ಬಯೋ NPK ಒಂದೇ ಸಾಕು? ಇದೆಷ್ಟು ನಿಜ.

ಬಹುತೇಕ  ರೈತರ ಬಳಿಗೆ ಕೆಲವು ನೆಟ್ ವರ್ಕ್ ಸಂಘಟನೆಗಳು, ಹಾಗೆಯೇ ಕೆಲವು ಸಾವಯವ ಗೊಬ್ಬರ ಪ್ರಚಾರಕರು ಒಂದೆರಡೂ ಬಾಟಲಿಗಳನ್ನು ಅಥವಾ ಪ್ಯಾಕೆಟುಗಳನ್ನು  ಪರಿಚಯಿಸಿ ಈ ಪ್ಯಾಕೇಟ್/ಬಾಟಲಿಯ ದ್ರಾವಣ ಹಾಕಿದರೆ ಬೇರೆ ಗೊಬ್ಬರ ಬೇಕಾಗಿಲ್ಲ. ಭಾರೀ ಫಸಲು ಎಂದು  ಹೇಳುತ್ತಾರೆ. ಇದು ಬಯೋ( ಜೈವಿಕ) ಗೊಬ್ಬರ ಎಂಬುದಾಗಿಯೂ ಹೇಳುತ್ತಾರೆ. ಅಧಿಕ ಇಳುವರಿಯ ಆಶೆಯಲ್ಲಿ ಜನ ಖರೀದಿಸಿ ಬಳಸುತ್ತಾರೆ. ಇಂತಹ ಜೈವಿಕ ಗೊಬ್ಬರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಬಯೋ NPK ಗೊಬ್ಬರ ಎಂದರೆ ಜೈವಿಕವಾಗಿ ಸಾರಜನಕ , ರಂಜಕ…

Read more
ಗಡ್ದೆ ಕಸಿಯ ಗಿಡ

ಗಡ್ಡೆಯಿಂದ ಅಂಗಾಂಶ ಕಸಿ- ನೀವೇ ಮಾಡಬಹುದು ಹೇಗೆ?

ನಿಮಗೆ ಖುಷಿ ಕಂಡ ಬಾಳೆಯನ್ನು ಎಲ್ಲೇ ಕಂಡರೂ ಅದರ ಒಂದು ಗಡ್ಡೆ ತಂದರೆ ಸಾಕು, ಆ ಒಂದು  ಗಡ್ಡೆಯ ಮೂಲದಲ್ಲಿ 4 ತಿಂಗಳೊಳಗೆ 50 ಕ್ಕೂ ಹೆಚ್ಚು ಸಸಿಗಳನ್ನು  ಪಡೆಯಬಹುದು. ಈ ತಂತ್ರಜ್ಞಾನವನ್ನು ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪ್ರಚಾರಕ್ಕೆ ತಂದಿದ್ದಾರೆ. ಬಾಳೆಯ ಅಧಿಕ ಸಸಿಗಾಗಿ ಅಂಗಾಂಶ ಕಸಿ ಮಾಡಬೇಕು. ಇಲ್ಲವೇ ಅಧಿಕ ತೂಕದ ಗಡ್ಡೆಯನ್ನು ತರಬೇಕು. ಅದರ ಬದಲಿಗೆ ಒಂದು ಗಡ್ಡೆ ಇದ್ದರೆ ನಿಮ್ಮ ಮನೆಯಲ್ಲೇ ಅಧಿಕ ಸಂಖ್ಯೆಯ ಬಾಳೆ ಸಸಿಯನ್ನು ಉತ್ಪಾದಿಸಲು…

