ಅಡಿಕೆ ಆಮದು – ಮಾರುಕಟ್ಟೆ ಕುಸಿಯುವ ಸಾಧ್ಯತೆ ಇಲ್ಲ.  

ಆಮದು ಆಡಿಕೆಯಿಂದ ಮಾರುಕಟ್ಟೆ ಕುಸಿಯುದು.

ಅಡಿಕೆ ಮಾರುಕಟ್ಟೆಯಲ್ಲಿ ಆತಂಕ ಉಂಟುಮಾಡಿದ್ದ ಆಮದು ಹವಾ ಸ್ವಲ್ಪ ತಣ್ಣಗಾದಂತೆ ಕಾಣಿಸುತ್ತದೆ. ಆಮದು ಆಗಿ ಒಮ್ಮೆಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಗಲಿಬಿಲಿ ಉಂಟಾದರೂ ಅದು ಕೆಲವೇ ದಿನದಲ್ಲಿ ಸ್ವಲ್ಪ ಚೇತರಿಕೆ ಅಗಿದೆ. ಆಮದು ಆದರೆ ಸ್ಥಳೀಯ ಮಾರುಕಟ್ಟೆ ಕುಸಿಯುವುದು ಸಾಧ್ಯವಿಲ್ಲ.ಎನ್ನುತ್ತದೆ ಲೆಕ್ಕಾಚಾರಗಳು. ಬಹುಶಃ ಇದು ಮಾರುಕಟ್ಟೆ  ತಲ್ಲಣಕ್ಕಾಗಿ ಮಾಡಿದ ಸುದ್ದಿಯೋ ಎಂಬ ಅನುಮಾನ ಉಂಟಾಗುತ್ತದೆ. ಏನೇ ಆಗಲಿ ಅಡಿಕೆಗೆ ದರ ಹೆಚ್ಚಳವಾಗುವುದಕ್ಕಿಂತ ಪ್ರಾಮುಖ್ಯ ದರ ಸ್ಥಿರವಾಗಿ ಉಳಿಯಬೇಕು ಎನ್ನುವುದು ಬೆಳೆಗಾರರ ಆಶಯ.ಈ ಮಧ್ಯೆ ಉತ್ತರ ಭಾರತದಲ್ಲಿ ಅಡಿಕೆಯ ಕೊರತೆ ಇದೆ. ಹಾಗಾಗಿ ದರ ಕುಸಿಯಲಾರದು ಎಂಬುದಾಗಿ ಸಹಕಾರಿ ಮಾರುಕಟ್ಟೆ ವ್ಯವಸ್ಥೆಗಳಿಂದ ಹೇಳಿಕೆಗಳು ಕೇಳಿ ಬರುತ್ತಿವೆ.

