ಅಧಿಕ ಫಸಲಿಗೆ ನೆರವಾಗುವ ಹೊಸ ಹನಿ ನೀರಾವರಿ ವ್ಯವಸ್ಥೆ.

inline drip

ಇಡೀ ಹೊಲವನ್ನೇ ಅತ್ಯಂತ ಕಡಿಮೆ ಪ್ರಮಾಣದ ನೀರಿನಲ್ಲಿ ಒದ್ದೆ ಮಾಡುವ ಮಿತ ನೀರಾವರಿ ವ್ಯವಸ್ಥೆ ಎಂದರೆ ಇನ್ ಲೈನ್ ಡ್ರಿಪ್.
ನೀರಾವರಿ ಮಾಡಿದ್ದು, ಸಸ್ಯದ ಎಲ್ಲಾ ಬೇರು ವಲಯಕ್ಕೂ ದೊರೆಯುವಂತೆ ಮಾಡಲು ಇನ್ ಲೈನ್ ಡ್ರಿಪ್ ಸೂಕ್ತ. ಇದು ಇಂಚು  ಇಂಚೂ ಭೂಮಿಯನ್ನು ಒದ್ದೆ ಮಾಡುತ್ತದೆ. ಅಲ್ಲೆಲ್ಲಾ ಬೇರುಗಳು ಚಟುವಟಿಕೆಯಿಂದ ಇರುತ್ತದೆ. ಹಾಗೆಂದು ಹನಿ ನೀರವಾರಿಯಷ್ಟೇ ನೀರಿನ ಬಳಕೆ ಆಗುತ್ತದೆ. ಇಂತಹ ನೀರಾವರಿ ವ್ಯವಸ್ಥೆಯಿಂದ ಬೆಳೆಯಲ್ಲಿ ಫಸಲು ಗಣನೀಯ ಹೆಚ್ಚಳವಾಗುತ್ತದೆ.ಹನಿ ನೀರಾವರಿ ಎಂದರೆ ಅದಕ್ಕೆ ಇನ್ನೊಂದು ಹೆಸರು ಮಿತ ನೀರಾವರಿ. ಇದರಲ್ಲಿ ಹಲವಾರು ವ್ಯವಸ್ಥೆಗಳಿದ್ದು, ಅದರಂತೆ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಒಂದು ಇನ್ ಲೈನ್ ಡ್ರಿಪ್.

In line drip in sugarcane

  • ಇನ್ ಲೈನ್ ಡ್ರಿಪ್ ನ ಅನುಕೂಲತೆಗಳನ್ನು ಸರಿಯಾಗಿ ಗಮನಿಸಿದವರಿದ್ದರೆ ಅದು ತರಕಾರಿ ಬೆಳೆಯುವ ರೈತರು ಎನ್ನಬಹುದು.
  • ತರಕಾರಿ ಬೇಸಾಯ ತುಂಬಾ ಸರಳೀಕರಣ ಆಗಲು ಈ ಇನ್ ಲಿನ್ ಡ್ರಿಪ್ ಪೈಪ್  ಬಹು ದೊಡ್ಡ ಕೊಡುಗೆಯನ್ನೇ ನೀಡಿದೆ.

ಸಾಮಾನ್ಯ ಡ್ರಿಪ್ಪರುಗಳು:

