182, 43168
 • ಯಲ್ಲಾಪುರ:  21/12/2021, ಅಪಿ 1, 55865, 56699, 56699.
 • ಹಣ್ಣು ಅಡಿಕೆ ಕಿಲೋ: 70-80 ರೂ. (ಕರಾವಳಿ)
 • ಹಸಿ ಅಡಿಕೆ ಕ್ವಿಂಟಾಲು: 5500-6500( ದಾವಗೆರೆ, ಚಿತ್ರದುರ್ಗ )

ಕರಿಮೆಣಸು ಧಾರಣೆ:

ಕರಿಮೆಣಸು ಧಾರಣೆ ಕರಾವಳಿಯಾದ್ಯಂತ ಗರಿಷ್ಟ 500-00 ರೂ. ಗಳು. ಕ್ಯಾಂಪ್ಕೋ ಉತ್ತಮ ಗುಣಮಟ್ಟದ ಲೀಟರ್ ತೂಕ ಇರುವ ಮೆಣಸನ್ನು ಕಿಲೋ 510-00 ರಂತೆ ಖರೀದಿ ಮಾಡುತ್ತಿದೆ. ಎಲ್ಲಾ ಕಡೆ ಮಾರುಕಟ್ಟೆ  ಹಿಂದೆ ಇದೆ. ಈ ಹಿಂದೆ ದರ ಏರಿದಾಗ ಬಂದ ಮೆಣಸು ಏನೇನೂ ಇಲ್ಲ. ಎಲ್ಲರ ನಿರೀಕ್ಷೆ 60,000 ದಾಟುತ್ತದೆ ಎಂದಿತ್ತು. ಆದರೆ ಈಗ ಹಿಂದೆ ಬಂದಿದೆ. ಹೇಗೂ ಮೂರು ನಾಲ್ಕು ವರ್ಷ ದಾಸ್ತಾನು ಇಟ್ಟ ರೈತರು ಇನ್ನೂ ಒಂದು ವರ್ಷ ಕಾಯುವ ಎಂದು ಮರಳಿ ಹಾಗೇ ದಾಸ್ತಾನಿಗೆ ಇಟ್ಟಿದ್ದಾರೆ. ಕೊಯಿಲು ಸ್ವಲ್ಪ ಬೇಗ ಪ್ರಾರಂಭವಾಗಿದೆ. ಆದ ಕಾರಣ ಇನ್ನು ಮೇ ತಿಂಗಳ ತನಕ ದರ ಏರಿಕೆ ಕಷ್ಟ ಸಾಧ್ಯ. ಆದರೆ ನಿಖರವಾಗಿ ಹಾಗೆ ಹೇಳುವಂತಿಲ್ಲ. ಕೊಯಿಲಿನ ಸಮಯದಲ್ಲೇ ದರ ಏರಿಸಿ ನಂತರ ಇಳಿಸಲೂ ಬಹುದು.

ಕರಿ ಮೆಣಸು ೧

ಇಂದು ವಿವಿಧ ಕಡೆ ದರ: ಕಿಲೋ.

 • ಮಂಗಳೂರು:500.00-521.00
 • ಸಿರ್ಸಿ:500.00-520.00
 • ಸಿದ್ದಾಪುರ:496.00-512.00
 • ಯಲ್ಲಾಪುರ :473.00-500.00
 • ಸಾಗರ:477.00-510.00
 • ತೀರ್ಥಹಳ್ಳಿ:520.00
 • ಕಾರ್ಕಳ:510.00
 • ಸುಳ್ಯ:485.00-510
 • ಮೂಡಿಗೆರೆ:510.00-520.00-525.00
 • ಸಕಲೇಶಪುರ:510.00-520.00
 • ಹಾಸನ:500.00-510.00
 • ಚಿಕ್ಕಮಗಳೂರು:510.00-515-00
 • ಕಳಸ:510-00
 • ಪುತ್ತೂರು: 497-00
 • ಬಿಳಿ ಮೆಣಸು: 600.00- 710.00

ಜಾಯೀ ಸಾಂಬಾರ:ಕಿಲೋ.

 • ಜಾಯೀ ಕಾಯಿ ಕಿಲೋ 200.00-210.00
 • ಜಾಯೀ ಪತ್ರೆ: 850.00-1050.00

ಹಸಿ ಶುಂಠಿ: ಕ್ವಿಂಟಾಲು.

ಶುಂಠಿ ಸಂಸ್ಕರಣೆ

ಬಿಸಿಲು ಬಂದು ಒಣ ಶುಂಠಿ ತಯಾರಿ ಭರದಿಂದ ಸಾಗುತ್ತಿದೆ. ಹಾಗಾಗಿ  ಹಸಿ ಶುಂಠಿ ದರ ಸ್ವಲ್ಪ ಏರಿಕೆಯಾಗಲಾರಂಭಿಸಿದೆ. ಇನ್ನೇನು ಮುಂದಿನ ತಿಂಗಳು ಒಕ್ಕಣೆ ಮಾಡಲೇ ಬೇಕಾಗುತ್ತದೆ.  ಮತ್ತೆ ಮಾರ್ಚ್ ಗೆ ಪುನಹ ಬಿತ್ತನೆ. ಜನವರಿ ಸುಮಾರಿಗೆ ಸ್ವಲ್ಪ ದರ ಏರಿಕೆ ಆಗಬಹುದು.

