organic manure

ಸಾವಯವ ಗೊಬ್ಬರಗಳನ್ನು ನೀವೇ ತಯಾರಿಸಿಕೊಳ್ಳಿ- ಅದೇ ಉತ್ತಮ

ಆತ್ಮ ನಿರ್ಭರ ವನ್ನು ನೀವು ಇಚ್ಚೆ ಪಡುವುದೇ ಆಗಿದ್ದರೆ, ನಿಮ್ಮ ಗೊಬ್ಬರದ ಅಗತ್ಯಗಳನ್ನು ನೀವೇ  ಮಾಡಿಕೊಳ್ಳಿ. ಆತ್ಮ ನಿರ್ಭರ ರೈತರಾಗಿ. ನೀವು ಗೊಬ್ಬರ ಮಾರಾಟಗಾರರನ್ನು ಪೋಷಿಸಬೇಕಾಗಿಲ್ಲ. ನಿಮ್ಮ ಶ್ರಮ, ನಿಮ್ಮ ಸಂಪಾದನೆ ಯಾವುದೋ ಕಂಪೆನಿಯನ್ನು, ಯಾವುದೋ ಗೊಬ್ಬರ ಮಾರಾಟ ಮಾಡಿ ಜೀವನ ನಡೆಸುವವನ ಏಳಿಗೆಗಾಗಿ ಇರುವುದಲ್ಲ. ಅದು ನಿಮ್ಮ ವೃತ್ತಿ ಕ್ಷೇತ್ರವನ್ನು ಸಧೃಢಪಡಿಸಲಿಕ್ಕೆ , ನಿಮ್ಮ ಏಳಿಗೆಗೆ ಇರುವಂತದ್ದು.  ಸಾವಯವ ಗೊಬ್ಬರ ಎಂದರೆ ಅದರಲ್ಲಿ ಯಾವ ಹೊಸ ತಾಂತ್ರಿಕತೆಯೂ ಇಲ್ಲ. ಇದನ್ನು ತಯಾರಿಸಿ ಕೊಡಲು ಯಾರ ನೆರವೂ…

Read more
ಜೀವಾಮೃತ ಸಾರ

“ಜೀವಾಮೃತ” ಇದರಲ್ಲಿ ಏನಿರುತ್ತದೆ ಗೊತ್ತೇ?

ಜೀವಾಮೃತ ಎಂಬುದು  ಸುಮಾರು 10-15 ವರ್ಷಗಳಿಂದೀಚೆಗೆ ನಮಗೆ ಪರಿಚಯವಾದ  ಹೆಸರು. ಅದಕ್ಕೂ ಮುಂಚೆ ಒಬ್ಬರು ಇಂಥಹ ತಯಾರಿಕೆಯನ್ನು ಅಮೃತ ಪಾನಿ ಎಂದು ಕರೆದಿದ್ದರು. ಈಗ ಮತ್ತೆ ಗೋ ಕೃಪಾಮೃತ ಎಂಬ  ಉತ್ಪನ್ನ ಹೆಚ್ಚು ಸುದ್ದಿಯಲ್ಲಿದೆ. ಇವೆಲ್ಲವೂ ಜೈವಿಕವಾಗಿ ಮಣ್ಣನ್ನು ಶ್ರೀಮಂತಗೊಳಿಸಲು ಇರುವ ಬೆಳೆ ಪೋಷಕಗಳು. ಇದರಲ್ಲಿ ಏನು ಇದೆ ಎನ್ನುದಕ್ಕಿಂತ ಇದನ್ನು ಬಳಕೆ ಮಾಡಿದರೆ ಹಾನೀ ಏನೂ ಇಲ್ಲ ಎಂಬುದಂತೂ ಸತ್ಯವಾದದ್ದು. ಕೃಷಿ ಮಾಡುವ ಮಣ್ಣು ಜೈವಿಕವಾಗಿ ಸಂಪಧ್ಭರಿತವಾಗಿದ್ದರೆ  ಎಲ್ಲಾ ಕೃಷಿಯೂ ಸರಾಗ. ಯಾವುದೇ ಮಣ್ಣು ಜೈವಿಕತೆಯಿಂದ…

Read more

ಜೈವಿಕ ಗೊಬ್ಬರವನ್ನು ಹೀಗೆ ಬಳಸಿದರೆ ಹೆಚ್ಚು ಫಲ ಸಿಗುತ್ತದೆ?