  • ಸಾಮಾನ್ಯವಾಗಿ ಡ್ರಿಪ್ ಎಂದರೆ ಎಲ್ ಎಲ್ ಡಿಪಿ ಪೈಪಿಗೆ ಹೊರಗಡೆಯಿಂದ ನೀರು ತೊಟಿಕ್ಕುವ ಸಾಧನಗಳನ್ನು  ಬೇಕಾದಲ್ಲಿಗೆ ತೂತು ಮಾಡಿ ಚುಚ್ಚುವುದು.
  • ಇದನ್ನು ಓನ್ ಲೈನ್ ಡ್ರಿಪ್ ಎಂಬುದಾಗಿ ಕರೆಯುತ್ತಾರೆ.
  • ಹೆಚ್ಚಾಗಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ದ್ರಾಕ್ಷಿ, ದಾಳಿಂಬೆ ಪೇರಳೆ ಮುಂತಾದ ಬೆಳೆಗಳಿಗೆ ಅಳವಡಿಕೆ ಮಾಡಲಾಗುತ್ತದೆ.
  • ಗಂಟೆಗೆ ಇಂತಿಷ್ಟು ಪ್ರಮಾಣದ ನೀರು ಹೊರ ಚೆಲ್ಲುವಂತೆ ತಯಾರಿಕೆ ಇರುತ್ತದೆ.
  • ಇದರಲ್ಲಿ ಸಮತಟ್ಟಾದ ಜಾಗಕ್ಕೆ ಅಳವಡಿಕೆ ಮಾಡಲು ಸಾಮಾನ್ಯ ಡ್ರಿಪ್ಪರನ್ನೂ  ಏರು ತಗ್ಗು ಸ್ಥಳಗಳಿಗೆ ಅಳವಡಿಕೆ ಮಾಡಲು ಒತ್ತಡ ತಾಳಿಕೊಳ್ಳುವ ಗುಣದ ಡ್ರಿಪ್ಪರ್ ಗಳು ಇವೆ.
  • ಒತ್ತಡ ತಾಳಿಕೊಳ್ಳುವ ಡ್ರಿಪರುಗಳು ನೀರು ಹೊರ ಚೆಲ್ಲುವ ಭಾಗದಲ್ಲಿ  ಊದಿದರೆ ಗಾಳಿ ಮುಂದಕ್ಕೆ ಹೋಗಲಾರದು.
  • ಈ ಡ್ರಿಪ್ಪರುಗಳಲ್ಲಿ ಹೊರ ಚೆಲ್ಲುವ ನೀರು ಗರಿಷ್ಟ 2 ಚದರ ಅಡಿಯ ಮಣ್ಣನ್ನು ಒದ್ದೆ ಮಾಡುತ್ತದೆ.
  • ಮರಳು ಮಣ್ಣಿನಲ್ಲಿ ನೀರು ಹೆಚ್ಚಾದರೆ ಅದು ತಳಕ್ಕೆ ಇಳಿಯುತ್ತದೆ.
  • ಉತ್ತಮ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಉಳ್ಳ ಮಣ್ಣಿನಲ್ಲಿ ನೀರು ಹೆಚ್ಚಿನ ಜಾಗಕ್ಕೆ ಪ್ರಸಾರವಾಗುತ್ತದೆ.

in line drip

ಇನ್ ಲೈನ್ ಡ್ರಿಪ್ ಗಳು:

  • ಆನ್ ಲೈನ್ ಡ್ರಿಪ್ ವ್ಯವಸ್ಥೆಯಲ್ಲಿ ಇರುವ ತೊಡಕುಗಳನ್ನು ನಿವಾರಿಸುವ ಸಲುವಾಗಿ ತಯಾರಿಸಲಾದ ಡ್ರಿಪ್ಪರಿಗಳೇ ಇನ್ ಲೈನ್ ಡ್ರಿಪ್ ಗಳು.
  • ಇವುಗಳಲ್ಲಿ ಎಲ್ಲಿ ನೀರು ತೊಟ್ಟಿಕ್ಕುವ ಸಾಧನ ಇದೆ ಎಂದೇ ತಿಳಿಯುವುದಿಲ್ಲ.
  • ಅದು  ಪೈಪಿನ ಒಳ ಭಾಗದಲ್ಲಿ ಸೇರಿಸಿರಲಾಗುತ್ತದೆ.
  • ಅಲ್ಲಿಂದ ನೀರು ಹೊರ ಬರಲು ಪೈಪಿನ ಹೊರ ಗೋಡೆಯಲ್ಲಿ ಒಂದು ತೂತು ಮಾತ್ರ ಕಾಣಿಸುತ್ತದೆ.
  • ಪೈಪಿನ ಮೂಲಕ ನೀರು ಹರಿದಾಗ ನಿರ್ದಿಷ್ಟ ಒತ್ತಡ ಸೃಷ್ಟಿಯಾದಾಗ ಆ ತೂತಿನ ಮೂಲಕ ನೀರು ಹೊರಗೆ ತೊಟ್ಟಿಕ್ಕುತ್ತದೆ.
  • ಒಳಗೆ ಅಳವಡಿಸಲಾದ ನೀರು ಹೊರ ಚೆಲ್ಲುವ ಡ್ರಿಪ್ಪರಿನಲ್ಲೂ ಸೋಸ್ ವ್ಯವಸ್ಥೆ ಇರುತ್ತದೆ.