 • ಬೇಲೂರು: 21/12/2021, Green Ginger, 1000, 1000, 1000
 • ಚಿಕ್ಕಬಳ್ಳಾಪುರ 21/12/2021, Green Ginger, 1400, 1600, 1500
 • ಚಿಂತಾಮಣಿ:, 21/12/2021, Green Ginger, 3000, 4000, 3500
 • ಹಾಸನ:, 21/12/2021, Green Ginger, 750, 1041, 900
 • ಕೋಲಾರ: 21/12/2021, Green Ginger, 2500, 3500, 3000
 • ಮಂಡ್ಯ: 21/12/2021, Green Ginger, 1500, 2000, 2000
 • ಮೈಸೂರು: 21/12/2021, Green Ginger, 4800, 5000, 4900
 • ರಾಮನಗರ: 21/12/2021, Green Ginger, 1600, 2300, 2000
 • ಶಿವಮೊಗ್ಗ 21/12/2021, Green Ginger, 2, 1800, 2000, 1900
 • ಸಾಗರ:, 21/12/2021, Green Ginger, 2, 1700, 2000, 1850

ಕೊಬ್ಬರಿ ದರ: ಕ್ವಿಂಟಾಲು.

ಕೊಬ್ಬರಿ ದರ ಮತ್ತೆ ಏರಿಕೆ ಕಂಡಿದೆ. ಕಳೆದ ವಾರ 17500 ಕ್ಕೆ ಇಳಿದದ್ದು, ಈಗ ಮತ್ತೆ 18,000 ತಲುಪಿದೆ.

 • ಅರಸೀಕೆರೆ: 21/12/2021, ಬಾಲ್  14000, 18000, 17500
 • ಚೆನ್ನರಾಯಪಟ್ನ: 21/12/2021, ಎಣ್ಣೆ  9900, 9900, 9900
 • ಚೆನ್ನರಾಯಪಟ್ನ: 21/12/2021, ಬಾಲ್, 17800, 17900, 17800
 • ಹುಲಿಯಾರು: 20/12/2021, ಬಾಲ್  17600, 17600, 17600
 • ಕೆ ಆರ್ ಪೇಟೆ: 21/12/2021, ಎಣ್ಣೆ  10000, 10000, 10000
 • ಮಂಗಳೂರು: 21/12/2021, ಎಣ್ಣೆ. 8000, 14760, 9000
 • ಪುತ್ತೂರು: 21/12/2021, ಎಣ್ಣೆ, 4500, 11500, 8000
 • ತುಮಕೂರು: 21/12/2021, ಇತರ,  8200, 9600, 8800
 • ತುರುವೇಕೆರೆ: 21/12/2021, ಖಾದ್ಯ, 17900, 17900, 17900

ರಬ್ಬರ್ ಧಾರಣೆ:

ರಬ್ಬರ್ ಧಾರಣೆ ಸತತ ಇಳಿಕೆಯ ಹಾದಿಯಲ್ಲಿ ಮುಂದುವರಿದಿದೆ. ಇನ್ನೂ ಸ್ವಲ್ಪ ಇಳಿಕೆ ಆಗಬಹುದು ಎನ್ನುತ್ತಾರೆ. ಉತ್ಪಾದನಾ ಕ್ಷೇತ್ರಗಳಿಂದ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ.

ಇಂದು ದರ:ಕಿಲೋ

 • 1X Grade:175.00
 • RSS 3: 168.00
 • RSS  4: 167.00
 • RSS  5:162.00
 • Lot:156.00
 • Scrap:102.00-110.00

ಕಾಫೀ ದರ : 50 kg

 • ಅರೇಬಿಕಾ ಚೆರಿ:6900.
 • ಅರೇಬಿಕಾ ಪಾಚ್ ಮೆಂಟ್:15400
 • ರೋಬಸ್ಟಾ ಚೆರಿ:6300
 • ರೋಬಸ್ಟಾ ಪಾರ್ಚ್ ಮೆಂಟ್:3500

ಈ ಬರಹದಲ್ಲಿ ತಿಳಿಸಲಾದ ವಿಚಾರಗಳು ಕೆಲವು ವ್ಯಾಪಾರಿಗಳು ಮತ್ತು  ಬೆಳೆಗಾರರ ಜೊತೆ ಚರ್ಚಿಸಿ ಬರೆದುದು ಆಗಿರುತ್ತದೆ. ಇದಕ್ಕಿಂತ ಹೆಚ್ಚಿನ ಮಾಹಿತಿ ಉಳ್ಳವರು  ತಮ್ಮ ಅಭಿಪ್ರಾಯವನ್ನು ತಿಳಿಸಲು ಸ್ವಾತಂತ್ರ್ಯ ಇದೆ. ಅಡಿಕೆ ಹಾಗೂ ಯಾವುದೇ ಕೃಷಿ ಉತ್ಪನ್ನಗಳ ನಿಖರ ಮಾರುಕಟ್ಟೆ ಮಾಹಿತಿಯು ಯಾರಿಗೂ ತಿಳಿಯದ ಕಗ್ಗಂಟಾಗಿರುತ್ತದೆ. ಹಾಗಾಗಿ ಕೆಲವೊಮ್ಮೆ ಲೆಕ್ಕಾಚಾರಗಳು ತಪ್ಪುವ ಸಾಧ್ಯತೆಯೂ ಇಲ್ಲದಿಲ್ಲ. ಇದು ಯಾರನ್ನೂ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಅಲ್ಲ.

Leave a Reply

Your email address will not be published. Required fields are marked *

error: Content is protected !!