ಬೇರೆ ಬೇರೆ ಜೀವಾಣುಗಳ ಸಹಾಯದಿಂದ ಬೆಳೆ ಪೋಷಣೆ ಮತ್ತು ಬೆಳೆ ಸಂರಕ್ಷಣೆ ಮಾಡಬಹುದು. ಈ ಜೀವಾಣುಗಳನ್ನು ಹುಡಿ, ದ್ರವ ರೂಪದಲ್ಲಿ ರೈತರಿಗೆ ಒದಗಿಸಲಾಗುತ್ತದೆ. ಇದರ ಸಮರ್ಪಕ ಫಲಿತಾಂಶ ಯಾವ ಸಂದರ್ಭದಲ್ಲಿ ಚೆನ್ನಾಗಿ ನಡೆಯುತ್ತದೆ ಎಂಬುದು ಎಲ್ಲರೂ ತಿಳಿದಿರಬೇಕು. ಜೀವಾಣುಗಳನ್ನು ಬಳಸುವ ಮುನ್ನ ಅದರ ಬಗ್ಗೆ ರೈತರು ತಿಳಿದುಕೊಳ್ಳಬೇಕು. ಅದು ಜೀವಾಣು ಎಂದಲ್ಲ. ಯಾವುದೇ ಬೆಳೆ ಪೋಷಕ ಇರಲಿ ಬೆಳೆ ಸಂರಕ್ಷಕ ಇರಲಿ, ಬಳಸುವ ಮುನ್ನ ಅದರಲ್ಲಿ ಯಾವ ಅಂಶ ಇದೆ ಎಂಬುದನ್ನು ಯಾರು ಬಹಿರಂಗ ಗೊಳಿಸುತ್ತಾರೆಯೋ ಅವರಿಂದ…

Read more
green leaf carrying

ತೋಟಕ್ಕೆ ಈಗ ಹಸಿ ಸೊಪ್ಪು ಹಾಕಿದರೆ ತುಂಬಾ ಅನುಕೂಲ. ಯಾಕೆ?

ತೋಟಕ್ಕೆ ಹಸಿ ಸೊಪ್ಪುಗಳನ್ನು ಬಳಸುವ ಸರಿಯಾದ ಸಮಯ ಮಳೆಗಾಲದ ಪ್ರಾರಂಭದ ದಿನಗಳು. ಈ ಸಮಯದಲ್ಲಿ ಹಸಿ ಸೊಪ್ಪು ಹಾಕಿದರೆ ಅದು ಕರಗಿಸಿಕೊಡುವ ಜೀವಿಗಳಿಂದ ಚೆನ್ನಾಗಿ ಕರಗುತ್ತದೆ.  ಮಳೆಗಾಲ ಪ್ರಾರಂಭದಿಂದ ಕೊನೆತನಕವೂ ಮಣ್ಣು ತೇವ ಭರಿತವಾಗಿರುತ್ತದೆ, ವಾತಾವರಣ ತಂಪಾಗಿರುತ್ತದೆ. ಇವೆಲ್ಲದರ ಅನುಕೂಲ ಬಳಸಿಕೊಂಡು ಮಣ್ಣಿನಲ್ಲಿ ಇರುವ ಬಹುತೇಕ ಎಲ್ಲಾ ಸೂಕ್ಷ್ಮಾಣು ಜೀವಿಗಳೂ ಹೆಚ್ಚು ಚಟುವಟಿಕೆಯಲ್ಲಿರುತ್ತವೆ. ಈಗ ನೀವು ಏನೇ ಸಾವಯವ ತ್ಯಾಜ್ಯ ಹಾಕಿದರೂ ಅದು ತ್ವರಿತವಾಗಿ ಕರಗಿ ಮಣ್ಣಾಗುತ್ತದೆ. ಈಗ ಸೊಪ್ಪು ಸದೆ ಹಾಕಿದರೆ ಮಳೆ ಹನಿಗಳಿಂದಾಗುವ ಮಣ್ಣು ಸವಕಳಿಯನ್ನೂ ತಡೆಯುತ್ತದೆ. ಕಳೆ ನಿಯಂತ್ರಣಕ್ಕೂ ಸಹಕಾರಿ….