In line drip

  • ಇನ್ ಲೈನ್ ಡ್ರಿಪ್ ನಲ್ಲಿ ಸಾಮಾನ್ಯವಾಗಿ 1 ಅಡಿಗೊಂದರಂತೆ ಡ್ರಿಪ್ಪರನ್ನು ಅಳವಡಿಸಿರುತ್ತಾರೆ.
  • ಬೇಡಿಕೆಯ ಮೇಲೆ ಬೇರೆ  ಬೇರೆ ಅಳತೆಯಲ್ಲೂ  ಅಳವಡಿಸಿಕೊಡುತ್ತಾರೆ.
  • ಇದರಲ್ಲೂ ಸಾಮಾನ್ಯ ಅಂದರೆ ಸಮತಟ್ಟು ಜಾಗಕ್ಕೆ ಮತ್ತು ಏರು ತಗ್ಗಿನ ಜಾಗಕ್ಕೆ ಆಗುವಂತೆ ಪ್ರೆಷರ್ ರೆಗ್ಯುಲೇಟೆಡ್ ಡ್ರಿಪ್ಪರು ಲಭ್ಯವಿರುತ್ತದೆ.
  • ನೀರು ಹೊರ ಹರಿವಿನ ಪ್ರಮಾಣವೂ ಸಹ ಬೇರೆ ಬೇರೆ ಇರುತ್ತದೆ.
  • ಸಾಧಾರಣವಾಗಿ ಗಂಟೆಗೆ ನಾಲ್ಕು ಲೀ. ಹೊರ ಚೆಲ್ಲುವ ಸಾಮರ್ಥ್ಯದ  ಡ್ರಿಪ್ಪರನ್ನು ಹಾಕಿರುತ್ತಾರೆ.

ಅನುಕೂಲಗಳು:

