1 ಕಿಲೋ ಪೇಪರ್ ಸಿದ್ಧವಾಗಲು ಬೇಕು- 1000 ಲೀ. ನೀರು.

ನದಿ, ಕೊಳವೆ  ಬಾವಿ, ಅಣೆಕಟ್ಟು  ಮುಂತಾದ ನೀರಿನ ಮೂಲಗಳಿಂದ ಅತ್ಯಧಿಕ ಪ್ರಮಾಣ ಉಪಯೋಗವಾಗುವುದು ಉದ್ದಿಮೆಗಳಿಗೆ.ಒಂದು ನೀರಾವರಿ ಯೋಜನೆ ಊರಿಗೆ ಮಂಜೂರಾಗುತ್ತದೆ ಎಂದರೆ ಅದರ ಹಿಂದೆ  ಯಾವುದೋ ಒಂದು ಉದ್ದಿಮೆಗೆ ನೀರು ಸರಬರಾಜು ಅಗಲಿದೆ ಎಂದರ್ಥ. ಒಂದೊಂದು ಉದ್ದಿಮೆಗಳು ಕೃಷಿಕರು ಬಳಕೆ ಮಾಡುವ ನೀರಿನ ಹತ್ತು ಪಟ್ಟು  ಹೆಚ್ಚು ನೀರನ್ನು ಬಳಸುತ್ತವೆ.. ಕೈಗಾರಿಕೆಗಳಲ್ಲಿ  ಬಳಕೆಯಾಗಿ  ಹೊರ ಹಾಕುವ ನೀರು ಕಲುಷಿತ ನೀರಾಗಿರುತ್ತದೆ. ರೈತ ಬಳಕೆ ಮಾಡಿದ ನೀರು ಮರಳಿ ಭೂಮಿಗೆ ಮರಳಿ ಸೇರಲ್ಪಡುವ ಶುದ್ಧ ನೀರೇ ಆಗಿರುತ್ತದೆ. ರೈತ…

Read more

ಹಾಗಲಕಾಯಿ ಯಾಕೆ ಕೊಳೆಯುತ್ತದೆ?

ಹಾಗಲಕಾಯಿ ಹಾಳಾಗುವುದಕ್ಕೆ ಕಣ್ಣು ದೃಷ್ಟಿ ಕಾರಣ ಎಂದು ಕೆಲವರು ಚಪ್ಪಲಿ, ಕಸಬರಿಕೆ ಕಟ್ಟುತ್ತಾರೆ.  ಆದರೂ ಕಾಯಿ ಹಾಳಾಗುವುದು ನಿಲ್ಲುವುದಿಲ್ಲ. ಕೊನೆಗೆ ನಮ್ಮಲ್ಲಿ ಹಾಗಲಕಾಯಿ ಆಗುವುದಿಲ್ಲ ಎಂದು ತೀರ್ಮಾನಕ್ಕೆ  ಬರುತ್ತಾರೆ. ಇದು ಯಾವ ಕಣ್ಣು ದೃಷ್ಟಿಯೂ ಅಲ್ಲ. ಕಾರಣ ಒಂದು ಕೀಟ ಅಷ್ಟೇ.. ಹಾಗಲಕಾಯಿಯ  ಕಹಿಗೂ ಕೀಟ ಬರುತ್ತದೆಯೇ ? ಇದು ಎಲ್ಲರ ಪ್ರಶ್ಣೆ. ನಿಜವಾಗಿಯೂ ಕಹಿ ಇದ್ದರೂ ಬರುತ್ತದೆ. ಸಿಹಿ ಇದ್ದರೂ ಬರುತ್ತದೆ. ಅದು ಹಣ್ಣು ತರಕಾರಿಗಳಿಗೆ ತೊಂದರೆ ಮಾಡುವ ಒಂದು ಕೀಟ. ಯಾವ ಕೀಟ: ಜೇನು…

Read more

ಕಾಫಿ ಬೆಳೆಗೆ ಇದು ಅತೀ ದೊಡ್ಡ ಸಮಸ್ಯೆ.