Read more

ಬಯೋ NPK ಒಂದೇ ಸಾಕು? ಇದೆಷ್ಟು ನಿಜ.

ಬಹುತೇಕ  ರೈತರ ಬಳಿಗೆ ಕೆಲವು ನೆಟ್ ವರ್ಕ್ ಸಂಘಟನೆಗಳು, ಹಾಗೆಯೇ ಕೆಲವು ಸಾವಯವ ಗೊಬ್ಬರ ಪ್ರಚಾರಕರು ಒಂದೆರಡೂ ಬಾಟಲಿಗಳನ್ನು ಅಥವಾ ಪ್ಯಾಕೆಟುಗಳನ್ನು  ಪರಿಚಯಿಸಿ ಈ ಪ್ಯಾಕೇಟ್/ಬಾಟಲಿಯ ದ್ರಾವಣ ಹಾಕಿದರೆ ಬೇರೆ ಗೊಬ್ಬರ ಬೇಕಾಗಿಲ್ಲ. ಭಾರೀ ಫಸಲು ಎಂದು  ಹೇಳುತ್ತಾರೆ. ಇದು ಬಯೋ( ಜೈವಿಕ) ಗೊಬ್ಬರ ಎಂಬುದಾಗಿಯೂ ಹೇಳುತ್ತಾರೆ. ಅಧಿಕ ಇಳುವರಿಯ ಆಶೆಯಲ್ಲಿ ಜನ ಖರೀದಿಸಿ ಬಳಸುತ್ತಾರೆ. ಇಂತಹ ಜೈವಿಕ ಗೊಬ್ಬರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಬಯೋ NPK ಗೊಬ್ಬರ ಎಂದರೆ ಜೈವಿಕವಾಗಿ ಸಾರಜನಕ , ರಂಜಕ…

Read more
ರಾಸಾಯನಿಕ + ಸಾವಯವ ಎರಡು ಬಳಸಿ ಇಳುವರಿ

ರಾಸಾಯನಿಕ + ಸಾವಯವ = ಇಳುವರಿ ಉತ್ತಮ.

ನಾನು ರಾಸಾಯನಿಕ ಬಿಟ್ಟು ಬೇರೆ ಬಳಸುವುದೇ ಇಲ್ಲ. ನಾನು ಗೊಬ್ಬರಕ್ಕಾಗಿ ಹಸು ಸಾಕುವುದೇ ಇಲ್ಲ. ಕಡಿಮೆ ಖರ್ಚಿನಲ್ಲಿ ಗೊಬ್ಬರ ಆಗುತ್ತದೆ. ನನಗೆ ಇಳುವರಿಗೆ ಯಾವ ತೊಂದರೆಯೂ ಆಗಿಲ್ಲ ಎಂಬ ತರ್ಕ ಮಾಡುವ ರೈತರು ಒಂದಲ್ಲ ಒಂದು ದಿನ ತಮ್ಮ ಈ ಮನೋಭಾವನೆಯನ್ನು ಬದಲಿಸುತ್ತಾರೆ. ಈ ರಾಸಾಯನಿಕ ಗೊಬ್ಬರಗಳು ಮಣ್ಣಿನ ಧಕ್ಕೆ ಸಹನೆ ಇರುವಷ್ಟು ಸಮಯ ಮಾತ್ರ ಪ್ರಯೋಜನಕಾರಿ. ನಂತರ ಅದು ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಮಣ್ಣಿನ ರಚನೆ ಉತ್ತಮವಾಗಿ ರಸಗೊಬ್ಬರ…

Read more

ಸಾವಯವ ಗೊಬ್ಬರ ನೀವೇ ಮಾಡುವುದು ಉತ್ತಮ.