wetting of soil by in line drip

  • ಈ ಪೈಪನ್ನು ಎತ್ತಿ ಸುತ್ತಿ ಇಡಬೇಕಾದರೆ ಯಾವ ಕಷ್ಟವೂ ಇಲ್ಲ.
  • ಒಂದು ಬದಿ ಎಳೆದರೆ ಡ್ರಿಪ್ಪರು ಸಿಕ್ಕಿಕೊಂಡು ಕಳಚಿ ಬೀಳುವ ಪ್ರಮೇಯ ಇಲ್ಲ.
  • ಅಡಿಗೊಂದರಂತೆ ಡ್ರಿಪ್ಪರು ಇರುವ ಕಾರಣ ಪ್ರತೀ ಡ್ರಿಪ್ಪರಿನಲ್ಲಿ ತೊಟ್ಟಿಕ್ಕುವ ನೀರು ಪರಸ್ಪರ ಓವರ್ ಲ್ಯಾಪಿಂಗ್ ಆಗಿ ಎಲ್ಲಾ ಕಡೆಗೂ ನೀರು ಬೀಳುತ್ತದೆ.
  • ಸಾಮಾನ್ಯ ಡ್ರಿಪ್ಪರುಗಳಲ್ಲಿ ಬೀಳುವ ನೀರಿಗಿಂತ ಕಡಿಮೆ ನೀರು ಬಿದ್ದರೂ ಸಹ ನೆಲದ ಬೇರು ವಲಯ ತೇವಭರಿತವಾಗುತ್ತದೆ.
  • ಬೇರು ಇರುವ ಕಡೆಗಳಲ್ಲೆಲ್ಲಾ ನೀರು ಬೀಳುವ ಕಾರಣ ಬೇರು ಬೆಳವಣಿಗೆ ಉತ್ತಮವಾಗುತ್ತದೆ.
  • ಪೋಷಕಾಂಶಗಳ ಹೀರುವಿಕೆ ಚೆನ್ನಾಗಿ ಆಗಿ ಇಳುವರಿ ತುಂಬಾ ಹೆಚ್ಚುತ್ತದೆ.
  • ಮಾಮೂಲು ಡ್ರಿಪ್ಪರ್ ನಲ್ಲಿ ನೀರು ಬಿದ್ದು ನೆಲ ಒದ್ದೆಯಾದುದು ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ಹೆಚ್ಚು ನೀರು ಬಿಡುತ್ತೇವೆ.
  • ಇಲ್ಲಿ ನೀರು ಬಿದ್ದ ಜಾಗ ಒದ್ದೆಯಾಗಿ ನೀರಾವರಿ ಸಾಕೆನ್ನಿಸುವಷ್ಟು ತೃಪ್ತಿ ಕೊಡುತ್ತದೆ.
  • 16 ಎಂ ಎಂ ಪೈಪನ್ನು ಸುಮಾರು 400 ಅಡಿ ತನಕವೂ ಎಳೆಯಬಹುದು.
  • ಎಲ್ಲಾ ಕಡೆಯಲ್ಲೂ ಏಕಪ್ರಕಾರ ನೀರು ಬೀಳುತ್ತದೆ.
  • ರಸಾವರಿ ಮೂಲಕ ಗೊಬ್ಬರ ಕೊಡುವಾಗ ಎಲ್ಲಾ ಕಡೆಗೂ ಏಕ ಪ್ರಕಾರವಾಗಿ ಲಭ್ಯವಾಗುವುದರಿಂದ ಬೇರಿನ ಬೆಳೆವಣಿಗೆ ಹೆಚ್ಚುತ್ತದೆ.

in side in line drip

  • ಸೂಕ್ತ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಂಡರೆ ಕಟ್ಟಿಕೊಳ್ಳುವ ಸಮಸ್ಯೆ ಇರುವುದಿಲ್ಲ.
  • ಕೆರೆ ಮತ್ತು ಬಾವಿ ನೀರಿಗೆ ಅಥವಾ ನೀರಿನಲ್ಲಿ ತೇಲುವ ಕಶ್ಮಲಗಳಿದ್ದ ಕಡೆಗೆ ಸಾಮಾನ್ಯ ಸಾಂಡ್ ಫಿಲ್ಟರ್ ಸಾಕಾಗುತ್ತದೆ.
  • ಒಂದು ಕಡೆಯಲ್ಲಿ ಬೆಳೆ ಮಾಡಿ ಮತ್ತೊದು ಕಡೆಗೆ ಬೆಳೆ ಮಾಡುವಾಗ ಇದನ್ನು ತೆಗೆದು ಅಲ್ಲಿಗೆ ವರ್ಗಾಯಿಸಬಹುದು.
  • ಇದರಲ್ಲಿ ಎರಡು ಪ್ರಕಾರಗಳಿದ್ದು, ಒಂದು ತಯಾರಿಕೆಯಲ್ಲಿ ಒಳಗೆಡೆ ರಿಂಗ್ ತರಹದ ಡ್ರಿಪ್ಪರನ್ನು ಹಾಕಿರುತ್ತಾರೆ.

In line drip inside dripper

  • ಇನ್ನೊಂದಕ್ಕೆ ಒಳಗೋಡೆಯಲ್ಲಿ ಸಣ್ಣ ಡ್ರಿಪ್ಪರ್ ಅನ್ನು ಸೇರಿಸಿರುತ್ತಾರೆ.
  • ಎರಡೂ ಕ್ಷಮತೆಯಲ್ಲಿ ಒಂದೇ ಆಗಿರುತ್ತದೆ.
  • ಗುಣಮಟ್ಟ ಹೊಂದಿ ಬಾಳ್ವಿಕೆ ಬರುತ್ತದೆ.
  • ಒಂದು ವರ್ಷದ ಉಪಯೋಗಕ್ಕೆ ತೆಳುವಾದ ಟೇಪ್ ಗಳೂ ಲಭ್ಯವಿರುತ್ತವೆ.