ಅಂಖ್ಯೆ ಸಂಖ್ಯೆಗಳ ಮೂಲಗಳ ಪ್ರಕಾರ ಜಗತ್ತಿನಲ್ಲಿ ಭಾರತವೇ ಅತ್ಯಧಿಕ ಪ್ರಮಾಣದಲ್ಲಿ ಅಡಿಕೆ ಬೆಳೆಯುವ ದೇಶ. ಜಗತ್ತಿನ ಒಟ್ಟು ಉತ್ಪಾದನೆಯ 50% ಭಾರತದಲ್ಲೂ  ಉಳಿದ 50% ಬೇರೆ ದೇಶಗಳಲ್ಲೂ ಬೆಳೆಯಲ್ಪಡುತ್ತಿದೆ. ಇದರಲ್ಲಿ   ದೈತ್ಯ ಪಾಲು ಇಂಡೋನೇಶಿಯಾ 15.1 % ಮತ್ತು ಬಾಂಗ್ಲಾ ದೇಶದ್ದು 18.2%. ಬೇರೆ ದೇಶಗಳಾದ ಚೀನಾ, ಮಯನ್ಮಾರ್, ಥೈಲಾಂಡ್, ಶ್ರೀಲಂಕಾ ಮುಂತಾದ ಕಡೆ ಅತ್ಯಲ್ಪ ಪ್ರಮಾಣದಲ್ಲಿ ಬೆಳೆಯಲ್ಪಡುತ್ತದೆ. ಭಾರತವಲ್ಲದೆ ಜಗತ್ತಿನ ರಾಷ್ಟ್ರಗಳಾದ ಪಾಕಿಸ್ತಾನ,  ಶ್ರೀಲಂಕಾ, ಥೈವಾನ್, ಥೈಲಾಂಡ್ , ಕಂಬೋಡಿಯಾ,ಅಮೇರಿಕಾ, ಯುಕೆ, ಕೀನ್ಯಾ (11%), ಆಸ್ಟ್ರೇಲಿಯಾ,ಮಾಲ್ಡೀವ್ಸ್, ನೆದರ್ ಲ್ಯಾಂಡ್, ನೇಪಾಲ (38% ಅತ್ಯಧಿಕ)  ಹಾಗೂ ಕೆಲವು ಅರಬ್ ರಾಷ್ಷ್ಟ್ರಗಳಲ್ಲಿಯೂ  ಅಡಿಕೆ ಬಳಕೆ ಇದೆ. ಕೆಲವು ರಾಷ್ಟ್ರಗಳಲ್ಲಿ ಇದನ್ನು ಹಸಿಯಾಗಿಯೂ (ಎಳೆ ಕಾಯಿ) ಬಳಕೆ ಮಾಡುತ್ತಾರೆ. ಬಹುತೇಕ ಬೆಳೆ ಬೆಳೆಯುವ ದೇಶಗಳಲ್ಲಿ ಅದರ ಬಳಕೆಯೂ ಇದೆ. ಈ ರಾಷ್ಟಗಳಿಗೆ ಭಾರತವೂ ರಪ್ಥು ಮಾಡುತ್ತದೆ. ಹಾಗಾಗಿ  ಭಾರತ ಹೊರತಾಗಿ ಉಳಿದ ಬೆಳೆ ಬೆಳೆಸುವ ರಾಷ್ಟ್ರಗಳಲ್ಲಿ ರಪ್ತು ಮಾಡಲು ಸಿಗುವ ಅಡಿಕೆಯ ಪ್ರಮಾಣ ತುಂಬಾ ಕಡಿಮೆ ಇದೆ. ಕೆಲವು ಅಡಿಕೆ ಬೆಳೆಯದ ದೇಶಗಳೂ ಸಹ  ಆಮದು ಮಾಡಿಕೊಳ್ಳುವ ಕಾರಣ ಭಾರತದಂತಹ ದೇಶಕ್ಕೆ ಆಮದು ಮಾಡಿಕೊಳ್ಳಲು ಸಿಗುವ ಅಡಿಕೆಯ ಪ್ರಮಾಣ ಕಡಿಮೆ.

ಎಲ್ಲೆಲ್ಲಿ ಎಷ್ಟು ಅಡಿಕೆ ಬಳಕೆ ಇದೆ:

  • ಪಾಕಿಸ್ಥಾನವೂ ಅಡಿಕೆ ಬಳಕೆ ಮಾಡುವ ರಾಷ್ಟ್ರ ಇಲ್ಲಿ ಬೆಳೆ ಇರುವ ಉಲ್ಲೇಖ ಇಲ್ಲ.
  • ಇಲ್ಲಿಗೆ ಕಚ್ಚಾ ಅಡಿಕೆ ,ಮತ್ತು ಪಾನ್ ಮಸಾಲಾಗಳು ರಪ್ತು ಆಗುತ್ತವೆ.
  • ಇಲ್ಲಿನ 60% ಜನ ಪಾನ್ ತಿನ್ನುತ್ತಾರೆ ಎಂಬ ವರದಿ ಇದೆ.
  • ನೇಪಾಳದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಡಿಕೆ ಮತ್ತು ತಂಬಾಕು ಸೇವನೆ ಇದೆ.
  • ಇಲ್ಲಿಗೆ ಭಾರತವೇ ರಪ್ತು ಮಾಡುತ್ತದೆ.
  • ಶ್ರೀಲಂಕಾದಲ್ಲಿ 50%  ಜನ  ಪಾನ್ ತಿನ್ನುತ್ತಾರೆ. ಎಂಬ ವರದಿ ಇದೆ. 
  • ಇಲ್ಲಿ ಅಮಾದಿ ಕಾಲದಿಂದಲೂ ಅಡಿಕೆ ಮತ್ತು ಸುಣ್ಣ ತಂಬಾಕು ಸೇರಿಸಿ ತಿನ್ನುವ ಹವ್ಯಾಸ ಜನರಲ್ಲಿ ಇತ್ತು.
  • ಥೈಲಾಂಡ್ ನಲ್ಲಿ 44% ಗಂಡಸರು ಮತ್ತು 46% ಹೆಂಗಸರು ಪಾನ್ ತಿನ್ನುವ ಹವ್ಯಾಸ ಹೊಂದಿದ್ದಾರೆ ಎಂಬ ವರದಿ ಇದೆ.
  • ವೀಳ್ಯದೆಲೆ, ಸುಣ್ಣ ಮತ್ತು ಕತ್ತರಿಸಿದ ತಂಬಾಕು ಮಿಶ್ರಣ ಮಾಡಿ ತಿನ್ನುತ್ತಾರೆ.
  • ಅಲ್ಲದೆ ಹುಳಿ ಬರಿಸಿಯೂ ತಿನ್ನುವುದಿದೆ. ಗುಡ್ದ ಗಾಡು ಪ್ರದೇಶದ ಜನ ಅತಿಯಾಗಿ ಪಾನ್ ಬಳಕೆ ಮಾಡುತ್ತಾರೆ.
  • Guam ದೇಶದಲ್ಲೂ ಬಳಕೆ ಮಾಡುತ್ತಾರೆ. ಆದರೆ ಅದು ತಂಬಾಕು ಸೇರಿಸಿ ಅಲ್ಲ.
  • ತಾಜಾ ಅಡಿಕೆಯನ್ನು ವೀಳ್ಯದೆಲೆಯ ಜೊತೆಗೆ ತಿನ್ನುತ್ತಾರೆ.
  • ಪುರಾತನ ಕಾಲದಿದಲೂ ಇಲ್ಲಿ ಇದೇ ರೀತಿಯಾಗಿ ಬಳಕೆ ಇತ್ತು. ಈಗಲೂ ಹಾಗೆಯೇ ಇದೆ.
  • ಥೈವಾನ್ ದೇಶದಲ್ಲಿ ಅಡಿಕೆಯನ್ನು ಹಸಿಯಾಗಿ ( ಬೆಳೆಯದ ಎಳೆ ಹಸಿ ಕಾಯಿ) ಬಳಕೆ ಮಾಡುತ್ತಾರೆ.
  • ಅನಾದಿ ಕಾಲದಿಂದಲೂ ಇಲ್ಲಿಯ ಜನ ಅಡಿಕೆ ತಿನ್ನುವ ಹವ್ಯಾಸ ಹೊಂದಿದವರು.
  • ಸುಮಾರು 42% ಜನ ಅಡಿಕೆ ತಿನ್ನುವ ಹವ್ಯಾಸ ಹೊಂದಿದ್ದಾರೆ. ಪ್ರಾಯದವರು, ಮಧ್ಯಪಾನ ಮಾಡುವವರು, ಕೂಲಿ ಕೆಲಸ ಮಾಡುವವರು,
  • ಒಬ್ಬ ವ್ಯಕ್ತಿ ತಲಾ 44 ಅಡಿಕೆಯನ್ನು ತಿನ್ನುತ್ತಾರೆ ಎಂಬ ವರದಿ ಇದೆ.
  • ಮಲೇಶಿಯಾದಲ್ಲಿ  ಅಡಿಕೆ ಬೆಳೆಯುತ್ತಾರೆ ಹಾಗೆಯೇ ಬಳಕೆಯನ್ನೂ ಮಾಡುತ್ತಾರೆ.
  • 22% ಗಂಡಸರು ಮತ್ತು -47% ಹೆಂಗಸರು ತಿನ್ನುತ್ತಾರೆ.
  • ಆದರೆ ಇಲ್ಲಿ ತಂಬಾಕು ಸೇರಿಸುವ ಹವ್ಯಾಸ ಇಲ್ಲ. ಯುವ ಜನತೆ ಹೆಚ್ಚಾಗಿ ತಿನ್ನುತ್ತಾರೆ.
  • ಕಂಬೋಡಿಯಾದಲ್ಲಿ  ಕೆಲವು ನಿರ್ದಿಷ್ಟ ಪ್ರದೇಶದ ಜನ ಮಾತ್ರ ಅಡಿಕೆ ತಿನ್ನುತ್ತಾರೆ. 
  • ಇಲ್ಲಿನ ಹೆಂಗಸರು ಹೆಚ್ಚಾಗಿ ತಿನ್ನುತ್ತಾರೆ.
  • ಚೀನಾದಲ್ಲಿ ಅಡಿಕೆ ತಿನ್ನುವ ಅಭ್ಯಾಸ ಜೋರಾಗಿ ಇದೆ.
  • ಆದರೆ ಇಲ್ಲಿ ತಂಬಾಕು ಜೊತೆ ತಿನ್ನುವುದಿಲ್ಲ.
  • ಕಹಿಯಾದ ಯಾವುದಾದರೂ ವಸ್ತು ಅಥವಾ ಖಾರದ ಕರಿಮೆಣಸಿನ ಜೊತೆಗೆ ತಿನ್ನುತ್ತಾರೆ.
  • ಚೀನಾದ ಒಟ್ಟಾರೆ ಜನಸಂಖ್ಯೆಯ 35% ಜನ ಅಡಿಕೆ ತಿನ್ನುವ ಹವ್ಯಾಸ ಹೊಂದಿದ್ದಾರೆ ಎಂಬುದಾಗಿ the research gate  ವರದಿ ಮಾಡುತ್ತದೆ.
 ಆಮದು ಆದರೂ ಕೆಂಪಡಿಕೆ ದರ ಕುಸಿಯದು

