ಆರೋಗ್ಯವಂತ ಅಡಿಕೆ ಮರ

ಅಡಿಕೆ ಮರದ ಆರೋಗ್ಯ –ಅದರ ಬೇರು ವ್ಯವಸ್ಥೆ.

ಯಾವುದೇ ಸಸ್ಯವಿರಲಿ, ಬೇರು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಸಸ್ಯಕ್ಕೆ ಬೇರು ಮುಖ್ಯ ಆಧಾರ ಸ್ಥಂಭ.  ಇದು ಮಣ್ಣು, ನೀರು, ಕೀಟಗಳು ಮತ್ತು ಪೋಷಕಗಳ ಅಸಮತೋಲನದಿಂದ ತೊಂದರೆಗೆ ಒಳಗಾಗುತ್ತದೆ. ಇದನ್ನು ಪ್ರತೀಯೊಬ್ಬ ರೈತರೂ ಗಮನಿಸಿ ಅದನ್ನು ಸರಿಪಡಿಸಿದರೆ ಮರ ಆರೋಗ್ಯವಾಗಿರುತ್ತದೆ. ಅಡಿಕೆ ಮರ, ತೆಂಗಿನ ಮರ ಮುಂತಾದ ಎಲ್ಲಾ ಏಕದಳ ಸಸ್ಯಗಳ ಬೇರುಗಳು ತಳಕ್ಕೆ ಇಳಿಯದೇ ಮೇಲ್ಭಾಗದಲ್ಲೇ ಪೋಷಕಗಳನ್ನು ಹುಡುಕುತ್ತಾ ಪಸರಿಸುತ್ತಿರುತ್ತವೆ. ಇವು ಸಸ್ಯದ ಕಾಂಡದಿಂದ ಹುಟ್ಟಿಕೊಂಡು ಬೆಳವಣಿಗೆಯಾಗುತ್ತದೆ. ಸಸ್ಯದ ಸುತ್ತಲೂ ಇದು ಪಸರಿಸಿರುತ್ತದೆ.  Monocot roots are…

Read more
ಕೊಕ್ಕೋ ಕೋಡು

ಕೊಕ್ಕೋ ಬೆಳೆದರೆ ಹಸುರು ಸೊಪ್ಪಿಗೆ ಬರವಿಲ್ಲ.

ಇತ್ತೀಚಿನ ದಿನಗಳಲ್ಲಿ ನಮಗೆ ಹಿಂದಿನಂತೆ ತೋಟಕ್ಕೆ ಹಸಿ ಸೊಪ್ಪು ಸದೆ ಹಾಕಲು ಸಂಪನ್ಮೂಲಗಳಿಲ್ಲ. ಕಾಡು ಇಲ್ಲ. ತರುವ ಮಜೂರಿಯೂ ಅಧಿಕ. ಕೊಕ್ಕೋ ಬೆಳೆ ತೋಟದಲ್ಲಿದ್ದರೆ ವರ್ಷಕ್ಕೆ ಸಾಕಷ್ಟು ಹಸುರು ಸೊಪ್ಪು ದೊರೆಯುತ್ತದೆ. ಈ ಸೊಪ್ಪಿನಲ್ಲಿ ಪೋಷಕಾಂಶಗಳು ಹೆಚ್ಚು ಇರುತ್ತವೆ.  ರಾಸಾಯನಿಕ ಮೂಲದ ಸೂಕ್ಷ್ಮ ಪೋಷಕ, ಸುಣ್ಣ, ಮೆಗ್ನೀಶಿಯಂ ಬಳಸುವ ಖರ್ಚನ್ನು ಇದು ಉಳಿಸುತ್ತದೆ. ಹಸಿ ಸೊಪ್ಪು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ ಒಳ್ಳೆಯ ಆಹಾರ. ಅಡಿಕೆ ಮರಗಳ ಮಧ್ಯಂತರದಲ್ಲಿ ಕೊಕ್ಕೋ ಬೆಳೆದಾಗ  ಕೊಕ್ಕೋ ಸಸ್ಯವು ತನ್ನ ಪಾಲಿನ ಪೋಷಕಾಂಶವನ್ನು …

Read more
ಗೇರು ಮರಕ್ಕೆ ಗೊಬ್ಬರ ಕೊಡುವ ವಿಧಾನ

ಗೇರು – ಗೊಬ್ಬರ ಕೊಟ್ಟರೆ ಬಂಪರ್ ಇಳುವರಿ ಪಡೆಯಬಹುದು.