ಎಲೆಗಳ ಮೇಲೆ ತಾಮ್ರದ  ಕಲೆಗಳು ಕಂಡು ಬಂದು ಅದು ಒಣಗಿ ಎಲೆಗಳು ಉದುರಿ ಸಸ್ಯದಲ್ಲಿ ಬರೇ ಕಡ್ಡಿ ತರಹದ  ಗೆಲ್ಲುಗಳು ಮಾತ್ರ ಉಳಿಯುವ ಈ ರೋಗ ಇತ್ತೀಚೆಗೆ ಕಾಫೀ ಬೆಳೆಯಲಾಗುವ ಪ್ರದೇಶಗಳಲ್ಲಿ ವ್ಯಾಪಕವಾಗುತ್ತಿದೆ. ಇದು ಬೆಳೆಗಾರರಲ್ಲಿ ಅತಂಕವನ್ನು ಉಂಟುಮಾಡಿದೆ.. ಎಲೆ  ತುಕ್ಕು ರೋಗ , ಅರಶಿನ ಚುಕ್ಕೆ ಅಥವಾ ಎಲೆ ಚುಕ್ಕೆ ರೋಗ, leaf rust                 ಎಂಬುದು  ಇದರ  ಹೆಸ ರು.  ಈ ರೋಗ ಆರ್ಥಿಕವಾಗಿ ಬೆಳೆಗಾರರಿಗೆ…

Read more
Shade net house

ಪಾಲೀ ಹೌಸ್ ಬೇಕಾಗಿಲ್ಲ – ನೆರಳು ಮನೆಯೇ ಸಾಕು.

ಬೆಳೆ ಬೆಳೆಸುವಾಗ ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ  ಮಾಡಬೇಕು. ಪಾಲೀ ಹೌಸ್  ಎಂದರೆ ಅದು ಆನೆ ಸಾಕಿದಂತೆ. ಅದರ ಬದಲು ತುಂಬಾ ಕಡಿಮೆ ಖರ್ಚಿನಲ್ಲಿ  ಆಗುವ ನೆರಳು ಬಲೆ  ಅಥವಾ ನೆಟ್ ಹೌಸ್  ಒಳಗೆ  ಬಹುತೇಕ ಎಲ್ಲಾ ನಮೂನೆಯ  ಬೆಳೆಗಳನ್ನೂ ಬೆಳೆಯಬಹುದು. ರೈತರಿಗೆ ಇದೇ ಅನುಕೂಲಕರ.   ನೆರಳು ಮನೆ  ಎಂದರೆ ಬೆಳೆಗಳ ಮೇಲ್ಭಾಗದಲ್ಲಿ ನಿರ್ದಿಷ್ಟ ಪ್ರಮಾಣದ ನೆರಳನ್ನು ಒದಗಿಸುವ  ಪರದೆಯನ್ನು  ಹಾಸಿ ಮಾಡಿದ ರಚನೆ. ಇಲ್ಲಿ ನೆರಳು ಎಂಬುದು ಕೆಲವು ಬೆಳೆಗಳಿಗೆ ಬೇಕಾಗುತ್ತದೆಯಾದರೂ  ಇದರ…

Read more
ಅಡಿಕೆ ಮರದಲ್ಲಿ ವೀಳ್ಯದೆಲೆ ಮಿಶ್ರ ಬೆಳೆ

ಅಡಿಕೆಯೊಂದಿಗೆ ವೀಳ್ಯದೆಲೆ- ಲಾಭದ ಮಿಶ್ರ ಬೆಳೆ.

ವೀಳ್ಯದೆಲೆಯ ಬೆಲೆ ಗೊತ್ತೇ?  100 ಎಲೆಗೆ 100 ರೂ. ತನಕವೂ ಆಗುವುದುಂಟು. ಅಲ್ಲದೆ ಇದು ವಾರ ವಾರ ಆದಾಯ ಕೊಡುವ ಬೆಳೆ. ಅಡಿಕೆ ಮರಕ್ಕೆ  ಇದನ್ನು ಹಬ್ಬಿಸಿದರೆ ಒಳ್ಳೆಯ ಲಾಭ. ಅಡಿಕೆ ಬೆಳೆಯುವ ಕೆಲವು ಭಾಗಗಳಲ್ಲಿ ಇದೇ ಅಡಿಕೆಯೊಂದಿಗೆ ಮಿಶ್ರ ಬೆಳೆ. ಅಡಿಕೆ  ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳ  ಸಾಲಿನಲ್ಲಿ ಕರಿಮೆಣಸು–ಕೊಕ್ಕೋ, ಬಾಳೆ ಮಾತ್ರವಲ್ಲ, ವೀಳ್ಯದೆಲೆ ಬೆಳೆಯೂ ಲಾಭದಾಯಕ . ದಿನಾ ಆದಾಯ ತಂದು ಕೊಡಬಲ್ಲ ಈ ಬೆಳೆಯನ್ನು ರಾಜ್ಯದ ಹೆಚ್ಚಿನ ಕಡೆ ಅಡಿಕೆ ಮರಗಳಿಗೆ ಹಬ್ಬಿಸಿಯೇ…

Read more
ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು

ತೆಂಗಿನ ಸಸಿ ಕಳೆಗುಂದಿ ಸಾಯುವುದಕ್ಕೆ ಇದು ಕಾರಣ.

