
ಕೊಳೆ ರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯಕ್ಕೂ ಸಂಬಂಧಗಳಿರಬಹುದೇ ಯೋಚಿಸಿ.
ಈ ವರ್ಷ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಕಾಯಿಗಳಿಗೆ ಕೊಳೆ ರೋಗ ಬಂದಿದೆ ಎಂದು ಹೇಳುತ್ತಿದ್ದಾರೆ. ಹೆಚ್ಚಿನ ಕಡೆ ಕೊಳೆ ರೋಗ ಬಂದಿದೆ. ಇದಕ್ಕೆ ಸಸ್ಯ ಆರೋಗ್ಯ ಕಾರಣ ಇರಬಹುದೇ? ಕೆಲವು ದೃಷ್ಟಿಕೋನದಲ್ಲಿ ಇದು ನಿಜ ಎನ್ನಿಸುತ್ತದೆ. ಅಡಿಕೆಯ ಕೊಳೆ ರೋಗ ಬಂದಂತೆ ಅಡಿಕೆ ಸಸಿ/ ಮರಗಳಿಗೆ , ತೆಂಗಿನ ಮರಗಳಿಗೆ ಸುಳಿ ಕೊಳೆ ರೋಗವೂ ಇತ್ತೀಚೆಗೆ ಬಹಳಷ್ಟು ಹೆಚ್ಚಾಗುತ್ತಿದೆ. ಪೋಷಕಾಂಶಗಳು ಅಸಮತೋಲನವಾಗಿ ಸಸ್ಯಕ್ಕೆ ಲಭ್ಯವಾಗದಿರುವುದೇ ಇದಕ್ಕೆ ಒಂದು ಕಾರಣ ಇರಬಹುದೇ ಎಂಬ ಬಗ್ಗೆ ಸಂಶಯವಿದೆ. ನಾವೆಲ್ಲಾ…