ಗ್ಲೆರಿಸೀಡಿಯಾ ಆಧಾರದಲ್ಲಿ ಕರಿಮೆಣಸಿನ ಬಳ್ಳಿ ಬೆಳೆಸಬಹುದು.
ಗ್ಲೆರಿಸೀಡಿಯಾ ಗೆಲ್ಲು ನೆಟ್ಟು ಕರಿಮೆಣಸಿನ ಬಳ್ಳಿಯನ್ನು ಬಿಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಇದರಿಂದ ಕೊಯಿಲು ಮಾಡಲು ಕಷ್ಟವಿಲ್ಲ. ಹಿಂದೆ ನಮ್ಮಲ್ಲಿ ಹಾಲುವಾಣ ಮರಗಳಿಗೆ ಮೆಣಸಿನ ಬಳ್ಳಿ ಹಬ್ಬಿಸುತ್ತಿದ್ದರು. ಕ್ರಮೇಣ ಅಡಿಕೆ, ತೆಂಗಿನ ಮರ ಹಾಗೆಯೇ ಇನ್ನಿತರ ಕಾಡು ಮರಮಟ್ಟುಗಳಿಗೆ ಬಳ್ಳಿ ಹಬ್ಬಿಸುವುದು ಪ್ರಾರಂಭವಾಯಿತು. ಈ ಮರಮಟ್ಟುಗಳಲ್ಲಿ ಬಳ್ಳಿ ಉತ್ತಮವಾಗಿ ಹಬ್ಬುತ್ತದೆಯಾದರೂ ಕೊಯಿಲು ಕೆಲಸ ಕಷ್ಟವಾಗಲಾರಂಭಿಸಿದೆ. ಅದಕ್ಕೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಬೇರೆ ಬೇರೆ ಪ್ರಯೋಗಗಳು ನಡೆಯುತ್ತಿವೆ. ಅವುಗಳಲ್ಲಿ ಒಂದು ಗ್ಲೆರಿಸೀಡಿಯಾ ಸಸ್ಯ. ಈ ಸಸ್ಯಕ್ಕೆ ಕರಿಮೆಣಸಿನ ಬಳ್ಳಿ ಹಬ್ಬಿಸುವುದರಿಂದ…