ಅಡಿಕೆ ಗರಿ ತಿನ್ನುವ ತಿಗಣೆಯ ಹಾನಿ

ಅಡಿಕೆ ಗರಿಗಳು ಯಾಕೆ ಹೀಗಾಗುತ್ತವೆ- ಪರಿಹಾರ ಏನು?

ಅಡಿಕೆಯ  ಸಸ್ಯದ ಎಲೆಗಳು ಗುಚ್ಚದ ತರಹ ಆಗುವ, ಸಸ್ಯ  ಬೆಳವಣಿಗೆಯನ್ನು ಹತ್ತಿಕ್ಕುವ  ಕೆಲವು ರಸ ಹೀರುವ ಕೀಟಗಳನ್ನು ನಿಯಂತ್ರಿಸದಿದ್ದರೆ  ಸಸಿ ಏಳಿಗೆ ಆಗುವುದೇ ಇಲ್ಲ. ಅಡಿಕೆ ಸಸಿ/ ಮರದ ಎಲೆ ಹಾಳಾದರೆ ಅದರ ಏಳಿಗೆಯೇ ಆಗುವುದಿಲ್ಲ. ಎಲೆಯ ರಸ ಹೀರಿ ತೊಂದರೆ ಮಾಡುವ ಕೆಲವು ತಿಗಣೆಗಳು ಇತ್ತೀಚಿನ ದಿನಗಳಲ್ಲಿ ಭಾರೀ  ತೊಂದರೆ ಮಾಡುತ್ತಿವೆ. ಒಂದು ಅಡಿಕೆ ನೆಟ್ಟು ಸುಮಾರು 5 ವರ್ಷಕ್ಕೆ ಅದು ಫಲ ಕೊಡಲು ಪ್ರಾರಂಭವಾಗಬೇಕು. ಆದರೆ ಇಂತಹ  ಕೀಟಗಳು ಧಾಳಿ ಮಾಡಿದವೆಂದರೆ ಅದರ ಬೆಳವಣಿಗೆಯೇ…

Read more
ಹುಳ ತಿಂದು ಸತ್ತ ತೆಂಗಿನ ಮರ

ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?

ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ. ಹೆಚ್ಚಿನ ರೈತರು  ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ  ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ? ನಮ್ಮಲ್ಲಿ ಹಿರಿಯರು…

Read more
ತೆಂಗು-ಉತ್ತಮ ಆರೈಕೆಯಲ್ಲಿ ಬೆಳೆದ 4 ವರ್ಷದ ತೆಂಗು- 4 year yielding plant

ತೆಂಗು- 4 ವರ್ಷಕ್ಕೆ ಇಳುವರಿ ಪ್ರಾರಂಭವಾಗಲು ಹೇಗೆ ಸಾಕಬೇಕು?

ತೆಂಗಿನ ಸಸಿ ನೆಟ್ಟು ನಂತರ ಎಲ್ಲಾ ನಿರ್ವಹಣೆಯನ್ನೂ ಚಾಚೂ ತಪ್ಪದೆ ಮಾಡುತ್ತಾ ಬಂದರೆ ಅದು 4 ನೇ ವರ್ಷಕ್ಕೆ ಹೂ ಬಿಟ್ಟು 5 ವರ್ಷಕ್ಕೆ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಹೈಬ್ರೀಡ್ ತಳಿಗಳು ನಾಲ್ಕನೇ ವರ್ಷಕ್ಕೇ ಫಲ ಕೊಡಲು ಪ್ರಾರಂಭವಾಗುತ್ತದೆ.  ನಾವೆಲ್ಲಾ ತೆಂಗಿನ ಸಸಿ ನೆಡುತ್ತೇವೆ. ಫಲ ಬರುವ ತನಕ ಆರೈಕೆ ಮಾಡಲು ಉದಾಸೀನ ಮಾಡುತ್ತೇವೆ. ಫಲ ಬಂದ ನಂತರ ಹೆಚ್ಚು ಇಳುವರಿ ಬೇಕು ಎಂದು ಗೊಬ್ಬರ ಕೊಡುವ ಉತ್ಸಾಹ ತೋರುತ್ತೇವೆ. ಆದರೆ ಇದು ಸೂಕ್ತ ಕ್ರಮ ಅಲ್ಲ. ಸಸಿ ನೆಟ್ಟಾದಾಗಿನಿಂದ…

Read more
ಮಂಗಳ ಅಥವಾ ಇಂಟರ್ ಮಂಗಳ ಅಡಿಕೆ ಫಸಲು

ಇಂಟರ್ ಸಿ ಎಂದರೆ ಮಂಗಳ ತಳಿ. ಹೊಸ ತಳಿ ಅಲ್ಲ.