ಗೇರು ಬೆಳೆಗೆ ವರ್ಷದಲ್ಲಿ 3 ತಿಂಗಳು ಮಾತ್ರ ಕೆಲಸ, ನೀರಾವರಿ ಬೇಡ. ಉತ್ತಮವಾಗಿ ಗೊಬ್ಬರ ಕೊಟ್ಟು ನಿಗಾ ವಹಿಸಿ ಬೆಳೆದರೆ 5-6  ವರ್ಷದ ಮರದಲ್ಲಿ 10 ಕಿಲೋ ತನಕ ಇಳುವರಿ ಪಡೆಯಬಹುದು. ಕನಿಷ್ಟ 1000 ರೂ ಆದಾಯಕ್ಕೆ ತೊಂದರೆ ಇಲ್ಲ ಎಂಬ ಕಾರಣಕ್ಕೆ ರೈತರು ತಮ್ಮಲ್ಲಿ ಖಾಲಿ ಇರುವ ಸ್ಥಳದಲ್ಲಿ ಗೇರು ಬೆಳೆ ಬೆಳೆಸಿದ್ದಾರೆ. ಬರೇ ನೆಟ್ಟರೆ ಸಾಲದು ಅದಕ್ಕೆ ಅಗತ್ಯ ಪೊಷಕಗಳನ್ನು ಕಾಲ ಕಾಲಕ್ಕೆ ಕೊಟ್ಟರೆ ಉತ್ತಮ ಇಳುವರಿ ಪಡೆಯಲು ಸಾಧ್ಯ.     ಗೇರು ಮರ ಚೆನ್ನಾಗಿ…

Read more
ಮಂಗಳ ಆಡಿಕೆ

ಜಲ್ಲಿ ಮಂಗಳ ಎಂಬ ಹೊಸ ತಳಿ ಇದೆಯೇ?

ಮಂಗಳ ಎಂಬ ತಳಿಯನ್ನು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು 1972 ರಲ್ಲಿ ಚೀನಾ ದಿಂದ ಮೂಲ ತಂದು ಇಲ್ಲಿ ಅಭಿವೃದ್ದಿಪಡಿಸಿದ್ದು ಬಿಟ್ಟರೆ, ಈ ತನಕ ಬೇರೆ ಮಂಗಳ ತಳಿಯನ್ನು ಬಿಡುಗಡೆ ಮಾಡಿಲ್ಲ. ಅದರ ಮೂಲ ಗುಣ ಕ್ಷೀಣವಾದುದಕ್ಕೆ ಅದರಲ್ಲೇ ಆಂತರಿಕ ಕ್ರಾಸಿಂಗ್  ಮಾಡಿ ಇಂಟರ್ ಮಂಗಳವನ್ನು 1984 ರಲ್ಲಿ ಪಡೆಯಯಲಾಗಿದೆ.  ಚೀನಾದಲ್ಲಿ ಇದಕ್ಕೆ ಯಾವ ಹೆಸರಿತ್ತೋ ಗೊತ್ತಿಲ್ಲ. ಇಲ್ಲಿ ಅಭಿವೃದ್ದಿಪಡಿಸಿ ಬಿಡುಗಡೆ ಮಾಡುವಾಗ ಮಂಗಳ ಹೆಸರನ್ನು ನೀಡಲಾಗಿದೆ. ಹಾಗೆ ನೋಡಿದರೆ ಕೆಲವು ಚಾಲಿ ಅಡಿಕೆಗೆ ಹೊಂದುವ…

