ಎಲೆಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ. ಯಾಕೆ ಗೊತ್ತೇ?

ಸಿಂಪರಣೆಯಿಂದ ಎಲೆ ಚುಕ್ಕೆರೋಗ ವಾಸಿ ಅಸಾಧ್ಯ. ಯಾಕೆ?

ಅಡಿಕೆಗೆ ಬಾದಿತವಾದ ಎಲೆ ಚುಕ್ಕೆರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ.  ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು  ಪ್ರಕೃತಿಯೇ ಸಹಕರಿಸಬೇಕು. ಎಲೆ ಚುಕ್ಕೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ …

Read more

ಬೀಜ – ಸಸಿ ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೆ ತಿಳಿದುಕೊಳ್ಳಿ.

ಹಿರಿಯರು ಹೇಳುವುದುಂಟು , ಪರವೂರಿನ ಸುಭಗನಿಗಿಂತ ( ನಯ ವಿನಯದ ವ್ಯಕ್ತಿ) ಊರಿನ ಕಳ್ಳನಾದರೂ ಆಗಬಬಹುದು ಎಂದು. ಇದು ನಿಜ. ರೈತರು ಖರೀದಿ ಮಾಡುವ ಸಸಿ, ಬೀಜ  ಇವುಗಳನ್ನು ಗೊತ್ತು ಪರಿಚಯ ಇರುವವರಿಂದಲೇ ಖರೀದಿ ಮಾಡಿ. ನಾಳೆ ಮೋಸವಾದರೆ ಅವರು ನಿಮ್ಮ ಕಣ್ಣು ಮುಂದೆಯೇ ಇರುತ್ತಾರೆ. ನೆಡು ಸಾಮಾಗ್ರಿಗಳಾದ ಬೀಜ, ಸಸಿಗಳ ವ್ಯವಹಾರ ಎಂದರೆ ಬಲವಾದ ನಂಬಿಕೆ. ಇದು ದೇವರಿಗೆ ನಮಸ್ಕರಿಸಿ ಆಶೀರ್ವಾದ ಬೇಡುವುದಕ್ಕಿಂತಲೂ ಮಿಕ್ಕಿದ ನಂಬಿಕೆಯ ವ್ಯವಹಾರ. ಒಬ್ಬ ರೈತ ಒಂದು ಬೀಜ ಅಥವಾ ಸಸಿಯನ್ನು…

Read more
ಸೀಡ್ ಟ್ರೇ ನಲ್ಲಿ ಬೀಜ ಬಿತ್ತುವುದು

ತರಕಾರಿ ಬೆಳೆಗಾರರನ್ನು ರಕ್ಷಿಸಿದ ಸೀಡ್ ಟ್ರೇ ತಂತ್ರಜ್ಞಾನ

ಹಿಂದೆ ತರಕಾರಿ ಬೆಳೆಯುವವರು ಹೊಲದ ಸಿದ್ದತೆ ಮಾಡಿ, ಸಾಲುಗಳನ್ನು ಗುರುತು ಮಾಡಿ, ಬೀಜ ತಂದು ಬಿತ್ತನೆ ಮಾಡಿ ಜೋಪಾನವಾಗಿ ಆರೈಕೆ ಮಾಡಿ ತರಕಾರಿ ಬೆಳೆಸುತ್ತಿದ್ದರು. ಈಗ ಹಾಗಿಲ್ಲ. ನಾಳೆ ಟೊಮಾಟೋ ಅಥವಾ ಇನ್ಯಾವುದಾದರೂ ತರಕಾರಿ ಹಾಕಬೇಕೆಂದಾದರೆ ಇಂದು ಹೊಲದ ಸಿದ್ದತೆ ಮಾಡಿ, ನಾಳೆ ಸಸಿ ನೆಡಬಹುದು. ಮುಂಚಿತವಾಗಿಯೇ ಸಸಿ ಮಾಡಿಟ್ಟುಕೊಳ್ಳುವ ಸೀಡ್ ಟ್ರೇ ತಂತ್ರಜ್ಞಾನ ಇದೆ. ಇದರಲ್ಲಿ ಗಿಡ ಬೆಳೆಸಿ ಕೊಡುವವರೂ ಇದ್ದಾರೆ. ಇದು ತರಕಾರಿ ಬೆಳೆಗಾರರಿಗೆ ನಷ್ಟವನ್ನು ತುಂಬಾ ಕಡಿಮೆ ಮಾಡಿದೆ. ಸಮಯದ ಉಳಿತಾಯವನ್ನೂ ಮಾಡಿದೆ….

Read more
error: Content is protected !!