ಸಾವಯವ ಗೊಬ್ಬರ ತಯಾರಿಸುವುದು  ನಮಗೇನೂ ಹೊಸತಲ್ಲ.  ಹತ್ತಿಪ್ಪತ್ತು ವರ್ಷದ  ಹಿಂದೆ ಇದನ್ನು ನಾವು ಕೊಂಡು ತರುತ್ತಿರಲಿಲ್ಲ. ನಮ್ಮಲ್ಲೇ ತಯಾರಿಸುತ್ತಿದ್ದೆವು. ಈಗ ನಮಗೆ ಹೊರಗಿನ ವಸ್ತು ಸುಂದರವಾಗಿ ಕಾಣುವ ಕಾರಣ ಅದಕ್ಕೆ ಮಾರು ಹೋಗುತ್ತಿದ್ದೇವೆ.  ನಮ್ಮಲೇ ಎಲ್ಲಾ ಪರಿಕರಗಳು ಇರುವಾಗ  ಯಾಕೆ ಬೇರೆ ಕಡೆಯಿಂದ ಗೊಬ್ಬರಗಳನ್ನು ತರಬೇಕು. ಯಾವ  ತಯಾರಕರಲ್ಲೂ ಮೂಲವಸ್ತುಗಳು ಅವರ  ಬಳಿ ಇಲ್ಲ. ಅವರೂ ಬೇರೆ ಕಡೆಯಿಂದ ತಂದು  ಹೊಸ ಚೀಲದಲ್ಲಿ ತುಂಬಿ ನಮಗೆ ಮಾರಾಟ ಮಾಡುವುದು. ಸಾವಯವ ಗೊಬ್ಬರ ನಾವು ಮಾಡಿದರೆ  ಚಿನ್ನ. ಕೊಂಡು…

Read more
leaf de composing on field

ತೋಟಕ್ಕೆ ಸೊಪ್ಪು ಹಾಕಿ- ಮಣ್ಣಿನ ಆರೋಗ್ಯ ಹೆಚ್ಚಿಸಿ.

ತೋಟಕ್ಕೆ, ಗದ್ದೆಗೆ  ಹಾಗೆಯೇ ಇನ್ನಿತರ ಬೆಳೆಗಳಿಗೆ ಅನಾದಿ ಕಾಲದಿಂದಲೂ  ರೈತರು ಸೊಪ್ಪು ಹಾಕುತ್ತಿದ್ದರು. ಸೊಪ್ಪು ಹಾಕುವುದರಿಂದ ತುಂಬಾ ಪ್ರಯೋಜನ ಇದೆ. ಇದು ಉತ್ತಮ ಬೇಸಾಯ ಕ್ರಮ.ಮಣ್ಣಿನ ಸೂಕ್ಷ್ಮಾಣು ಜೀವಿಗಳ ಉತ್ತಮ ಕಾರ್ಯಚಟುವಟಿಕೆಗೆ ನೆರವಾಗಲು ಹಸುರೆಲೆ ಗೊಬ್ಬರ ಸಹಾಯಕ. ಸೊಪ್ಪು ಎಂದರೆ ಹಸುರೆಲೆ ಗೊಬ್ಬರ. ಹಸುರೆಲೆಗಳಲ್ಲಿ ಮುಖ್ಯ ಹಾಗೂ ಲಘು ಪೋಷಕಾಂಶಗಳು ಇರುವ ಕಾರಣ ಇದು ಕರಗಿ ಮಣ್ಣಿಗೆ ಸೇರಿ ಪೋಶಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹಸಿ ಸೊಪ್ಪನ್ನು ಹಾಕುತ್ತಾರೆ. ಅದು ಮಳೆಗಾಲ ಕಳೆಯುವಾಗ ಕರಗಿ ಗೊಬ್ಬರವಾಗುತ್ತದೆ….

Read more

ಸಾವಯವ ಸಾರಜನಕ ಗೊಬ್ಬರಗಳ ಮೂಲ ಇವು.

ಸಾರಜನಕ ಎಂಬುದು ರಾಸಾಯನಿಕ ರೂಪದಲ್ಲಿರುವ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದ ಮೂಲಗಳಲ್ಲೇ ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ. ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ ಬೇರೆ ಕಾರಣಗಳಿಂದ ನಷ್ಟವಾಗುತ್ತದೆ. ಇದನ್ನು ಪೂರ್ಣ ಉಳಿಸಲು ಅಸಾಧ್ಯ. ಪ್ರಯತ್ನ ಪಟ್ಟರೆ ಗರಿಷ್ಟ…

Read more

ಅಧಿಕ ಇಳುವರಿಗೆ ಸಹಾಯಕವಾಗುವ ಸಾವಯವ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆಯಿಂದ ಮಾತ್ರ ಧೀರ್ಘಕಾಲಿಕ ಫಲಿತಾಂಶ ಪಡೆಯಲು ಸಾಧ್ಯ. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ. ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು. ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ. ಮಣ್ಣು…

Read more
error: Content is protected !!