ರೋಗದಲ್ಲಿ ಉದುರಿ ಬಿದ್ದ ಅಡಿಕೆಗೂ ಬೆಲೆ –ಬೇಡಿಕೆ.
ರೋಗದ ಅಡಿಕೆ, ಬಿದ್ದ ಅಡಿಕೆಯನ್ನು ಹೆಕ್ಕಿದರೆ ಅದನ್ನು ಏನು ಮಾಡುವುದು ಎಂದು ಅದನ್ನು ನಾವು ಅಲ್ಲೇ ಬಿಡುತ್ತೇವೆ. ಇದಕ್ಕೆ ಬೆಲೆ ಇದೆ, ಕೊಳ್ಳುವವರು ಇದ್ದಾರೆ ಎಂದರೆ ಹೆಕ್ಕದೆ ಬಿಡುತ್ತೇವೆಯೇ? ಇಲ್ಲ. ಈ ಅಡಿಕೆಗೂ ಬೇಡಿಕೆ ಬಂದಿದೆ. ಬೆಲೆಯೂ ಇದೆ. ಅದನ್ನು ಹೆಕ್ಕದೆ ಅಲ್ಲೇ ಉಳಿಸುವುದರಿಂದ ಹೆಚ್ಚಾಗುವ ರೋಗ ಸಾಧ್ಯತೆಯೂ ಇದರಿಂದ ಕಡಿಮೆಯಾಗುತ್ತದೆ. ಸಹಕಾರ ವ್ಯವಸ್ಥೆಯಲ್ಲಿ ದೇಶಕ್ಕೆ ಮಾದರಿಯಾದ ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಈಗ ಎಳೆಯ ಬಿದ್ದ ಅಡಿಕೆಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ತೋಟಗಾರ್ಸ್ ಕೋ ಓಪರೇಟಿವ್ ಸೊಸೈಟ್…