
ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?
ಕರಿಮೆಣಸಿನ ಬೆಳೆಗೆ ಈಗ ಬರುವ ರೋಗ ಮಾರಣಾಂತಿಕವಾಗಿದ್ದು, ಇದನ್ನು ಸಹ ಗುಣಪಡಿಸಲು ಸಾಧ್ಯವಿದೆ. ರೋಗ ಪ್ರಾರಂಭವಾಗುವ ಹಂತದಲ್ಲಿ ಇದನ್ನು ಗುರುತಿಸಿ, ಉಪಚಾರಮಾಡುವುದು ಪ್ರಾಮುಖ್ಯ. ಮಳೆ ಬರುತ್ತಿದೆ ಎಂದು ಮನೆಯಲ್ಲೇ ಕುಳಿತರೆ ಅಥವಾ ತೋಟಕ್ಕೆ ಹೋದಾಗ ಬಳ್ಳಿಯ ಸ್ಥಿತಿಗತಿಯನ್ನು ಕೂಲಂಕುಶವಾಗಿ ಗಮನಿಸದೇ ಇದ್ದರೆ ರೋಗ ಸೋಂಕು ತಗಲಿ ಅದು ಬಹಳ ತ್ವರಿತವಾಗಿ ಉಲ್ಬಣಿಸಿ ಬಳ್ಳಿ ಸಾಯುತ್ತದೆ. ಈಗಕರಿಮೆಣಸು ಬೆಳೆಗಾರರಿಗೆ ಇರುವ ಪ್ರಾಮುಖ್ಯ ಕೆಲಸ ತೋಟಕ್ಕೆ ಹೋದಾಗ ಬಳ್ಳಿಯ ಆರೋಗ್ಯವನ್ನು ಗಮನಿಸುತ್ತಾ ಇರುವುದು. ಕರಿಮೆಣಸು ಬೆಳೆಗೆ ಮಳೆಗಾಲ ಕಷ್ಟದ ಕಾಲ….