Read more
ಶುದ್ಧ ತೆಂಗಿನ ಎಣ್ಣೆ

ಶುದ್ಧ ತೆಂಗಿನೆಣ್ಣೆಯಲ್ಲಿದೆ – ಅಪರಿಮಿತ ಆರೋಗ್ಯ ಗುಣಗಳು

ಪ್ರಕೃತಿ ಸೃಷ್ಟಿಸಿದ ಹಲವಾರು ಔಷಧೀಯ ಸಸ್ಯ , ಮೂಲಿಕೆಗಳಲ್ಲಿ ತೆಂಗು ಒಂದು. ಇದು ಇಂದು ನಿನ್ನೆಯ ವಿಚಾರ ಅಲ್ಲ. ಅನಾದಿ ಕಾಲದಿಂದಲೂ ಇದ್ದದ್ದು. ಆದರೆ ಗೊತ್ತೀದ್ದೋ ಗೊತ್ತಿಲ್ಲದೆಯೋ ನಾವು ಬಳಸುವುದು ಕಡಿಮೆ ಮಾಡುತ್ತಿದೇವೆ.ತೆಂಗಿನ ಎಣ್ಣೆ ತಿಂದವರಿಗೆ ರೋಗ ಇಲ್ಲ.  ಕೊಬ್ಬರಿ ಎಣ್ಣೆ ಎಂಬುದು ಹಸುವಿನ ತುಪ್ಪಕ್ಕೆ ಸರಿಸಾಟಿಯಾದ ವಸ್ತು ಎನ್ನುತ್ತಾರೆ. ಇದು ಸಸ್ಯಜನ್ಯ ಎಣ್ಣೆಯಾಗಿದ್ದು, ತುಪ್ಪಕ್ಕಿಂತಲೂ ಮಿಗಿಲಾದ ಔಷಧೀಯ ಗುಣವನ್ನು ಪಡೆದಿದೆ. ನಮ್ಮಲ್ಲಿ ಈಗಲೂ ಹಳ್ಳಿಯ ಜನ ಕಣ್ಣು ತುರಿಕೆ, ಮೈ ತುರಿಕೆ ಆದರೆ ಆ ಭಾಗಕ್ಕೆ…

Read more
ಬೇರು ಮೇಲೆ ಬಂದ ಅಡಿಕೆ ಗಿಡ

ಅಡಿಕೆ ಮರದ ಬೇರುಗಳು ಮೇಲೆ ಬರುವುದಕ್ಕೆ ಕಾರಣ ಇದು.

ಅಡಿಕೆ ಮರಗಳ ಬೇರು ಮೇಲೆ ಬರಬಾರದು ಎಂದು  ಕರಾವಳಿ ಮಲೆನಾಡಿನ ಬಹುತೇಕ ಬೆಳೆಗಾರರು ಹೊಂಡ ಮಾಡಿ ಸಸಿ ನೆಡುತ್ತಾರೆ. ಎಷ್ಟೇ ಹೊಂಡ ಮಾಡಿದರೂ ಮರ ಬೆಳೆದಂತೆ ಬೇರು ಮೇಲೆ ಬರಲಾರಂಭಿಸುತ್ತದೆ.  ನೆಲಮಟ್ಟದಿಂದ 1 ಅಡಿ ಮೇಲೆ ಬರುವುದೂ ಇದೆ. ಇದು ಯಾವುದೇ ರೋಗ ಅಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ.  ಅಡಿಕೆ ಸಸ್ಯದ ಬೇರು ಮೇಲೆ ಬಂದಿದೆ ಎಂದರೆ ಮಣ್ಣಿನಲ್ಲಿ ಸಸ್ಯದ ಬೇರುಗಳ ಬೆಳವಣಿಗೆಗೆ ಏನೋ ಅಡ್ದಿ ಉಂಟಾಗಿದೆ ಎಂದರ್ಥ. ಒಮ್ಮೆ ಹುಟ್ಟಿದ ಬೇರು ಸಮರ್ಪಕವಾಗಿ ಬೆಳವಣಿಗೆ…