ಬಹಳಷ್ಟು ಕೃಷಿಕರ ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು? ನಮ್ಮ ಹಿರಿಯರು ತೆಂಗಿನ ಮರದ ಯಾವುದೇ ಹಸಿ ಭಾಗ ಕಡಿಯಬಾರದು ಎಂದಿದ್ದಾರೆ. ಹಾಗೆಯೇ ತೆಂಗಿನ ಮರ ಕಡಿಯಬಾರದು ಎಂದು ತಾಕೀತು ಮಾಡಿದ್ದಾರೆ. ಇದು ಯಾಕೆ ಗೊತ್ತೇ? ಒಂದು ಮರ ಕಡಿದರೆ ಅದರ ಫಲವಾಗಿ ನಾಲು ಮರ ಹೋಗುತ್ತದೆ. ಕಾರಣ ಮರದ ರಸದ ಆ ವಾಸನೆಯನ್ನು ಹುಡುಕಿಕೊಂಡು ಕೆಂಪು ಮೂತಿ ಹುಳ ಬರುತ್ತದೆ.ಅದು ಯಾವುದಾದರೂ ಮರದಲ್ಲಿ ತನ್ನ ಸಂತಾನಾಭಿವೃದ್ದಿ ಮಾಡುತ್ತದೆ. ತೆಂಗಿನ  ಮರಗಳಿಗೆ ಕುರುವಾಯಿ…

Read more

ನಯಾ ಪೈಸೆ ಖರ್ಚಿಲ್ಲದ ಕೃಷಿ ಹೀಗೆ.

ದೇಸೀ ಹಸುವೊಂದಿದ್ದರೆ  ನೀವು ಯಾವ ಗೊಬ್ಬರದಂಗಡಿಯವನನ್ನೂ  ಸಾಕಬೇಕಾಗಿಲ್ಲ.  ಹಸುವಿನ ಸಗಣಿ, ಅದರ ಮೂತ್ರ, ಮಜ್ಜಿಗೆ, ಹಾಲು, ಶುಂಠಿ ರಸ, ಬ್ರಹ್ಮಾಸ್ತ್ರ, ಅಗ್ನ್ಯಾಸ್ತ್ರ, ನೀಮಾಸ್ತ್ರ ಮುಂತಾದ ಸ್ಥಳೀಯವಾಗಿ ದೊರೆಯುವ ಮೂಲ ವಸ್ತುಗಳಿಂದ ಬೆಳೆಯ ಸರ್ವಾಂಗೀಣ ಅವಶ್ಯಕತೆಯನ್ನೂ ಪೂರೈಸಬಹುದು. ಎಲ್ಲವೂ ಬದಲಾಗಲಿದೆ : ಕೆಲವೇ ವರ್ಷಗಳಲ್ಲಿ ಈ ದೇಶದಲ್ಲಿರುವ ಸರಕಾರೀ ಸ್ವಾಮ್ಯದ ರಸಗೊಬ್ಬರ  ತಯಾರಿಕಾ  ಸಂಸ್ಥೆಗಳು ಬಾಗಿಲು ಹಾಕಲಿವೆ. ಲಕ್ಷಾಂತರ ಜನ ನಿರುದ್ಯೋಗಿಗಳಾಗಲಿದ್ದಾರೆ. ಕೊಟ್ಯಾಂತರ ರೂಪಾಯಿ ವ್ಯವಹಾರದ  ರಸಗೊಬ್ಬರ, ಕೀಟ ನಾಶಕ, ರೋಗನಾಶಕ ಹಾಗೂ ಇನ್ನಿತರ ಬೆಳೆ  ಸಂರಕ್ಷಕ ತಯಾರಕರು…

Read more
less water ans weed less

15 ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು!

ಪಾಲಿಥೀನ್ ಶೀಟನ್ನು ಮಳೆಗಾಲ ಮುಗಿಯುವಾಗ ನೆಲಕ್ಕೆ ಹಾಕಿ. ತೀವ್ರ ಬೇಸಿಗೆಯ ಜನವರಿ ನಂತರ  15 ದಿನಕ್ಕೊಮ್ಮೆ ನೀರುಣಿಸಿದರೆ ಯತೇಚ್ಚ ಸಾಕಾಗುತ್ತದೆ.ಈ ವಿಧಾನದಿಂದ ಗರಿಷ್ಟ ನೀರು ಉಳಿಸಬಹುದು. ಸಸ್ಯಗಳ ಬೇರುಗಳಿಗೆ ಬೇಕಾಗುವ ಸೂಕ್ತ ವಾತಾವರಣವನ್ನೂ ದೊರಕಿಸಿಕೊಡಬಹುದು.  ಆಧುನಿಕ ತಂತ್ರಜ್ಞಾನಗಳು ಕೃಷಿ ಕ್ಷೇತ್ರದ ಸುಧಾರಣೆಗೆ ನೀಡಿದ ಕೋಡುಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದರೆ ಭವಿಷ್ಯದಲ್ಲಿ  ನೀರಿನ ಸಮಸ್ಯೆಯಿಂದ ಪಾರಾಗಬಹುದು.    ಒಂದು ಕಾಲದಲ್ಲಿ ತರಕಾರಿ ಬೆಳೆಗಳಿಗೆ ಮಾತ್ರ ಬಳಸಲ್ಪಡುತ್ತಿದ್ದ ಈ ಮಲ್ಚಿಂಗ್ ಶೀಟುಗಳು ಈಗ ಬಹುತೇಕ ಎಲ್ಲಾ ಬೆಳೆಗಳಿಗೂ ಬಳಕೆಯಾಗುತ್ತಿವೆ.  ಮಲ್ಚಿಂಗ್…

