ರೈತರ ಸಾಲ ಮನ್ನಾ? ಸರಕಾರ ತೆಗೆದುಕೊಂಡಿದೆ ಸಣ್ಣ ನಿರ್ಧಾರ.

ರೈತರು ಸಾಲ ಸೋಲ ಮಾಡಿ ಬೆಳೆದ ಅನನಾಸು ಮಾರಾಟಕ್ಕೆ ಕಷ್ಟವಾಗಿ ಹಾಳಾಗಿದೆ.

ಕರ್ನಾಟಕದ ರೈತ ಪರ ಸರಕಾರ ಕೊರೋನಾ ಕಾರಣದಿಂದ ಸತ್ತಂತಹ ರೈತರಿಗೆ ನೆರವಾಗಲು ಸಾಲಮನ್ನಾ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದೆ.

ಸಾಲ ಮನ್ನಾ ಎಂದಾಕ್ಷಣ  ರೈತರಲ್ಲದವರ  ಕಿವಿ ನೆಟ್ಟಗಾಗುತ್ತದೆ. ಹಾಗೇನೂ ನೆಟ್ಟಗೆ ಮಾಡಿಕೊಳ್ಳಬೇಡಿ. ಇದು ಬರೇ ಕೊರೋನಾ ದಿಂದ ಮೃತಪಟ್ಟವರಿಗೆ ಮಾತ್ರ. ಉಳಿದವರ ಪ್ರಸ್ತಾಪ ಇಲ್ಲ.

ಕಳೆದ ವರ್ಷ ಕೊರೋನಾ ಕಾರಣದಿಂದ ರೈತರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಅದರ ಕಹಿ ನೆನಪು ಮಾಸುವ ಮುನ್ನ ಮತ್ತೆ ಈ ವರ್ಷ ಲಾಕ್ ಡೌನ್ ಮಾಡಲಾಗಿದೆ. ಈ ವರ್ಷವೂ ರೈತರಿಗೆ ಬಹಳಷ್ಟು ತೊಂದರೆಗಳಾಗಿದೆ. ಹಣ್ಣಿನ ಬೆಳೆಗಾರರು, ಹೂವು,ತರಕಾರಿ ಬೆಳೆಗಾರರು ಎಲ್ಲರಿಗೂ ಈ ವರ್ಷದ  ಲಾಕ್ ಡೌನ್ ಸಾಕಷ್ಟು ನಷ್ಟವನ್ನು  ಉಂಟು ಮಾಡಿದೆ. ಇಷ್ಟು ನಷ್ಟಗಳ  ಎಡೆಯಲ್ಲಿಯೂ ಗ್ರಾಮೀಣ ಭಾಗದ ರೈತರು  ದೇಶದ ಆರ್ಥಿಕತೆಗೆ  ಬೆಂಬಲವಾಗಿ ಉದ್ಯೋಗಾವಕಾಶ ನೀಡುವ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ ಸರಕಾರ  ಮಾತ್ರ ಸತ್ತ ರೈತರು  ಜಿಲ್ಲಾ ಸಹಕಾರಿ ಬ್ಯಾಂಕು , ಅಪೆಕ್ಸ್  ಬ್ಯಾಂಕು ಗಳಲ್ಲಿ ಸಾಲ ಮಾಡಿದ್ದರೆ ಅವರ  ಕೇವಲ 1 ಲಕ್ಷ  ತನಕದ ಸಾಲ ಮನ್ನಾ ಮಾಡುವುದಕ್ಕೆ ಮುಂದಾಗಿದೆ.

ಖರೀದಿದಾರರಿಲ್ಲದೆ ಹೊಲದಲ್ಲೇ ಹಾಳದ ರೈತರು ಬೆಳೆದ ಕಲ್ಲಂಗಡಿ

ಸರಕಾರದ ನಿರ್ಧಾರ ಹೀಗೆ:

  • ಕರ್ನಾಟಕ ಸರಕಾರದ ಸಹಕಾರಿ ಸಚಿವ ಟಿ. ಸೋಮಶೇಖರ್ ಇವರು  ಮಾತನಾಡುತ್ತಾ  ಕೊರೋನಾ ಕಾರಣದಿಂದ  ಸತ್ತ ರೈತರು
  • ಜಿಲ್ಲಾ ಸಹಕಾರಿ ಬ್ಯಾಂಕು ಹಾಗೂ ಅಪೆಕ್ಸ್ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದರೆ ಅದನ್ನು ಮನ್ನಾ ಮಾಡುವ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಸುಳಿವು ನೀಡಿದ್ದಾರೆ. 
  • ಸರಕಾರ ರೈತಾಪಿ ವರ್ಗದಲ್ಲಿ  ಕೊರೋನಾ  ಕಾರಣದಿಂದ ಸತ್ತವರ ಲೆಕ್ಕಾಚಾರ ಹಾಕುತ್ತಿದು, ಸರಿಯಾದ ಅಂಕಿ ಅಂಶಗಳನ್ನು ಕಲೆ ಹಾಕುತ್ತಿದೆ.
  •  ಎಷ್ಟು  ಜನ ಸತ್ತವರು  ಇದ್ದಾರೆ, ಒಟ್ಟು ಎಷ್ಟು ಹಣ ಬೇಕಾಗಬಹುದು ಎಂಬ  ಲೆಕ್ಕಾಚಾರವನ್ನು ಇಲಾಖೆಗಳಿಂದ ಸಂಗ್ರಹಿಸುತ್ತಿದೆ.

ಜಿಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಅಪೆಕ್ಸ್ ಬ್ಯಾಂಕುಗಳು ಲಾಭದಲ್ಲಿವೆ. ಆದ ಕಾರಣ ಸಾಲ ಮನ್ನಾ ದೊಡ್ಡ ಹೊರೆಯಾಗಲಿಕ್ಕಿಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಕೊರೋನಾ ದಿಂದ ಮೃತಪಟ್ಟ ರೈತರು ಎಷ್ಟೇ ಸಾಲಮಾಡಿದ್ದರೂ  ಅವರ 1 ಲಕ್ಷ ರೂ. ಮಾತ್ರ  ಸಾಲಮನ್ನಾ ಮಾಡಲಾಗುತ್ತದೆಯಂತೆ. ಇನ್ನು ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬರಲಿದೆ.

ಉಳಿದ ರೈತರಿಗೆ ಏನೂ ಇಲ್ಲ:

  • ಕೊರೋನಾ ಕಾರಣದಿಂದ ಸತ್ತವರು ಮಾಡಿದ ಎಲ್ಲಾ ಸಾಲ ಮನ್ನಾ ಮಾಡಿದರೂ ಕಡಿಮೆಯೇ.
  • ಯಾಕೆಂದರೆ , ನಮ್ಮ ರೈತರಿಗೆ ೧ ಲಕ್ಷ  ರೂ. ಸಾಲ ಎಲ್ಲಿಗೂ ಸಾಲದು. ಇದಕ್ಕಿಂತ ಹೆಚ್ಚಿನ  ಸಾಲವನ್ನು ಸಾಮಾನ್ಯವಾಗಿ  ಕೃಷಿ ಕೂಲಿ ಕಾರ್ಮಿಕರು  ಸ್ವ ಸಹಾಯ ಸಂಘದಿಂದ ಪಡೆಯುತ್ತಾರೆ.
  • ಹಾಗಿರುವಾಗ  ಸತ್ತವನು ಮಾಡಿದ ಸಾವನ್ನು ಎಲ್ಲಾ ಮನ್ನಾ ಮಾಡುವುದು  ಸಮಂಜಸ ಎನ್ನಿಸುತ್ತದೆ.
  • ಸಾಲಮನ್ನಾ ಎಂಬುದು ಬರೇ ಕೊರೋನಾ ದಿಂದ ಮೃತಪಟ್ಟವರಿಗೆ  ಮಾತ್ರ ಕೊಡುವುದು ರಾಜ್ಯದ ಬೊಕ್ಕಸಕ್ಕೆ  ಯಾವುದೇ ಹೊರೆಯಾಗಲಾರದು.
  • ಅವರ ಸಂಖ್ಯೆಯೂ  ಹೆಚ್ಚು ಇಲ್ಲ.
  • ನಿಜವಾಗಿಯೂ ಕೊರೋನಾ ಕಾರಣದಿಂದ  ಬಹುತೇಕ ಎಲ್ಲಾ ರೈತರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. 
  • ಈ ಸಂಕಷ್ಟದ ನಡುವೆ  ತಮ್ಮ  ಕೃಷಿ  ಹೊಲದಲ್ಲಿ  ಗ್ರಾಮೀಣ ಪ್ರದೇಶದ  ಜನರಿಗೆ ಸಾಕಷ್ಟು  ಉದ್ಯೋಗಾವಕಾಶವನ್ನು ಕೊಟ್ಟಿದ್ದಾರೆ.
  • ಇದನ್ನು ಪರಿಗಣಿಸಿಯಾದರೂ ಸರಕಾರ ಎಲ್ಲಾ ರೈತರ ಸಾಲಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಬೇಕಿತ್ತು.
ಟೊಮಾಟೋ  ಕೊಯ್ಯಲಾಗದೆ ಹೊಲದಲ್ಲೇ  ಹಾಳಾಗಿದೆ
ಟೊಮಾಟೋ ಕೊಯ್ಯಲಾಗದೆ ಹೊಲದಲ್ಲೇ ಹಾಳಾಗಿದೆ