ಆಮದಿನಿಂದ ಮಾರುಕಟ್ಟೆ ಕುಸಿಯುವ ಸಾದ್ಯತೆ ಕಡಿಮೆ:

  • ಭಾರತ ಹೊರತಾಗಿ ಉಳಿದ ಅಡಿಕೆ ಬೆಳೆಯುವ ದೇಶಗಳಲ್ಲಿ ಇರುವ ಉತ್ಪಾದನೆಯ ಹೆಚ್ಚಿನ ಭಾಗ ಅಲ್ಲಿಯೇ ಬಳಕೆಯಾಗುತ್ತದೆ.
  • ಹಾಗಾಗಿ ಭಾರೀ ಪ್ರಮಾಣದಲ್ಲಿ ರಪ್ತು ಮಾಡಲು ಉಳಿಯುವುದಿಲ್ಲ.
  • ಬಾರತದಂತಹ ದೇಶಕ್ಕೆ ಹೆಚ್ಚೆಂದರೆ 5-10% ಮಾತ್ರ ಆಮದು ಆಗಬಹುದು.
  • ಇದರಿಂದ ಮಾರುಕಟ್ಟೆಯಲ್ಲಿ ಅಂತಹ ದರ ಕುಸಿಯುವ ಭಯ ಇಲ್ಲವೇ ಇಲ್ಲ.
  • ಈಗ ಆಗಿರುವ ಆಮದು ನಮ್ಮ ದೇಶದ ಉತ್ಪಾದನೆಗೆ ಹೋಲಿಸಿದರೆ ಏನೇನೂ ಅಲ್ಲ. 
  • ಹಾಗಾಗಿ ಒಮ್ಮೆಗೆ ಮಾರುಕಟ್ಟೆ ಬರೇ ಸೆಂಟಿಮೆಂಟ್  ಅಧಾರದಲ್ಲಿ ಕುಸಿದಿದೆಯೇ ಹೊರತು ಇದು ಆಮದು ಆಗಿ ಇಲ್ಲಿ ಬೇಡಿಕೆ ಇಲ್ಲದೆ ಅದದ್ದು ಅಲ್ಲ.
  • ಅಮದು ಆದ ತಕ್ಷಣ ಅದನ್ನು ಸುದ್ದಿಮಾಡಲು ವ್ಯವಸ್ಥಿತ ಜಾಲವೇ ಇರುತ್ತದೆ.
  • ಇದು ಅಡಿಕೆಗೆ ಮಾತ್ರವಲ್ಲ ಎಲ್ಲಾ ಉತ್ಪನ್ನಕ್ಕೂ ಇದೇ ವ್ಯಾಪಾರಿ ತಂತ್ರವನ್ನು ಅನುಸರಿಸಿ ಆ ಸಮಯದಲ್ಲಿ ಸ್ವಲ್ಪ ದರ ಕುಸಿಯುವಂತೆ ಮಾಡುವುದು ಇದೆ. ಹಾಗೆಯೇ ಈಗ ಆಗಿದೆ.