Read more
brinja

ಬಿಟಿ ಬದನೆ ಬಂದರೆ ಕೀಟನಾಶಕ ಬಳಸದ ಬದನೆ ತಿನ್ನಬಹುದು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಟಿ ಬದನೆಯ ಬೇಸಾಯ ಸದ್ದಿಲದ್ದೆ ಕರ್ನಾಟಕದಲ್ಲಿ ರೈತರು ಎಚ್ಚರದಿಂದಿರಿ ಎಂಬ    ವಿರೋಧಿ ಹೋರಾಟದ ಸಂದೇಶಗಳು ರವಾನೆಯಾಗುತ್ತಿವೆ. ಯಾಕೆ ಬಿಟಿ ಬದನೆ ಬೇಡ ಎಂದು ತಿಳಿಯುತ್ತಿಲ್ಲ. ವೈಜ್ಞಾನಿಕ ಮೂಲಗಳು ಬಿಟಿಯಿಂದ ತೊಂದರೆ ಇಲ್ಲ ಎಂಬುದನ್ನು ಆದಾರ ಸಹಿತ ಹೇಳಿದರೆ  ಬಿಟಿ ಬೇಡ ಎನ್ನುವವರು ತಮ್ಮದೇ ಆದ ವಾದಗಳಿಂದ ಜನರನ್ನು ಅಂಜಿಸುತ್ತಿದ್ದಾರೆ. ವಿಜ್ಞಾನ ಹೇಳುತ್ತದೆ ಹೀಗೆ: ಬಿಟಿ ಎಂದರೆ ವಂಶವಾಹಿ ಮಾರ್ಪಾಡು ಮಾಡಲಾದ ತಳಿ. ಮಾರ್ಪಾಡು ಎಂದರೆ ಕೆಲವು ಅವಗುಣಗಳನ್ನು ತೆಗೆದು ಅಗತ್ಯ ಗುಣಗಳನ್ನು ಅದರ…

Read more
ಕೃಷಿ ಮತ್ತು ಅರಣ್ಯ

ಕೃಷಿಯೊಂದಿಗೆ ಅರಣ್ಯ ಬೇಡ – ಸೊಪ್ಪು ಕಟ್ಟಿಗೆ ಮಾತ್ರ ಇರಲಿ..

ಮರಮಟ್ಟಿಗಾಗಿ (ನಾಟಾ) ಉದ್ದೇಶಕ್ಕಾಗಿ ಸಸಿ ನೆಟ್ಟು ಬೆಳೆಸುವುದೇ ಆಗಿದ್ದರೆ , ಅದು ಕೃಷಿಯ ಜೊತೆಗೆ ಇದ್ದರೆ ಆಗುವುದಿಲ್ಲ. ಮರಮಟ್ಟುಗಳನ್ನು ಪ್ರತ್ಯೇಕ ಜಾಗದಲ್ಲಿ ಬೆಳೆಸಿದರೆ ಮಾತ್ರ ಅದು ಲಾಭದಾಯಕ. ಸರಕಾರ ರೈತರಿಗೆ ಹುಡಿಗಾಸಿನ ಆಸೆ ತೋರಿಸು ಕೃಷಿ ಅರಣ್ಯವನ್ನು ಪ್ರೋತ್ಸಾಹಿಸುತ್ತಿದೆ. ಭಾರೀ ಪ್ರಚಾರವನ್ನೂ ಮಾಡುತ್ತಿವೆ. ಕೆಲವು ರೈತರು  ಹಣದ ಆಸೆಗೆ ಒಂದಷ್ಟು ಮರಮಟ್ಟಿನ ಸಸ್ಯಗಳನ್ನು  ಬದುಗಳಲ್ಲಿ, ಖಾಲಿ ಜಾಗದಲ್ಲಿ ಬೆಳೆಸುತ್ತಿದ್ದಾರೆ.  ಕೃಷಿ ಹೊಲದಲ್ಲಿ ಮರಮಟ್ಟುಗಳು ಇದ್ದರೆ ಭವಿಷ್ಯದಲ್ಲಿ  ಬಹಳ ಅನುಕೂಲ ಇರಬಹುದು. ಆದರೆ ವರ್ತಮಾನದಲ್ಲಿ ಅನನುಕೂಲತೆಯೇ ಹೆಚ್ಚು ಹೇಗೆ…

Read more

ಸರಕಾರೀ ವ್ಯವಸ್ಥೆಗಳಲ್ಲೂ ಇಷ್ಟು ವ್ಯಾಪಾರ ಬೇಕೇ?