ಅಧಿಕ ಇಳುವರಿಗೆ ಇಂಟರ್ ಸಿ ಮಂಗಳಬೇ ಆಗಬೇಕು ಎಂದು ದುಂಬಾಲು ಬಿದ್ದು, ನೆಡ ಬಯಸುವವರು ಒಂದಷ್ಟು ವಿಚಾರಗಳನ್ನು ತಿಳಿದಿರಬೇಕು. ಇದು ಅಧಿಕ ಇಳುವರಿ ಕೊಡಬಹುದು.  ಆದರೆ ಅದು ಹಿಂದೆ ಇದ್ದ ಮಂಗಳ ತಳಿಯೇ ಆಗಿದೆ. . ಇಂಟರ್ ಸಿ ಮಂಗಳ  ತಳಿ ಎಂಬ ಹೆಸರೇ ಒಂದು ಪ್ರಚಾರ. ಇನ್ನು ಇದನ್ನು ಒಂದು ತಳಿ ಎಂದು ಮಾರಾಟ ಮಾಡುವವರ ಅವಿವೇಕತನಕ್ಕೆ ಏನು ಹೇಳಬೇಕೋ ತಿಳಿಯದು. ಒಂದು ಗಾದೆ ಇದೆ, ನಮ್ಮನ್ನು ಮಂಗ ಮಾಡುವುದಲ್ಲ, ನಾವು ಮಂಗ ಆಗುವುದು. ನಮ್ಮ ಅಸಹಾಯಕತೆಯೇ…

Read more
ಅಡಿಕೆ

ಇದು ಅಡಿಕೆಯ ಭಾರೀ ಹೆಸರುವಾಸಿ ತಳಿ.

ಅಡಿಕೆ ಬೆಳೆಸುವವರು ಪ್ರಥಮತಹ  ಆಯ್ಕೆ  ಮಾಡಬೇಕಾದ ತಳಿ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ. ಇದು ಮನೆ ಕಟ್ಟುವುದಕ್ಕೆ ಪಂಚಾಂಗ ಹಾಕಿದಂತೆ. ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ. ಯಾವಾಗಲೂ  ತಳಿ ಆಯ್ಕೆ ಮಾಡುವಾಗ ತಳಿ ಮಿಶ್ರಣ ಆಗದಂತ ಜಾಗದಿಂದ, ಸೂಕ್ತ ವಿಧಾನದಿಂದ ಬೀಜವನ್ನು ಆಯ್ಕೆ ಮಾಡಿ ಅವರವರೇ ಸಸಿ ತಯಾರಿಸಿಕೊಂಡರೆ ಬಹಳ ಉತ್ತಮ.  ಕರ್ನಾಟಕದಲ್ಲಿ…

Read more
brinjal grower

ಇದು ಭಾರೀ ಬೇಡಿಕೆಯ ಗುಳ್ಳ ಬದನೆ.

ಕರಾವಳಿಯ ಬದನೆ ತಳಿಗಳಲ್ಲಿ ಹೆಸರುವಾಸಿಯಾದ ಮಟ್ಟು ಗುಳ್ಳಕ್ಕೆ ಸರಿಸಾಟಿಯಾದ ಮತ್ತೊಂದು ಗುಳ್ಳ ,ಇದೇ ಉಡುಪಿ ಜಿಲ್ಲೆಯ ಮತ್ತೊಂದೆಡೆಯೂ ಬೆಳೆಯುತ್ತಿದೆ. ಇದರ ಆಕಾರ ಬಣ್ಣ ಎಲ್ಲವೂ ಏಕಪ್ರಕಾರ. ಒಂದೇ ಒಂದು ವ್ಯತ್ಯಾಸ ಎಂದರೆ ಮಟ್ಟು ಗುಳ್ಳಕ್ಕೆ ತೊಟ್ಟಿನಲ್ಲಿ ಮುಳ್ಳು ಇದೆ. ಇದಕ್ಕೆ ಇಲ್ಲ.  ಕರಾವಳಿಯ ಜನರ ಬಲು ಅಚ್ಚುಮೆಚ್ಚಿನ  ಗುಳ್ಳ ಬದನೆಯ ಆಸೆಯನ್ನು ಪೂರೈಸಿದ ಬದನೆಯಲ್ಲಿ ಈ ಊರಿನ ಬದನೆ ಒಂದು. ಕರಾವಳಿಯ ಜನ ಎಲ್ಲೇ ಹೋಗಲಿ ಗುಳ್ಳ ಬದನೆ ಸಿಕ್ಕರೆ ಎಷ್ಟೇ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಾರೆ….

