
ಡ್ರಾಗನ್ ಹಣ್ಣಿನ ಬೆಳೆಯಿಂದ ರೈತರ ಆದಾಯ ಹೆಚ್ಚಲಾರಂಭಿಸಿದೆ
ಡ್ರಾಗನ್ ಹಣ್ಣಿನ ಬೆಳೆಗೆ ಭಾರೀ ಮಹತ್ವ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯೂ ಉತ್ತಮವಾಗಿದೆ. ಈ ಬೆಳೆ ರೈತರ ಆದಾಯ ಹೆಚ್ಚಳಕ್ಕೆ ನೆರವಾಗುತ್ತಿದೆ. ನಮ್ಮ ದೇಶವಲ್ಲದೆ ಬೇರೆ ದೇಶಗಳಲ್ಲೂ ಡ್ರಾಗನ್ ಹಣ್ಣಿನ ಬೆಳೆ ಜನಪ್ರಿಅತೆ ಗಳಿಸುತ್ತಿದ್ದು, ಇದಕ್ಕೆ ಪ್ರಾಪಂಚಿಕ ಮಾರುಕಟ್ಟೆ ಇದೆ. ಇಲ್ಲೊಬ್ಬರು ಹೂವಿನ ಹಡಗಲಿಯ ಕಾಲ್ವಿ ಗ್ರಾಮದ ರೈತ ಡ್ರಾಗನ್ ಹಣ್ಣಿನ ಬೆಳೆ ಬೆಳೆದು ಹೇಗೆ ಆದಾಯ ಹೆಚ್ಚಿಸಿಕೊಂಡರು ನೋಡೋಣ. ಕರ್ನಾಟಕ ರಾಜ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಬಣಕಾರ ಶಿವನಾಗಪ್ಪ ದೊಡ್ಡತೋಟಪ್ಪ( 65) ಒಬ್ಬ…