ವಿದೇಶಗಳಲ್ಲಿ ಅಡಿಕೆ ಸಂಸ್ಕರಣೆಯೇ ಭಿನ್ನ:

  • ಅಡಿಕೆ ಬೆಳೆಯಲಾಗುವ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಅದನ್ನು ಸಂಸ್ಕರಿಸುವ ಕ್ರಮ ಬೇರೆ ಬೇರೆಯಾಗಿರುತ್ತದೆ.
  • ಬರ್ಮಾ ದಲ್ಲಿ ಮಾತ್ರ ಭಾರತದ ಜನ ಸಂಸ್ಕರಣೆ ಮಾಡಿದಂತೆ ಮಾಡುತ್ತಾರೆ.
  • ಕೆಲವು ಕಡೆ ಎಳೆ ಅಡಿಕೆಯನ್ನೇ ಸುಲಿದು ಅದನ್ನು ಬೇಯಿಸಿ ಒಣಗಿಸುತ್ತಾರೆ.
  • ಕೆಲವು ಕಡೆ ಅದನ್ನು ತೀರಾ ಎಳೆಯದಾಗಿರುವಾಗ ಕೊಯಿದು ಸಂಸ್ಕ್ರರಿಸುತ್ತಾರೆ.
  • ಬಿಸಿಲಿನಲ್ಲಿ ಒಣಗಿಸಿ ಚಾಲಿ ಮಾಡುವ  ಕ್ರಮ ಹೆಚ್ಚಿನ ಕಡೆ ಇಲ್ಲ.
  • ಇದನ್ನು ಇತ್ತೀಚೆಗೆ ನಮ್ಮ ದೇಶದವರೇ ಅಲ್ಲಿ ಹೋಗಿ ಮಾಡಲು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ಇದೆ.
  • ಇದನ್ನು ಕೆಲವು ವರ್ಷಗಳ ಹಿಂದೆ ಮಂಗಳೂರಿನ ಒಂದು ನಿಯೋಗ ಹೋಗಿ ಅಧ್ಯಯನ ನಡೆಸಿದೆ.
  • ಅಡಿಕೆ  ಆಮದು ಆಗಿ ಬರುವ ಬಹುತೇಕ ಅಡಿಕೆ ಬಿಸಿಲಿನಲ್ಲಿ ಒಣಗಿಸಿದ ಚಾಲಿ ಅಡಿಕೆ ಆಗಿರುತ್ತದೆ.
  • ಇದರ ಗುಣಮಟ್ಟ  ಒಳ್ಳೆಯದಿಲ್ಲ, ಹಾಗೆ ಇದೆ. ಹೀಗೆ ಇದೆ ಎಂಬುದೆಲ್ಲಾ  ನಂಬುವಂತಹ ಮಾಹಿತಿ ಆಲ್ಲ.
  • ಉತ್ತಮ ಅಡಿಕೆಯೂ ಇರುತ್ತದೆ. ಕಳಪೆಯೂ ಇರುತ್ತದೆ.
  • ಇಲ್ಲಿನ ಖರೀದಿದಾರರು ಕೊಡುವ ಬೆಲೆಗನುಗುಣವಾಗಿ  ಅದರ ಗುಣಮಟ್ಟ ಇರುತ್ತದೆ.