Read more
snail

ಅಡಿಕೆ ಮರದ ಸಿಂಗಾರ ತಿನ್ನುವ ಸಿಂಬಳದಹುಳು ನಿಯಂತ್ರಣ

ಸಿಂಬಳದ ಹುಳುವಿನ ಉಪಟಳ ಇಬ್ಬನಿ ಬೀಳುವ ಚಳಿಗಾಲದಲ್ಲಿ ಹೆಚ್ಚು. ಈ ಹುಳುಗಳು ನೆಲದಲ್ಲಿ ಇರುತ್ತವೆ. ಅವು ಆಹಾರ ಹುಡುಕುತ್ತಾ ಮರವನ್ನು ಏರಿ ಅಲ್ಲಿ ಎಳೆ ಹೂ ಗೊಂಚಲನ್ನು ತಿನ್ನುತ್ತವೆ. ಬರೇ ಅಡಿಕೆ ಹೂ ಗೊಂಚಲು ಮಾತ್ರವಲ್ಲ ಇವು ಆಹಾರವಾಗಿ ಹಣ್ಣು ತರಕಾರಿಗಳನ್ನೂ ತಿನ್ನುತ್ತವೆ. ಇದನ್ನು ನಿಯಂತ್ರಿಸದೆ ಇದ್ದರೆ  ಒಂದೆರಡು ಸಿಂಗಾರ ಹಾಳಾಗುತ್ತದೆ. ಇಳುವರಿ ನಷ್ಟವಾಗುತ್ತದೆ. ಬಸವನ ಹುಳುಗಳು, ಸಿಂಬಳದ ಹುಳುಗಳು , ಮಳೆಗಾಲದಲ್ಲಿ ನೆಲದಲ್ಲಿ ಅಲ್ಲಲ್ಲಿ ಸಂಚರಿಸುತ್ತಾ ಇರುತ್ತವೆ. ಹಾವಸೆ ಇತ್ಯಾದಿಗಳು ಇದರ ಆಹಾರ. ಅದನ್ನು ತಿನ್ನುತ್ತಾ…

Read more
ಅಡಿಕೆ ಮರಗಳಿಗೆ ಸುಣ್ಣ ಬಳಿದು ಬಿಸಿಲಿನಿಂದ ರಕ್ಷಣೆ

ಅಡಿಕೆ ಮರಕ್ಕೆ ಸುಣ್ಣ ಯಾಕೆ ಕೊಡಲೇ ಬೇಕು? ಇದರಿಂದಾಗಿ ಲಾಭ ಎಷ್ಟು?

ಅಡಿಕೆ ಮರದ ಕಾಡಕ್ಕೆ ನಿರಂತರ ಬಿಸಿಲಿನ ಹೊಡೆತ ಬೀಳುವುದರಿಂದ ಆ ಭಾಗ ಬಿಸಿಯಾಗುತ್ತದೆ. ಮೊದಲಿಗೆ ಬಿಸಿಲು ತಾಗಿದ ಭಾಗ ಹಳದಿ ಮಿಶ್ರ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ವರ್ಷ ಕಳೆದಾಗ ಅಲ್ಲಿ ಸಣ್ಣ ಒಡಕು ಕಾಣಿಸುತ್ತದೆ. ಎರಡು ಮೂರು ವರ್ಷ ಕಳೆದಾಗ ಆ ಭಾಗ ನಿರ್ಜೀವವಾಗುತ್ತದೆ. ಅದು ಎದ್ದು ಬರಲೂ ಬಹುದು. ಗಾಳಿಗೆ ಬೀಳಲೂ ಬಹುದು. ಇದನ್ನು ತಡೆಯುವ ಉಪಾಯ ಮರದ ಕಾಂಡಕ್ಕೆ ಎಅರಡನೇ ವರ್ಷದಿಂದ ಸಾದ್ಯವಾದಷ್ಟು ವರ್ಷದ ತನಕ ಸುಣ್ಣದ ಲೇಪನ ಒಂದೇ. ಚಳಿಗಾಲ ಪ್ರಾರಂಭವಾಗುವ ಕಾರ್ತಿಕ…

Read more
arecanut planting and shade- ನೆಡುವಾಗ ನೆರಳು ಮಾಡಿ.