Read more
ಅಡಿಕೆ- ಕರಿಮೆಣಸು ಬೆಳೆಗಳ ತೋಟಕ್ಕೆ ಅಗತೆ ವರ್ಜ್ಯ

ಅಡಿಕೆ- ಕರಿಮೆಣಸು ಬೆಳೆಗಳ  ತೋಟಕ್ಕೆ ಅಗತೆ, ಉಳುಮೆ ವರ್ಜ್ಯ.

ಅಡಿಕೆ ಮರಗಳ ಬೇರುಗಳು ಮೆತ್ತನೆಯ ಮೇಲ್ಮಣ್ಣಿನಲ್ಲಿ ಹರಡಿ ಬೆಳೆಯುವ ಗುಣದ ಸಸ್ಯಗಳು. ಆದ ಕಾರಣ ಮೇಲು ಭಾಗವನ್ನು ಅಗತೆ, ಉಳುಮೆ ಮಾಡುವುದರಿಂದ  ಬೇರಿಗೆ ಹಾನಿಯಾಗುತ್ತದೆ. ಅಲ್ಲದೆ ಬೇರೆ ಬೇರೆ ತೊಂದರೆಗಳೂ ಉಂಟಾಗುತ್ತವೆ.ಅಡಿಕೆ ಮರದ ಬುಡದಲ್ಲಿ ಕರಿಮೆಣಸು ಇದ್ದರೆ ಯಾವ ಕಾರಣಕ್ಕೂ ಬುಡ ಭಾಗವನ್ನು  ಕೆರೆಯುವುದೂ ಸಹ ಮಾಡಬಾರದು. ಇದರಿಂದ ಕರಿಮೆಣಸಿನ ಬಳ್ಳಿ ಸಾಯಬಹುದು, ಅಥವಾ ಸೊರಗಬಹುದು. ಬುಡ ಬುಡಿಸುವುದು ಹಳೆ ಪದ್ದತಿ: ನಮ್ಮ ಹಿರಿಯರು ತಿಳಿದೋ ತಿಳಿಯದೆಯೋ ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಅದರಲ್ಲಿ ಒಂದು ಬುಡ…

Read more
areca nut palm with full yield

ಅಡಿಕೆ – ಉತ್ತಮ ಫಲ ಕೊಡುವ ಮರದ ಲಕ್ಷಣ ಹೇಗಿರಬೇಕು.

ಇತ್ತೀಚೆಗಿನ ಅಡಿಕೆ ತೋಟಗಳಲ್ಲಿ ಶೇ.50 ಮಾತ್ರ ಉತ್ತಮ ಫಲನೀಡಿ, ಉಳಿದವು ಅನುತ್ಪಾದಕ ಮರಗಳಂತೆ ಇರುವ ಕಾರಣ ತೋಟಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದರೂ ಉತ್ಪಾದನೆ ಆ ಮಟ್ಟಕ್ಕೆ ಏರುತ್ತಿಲ್ಲ. ಬೆಳೆಗಾರರು ಹೆಚ್ಚು ಹೆಚ್ಚು ಸಸಿ ನೆಡುವ ಬದಲು ಇರುವ ತೋಟದಲ್ಲೇ ಬಹುತೇಕ ಉತ್ಪಾದಕ ಮರಗಳಿರುವಂತೆ ತೋಟವನ್ನು ಪುನಃಶ್ಚೇತನ ಮಾಡುವುದು ಎಲ್ಲಾ ದೃಷ್ಟಿಯಿಂದ ಉತ್ತಮ. ಸ್ವಲ್ಪ ಬಿಡುವು ಮಾಡಿಕೊಂಡು ತೋಟ ಸುತ್ತುತ್ತಾ ಬನ್ನಿ. ಹಿಂದೆ ಸುತ್ತುದಾಗ ಗಮನಿಸಿದ ಮರ, ಕಳೆದ ವರ್ಷ ಸುತ್ತುವಾಗ ಗಮನಿಸಿದ ಮರ , ಅದಕ್ಕಿಂತ ಹಿಂದಿನ…

Read more

ಸರಕಾರೀ ವ್ಯವಸ್ಥೆಗಳಲ್ಲೂ ಇಷ್ಟು ವ್ಯಾಪಾರ ಬೇಕೇ?