Read more
ಫ್ಯುರಡಾನ್ ಹರಳು

ಫ್ಯುರಡಾನ್- ಫೋರೇಟ್ ಇದು ಅಪಾಯಕಾರೀ ಕೀಟನಾಶಕ.

ಹೆಚ್ಚಿನ ರೈತರು ನೆಲದ ಹುಳಕ್ಕೆ ಪ್ಯುರಡಾನ್ – ಫೋರೇಟ್  ಬಳಸುತ್ತಾರೆ . ಇದು ಪ್ರಭಲ ಕೀಟನಾಶಕ. ಅಗತ್ಯ ಇದ್ದರೆ ಮಾತ್ರ ಬಳಸಿದರೆ ಕ್ಷೇಮ. ಮಣ್ಣು ಸಂಬಂಧಿತ ಕೆಲವು ಜಂತು ಹುಳು ಹಾಗೂ ದುಂಬಿಗಳ ನಾಶಕ್ಕೆ ಫ್ಯುರಡಾನ್. ಫೋರೇಟ್ ಎಂಬ ಎರಡು  ಬಗೆಯ ಕೀಟನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ಮರಳಿನ (ರೆಸಿನ್) ಮೇಲೆ ಕೀಟನಾಶಕವನ್ನು ಲೇಪನಮಾಡಿ ತಯಾರಿಸುತ್ತಾರೆ. ಫ್ಯುರಡಾನ್ ನಲ್ಲಿ ವಾಸನೆ ಇಲ್ಲ ಫೋರೇಟ್ ನಲ್ಲಿ  ವಾಸನೆ ಇದೆ. ಫ್ಯುರಡಾನ್ ನಲ್ಲಿ ಕಾರ್ಬೋಸಲ್ಫಾನ್ ಎಂಬ ಅಂಶ 3% (G…

Read more

ಆಡಿಕೆ ಗರಿ ಹಳದಿಯಾಗಲು ಇದು ಕಾರಣ.

ಸಸ್ಯಗಳಿಗೆ ಉತ್ತಮ ಬಿಸಿಲು ದೊರೆತಾಗ ಅವುಗಳ ಎಲೆಗಳು ಹೆಚ್ಚು ಹೆಚ್ಚು ಉಸಿರಾಟ  ಕ್ರಿಯೆ  ನಡೆಸಿ ಚೆನ್ನಾಗಿ ಬೆಳೆಯುತ್ತವೆ. ಆದರೆ  ಕೆಲವೊಮ್ಮೆ ಈ ಅತಿಯಾದ ತಾಪಮಾನ ಕೆಲವು ಕೀಟಗಳನ್ನು ಆಕರ್ಷಿಸುತ್ತವೆ. ಇಂತದ್ದರಲ್ಲಿ ಒಂದು ಅಡಿಕೆಯ ಗರಿಯಲ್ಲಿ ವಾಸ ಮಾಡುವ ಕೆಂಪು ಮತ್ತು ಬಿಳಿ ತಿಗಣೆ. ಅಡಿಕೆ ಬೆಳೆಗೆ  ಸಹ್ಯ ತಾಪಮಾನ 35 ಡಿಗ್ರಿ  ತನಕ. ಅದಕ್ಕಿಂತ ಹೆಚ್ಚಾದರೆ ಅದು ಸಹಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ  ನಮ್ಮ ಹಿರಿಯರು ಅಡಿಕೆ ತೋಟವನ್ನು ಅದಕ್ಕೆ ಸೂಕ್ತವಾದ ಜಾಗದಲ್ಲಿ ಮಾತ್ರ ಮಾಡಬೇಕು ಎನ್ನುತ್ತಿದ್ದರು. ಅಡಿಕೆ ಬೆಳೆಯಲು…

Read more
error: Content is protected !!