ಅಡಿಕೆ ಸಸಿ ನೆಡುವಾಗ ಮುಖ್ಯವಾಗಿ ಅರಿತುಕೊಳ್ಳಬೇಕಾದ ವಿಚಾರ.

ನಾನು ಅಡಿಕೆ ಸಸಿ ಹಾಕಿದ್ದೀನೆ. ಸಾವಿರ ಸಾವಿರ ಲೆಕ್ಕ ಕೊಡಬಹುದು. ಎಂಬುದಾಗಿ ಜನ ಹೇಳುತ್ತಾರೆ. ಒಂದು ವರ್ಷದ ನಂತರ ನೆಟ್ಟ ಗಿಡದಲ್ಲಿ ಹಲವು ಗಿಡ ಸತ್ತು ಹೋಗಿದೆ ಎನ್ನುತ್ತಾರೆ. ಕೆಲವು ಗಿಡ ಮಾತ್ರ ಚೆನ್ನಾಗಿ ಬೆಳೆದಿದೆ. ಉಳಿದವು ನೆಟ್ಟ ಹಾಗೆ ಇದೆ ಎನ್ನುತ್ತಾರೆ. ಇದಕ್ಕೆ ಕಾರಣ ಮತ್ತೇನೂ ಅಲ್ಲ. ಪಾಲನೆಯಲ್ಲಿ ನಿರ್ಲಕ್ಷ್ಯ. ಎಳೆಯ ಪ್ರಾಯದಲ್ಲಿ ಸಸಿಗಳನ್ನು ಬೆಳೆಸುವುದು ಒಂದು ತಪಸ್ಸಿನ ತರಹ. ಗಿಡ ನೆಟ್ಟು ಬಿಟ್ಟು, ನೀರಾವರಿ ಮಾಡಿ ಗೊಬ್ಬರ ಕೊಟ್ಟರೆ ಸಾಲದು. ಎಳೆಯ ಪ್ರಾಯದಲ್ಲಿ ಅದನ್ನು ನಿತ್ಯ ಗಮನಿಸುತ್ತಿದ್ದು,…

Read more
6 ವರ್ಷಕ್ಕೆ ಅಡಿಕೆ -ಫಲ – High yield in arecanut

ಅಡಿಕೆ -ಫಲ ಬರುವ ಸಮಯಕ್ಕೇ ತೋಟ ಫ್ರೀ –ಹೇಗೆ?

ಅಡಿಕೆ ತೋಟ ಎಂದರೆ  ನಿರ್ದಿಷ್ಟ ವರ್ಷಕ್ಕೇ ಇಳುವರಿ ಬರಬೇಕು. ಗರಿಷ್ಟ  ಇಳುವರಿ ಸಿಗಬೇಕು. ಅದಕ್ಕೆ ಎಳವೆಯಲ್ಲಿ ಸೂಕ್ತ ಮಿಶ್ರ ಬೆಳೆ ಆರಿಸಬೇಕು. ಅಡಿಕೆ ಬೆಳೆಸುವಾಗ ಪ್ರಾರಂಭದ ಮೂರು ನಾಲ್ಕು ವರ್ಷಗಳ ಕಾಲ ಯಾವ ಮಿಶ್ರ ಬೆಳೆ ಬೆಳೆಯುತ್ತೇವೆಯೋ ಅದನ್ನು ಅವಲಂಭಿಸಿ, ಅದರ ಇಳುವರಿ ನಿರ್ಧಾರವಾಗುತ್ತದೆ. ಎಳೆ ಪ್ರಾಯದಲ್ಲಿ ಮಗುವನ್ನು ಯೋಗ್ಯ ರೀತಿಯಲ್ಲಿ ಸಾಕಿದರೆ ಮಾತ್ರ ಅದರ ಮುಂದಿನ ಭವಿಷ್ಯ ಉತ್ತಮವಾಗುತ್ತದೆ. ಇದರಂತೆ ಅಡಿಕೆ, ತೆಂಗು ಮುಂತಾದ  ಧೀರ್ಘಾವಧಿ ಬೆಳೆಗಳೂ ಸಹ. ಮಿಶ್ರ ಬೆಳೆಗಳಿಂದ ಬರುವ ಆದಾಯದಿಂದ ಇಡೀ ಹೊಲವೇ…

Read more
error: Content is protected !!