ಮುಖ್ಯಮಂತ್ರಿಗಳ  ಮೊದಲ ಆಶಯ  ಇದೇ ಆಗಿತ್ತು:

  • ಈ ಹಿಂದಿನ  ಕಾಲಾವಧಿಯಲ್ಲಿ  ಸನ್ಮಾನ್ಯ ಬಿ ಎಸ್ ಯೆಡಿಯೂರಪ್ಪ ನವರು ಸ್ವಲ್ಪ ಸಮಯದ ಕಾಲಾವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿ ತಕ್ಷಣವೇ ರೈತರ ಸಾಲಮನ್ನಾ  ಮಾಡುವ ನಿರ್ಧಾರ  ತೆಗೆದುಕೊಂಡವರು.
  • ಅವರಿಗೆ ಅನುಕೂಲ ಕೂಡಿ ಬರಲಿಲ್ಲ. ಸಾಲಮನ್ನಾ ಆಗಲೂ ಇಲ್ಲ. ಆದರೆ ನಂತರ ಮುಖ್ಯಮಂತ್ರಿಗಾಳಾದ ಶ್ರೀ ಕುಮಾರಸ್ವಾಮಿಯವರು 1 ಲಕ್ಷ ದ ವರೆಗಿನ ಸಾಲವನ್ನು ಮನ್ನಾ ಮಾಡಿದ್ದರು.
  • ಅಂದಿಗೂ ಇಂದಿಗೂ ಆರ್ಥಿಕ ಪರಿಸ್ಥಿತಿ  ಸಾಕಶ್ಟು ಬದಲಾವಣೆಗಳಾಗಿದೆ.
  • ಆದರೂ  ಸಂಕಷ್ಟದ ರೈತರ ಹಿತ ದೃಷ್ಟಿಯಿಂದ ಧೀರ್ಘಾವಧಿ ಸಾಲದ ಬಡ್ಡಿಯನ್ನಾದರೂ ಮನ್ನಾ ಮಾಡಿದ್ದರೆ  ಎಲ್ಲಾ ರೈತರಿಗೂ ಸ್ವಲ್ಪ ಮಟ್ಟಿಗೆ ಅನುಕೂಲವಾಗುತ್ತಿತ್ತು.

ರೈತರ ಸಾಲಮನ್ನಾ ಮಾಡುವುದು ಸೂಕ್ತ ಹೌದೋ ಅಲ್ಲವೋ ಎಂಬ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿವೆ. ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಮಿತ ದರದಲ್ಲಿ ಗೊಬ್ಬರ,  ನೀರಾವರಿ ವ್ಯವಸ್ಥೆ ಹಾಗೂ ಇನ್ನಿತರ ಕೃಷಿ ಒಳಸುರಿಗಳನ್ನು ಒದಗಿಸಿದಲ್ಲಿ  ಈ ಸಾಲ ಮನ್ನದ  ಅಗತ್ಯ  ಇರುವುದಿಲ್ಲ.

Leave a Reply

Your email address will not be published. Required fields are marked *

error: Content is protected !!