ಮೊನ್ನೆ ಸುಬ್ರಮಣ್ಯ ಸಮೀಪದ ನೆಟ್ಟಣದ ಕೇಂದ್ರೀಯ ತೋಟದ ಬೆಳೆಗಳ ಸಂಶೊಧಾನ ಸಂಸ್ಥೆಯ  ಬೀಜ ಕೇಂದ್ರಕ್ಕೆ ತೆಂಗಿನ ಸಸಿ ತರಲು ಹೋಗಿದ್ದೆ. ಇಲ್ಲಿ ಆದ ಅನುಭವ ಯಾಕೋ ರೈತರ ಜೊತೆ ಹಂಚಿಕೊಳ್ಳಬೇಕೆನಿಸುತ್ತಿದೆ.  ಸರಕಾರೀ ವ್ಯವಸ್ಥೆಗಳಲ್ಲಿ ಇಷ್ಟೊಂದು ವ್ಯಾಪಾರ ಬೇಕಾ?. ಬೀಜ- ಸಸಿ ಎಂಬ ರೈತರ ಭವಿಷ್ಯದ ಇನ್ವೆಸ್ಟ್ಮೆಂಟ್ ನಲ್ಲಿ ಯಾರೂ ಮಕ್ಕಳಾಟಿಕೆ ಮಾಡಬಾರದು.  ಒಂದು ಕುಬ್ಜ ತಳಿಯ ಬೀಜದ ತೆಂಗಿನ ಕಾಯಿ. ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 120 ರೂ. ಒಂದು ಸಸಿಯ ಬೆಲೆ ಎಷ್ಟು ಗೊತ್ತೇ 210…

Read more
ಅಡಿಕೆ ಗರಿ ತಿನ್ನುವ ಹುಳದ ವಾಸಸ್ಥಾನ

ಅಡಿಕೆಗೆ ಹರಿತ್ತು ತಿನ್ನುವ ಹುಳುವಿನ ತೊಂದರೆ ಮತ್ತು ಪರಿಹಾರ.

ಅಡಿಕೆಯ ಮರದ ಗರಿಗಳನ್ನು ಹಾನಿಮಾಡುವ ಕೀಟಗಳಲ್ಲಿ ಮುಖ್ಯವಾಗಿ ಸುಳಿ ತಿಗಣೆ ಒಂದು ಎಂದು ನಾವು ತಿಳಿದಿದ್ದೇವೆ, ಆದರೆ ಇದನ್ನು ಸಿಂಗಾರ ತಿನ್ನುವ  ಹುಳದ ತರಹವೇ ಇರುವ ಇನ್ನೊಂದು ಎಲೆ ತಿನ್ನುವ ಹುಳ ಸಹ ಅಡಿಕೆಯ ಎಳೆಯ ಗರಿಗಳನ್ನು ತಿನ್ನುತ್ತವೆ. ಇದರಿಂದ ಬಹಳ ಹಾನಿ ಉಂಟಾಗುತ್ತಿದೆ. ದಾವಣಗೆರೆ ಸುತ್ತಮುತ್ತ ಹಲವು ರೈತರ ಹೊಲದಲ್ಲಿ ಈ ಕೀಟದ  ಹಾವಳಿ ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಪ್ರದೇಶಕ್ಕೆ ವ್ಯಾಪಿಸುತ್ತಿದೆ. ಅಡಿಕೆಯ ಮರದ ಗರಿಗಳಿಗೆ ಆಗುವ ಹಾನಿ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು…

Read more
ತೆಂಗಿನ ನೈಸರ್ಗಿಕ ಹೈಬ್ರೀಡ್ ತಳಿ

ತೆಂಗು ಬೆಳೆಸುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ವಿಚಾರ.