wetting pattern of inline drips

ಅಳವಡಿಕೆ ಹೇಗೆ:

  • ಇನ್ ಲೈನ್ ಡ್ರಿಪ್ ಅಳವಡಿಕೆ ಬಹಳ ಸುಲಭ. ಮುಖ್ಯ ಪೈಪುಗಳನ್ನು ಹರಿಸಿ , ಮಾಮೂಲು ಡ್ರಿಪ್ ಕೊಳವೆಗಳನ್ನು ಹಾಯಿಸಿದಂತೆ ಹಾಯಿಸಿದರೆ  ಸಾಕು ನಂತರ ಡ್ರಿಪ್ಪರ್ ಚುಚ್ಚುವ ಕೆಲಸ ಇಲ್ಲ.
  • ಒಂದೇ ಒಂದು ಸಮಸ್ಯೆ ಎಂದರೆ ಬ್ಲಾಕ್ ಆದರೆ ಬಿಚ್ಚಲು ಅಗುವುದಿಲ್ಲ.
  • ಎಲ್ಲಾದರೂ ಒಂದೆರಡು ಡ್ರಿಪ್  ಬ್ಲಾಕ್ ಆದರೆ  ಅಲ್ಲಿಂದ ತುಂಡು ಮಾಡಿ ಕನೆಕ್ಟರ್ ಹಾಕಿ ಮತ್ತೆ ಜೋಡಿಸಬೇಕು.
  • ಹನಿನೀರಾವರಿ ಮಾಡುವವರು ಇದನ್ನು ಮಾಡಿದರೆ ಬೇರು  ಇರುವ ಭಾಗಗಳೆಲ್ಲಾ ಒದ್ದೆಯಾಗಿರುತ್ತದೆ.
  • ಇದು ಫಸಲಿಗೆ ತುಂಬಾ ಪ್ರಯೋಜನವನ್ನು  ಕೊಡುತ್ತದೆ.
  • ಹಾಗೆಂದು ಇದಕ್ಕೂ ಮಾಮೂಲಿ ಡ್ರಿಪ್ ವ್ಯವಸ್ಥೆಗೂ ಬೆಲೆಯಲ್ಲೂ ವೆತ್ಯಾಸ ಬರುವುದಿಲ್ಲ.
  • ಎಲ್ಲಾ ಕಡೆಯ ಪೋಷಕಗಳನ್ನೂ ಎಲ್ಲಾ ಬೇರುಗಳೂ ಸ್ವೀಕರಿಸುವ ಕಾರಣ ಸಸ್ಯಕ್ಕೆ ನೀರಿನ ಕೊರತೆ ಹಾಗೂ ಪೋಷಕದ ಕೊರತೆ ಯಾವಾಗಲೂ ಆಗುವುದಿಲ್ಲ.

ಇದನ್ನು ಸಬ್ ಸರ್ಫೇಸ್ ಡ್ರಿಪ್ ಸಿಸ್ಟಂ (Sub surphase drip system)ಎಂದು ಕರೆಯುತ್ತಾರೆ. ಇದನ್ನು ಮಣ್ಣಿನ ಅಡಿಯಲ್ಲಿ ಹೂತು ಬಿಡುವುದು ಕ್ರಮ. ಆಗ ಪೈಪುಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ. ಈಗ ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿ ನೆಲದ ಮೇಲೆಯೇ ಹಾಕಲಾಗುತ್ತದೆ.ಬಹಳಷ್ಟು ಜನ ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರು ಇಂದು ಇನ್ ಲೈನ್ ಡ್ರಿಪ್ ಗೆ ಆದ್ಯತೆ ನೀಡುತ್ತಿದ್ದಾರೆ. ಇದು ನೀರುಳಿತಾಯ  ಮತ್ತು ನಿರ್ವಹಣೆ ಎಲ್ಲದಕ್ಕೂ ಸರಳವಾದ  ವ್ಯವಸ್ಥೆ

error: Content is protected !!