ಅಡಿಕೆ ಆಮದಿನ ಪರಿಣಾಮ ದರ ಕುಸಿಯುವುದಿಲ್ಲ:

  • ಈಗ ಆಗಿರುವ  ಅಮದಿನ ಪ್ರಮಾಣ ಕಡಿಮೆ. ಇನ್ನು ಆಮದು ಆಗುವುದು ಕಷ್ಟ ಇದೆ.
  • ಈಗಾಗಲೇ ಕೇಂದ್ರ  ಸರಕಾರಕ್ಕೆ ಅಡಿಕೆ ಆಮದು ತಡೆಯಬೇಕು.
  • ನಮ್ಮ ದೇಶದ ಅಡಿಕೆ ಬೆಳೆಗಾರರ  ರಕ್ಷಣೆ ಮಾಡಬೇಕು ಎಂಬ ಮನವಿ ಸಲ್ಲಿಕೆಯಾಗಿದೆ.
  • ಇದನ್ನು ಕೇಂದ್ರ ಸರಕಾರ  ತಳ್ಳಿ ಹಾಕುವ ಸಾಧ್ಯತೆ ಇಲ್ಲ.
  • ಹಾಗಾಗಿ ದರ ಈಗ ಸ್ವಲ್ಪ ಕುಸಿದರೂ ಮುಂದೆ ಕುಸಿಯಲಾರದು.
  • ನಮ್ಮ ದೇಶದಲ್ಲಿ ಅಡಿಕೆ ಬಳಕೆ ಸಾಕಷ್ಟು ಇದೆ. ಹಾಗೆಯೇ 48 ದೇಶಗಳಿಗೆ ಒಟ್ಟು 2600  ಟನ್ ಗೂ ಹೆಚ್ಚು ರಪ್ತು ಮಾಡುತ್ತದೆ.
  • ಈ ಬೇಡಿಕೆಯನ್ನು  ದೇಶೀಯ ಉತ್ಪಾದನೆಯಲ್ಲಿ ಪೂರೈಸಲು ಸಾಧ್ಯವಾಗದ ಕಾರಣ ಆಮದು ಮಾಡಿಕೊಳ್ಳಲಾಗುತ್ತದೆ.

ಅಡಿಕೆ ಬೆಳೆಗಾರರು ಮೊನ್ನೆ ದರ ಸ್ವಲ್ಪ ಕುಸಿತವಾದಾಗ ಹೇಗೆ ದೃತಿಗೆಡದೆ ಮಾರುಕಟ್ಟೆಗೆ ಬಿಡಲಿಲ್ಲವೋ ಆ ತಂತ್ರವನ್ನು ಪಾಲಿಸಿದರೆ ದರ ಕುಸಿಯಲಾರದು. ಮುಂದಿನ ವರ್ಷದ ಬೆಳೆ ಸುಮಾರಾಗಿ 15% ದಷ್ಟು ಕಡಿಮೆ ಇದೆ ಎಂಬ ಸುದ್ದಿ ಇದೆ. ಇದು ಇನ್ನೂ ಹೆಚ್ಚಳವಾಗಬಹುದು. ಮಿಡಿ ಉದುರುವ ಸಮಸ್ಯೆ ಹೆಚ್ಚಾಗಿ ಮರಗಳಲ್ಲಿ ಅಡಿಕೆ ಖಾಲಿಯಾಗುತ್ತಿದೆ. ಈ ಸಮಸ್ಯೆಗೆ ನೈಜ ಕಾರಣ, ಸಮರ್ಪಕ ಕೀಟನಾಶಕ ಶಿಫಾರಸು ಇಲ್ಲದ ಕಾರಣ ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಹೆಚ್ಚುತ್ತಿದೆ. ಅಡಿಕೆ ಬೆಳೆ ಪ್ರದೇಶ ಹೆಚ್ಚಾದರೂ ಉತ್ಪಾದನೆ ಅದಕ್ಕನುಗುಣವಾಗಿ ಹೆಚ್ಚುವ ಸಾಧ್ಯತೆ ಇಲ್ಲ.  ಹಾಗಾಗಿ ಬೆಳೆಗಾರರು ದರ ನೆಲಕಚ್ಚಬಹುದು ಎಂದು ಗಾಬರಿ ಪಡಬೇಕಾಗಿಲ್ಲ.

Leave a Reply

Your email address will not be published. Required fields are marked *

error: Content is protected !!