ಜಗತ್ತಿನ ಸುಮಾರು 80 ಕ್ಕೂ ಹೆಚ್ಚಿನ ದೇಶಗಳಲ್ಲಿ  ಬೆಳೆಸಲ್ಪಡುತ್ತಿರುವ  ತೆಂಗಿಗೆ ಬೆಳೆಯಲ್ಲದೆ ದೈವಿಕ ಸ್ಥಾನವನ್ನೂ ನೀಡಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಈಗಿನವರೆಗೂ ಜನ ತೆಂಗನ್ನು ನಂಬಿದ್ದಾರೆ. ನಂಬಿಕೆಗೆ ಯಾವಾಗಲೂ ಕುಂದು ತಾರದ ಬೆಳೆ ಎಂದರೆ ತೆಂಗು ಎನ್ನಬಹುದು. ತೆಂಗಿನ ಮೂಲ  ಯಾವುದು: ಕೆಲವು ಪ್ರಕೃತಿಯ ನಿಘೂಢಗಳಲ್ಲಿ ತೆಂಗೂ ಒಂದು. ಇದು ಮೂಲತಹ ಎಲ್ಲಿ ಬೆಳೆಯುತ್ತಿತ್ತು, ಹೇಗೆ ಇದು ಬೆಳೆಯ ಸ್ಥಾನವನ್ನು ಪಡೆಯಿತು ಎಂಬ ಬಗ್ಗೆ ನಿಖರ ಉಲ್ಲೇಖ ಇಂದಿನ ತನಕವೂ ಇಲ್ಲ. ಭಾರತ ದೇಶದಲ್ಲಿ ವೇದಗಳ ಕಾಲದಿಂದಲೂ…

Read more

ಬೆಳೆ ದಾಖಲೆ ಮಾಡಿಲ್ಲವೇ? ಮಾಡಿ. ಬಹಳ ಪ್ರಯೊಜನ ಇದೆ.

ರೈತರ ಹೊಲದಲ್ಲಿ ಯಾವ ಬೆಳೆ ಇದೆ, ಎಂಬುದನ್ನು ಅವರವರೇ ದಾಖಲೀಕರಣ ಮಾಡಿದರೆ ಅದೇ ಉತ್ತಮ. ಯಾಕೆಂದರೆ ಬೇರೆಯವರು ಮಾಡುವುದು ಎಷ್ಟಾದರೂ ಅಷ್ಟೇ. ಇದು ಇಂದು ಬೆಳೆ ದಾಖಲೀಕರಣ  ಮಾಡಿದಾಗ ತಿಳಿದ ಸಂಗತಿ. ಸ್ವಲ್ಪ ತರಬೇತಿ ಅಥವಾ ಸ್ವಲ್ಪ ಮೊಬೈಲ್ ಫೋನ್ ಬಳಕೆ ಗೊತ್ತಿದ್ದವರ ಸಹಾಯ ತೆಗೆದುಕೊಂಡರೆ ಇದನ್ನು ಯಾರೂ ಬಳಸಬಹುದು. ಸರಕಾರ ಈ ಕೆಲಸವನ್ನು ರೈತರ ತಲೆಗೇ ಹಾಕಿರುವುದು ಮತ್ತೇನಕ್ಕೂ ಅಲ್ಲ. ಈ ಕೆಲಸಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. GPS  ಸರಿಯಾಗಿ ಸಿಗಬೇಕು. ಕೆಲವೊಮ್ಮೆ ಬೇಗ ಆಗಬಹುದು….

Read more

ರೋಗ ನಿರೋಧಕ ಶಕ್ತಿ ಬೇಕೇ ? ಈ ಮೊಟ್ಟೆ ತಿನ್ನಿ.