ಮೊನ್ನೆ ಸುಬ್ರಮಣ್ಯ ಸಮೀಪದ ನೆಟ್ಟಣದ ಕೇಂದ್ರೀಯ ತೋಟದ ಬೆಳೆಗಳ ಸಂಶೊಧಾನ ಸಂಸ್ಥೆಯ  ಬೀಜ ಕೇಂದ್ರಕ್ಕೆ ತೆಂಗಿನ ಸಸಿ ತರಲು ಹೋಗಿದ್ದೆ. ಇಲ್ಲಿ ಆದ ಅನುಭವ ಯಾಕೋ ರೈತರ ಜೊತೆ ಹಂಚಿಕೊಳ್ಳಬೇಕೆನಿಸುತ್ತಿದೆ.  ಸರಕಾರೀ ವ್ಯವಸ್ಥೆಗಳಲ್ಲಿ ಇಷ್ಟೊಂದು ವ್ಯಾಪಾರ ಬೇಕಾ?. ಬೀಜ- ಸಸಿ ಎಂಬ ರೈತರ ಭವಿಷ್ಯದ ಇನ್ವೆಸ್ಟ್ಮೆಂಟ್ ನಲ್ಲಿ ಯಾರೂ ಮಕ್ಕಳಾಟಿಕೆ ಮಾಡಬಾರದು.  ಒಂದು ಕುಬ್ಜ ತಳಿಯ ಬೀಜದ ತೆಂಗಿನ ಕಾಯಿ. ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 120 ರೂ. ಒಂದು ಸಸಿಯ ಬೆಲೆ ಎಷ್ಟು ಗೊತ್ತೇ 210…

Read more
ಅಡಿಕೆ ಗರಿ ತಿನ್ನುವ ಹುಳದ ವಾಸಸ್ಥಾನ

ಅಡಿಕೆಗೆ ಹರಿತ್ತು ತಿನ್ನುವ ಹುಳುವಿನ ತೊಂದರೆ ಮತ್ತು ಪರಿಹಾರ.

ಅಡಿಕೆಯ ಮರದ ಗರಿಗಳನ್ನು ಹಾನಿಮಾಡುವ ಕೀಟಗಳಲ್ಲಿ ಮುಖ್ಯವಾಗಿ ಸುಳಿ ತಿಗಣೆ ಒಂದು ಎಂದು ನಾವು ತಿಳಿದಿದ್ದೇವೆ, ಆದರೆ ಇದನ್ನು ಸಿಂಗಾರ ತಿನ್ನುವ  ಹುಳದ ತರಹವೇ ಇರುವ ಇನ್ನೊಂದು ಎಲೆ ತಿನ್ನುವ ಹುಳ ಸಹ ಅಡಿಕೆಯ ಎಳೆಯ ಗರಿಗಳನ್ನು ತಿನ್ನುತ್ತವೆ. ಇದರಿಂದ ಬಹಳ ಹಾನಿ ಉಂಟಾಗುತ್ತಿದೆ. ದಾವಣಗೆರೆ ಸುತ್ತಮುತ್ತ ಹಲವು ರೈತರ ಹೊಲದಲ್ಲಿ ಈ ಕೀಟದ  ಹಾವಳಿ ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಪ್ರದೇಶಕ್ಕೆ ವ್ಯಾಪಿಸುತ್ತಿದೆ. ಅಡಿಕೆಯ ಮರದ ಗರಿಗಳಿಗೆ ಆಗುವ ಹಾನಿ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು…

Read more
error: Content is protected !!