ಕೋಳಿ  ಸಾಕುವವರಿಗೆ ಅದರ ಜೊತೆಗೆ ಕೆಲವು ಅಧಿಕ ಬೇಡಿಕೆ ಉಳ್ಳ, ಪಕ್ಷಿಗಳ ಸಾಕಾಣೆ ಮಾಡಬಹುದು. ಇವುಗಳಲ್ಲಿ ಗೌಗುಗನ ಹಕ್ಕಿ ಎಂಬುದು ಒಂದು. ಇದು ಮೊಟ್ಟೆಗೂ ಆಗುತ್ತದೆ. ಮಾಂಸಕ್ಕೂ ಆಗುತ್ತದೆ. ಸಣ್ಣ ಗಾತ್ರದ ಈ ಪಕ್ಷಿ ಅತೀ ಶೀಘ್ರ ಬೆಳವಣಿಗೆಯನ್ನು ಹೊಂದುತ್ತದೆ. ಇದರ ಮೊಟ್ಟೆ- ಮಾಂಸ ಎರಡೂ ಬಹಳ ಔಷದೀಯಗುಣ ಹೊಂದಿದೆ. ಇಂದಿನ  ಸಾಮಾಜಿಕ ಆರೋಗ್ಯ ಸಮಸ್ಯೆಗೆ ಇದು ಪರಿಹಾರವಾಗಬಲ್ಲದು.  ಗೌಜುಗನ ಹಕ್ಕಿ ಕಾಟುರ್ನಿಕ್ಸ್ ಕಾಟುರ್ನಿಕ್ಸ್ ಜಪೋನಿಕಾ (Coturnix Coturnix japonica) ಎಂಬ ಪ್ರಭೇಧಕ್ಕೆ ಸೇರಿದೆ. 11 ನೇ…

Read more

ಹುಳ ಬಿದ್ದ ತರಕಾರಿ ತಿನ್ನುವುದೇ ಆರೋಗ್ಯಕ್ಕೆ ಉತ್ತಮ- ಯಾಕೆ?

ನಾವು ತರಕಾರಿ ಖರೀದಿ ಮಾಡುವಾಗ ನೋಟ ಚೆನ್ನಾಗಿರುವ, ಹುಳ ಬಾರದೇ ಇರುವಂತದ್ದನ್ನು ಆರಿಸಿ ಕೊಳ್ಳುತ್ತೇವೆ. ಒಂದು ವೇಳೆ ನಾವು ತಂದದ್ದರಲ್ಲಿ ಗಮನಿಸದೆ ಹುಳ ಇದ್ದರೆ ಅದನ್ನು ತೆಗೆದು ಬಿಸಾಡಿ, ಅಂಗಡಿಯವನಿಗೆ ಹಿಡಿ ಶಾಪ ಹಾಕುತ್ತೇವೆ. ವಾಸ್ತವವಾಗಿ  ಹುಳ ಇರುವ ತರಕಾರಿ ಹಣ್ಣು ಹಂಪಲುಗಳಿದ್ದರೆ ಅದನ್ನು ಬಿಸಾಡದಿರಿ. ಹುಳ ತೆಗೆದು ದೂರ ಇಟ್ಟು ಅದನ್ನು ಬಳಸಿ. ಅದು ಆರೋಗ್ಯಕ್ಕೆ ಉತ್ತಮ. ಹುಳ ಬಾರದಂತೆ ಮಾಡಲು ಬಳಸುವ ಕೀಟನಾಶಕಗಳ ಉಳಿಕೆ ತರಕಾರಿಗಳಲ್ಲಿ ಉಳಿದಿರುತ್ತದೆ. ಆದ ಕಾರಣ ಬಳಕೆದಾರರು ಅತಿಯಾಗಿ ನೋಟ…

Read more
error: Content is protected !!